ಡೆಡ್ಲಿ ಕೊರೊನಾ ವೈರಸ್ ಕಂಡುಹಿಡಿಯಲು ಚೀನಾದಲ್ಲಿ ಬಂತು ಸ್ಮಾರ್ಟ್ ಹೆಲ್ಮೆಟ್..!
ಕೊರೊನಾ ವೈರಸ್ ಹೊಡೆತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಚೀನಾದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳಿಗೆ ಸ್ಮಾರ್ಟ್ ಹೆಲ್ಮೆಟ್‌ಗಳನ್ನು ನೀಡಲಾಗಿದೆ. ಆ ಹೆಲ್ಮೆಟ್‌ಗಳು ಉಷ್ಣಾಂಶ ಪತ್ತೆಹಚ್ಚುವಂತಹ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದ್ದು, ವಾಹನ ನೋಂದಣಿ ಪ್ಲೇಟ್‌ಗಳನ್ನು ಸಹ ಗುರುತಿಸುತ್ತದೆ. ಹೆಡ್-ಅಪ್ ಡಿಸ್‌ಪ್ಲೇ ಹೊಂದಿರುವ ಹೆಲ್ಮೆಟ್‌ಗಳಿಂದ ಯಾರೊಬ್ಬರ ದೇಹದ ಉಷ್ಣತೆಯನ್ನು ನೈಜ ಸಮಯದಲ್ಲಿ ಓದಬಹುದು.

ಇದಕ್ಕೆ ಪೊಲೀಸ್ ಅಧಿಕಾರಿ ಸುಮ್ಮನೆ ಹೆಲ್ಮೆಟ್ ಧರಿಸಿದರೆ ಸಾಕು, ಯರದ್ದಾದರೂ ನಿಖರ ದೇಹದ ಉಷ್ಣತೆಯನ್ನು ತಿಳಿಯಲು ಅವರನ್ನು ನೋಡಿದರೆ ಮುಗಿತು. ಬಳಿಕ, ಆ ವ್ಯಕ್ತಿಯ ಉಷ್ಣಾಂಶ ಗಮನಿಸಿ ಕೊರೊನಾ ವೈರಸ್‌ಗೆ ವ್ಯಕ್ತಿ ಒಳಗಾಗಿದ್ದಾನೋ ಇಲ್ಲವೋ ನಿರ್ಧರಿಸಬೇಕು.
ಚೀನಾದ ಸುದ್ದಿ ಸಂಸ್ಥೆಯೊಂದು ವಿಡಿಯೋ ಪೋಸ್ಟ್ ಮಾಡಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಡಲು ಈ ಹೆಲ್ಮೆಟ್‌ಗಳನ್ನು ಈಗಾಗಲೇ ಶೆನ್‌ಜೆನ್‌ನಲ್ಲಿ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಕುತೂಹಲ ಏನು ಎಂದರೆ, ಹೆಲ್ಮೆಟ್ ತುಂಬಾ ಸರಳವಾಗಿದ್ದು, ಅದರೊಳಗೆ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ನ್ಯೂಸ್ ಏಜೆನ್ಸಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೆಚ್ಚಿನ ವಿವರಗಳು ಬಹಿರಂಗವಾಗದಿದ್ದರೂ, ಸ್ಮಾರ್ಟ್ ಹೆಲ್ಮೆಟ್‌ಗಳನ್ನು ಮುಖದ ಗುರುತಿಸುವಿಕೆಗೂ ಬಳಸಬಹುದು ಎಂದು ಸುಲಭವಾಗಿ ಊಹಿಸಬಹುದು. ಏಕೆಂದರೆ, ಸ್ಮಾರ್ಟ್ ಹೆಲ್ಮೆಟ್‌ಗಳು ಈಗಾಗಲೇ ವಾಹನಗಳ ನೋಂದಣಿ ಫಲಕಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ವಾಹನಗಳನ್ನು ಹಾದುಹೋಗಲು ಅನುಮತಿಸಬೇಕೇ ಅಥವಾ ಬೇಡವೇ ಎಂಬುದನ್ನು ಅಧಿಕಾರಿಗೆ ಸೂಚಿಸುತ್ತದೆ.
ಹೆಲ್ಮೆಟ್ ಸ್ವಯಂಚಾಲಿತವಾಗಿ ಕಾರ್ ನಂಬರ್ ಪ್ಲೇಟ್ ಅನ್ನು ರೆಕಾರ್ಡ್ ಮಾಡುತ್ತದೆ. ಹಾಗೂ ವಾಹನ ಅಥವಾ ಚಾಲಕನ ಬಗ್ಗೆ ಏನಾದರೂ ಅನುಮಾನಾಸ್ಪದ ಪ್ರಕರಣಗಳು ಇವೆಯೇ ಎಂಬುದನ್ನು ನಿರ್ಧರಿಸಲು ತ್ವರಿತ ಪೊಲೀಸ್ ರೆಕಾರ್ಡ್ ಚೆಕ್ ಮಾಡುತ್ತದೆ.
ಇದರ ಮಧ್ಯೆಯೇ, ಚೀನಾದ ಮತ್ತೊಂದು ಕಂಪನಿಯು ಮಾಸ್ಕ್ ಧರಿಸಿದಾಗಲೂ ಜನರನ್ನು ಗುರುತಿಸಬಲ್ಲ ದೇಶದ ಮೊದಲ ಫೇಸ್ ರೆಕಾಗ್ನೈಜೆಷನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದೆ. ರಾಯಿಟರ್ಸ್ ವರದಿ ಪ್ರಕಾರ, ಜನರು ಮಾಸ್ಕ್‌ಗಳನ್ನು ಧರಿಸಿದಾಗಲೂ ಮುಖಗಳನ್ನು ಯಶಸ್ವಿಯಾಗಿ ಗುರುತಿಸಬಲ್ಲ ತಂತ್ರಜ್ಞಾನವನ್ನು ಹ್ಯಾನ್‌ವಾಂಗ್ ಟೆಕ್ನಾಲಜಿ ಲಿಮಿಟೆಡ್ ಹೊಂದಿದೆ ಎಂದು ಹೇಳಲಾಗಿದೆ.
ಉಷ್ಣಾಂಶ ಸಂವೇದಕಕ್ಕೆ ಹೆಲ್ಮೆಟ್ ಸಂಪರ್ಕ ಹೊಂದಿದ್ದರೆ, ಅದು ವ್ಯಕ್ತಿಯ ಹೆಸರನ್ನು ಗುರುತಿಸುವಾಗ ದೇಹದ ಉಷ್ಣತೆಯನ್ನು ಅಳೆಯಬಹುದು, ನಂತರ ಫಲಿತಾಂಶವನ್ನು ಪ್ರಕ್ರಿಯೆಗೊಳಿಸುತ್ತದೆ, ಅಂದರೆ, ಹೆಲ್ಮೆಟ್ 38 ಡಿಗ್ರಿಗಳಿಗಿಂತ ಹೆಚ್ಚಿನ ಉಷ್ಣಾಂಶ ಪತ್ತೆ ಮಾಡಿದರೆ, ಅವರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಹ್ಯಾನ್‌ವಾಂಗ್ ಉಪಾಧ್ಯಕ್ಷ ಹುವಾಂಗ್ ಲೀ ಹೇಳಿದ್ದಾರೆ.


Click it and Unblock the Notifications





