ಇನ್ಮುಂದೆ ಬೆಂಗಳೂರಿನಲ್ಲಿ ವಾಹನ ನಿಲುಗಡೆಗೆ ಮೊಬೈಲ್‌ ಆಪ್‌ನಲ್ಲಿ ಜಾಗ ಹುಡುಕಿ!!

|

ಬೆಂಗಳೂರಿನಲ್ಲಿ ತಮ್ಮ ವಾಹನ ನಿಲುಗಡೆಗೆ ಜಾಗ ಹುಡುಕುವ ವಾಹನ ಮಾಲಿಕರು ಇನ್ಮುಂದೆ ಕಷ್ಟಪಡಬೇಕಿಲ್ಲ. ಏಕೆಂದರೆ, ನಗರದ 85 ರಸ್ತೆಗಳಲ್ಲಿ 'ಸ್ಮಾರ್ಟ್ ಪಾರ್ಕಿಂಗ್​' ಎಂಬ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ಮುಂದಾಗಿದೆ. ಈ 'ಸ್ಮಾರ್ಟ್ ಪಾರ್ಕಿಂಗ್​' ವ್ಯವಸ್ಥೆಯಿಂದ ಮೊಬೈಲ್ ಆಪ್​ನಲ್ಲೇ ನಾವು ವಾಹನ ನಿಲ್ಲಿಸಬೇಕಾದ ರಸ್ತೆಯಲ್ಲಿ ನಿಲುಗಡೆಗೆ ಜಾಗವಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಕ್ಷಣ ಮಾತ್ರದಲ್ಲಿ ವಾಹನ ಸವಾರರಿಗೆ ದೊರೆಯಲಿದೆ.

ಹೌದು, ನಗರದಲ್ಲಿ ಪಾರ್ಕಿಂಗ್​ಗೆ ಜಾಗ ಹುಡುಕುವವರ ಪರದಾಟ ತಪ್ಪಿಸಲು 'ಸ್ಮಾರ್ಟ್ ಪಾರ್ಕಿಂಗ್​' ವ್ಯವಸ್ಥೆಯು ಆರಂಭವಾಗುತ್ತಿದ್ದು, ಲೋಕಸಭೆ ಚುನಾವಣೆ ಮುಗಿದ ನಂತರ ಸ್ಮಾರ್ಟ್ ಪಾರ್ಕಿಂಗ್ ಕಾಮಗಾರಿ ಶುರುವಾಗಲಿದೆ. ಇದರ ಸಮರ್ಪಕ ನಿರ್ವಹಣೆಗಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಬೆಂಗಳೂರು ನಗರಿಗರ ಭಾರೀ ಸಮಸ್ಯೆಯೊಂದು ತಪ್ಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಬೆಂಗಳೂರಿನಲ್ಲಿ ವಾಹನ ನಿಲುಗಡೆಗೆ ಮೊಬೈಲ್‌ ಆಪ್‌ನಲ್ಲಿ ಜಾಗ ಹುಡುಕಿ!!

ಉಚಿತ ಪಾರ್ಕಿಂಗ್​ಗೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಸ್ಮಾರ್ಟ್ ಪಾರ್ಕಿಂಗ್ ಇದಕ್ಕೆ ಬ್ರೇಕ್ ಹಾಕಲಿದೆ. ರಸ್ತೆ ಪಕ್ಕ ಶಿಸ್ತಿನ ವಾಹನ ನಿಲುಗಡೆ ಹಾಗೂ ಶುಲ್ಕ ವಿಧಿಸಲು ಅನುಕೂಲವಾಗುತ್ತದೆ ಎಂದು ಬಿಬಿಎಂಪಿ ಯೋಚಿಸಿದೆ. ಹಾಗಾದರೆ, ಬೆಂಗಳೂರಿನಲ್ಲಿ ತಮ್ಮ ವಾಹನ ನಿಲುಗಡೆಗೆ ಜಾಗ ಹುಡುಕುವವರು ತಿಳಿಯಲೇಬೇಕಾದ 'ಸ್ಮಾರ್ಟ್ ಪಾರ್ಕಿಂಗ್​' ವ್ಯವಸ್ಥೆ ಹೇಗಿರಲಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಏನಿದು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ?

ಏನಿದು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ?

ವಾಹನ ಸವಾರರ ಅನುಕೂಲಕ್ಕಾಗಿ ಹೊಸದಾಗಿ ಮೊಬೈಲ್ ಆಪ್ ಒಂದನ್ನು ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದ್ದು, ನೈಜ ಸಮಯದಲ್ಲಿ ಬೆಂಗಲೂರಿನ ಪ್ರಮುಖ ರಸ್ತೆಗಳಲ್ಲಿ ಖಾಲಿ ಇರುವ ಜಾಗಗಳ ಬಗ್ಗೆ ಆಪ್ ಮೂಲಕ ಮಾಹಿತಿ ನೀಡಲಿದೆ.ವಾಹನ ನಿಲುಗಡೆಗೆ ಸ್ಥಳಾವಕಾಶ ಸೇರಿ ಇನ್ನಿತರ ಮಾಹಿತಿ ಜನರಿಗೆ ಸುಲಭವಾಗಿ ದೊರೆಯುವಂತೆ ಆಪ್‌ ಮೂಲಕ ಮಾಡಲಾಗುತ್ತಿದೆ.

ಹೇಗಿರುತ್ತದೆ ಸ್ಮಾರ್ಟ್ ಪಾರ್ಕಿಂಗ್?

ಹೇಗಿರುತ್ತದೆ ಸ್ಮಾರ್ಟ್ ಪಾರ್ಕಿಂಗ್?

'ಸ್ಮಾರ್ಟ್ ಪಾರ್ಕಿಂಗ್​' ಎಂಬ ಈ ವ್ಯವಸ್ಥೆಯನ್ನು ನಗರದ 85 ರಸ್ತೆಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದು, ಸ್ಮಾರ್ಟ್ ಪಾರ್ಕಿಂಗ್ ಪ್ರದೇಶದಲ್ಲಿ ಸೆನ್ಸರ್ ಅಳವಡಿಸಲಾಗುತ್ತದೆ. ಅದರ ಮೂಲಕ ಯಾವ ರಸ್ತೆಗಳಲ್ಲಿ ಎಷ್ಟು ವಾಹನಗಳು ನಿಲುಗಡೆಯಾಗಿವೆ, ಎಷ್ಟು ವಾಹನ ನಿಲುಗಡೆಗೆ ಅವಕಾಶವಿದೆ ಎಂಬೆಲ್ಲಾ ಮಾಹಿತಿಯನ್ನು ಮೊಬೈಲ್‌ ಆಪ್‌ನ ಮೂಲಕ ನೀಡಲಾಗುತ್ತದೆ.

ಖಚಿತವಾಗಿರಲಿದೆ ಮಾಹಿತಿ!

ಖಚಿತವಾಗಿರಲಿದೆ ಮಾಹಿತಿ!

ನಗರದಲ್ಲಿ ಪಾರ್ಕಿಂಗ್​ಗೆ ಜಾಗ ಹುಡುಕುವವರ ಪರದಾಟ ತಪ್ಪಿಸಲು 'ಸ್ಮಾರ್ಟ್ ಪಾರ್ಕಿಂಗ್​' ವ್ಯವಸ್ಥೆಯು ನೈಜ ಸಮಯದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಮಾಹಿತಿಯನ್ನು ನೀಡಲಿದೆ. ಸ್ಮಾರ್ಟ್ ಪಾರ್ಕಿಂಗ್ ಪ್ರದೇಶದಲ್ಲಿ ಸೆನ್ಸರ್ ಅಳವಡಿಸಲಾವುದರಿಂದ ವಾಹನ ಸವಾರರಿಗೆ ನೈಜ ಮತ್ತು ನಿಖರ ಮಾಹಿತಿ ದೊರೆಯಲಿದೆ. ಆಪ್​ಗೆ ಎಲ್ಲಾ ವಿವರಗಳು ಅಪ್​ಲೋಡ್ ಆಗುತ್ತಿರುತ್ತವೆ.

ಹೇಗಿರಲಿದೆ ಆಪ್ ಕಾರ್ಯ?

ಹೇಗಿರಲಿದೆ ಆಪ್ ಕಾರ್ಯ?

ಬಿಬಿಎಂಪಿ ಅಭಿವೃದ್ದಿಪಡಿಸಲು ಮುಂದಾಗಿರುವ ಈ ಆಪ್‌ನಲ್ಲಿ ವಾಹನ ನಿಲುಗಡೆ ಸ್ಥಳ ಪರಿಶೀಲನೆ ಜತೆಗೆ ಇನ್ನಿತರ ಮಾಹಿತಿಗಳೂ ಸಹ ಸಿಗಲಿವೆ. ಎಷ್ಟು ಅವಧಿಯ ವರೆಗೆ ವಾಹನ ನಿಲುಗಡೆ ಮಾಡಬಹುದು?, ಅದಕ್ಕೆ ತಗಲುವ ಶುಲ್ಕವೆಷ್ಟು? ಆ ಸ್ಥಳದಲ್ಲಿ ಎಷ್ಟು ಟ್ರಾಫಿಕ್ ಇದೆ ಎಂಬ ಮಾಹಿತಿ ಸೇರಿ ಇನ್ನಿತರ ವಿವರವನ್ನು ಆಪ್​ನಲ್ಲಿಯೇ ಪಡೆಯಬಹುದಾಗಿದೆ.

ಎಲ್ಲೆಲ್ಲಿ ಸ್ಮಾರ್ಟ್‌ ಪಾರ್ಕಿಂಗ್?

ಎಲ್ಲೆಲ್ಲಿ ಸ್ಮಾರ್ಟ್‌ ಪಾರ್ಕಿಂಗ್?

ವಾಹನದಟ್ಟಣೆ ಮತ್ತು ರಸ್ತೆ ಗುಣಮಟ್ಟವನ್ನಾಧರಿಸಿ ವಾಹನ ನಿಲುಗಡೆ ರಸ್ತೆಗಳನ್ನು ವಿಭಾಗಿಸಲಾಗಿದೆ.ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮಲ್ಯ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ ಸೇರಿಂದತೆ 85 ರಸ್ತೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ‘ಎ' (ಪ್ರೀಮಿಯಂ), ‘ಬಿ' (ವಾಣಿಜ್ಯ) ಮತ್ತು ‘ಸಿ' (ಸಾಮಾನ್ಯ) ಮೂರು ಭಾಗಗಳಲ್ಲಿ ರಸ್ತೆಗಳು ವಿಭಾಗವಾಗಿವೆ.

Best Mobiles in India

English summary
A smart parking system assisted by an app will put an end to parking woes in Bengaluru. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X