Subscribe to Gizbot

ಮೊಬೈಲ್ ಬಗ್ಗೆ ಜಗತ್ತಿಗೆಲ್ಲಾ ಗೊತ್ತಿರುವ ಈ ವಿಷಯವನ್ನು ತಜ್ಞರು ಮತ್ತೆ ಹೇಳಿದ್ದು ಏಕೆ ಗೊತ್ತಾ?!!

Written By:

ಮಾನವನ ಮೇಲೆ ಮೊಬೈಲ್ ಎಂಬ ಮಂತ್ರದಂಡ ಹೇಗೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ನೀವು ಈಗಾಗಲೇ ಕೆಳಿ ತಿಳಿದಿರುತ್ತೀರಾ. ಅದರಂತೆಯೇ ಊಟ ಮಾಡುವಾಗಲೂ ಸ್ಮಾರ್ಟ್‌ಫೋನ್‌ ಕೈಲಿ ಹಿಡಿದಿರುವ ಚಾಳಿ ಇರುವವರಿಗೆ ಊಟ ಮಜಾ ಅನುಭವಿಸಲು ಸಾಧ್ಯವೇ ಇಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.!!

ಹೌದು, ಜಗತ್ತಿಗೆಲ್ಲಾ ಗೊತ್ತಿರುವ ಈ ವಿಷಯವನ್ನು ಕೆನಡಾದ ಕೊಲಂಬಿಯಾ ವಿವಿ ತಜ್ಞರು ಇದೀಗ ಅಧ್ಯಯನ ಮೂಲಕ ಬಹಿರಂಗಪಡಿಸಿದ್ದಾರೆ. ಊಟ ಮಾಡುವಾಗ ಮೊಬೈಲ್‌ ಬಳಸುವವರು ಆ ಸಂದರ್ಭದ ಸಂತೋಷವನ್ನು ಪೂರ್ತಿಯಾಗಿ ಅನುಭವಿಸಲು ಸಾಧ್ಯವಿಲ್ಲ ಎಂದು ಅಧ್ಯಯನ ವರದಿಯಲ್ಲಿ ಕೊಲಂಬಿಯಾ ವಿವಿ ತಜ್ಞರು ತಿಳಿಸಿದ್ದಾರೆ.!!

ಮೊಬೈಲ್ ಬಗ್ಗೆ ಜಗತ್ತಿಗೆಲ್ಲಾ ಗೊತ್ತಿರುವ ಈ ವಿಷಯವನ್ನು ತಜ್ಞರು ಮತ್ತೆ ಹೇಳಿದ್ದು

ರಾತ್ರಿವೇಳೆ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದವರಿಗೆ ಏನೆಲ್ಲಾ ತೊಂದರೆ ಆಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದ ಬೆನ್ನಲ್ಲೇ, 300 ಜನರನ್ನು ಅಧ್ಯಯನ ನಡೆಸಿ ಇದೀಗ ಊಟದ ಸಮಯದ ಮೊಬೈಲ್ ಬಳಕೆ ತಿಳಿಸಲಾಗಿದೆ. ಹಾಗಾದರೆ, ರಾತ್ರಿವೇಳೆ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದವರಿಗೆ ಏನೆಲ್ಲಾ ತೊಂದರೆಯಾಗಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾತ್ರಿವೇಳೆ ಹೆಚ್ಚು ಮೊಬೈಲ್ ಬಳಕೆ!!

ರಾತ್ರಿವೇಳೆ ಹೆಚ್ಚು ಮೊಬೈಲ್ ಬಳಕೆ!!

ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇ. 75 ಕ್ಕಿಂತ ಹೆಚ್ಚು ಯುವಜನರು ರಾತ್ರಿ ಸ್ಮಾರ್ಟ್‌ಫೋನ್ ಬಳಕೆಯಿಂದ ನಿದ್ದೆ ಮಾಡುತ್ತಿಲ್ಲ ಎಂಬ ಶಾಕಿಂಗ್ ವಿಷಯವನ್ನು ಅಧ್ಯಯನವು ತಿಳಿಸಿದೆ.!!

ಸಾವಿಗೆ ಸ್ಮಾರ್ಟ್‌ಫೋನ್ ದಾರಿ!!

ಸಾವಿಗೆ ಸ್ಮಾರ್ಟ್‌ಫೋನ್ ದಾರಿ!!

ನಿದ್ದೆ ಮಾಡುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರಮಾಣ ಹೆಚ್ಚಿರುವುದರಿಂದ ಮಾನವನ ಆರೋಗ್ಯ ಸ್ಥಿತಿ ಏರುಪೇರಾಗುತ್ತಿದೆ. ಇದು ಮಾನವನಲ್ಲಿ ಖಿನ್ನತೆ ಮೂಡಲು ಪ್ರಮುಖ ಕಾರಣವಾಗುತ್ತಿರುವ ಪರಿಣಾಮದಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.!!

ಖಿನ್ನತೆಗೆ ಜಾರಲು ಕಾರಣ ಏನು?

ಖಿನ್ನತೆಗೆ ಜಾರಲು ಕಾರಣ ಏನು?

ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮಾನವನ ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳಲಿದೆ. ಇದರಿಂದ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಮೇಲೆ ಪರಿಣಾಮಗಳು ಬೀರುತ್ತದೆ.!! ಹೀಗೆ ಪ್ರತಿದಿನವೂ ಅಭ್ಯಾಸವಾಗುತ್ತಾ ಓದರೆ ಮಾನವನ ಮೆದುಳು ಖಿನ್ನತೆಗೆ ಜಾರುತ್ತದೆ ಎಂದು ಹೇಳಲಾಗಿದೆ.!!

ಆರೋಗ್ಯ ಸಮಸ್ಯೆಗೆ ದಾರಿ!!

ಆರೋಗ್ಯ ಸಮಸ್ಯೆಗೆ ದಾರಿ!!

ಮಾನವನ ದೇಹಕ್ಕೆ ಸರಿಯಾಗಿ ನಿದ್ದೆ ಸಿಗದಿದ್ದರೆ ಅವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮಧುಮೇಹ, ತಲೆನೊವ್ವುಗಳಂತಹ ಸಮಸ್ಯೆಗಳ ಜೊತೆಗೆ ಕ್ಯಾನ್ಸರ್‌ ಮತ್ತು ಬಬ್ರೈನ್ ಟ್ಯೂಮರ್‌ನಂತಹ ದೊಡ್ಡ ರೋಗಗಳೂ ಕೂಡ ಮಾನವನನ್ನು ಕಾಡುತ್ತವೆ ಎಂದು ವರದಿ ಹೇಳಿದೆ. ಇದು ಕೂಡ ಮುಂದೆ ಖಿನ್ನತೆಗೆ ಕಾರಣವಾಗುತ್ತದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್ ಬಳಕೆಗೆ ಮಿತಿಇದೆ!!

ಸ್ಮಾರ್ಟ್‌ಫೋನ್ ಬಳಕೆಗೆ ಮಿತಿಇದೆ!!

ಮಾನವನಿಗೆ ಸ್ಮಾರ್ಟ್‌ಫೋನ್ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ, ಮಾನವನ ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ ನೀಡುವ ನಿದ್ದೆಯನ್ನು ಕೂಡ ಈ ಸ್ಮಾರ್ಟ್‌ಫೋನ್ ಕಸಿದುಕೊಳ್ಳುತ್ತಿರುವುದು ಎಚ್ಚರಿಕೆಯ ವಿಷಯವಾಗಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಬಳಕೆಗೆ ಒಂದು ಮಿತಿಇದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
People of all ages might use their smartphones in these ways during shared meals .to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot