ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ಸ್ವಚ್ಛಮಾಡುವಾಗ ನೀವು ಈ ವಿಚಾರ ಮರೆಯಲೇಬಾರದು!
ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಫೋಟೋ ಸುಂದರವಾಗಿ ಮೂಡಿ ಬರಬೇಕಾದರೆ ಮುಖ್ಯವಾಗಿ ಕ್ಯಾಮೆರಾ ಲೆನ್ಸ್ ಸ್ವಚ್ಛವಾಗಿರಬೇಕು. ನೀವು ದುಬಾರಿ ಸ್ಮಾರ್ಟ್‌ಫೋನ್ ಕ್ಯಾಮೆರಾ ಬಳಸಿದರೂ ಕೂಡ ಲೆನ್ಸ್ ದೂಳಿನಿಂದ ಕೂಡಿದ್ದರೆ ಫೋಟೋ ಗುಣಮಟ್ಟ ಅಷ್ಟಕಷ್ಟೇ ಇರಲಿದೆ. ಹಾಗಂತ ಕ್ಯಾಮೆರಾ ಲೆನ್ಸ್ ಅನ್ನು ಬೇಕಾಬಿಟ್ಟಿ ಸ್ವಚ್ಛಗೊಳಿಸಲು ಹೋಗಬೇಡಿ.
ಹೌದು, ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ಸ್ವಚ್ಛಗೊಳಿಸುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ. ಬೇಕಾಬಿಟ್ಟಿಯಾಗಿ ಸ್ವಚ್ಛಗೊಳಿಸಲು ಹೋದಾಗ ಸ್ಮಾರ್ಟ್‌ಫೋನ್ ಕ್ಯಾಮೆರಾ ಹಾಳಾಗುವ ಸಾದ್ಯತೆ ಕೂಡ ಉಂಟು. ಆದರಿಂದ ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ಸ್ವಚ್ಛವಾಗಿರಬೇಕಾದರೆ ನೀವು ಏನೆಲ್ಲಾ ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಫೋನ್ ಬಗ್ಗೆ ಕಾಳಜಿ ಇರಲಿ
ಮೊಬೈಲ್ ಕ್ಯಾಮೆರಾ ಲೆನ್ಸ್ ಕ್ಲೀನ್ ಇರಬೇಕಾದರೆ ಮೊದಲಿಗೆ ನಿಮ್ಮ ಫೋನ್ ಬಗ್ಗೆ ಕಾಳಜಿ ಇರಬೇಕು. ಕ್ಯಾಮೆರಾ ಲೆನ್ಸ್ ದೂಳಿನಿಂದ ಕೂಡಿರದಂತೆ ಮಾಡಬೇಕು. ಅಂದರೆ ನಿಮ್ಮ ಫೋನ್ ಅನ್ನು ಇಡುವ ಸ್ಥಳ ಶುದ್ಧವಾಗಿರಬೇಕು. ಇದರಿಂದ ನಿಮ್ಮ ಕ್ಯಾಮೆರಾ ಲೆನ್ಸ್ ಸ್ಕ್ರಾಚ್ ಆಗುವುದನ್ನು ತಪ್ಪಿಸಬಹುದಾಗಿದೆ.
ಫೋನ್ ಆಫ್ ಮಾಡಿ
ಒಂದು ವೇಳೆ ನೀವು ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ಸ್ವಚ್ಛಗೊಳಿಸುತ್ತಿದ್ದರೆ ಫೋನ್ ಸ್ವಿಚ್ಡ್ ಆಫ್ ಮಾಡಿರಿ. ಯಾಕೆಂದ್ರೆ ಸ್ವಚ್ಛಗೊಳಿಸುವ ಸಮಯದಲ್ಲಿ ಯಾವುದೇ ಲೆನ್ಸ್ ಡ್ಯಾಮೇಜ್ ಆಗದಂತೆ ತಡೆಯಲು ಇದು ಸೂಕ್ತವಾದ ಮಾರ್ಗವಾಗಿದೆ.
ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ
ಕ್ಯಾಮೆರಾ ಲೆನ್ಸ್ ಅನ್ನು ಸಿಕ್ಕ ಸಿಕ್ಕ ಬಟ್ಟೆಗಳಲ್ಲಿ ಸ್ವಚ್ಛಗೊಳಿಸಲು ಹೋಗಬೇಡಿ. ಯಾಕಂದ್ರೆ ರಫ್ ಆಗಿರುವ ಬಟ್ಟೆಗಳಲ್ಲಿ ಫೋನ್ ಕ್ಯಾಮೆರಾ ಲೆನ್ಸ್ ಹೊರೆಸಿದರೆ ಗೀರುಗಳು ಬೀಳುವ ಸಾಧ್ಯತೆಯಿರುತ್ತದೆ. ಆದರಿಂದ ಮೃದುವಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಕ್ಲೀನ್ ಮಾಡುವುದು ಉತ್ತಮವಾಗಿದೆ.
ಲೆನ್ಸ್ ಸುತ್ತಲೂ ಸ್ವಚ್ಛಗೊಳಿಸಿ
ಕ್ಯಾಮೆರಾ ಲೆನ್ಸ್ ಅನ್ನು ಮಾತ್ರ ಸ್ವಚ್ಛಗೊಳಿಸುವುದಲ್ಲ, ಅದರ ಸುತ್ತಲು ಇರುವಂತಹ ಫ್ಲ್ಯಾಶ್‌ಲೈಟ್, ಮೈಕ್ರೊಫೋನ್‌ಗಳನ್ನು ಕೂಡ ಸ್ವಚ್ಛಗೊಳಿಸುವುದು ಉತ್ತಮ. ಕೆಲವು ಪ್ರೀಮಿಯಂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲೇಸರ್ ಆಟೋಫೋಕಸ್ ಸಿಸ್ಟಮ್ ಆಗಿರುತ್ತದೆ. ಆದರಿಂದ ಲೆನ್ಸ್ ಸುತ್ತಲೂ ಇರುವ ಭಾಗಗಳನ್ನು ಕೂಡ ಶುಚಿಯಾಗಿಡಿ.
ಲೆನ್ಸ್ ಕ್ಲೀನರ್ ಬಳಸಿ
ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ತುಂಬಾ ಕೊಳಕು ಆಗಿದ್ದರೆ, ಲೆನ್ಸ್ ಕ್ಲೀನರ್ ಅನ್ನು ಬಳಸುವುದು ಸೂಕ್ತವಾಗಿದೆ. ನೀವು ಮೈಕ್ರೋಫೈಬರ್ ಬಟ್ಟೆಗೆ ಸ್ವಲ್ಪ ಪ್ರಮಾಣದ ಲೆನ್ಸ್ ಕ್ಲೀನರ್ ಅನ್ನು ಹಾಕಿಕೊಂಡು ಲೆನ್ಸ್ ಶುಚಿಗೊಳಿಸಿದರೆ ಉತ್ತಮವಾಗಿ ಕಾಣಲಿದೆ.

ಲೆನ್ಸ್ ಅನ್ನು ನೀರಿನಿಂದ ಸ್ಬಚ್ಛಗೊಳಿಸಬೇಡಿ?
ಕ್ಯಾಮೆರಾ ಲೆನ್ಸ್ ಸ್ವಚ್ಛಗೊಳಿಸುವಾಗ ಬಟ್ಟೆ ಮೇಲೆ ನೀರು, ಕ್ಲಿನರ್ ಹಾಕಿಕೊಂಡರೆ ತೊಂದರೆಯಿಲ್ಲ. ಬದಲಿಗೆ ನೀವು ನೇರವಾಗಿ ಲೆನ್ಸ್ ಮೇಲೆ ನೀರು ಅಥವಾ ಕ್ಲಿನರ್ ಅನ್ನು ಹಾಕಿದರೆ ಅದು ಕ್ಯಾಮೆರಾ ವ್ಯವಸ್ಥೆಯನ್ನು ಹಾಳುಮಾಡುವ ಸಾದ್ಯತೆಯಿದೆ.
ಒರಟು ಪದಾರ್ಥಗಳನ್ನು ಬಳಸಬೇಡಿ
ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ಸ್ವಚ್ಛಗೊಳಿಸಲು ಒರಟು ಪದಾರ್ಥಗಳನ್ನು ಬಳಸಬಾರದು. ಉದಾಹರಣೆಗೆ ಸಿಮ್ ಎಜೆಕ್ಟರ್ ಟೂಲ್ ಮೂಲಕ ಲೆನ್ಸ್ ಅಂಚುಗಳಲ್ಲಿರುವ ದೂಳನ್ನು ತೆಗೆಯಲು ಹೋಗಬೇಡಿ. ಇದರಿಂದ ನಿಮ್ಮ ಕ್ಯಾಮೆರಾ ಲೆನ್ಸ್ ಗ್ಲಾಸ್ ಹಾಳಾಗಲಿದೆ.
ಬೆರಳುಗಳಿಂದ ಲೆನ್ಸ್ ಒರೆಸಬೇಡಿ
ಮೊಬೈಲ್ ಕ್ಯಾಮೆರಾ ಲೆನ್ಸ್ ಮೇಲೆ ಬೆರಳುಗಳನ್ನು ಇಟ್ಟರೆ ನಿಮ್ಮ ಕ್ಯಾಮೆರಾ ಬ್ಲರ್ ಆಗೋದು ಖಂಡಿತ. ಆದರಿಂದ ನಿಮ್ಮ ಫಿಂಗರ್‌ಪ್ರಿಂಟ್‌ಗಳು ಕ್ಯಾಮೆರಾ ಲೆನ್ಸ್ ಮೇಲೆ ಬಿದ್ದರೆ ತಕ್ಷಣವೇ ಮೃದುವಾದ ಕ್ಲೀನ್ ಬಟ್ಟೆಯನ್ನು ಬಳಸಿ ತಕ್ಷಣವೇ ಅದನ್ನು ಸ್ವಚ್ಛಗೊಳಿಸಬೇಕು. ಈ ಅಂಶಗಳನ್ನು ಅನುಸರಿಸಿದರೆ ಮಾತ್ರ ನಿಮ್ಮ ಕ್ಯಾಮೆರಾ ಲೆನ್ಸ್ ಉತ್ತಮವಾಗಿ ಕಾಣಲಿದೆ.


Click it and Unblock the Notifications








