ಮೊಬೈಲ್ ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್ ನೀಡಿತು ಅಮೆರಿಕಾದ ಒಂದು ಅಧ್ಯಯನ!!

|

ಮೊಬೈಲ್ ಎಂಬುದು ಎಲ್ಲರ ಅವಿಭಾಜ್ಯ ಅಂಗವಾಗಿ ಬದಲಾಗಿರುವುದು ಸರಿಯೇ. ಆದರೆ, ಮೊಬೈಲ್ ಎಂಬ ಮನೆಗೆ ಒಳಹೊಕ್ಕ ಮೇಲೆ ಮನುಷ್ಯ ಅದರ ಮೇಲೆ ಹೆಚ್ಚು ಅವಲಂಬಿತನಾಗಿದ್ದು, ಸ್ಮಾರ್ಟ್‌ಫೋನ್ ಎಂಬ ಬಲೆಯಲ್ಲಿ ಸಿಕ್ಕು ನರಳುತ್ತಿರುವ ಪರಿಸ್ಥಿತಿ ಎದುರಾಗಿದೆ. ಮೊಬೈಲ್ ಇಲ್ಲದೆ ನಾವಿಲ್ಲ ಎನ್ನುವಷ್ಟರ ಮಟ್ಟಿಗೆ ಜನರು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ.

ಇಲ್ಲಿ ಮೊಬೈಲ್ ಗೀಳಿಗೆ ಬಿದ್ದಿರುವುದು ಮೊಬೈಲ್ ಬಳಕೆದಾರರಿಗೆ ಸಮಸ್ಯೆಯಾಗಿ ಎಂದೂ ಕಾಣಿಸಿಲ್ಲ. ಏಕೆಂದರೆ, ಸ್ಮಾರ್ಟ್‌ಫೋನ್ ಗೀಳು ಅವರಿಗೆ ಆಗುತ್ತಿರುವ ಸಮಸ್ಯೆ ಅವರಿಗೆ ತಿಳಿಯುತ್ತಿಲ್ಲ. ಆದರೆ, ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಒಂದು ನಡೆಸಿದ ಅಧ್ಯಯನವೊಂದು ಮೊಬೈಲ್ ಗೀಳಿನ ಶಾಕಿಂಗ್ ಪರಿಣಾವಗಳನ್ನು ಬಿಚ್ಚಿಟ್ಟಿದೆ.

ಮೊಬೈಲ್ ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್ ನೀಡಿತು ಅಮೆರಿಕಾದ ಒಂದು ಅಧ್ಯಯನ!!

ಸ್ಮಾರ್ಟ್‌ಫೋನ್ ಅನ್ನು ಅತಿಯಾಗಿ ಬಳಕೆ ಮಾಡುವ ಯುವಕರಲ್ಲಿ ಮಿದುಳಿನ ಸಾಮರ್ಥ್ಯ ಕ್ಷೀಣಿಸಲಿದೆ ಎಂಬ ಶಾಕಿಂಗ್ ಮಾಹಿತಿಯನ್ನು ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ನೀಡಿದೆ. ಹಾಗಾದರೆ, ಏನಿದು ಶಾಕಿಂಗ್ ವರದಿ? ಈ ಅಧ್ಯಯನ ನಡೆದಿರುವುದು ಹೇಗೆ? ಇದಕ್ಕಿರುವ ಪರಿಹಾರಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಎರಡು ವರ್ಷಗಳ ಅಧ್ಯಯನ!

2014 ರಿಂದ 2016 ಅವಧಿಯ ಎರಡು ವರ್ಷಗಳ ಸಮಯದಲ್ಲಿ ಈ ಒಂದು ಅಧ್ಯಯನವನ್ನು ನಡೆಯಲಾಗಿದೆ. ಪ್ರತೀ 6 ತಿಂಗಳಿಗೊಮ್ಮೆ ಸಂಶೋಧಕರು, ತಾವು ಆಯ್ಕೆ ಮಾಡಿಸ ಮೊಬೈಲ್ ಬಳಕೆದಾರರನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆಯಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡಿದವರು ''ಎಡಿಹೆಚ್ಡಿ'' ರೋಗಕ್ಕೆ ತುತ್ತಾಗಿರುವುದು ಕಂಡು ಬಂದಿದೆ.

ಅಧ್ಯಯನ ನಡೆದದ್ದು ಹೇಗೆ?

ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ನಡೆಸಿ ಈ ಅಧ್ಯಯನಕ್ಕೆ ಸಂಶೋಧಕರು ಒಟ್ಟು 4,100 ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮಗಳನ್ನು ಯುವಕರೇ ಹೆಚ್ಚು ಬಳಕೆ ಮಾಡುತ್ತಿರುವುದರನ್ನು ಅಧ್ಯಯನಕ್ಕೆ 15 ಮತ್ತು 16 ವರ್ಷಗಳ ಯುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮೂರು ಭಾಗಗಳಾಗಿ ವಿಂಗಡಣೆ!

ಯುವ ಮೊಬೈಲ್ ಬಳಕೆದಾರರನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೇ ಗುಂಪಿನ ಯುವಕರಿಗೆ ಸ್ಮಾರ್ಟ್‌ಫೋನ್ ಬಳಕೆ ಮಾಡದಂತೆ, ಮತ್ತೊಂದು ಗುಂಪಿನ ಯುವಕರಿಗೆ ಮಧ್ಯಮದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವಂತೆ ಹಾಗೂ ಮತ್ತೊಂದು ಭಾಗದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುವಂತೆ ಹೇಳಲಾಗಿದೆ.

ಏನಿದು ಎಡಿಹೆಚ್ಡಿ ರೋಗ?

ಸ್ಮಾರ್ಟ್‌ಫೋನ್ ಅನ್ನು ಹೆಚ್ಚಾಗಿ ಬಳಕೆ ಮಾಡುವ ಯುವಕರಲ್ಲಿ 'ಅಟೆನ್ಷನ್ ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್' (ಎಡಿಹೆಚ್ಡಿ) ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ಈ ರೋಗಕ್ಕೆ ತುತ್ತಾದ ಯುವಕರು ಸ್ಥಿರಚಿತ್ತರಾಗಿ ಯಾವುದರ ಬಗ್ಗೆಯೂ ಗಮನ ಹರಿಸಲು ಅಸಮರ್ಥರಾಗುತ್ತಾರೆ. ವಿಷಯದ ಮೇಲೆ ಗಮನವಿಡಲು ಸಾಧ್ಯವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಧ್ಯಯನ ಹೇಳಿದ್ದೇನು?

ಸ್ಮಾರ್ಟ್‌ಫೋನ್‌ ಅನ್ನು ಅತಿಯಾಗಿ ಬಳಕೆ ಮಾಡುವ ಯುವಕರಲ್ಲಿ ಮಿದುಳಿನ ಸಾಮರ್ಥ್ಯ ಕ್ಷೀಣಿಸಲಿದೆ. ಸ್ಮಾರ್ಟ್‌ಫೋನ್ ಬಳಕೆ ಮಾಡುವವಕರಲ್ಲಿ ಮಿದುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದು, ಮಿದುಳಿನ ಸಾಮರ್ಥ್ಯ ಕ್ಷೀಣಿಸಿರುವುದು ಕಂಡು ಬಂದಿದೆ ಎಂದು ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ನಡೆಸಿದ ಅಧ್ಯಯನ ತಿಳಿಸಿದೆ.

ಇದಕ್ಕೆ ಪರಿಹಾರವೇನು?

ಇಂದಿನ ಯುವಕರು ಸ್ಮಾರ್ಟ್‌ಪೋನ್ ಎಂಬ ಮಂತ್ರದಂಡದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ. ಕಾಡುತ್ತಿರುವ ಈ ಸಮಸ್ಯೆಯನ್ನು ಕಂಡು ಹಿಡಿದು ಪರಿಹಾರ ಹುಡುಕುವುದು ಮುಖ್ಯ. ಅಂದರೆ, ಯುವಕರು ಸ್ಮಾರ್ಟ್‌ಫೋನ್ ಬಳಕೆ ಮೇಲೆ ಸ್ವ ನಿಯಂತ್ರಣ ಹೇರಿಕೊಳ್ಳಬೇಕಾಗಿದೆ. ಪೋಷಕರು ಈ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
ADHD is a brain disorder with symptoms that include a pattern of inattention, hyperactive behaviour and impulsiveness that interferes with functioning or development.to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more