ನಿಮ್ಮ ಸ್ಮಾರ್ಟ್‌ಫೋನ್ ಬಗ್ಗೆ ನೀವು ನಂಬಿರುವ 8 ಹಸಿಬಿಸಿ ಸುಳ್ಳುಗಳು!!

|

ನಿಮಗೆ ಗೊತ್ತಾ?, ದಿನಕ್ಕೊಂದು ತಂತ್ರಜ್ಞಾನ ಹುಟ್ಟುತ್ತದೆ ಬೆಳೆಯುತ್ತಿದೆ ಮತ್ತು ಜನರನ್ನು ತಲುಪುತ್ತದೆ. ಆದರೆ, ಆ ತಂತ್ರಜ್ಞಾನ ಜನರನ್ನು ತಲುಪುವ ವೇಳೆಗೆ ಹಲವು ಬಣ್ಣಗಳು ತನ್ನಲ್ಲಿ ಅಂಟಿಸಿಕೊಂಡುಬಿಡುತ್ತದೆ. ಹೌದು, ಈ ಸ್ಮಾರ್ಟ್‌ ಪ್ರಪಂಚದಂತೆ ಜನರು ಸಹ ಬದಲಾಗುತ್ತಿದ್ದಾರೆ. ಆದರೆ, ಅವರ ನಂಬಿಕೆಗಳು ಮಾತ್ರ ಬದಲಾಗುತ್ತಿಲ್ಲ. ಇದು ತಂತ್ರಜ್ಞಾನ ಕ್ಷೇತ್ರವನ್ನು ಬಿಟ್ಟಿಲ್ಲ. ತಂತ್ರಜ್ಞಾನ ಕಂಪೆನಿಗಳು ಜನರನ್ನು ಆ ರೀತಿ ನಂಬಿಸಿಬಿಟ್ಟಿವೆ. ಸ್ಮಾರ್ಟ್‌ಫೋನ್‌ ಕಂಪನಿಗಳಂತು ತಾವೇಳಿದ್ದು ಎಲ್ಲಾ ನಿಜ ಎಂದು ನಂಬಿಸಿಬಿಟ್ಟಿವೆ.

ನಿಮ್ಮ ಸ್ಮಾರ್ಟ್‌ಫೋನ್ ಬಗ್ಗೆ ನೀವು ನಂಬಿರುವ 8 ಹಸಿಬಿಸಿ ಸುಳ್ಳುಗಳು!!

ಇದಕ್ಕೆ ಸ್ಮಾರ್ಟ್‌ಫೋನ್‌ಗಳು ಕೂಡ ಹೊರತಾಗಿಲ್ಲ. ಏಕೆಂದರೆ, ಸ್ಮಾರ್ಟ್‌ಫೋನ್‌ ಬಗ್ಗೆ ನೀವು ನಂಬಿರುವ ಅನೇಕ ಸಂಗತಿಗಳು ಸತ್ಯಕ್ಕೆ ದೂರವಾಗಿವೆ. ನೆಟ್‌ವರ್ಕ್‌ ಸಿಗ್ನಲ್ ಬಾರ್ ಪೂರ್ತಿ ತುಂಬಿದ್ದರೆ ನೆಟ್‌ವರ್ಕ್‌ ಚೆನ್ನಾಗಿರುತ್ತೆ ಎಂದು ನಾವು ನಂಬಿದ್ದೇವೆ. ಆದರೆ, ಅದು ಸಂಪೂರ್ಣ ಸತ್ಯವಲ್ಲ ಕೇವಲ ನಂಬಿಕೆಯಷ್ಟೇ. ಇಂತಹ ಅನೇಕ ನಂಬಿಕೆಗಳ ಗುಟ್ಟನ್ನು ಇಲ್ಲಿ ರಟ್ಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ಲೇಖನ ಓದಿದ ತಕ್ಷಣ ಈ ಎಲ್ಲಾ ನಂಬಿಕೆಗಳು ಸತ್ಯವಲ್ಲ ಎಂಬ ನಿರ್ಧಾರಕ್ಕೆ ಬರುವುದಂತೂ ಖಂಡಿತ.

ಹೆಚ್ಚು ಮೆಗಾಫಿಕ್ಸೆಲ್ ಇದ್ದರೆ ಉತ್ತಮ ಕ್ಯಾಮೆರಾ

ಹೆಚ್ಚು ಮೆಗಾಫಿಕ್ಸೆಲ್ ಇದ್ದರೆ ಉತ್ತಮ ಕ್ಯಾಮೆರಾ

ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಹೆಚ್ಚು ಮೆಗಾಪಿಕ್ಸೆಲ್ ಇದ್ದರೆ ಅದು ಮಾತ್ರ ಉತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂದು ನಂಬಿದ್ದೇವೆ. ಕ್ಯಾಮೆರಾದಲ್ಲಿ ಮೆಗಾಫಿಕ್ಸೆಲ್ ಎಷ್ಟು ಪ್ರಮುಖವೋ ಅಷ್ಟೇ ಇತರ ಅಂಶಗಳು ಪ್ರಮುಖವಾಗುತ್ತವೆ. ಲೈಟ್ ಸೆನ್ಸಾರ್, ಇಮೇಜ್ ಪ್ರೋಸೆಸಿಂಗ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳು ಉತ್ತಮವಾಗಿರಬೇಕು ಎಂಬುದನ್ನು ಮರೆಯುತ್ತೇವೆ. ಐಫೋನ್‌ 6 ಕೇವಲ 8 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದ್ದು, 13 ಮೆಗಾಫಿಕ್ಸೆಲ್ ಕ್ಯಾಮೆರಾಕ್ಕಿಂತಲೂ ಉತ್ತಮವಾದ ಪೋಟೋಗಳನ್ನು ಸೆರೆಹಿಡಿಯುತ್ತದೆ ಎಂದರೆ ಕೇವಲ ಹೆಚ್ಚು ಮೆಗಾಪಿಕ್ಸೆಲ್ ಉತ್ತಮ ಕ್ಯಾಮೆರಾವನ್ನು ನಿರ್ಧರಿಸುವುದಿಲ್ಲ.

ಇನ್‌ಕಾಗ್ನಿಟೋ ಬ್ರೌಸಿಂಗ್ ನಿಮ್ಮನ್ನು ಅನಾಮಧೇಯವಾಗಿಡುತ್ತವೆ

ಇನ್‌ಕಾಗ್ನಿಟೋ ಬ್ರೌಸಿಂಗ್ ನಿಮ್ಮನ್ನು ಅನಾಮಧೇಯವಾಗಿಡುತ್ತವೆ

ಇನ್‌ಕಾಗ್ನಿಟೋ ಅಥವಾ ಪ್ರೈವೆಟ್ ಬ್ರೌಸಿಂಗ್‌ ಮೋಡ್‌ ನಮ್ಮನ್ನು ಅನಾಮಧೇಯವಾಗಿಡುತ್ತವೆ ಎಂದು ಬಹಳಷ್ಟು ಜನ ತಪ್ಪು ಕಲ್ಪನೆ ಹೊಂದಿದ್ದಾರೆ. ಎಲ್ಲಾ ಬ್ರೌಸರ್‌ಗಳು ಈ ವೈಶಿಷ್ಟ್ಯ ಹೊಂದಿವೆ. ನೀವು ಈ ಸೌಲಭ್ಯ ಬಳಸುತ್ತಿದ್ದರೆ ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಟ್ರಾಕ್ ಮಾಡಲ್ಲ, ಇದು ಬೇರೆ ಬಳಕೆದಾರರಿಗೆ ಗೊತ್ತಾಗಲ್ಲ ಅಷ್ಟೇ. ಆದರೆ, ನೀವು ಭೇಟಿ ಕೊಡುವ ವೆಬ್‌ಸೈಟ್ ಅಥವಾ ನಿಮ್ಮ ಇಂಟರ್‌ನೆಟ್‌ ಸರ್ವಿಸ್‌ ಪ್ರಾವಿಡಾರ್‌ ಹತ್ತಿರ ನಿಮ್ಮ ಗುರುತನ್ನು ಮುಚ್ಚಿಡುವುದಕ್ಕೆ ಆಗುವುದಿಲ್ಲ.

ಸಿಗ್ನಲ್‌ ಬಾರ್‌ ತುಂಬಿದ್ದರೆ ಉತ್ತಮ ನೆಟ್‌ವರ್ಕ್‌

ಸಿಗ್ನಲ್‌ ಬಾರ್‌ ತುಂಬಿದ್ದರೆ ಉತ್ತಮ ನೆಟ್‌ವರ್ಕ್‌

ನಾವೇಲ್ಲಾ ನಂಬಿರುವುದು ಮೊಬೈಲ್‌ನಲ್ಲಿ ಸಿಗ್ನಲ್ ಬಾರ್ ತುಂಬಿದ್ದರೆ ಉತ್ತಮ ನೆಟ್‌ವರ್ಕ್ ದೊರೆಯುತ್ತದೆ ಎಂದು. ಆದರೆ ಆ ಸಿಗ್ನಲ್‌ ಬಾರ್‌ಗಳು ನಿಮ್ಮ ಹತ್ತಿರದ ನೆಟ್‌ವರ್ಕ್‌ ಟವರ್‌ನ್ನು ಸೂಚಿಸುತ್ತವೆ. ಆದರೆ, ನೆಟ್‌ವರ್ಕ್‌ ನಿರ್ಧಾರವಾಗುವುದು ಆ ಟವರ್‌ಗೆ ಒಂದೇ ಸಮಯದಲ್ಲಿ ಎಷ್ಟು ಜನ ಸಂಪರ್ಕ ಪಡೆದುಕೊಂಡಿದ್ದಾರೆ ಎಂಬುದರಿಂದ ಎನ್ನುವುದು ಗೊತ್ತಿರಲಿ. ಹೀಗಾಗಿಯೇ ಬೆಳಗಿನ ಜಾವದಲ್ಲಿ ಹೆಚ್ಚು ವೇಗವಾಗಿ ಇಂಟರ್‌ನೆಟ್ ಸಂಪರ್ಕ ಏರ್ಪಡುತ್ತದೆ.

ಹೆಚ್ಚು ಕೋರ್‌ ಇದ್ದರೆ ಉತ್ತಮ ಕಾರ್ಯನಿರ್ವಹಣೆ

ಹೆಚ್ಚು ಕೋರ್‌ ಇದ್ದರೆ ಉತ್ತಮ ಕಾರ್ಯನಿರ್ವಹಣೆ

ಹೆಚ್ಚು ಕೋರ್ ಇದ್ದರೆ ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ವಿಂಗಡಣೆಯಾಗಿ ವೇಗವಾಗಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ ಎಂದು ನಾವೂ ನಂಬಿದ್ದೇವೆ. ಡ್ಯುಯಲ್ ಕೋರ್‌ ಎಂದರೆ ಎರಡು ಕೋರ್, ಒಕ್ಟಾ ಕೋರ್ ಎಂದರೆ ಎಂಟು ಕೋರ್, ಕ್ವಾಡ್ ಕೋರ್ ಎಂದರೆ ನಾಲ್ಕು ಕೋರ್ ಎಂಬುದಾಗಿದ್ದು, ಇವುಗಳು ಸಿಪಿಯುನ ಪ್ರೊಸೆಸರ್‌ ಕೋರಗಳನ್ನು ಸೂಚಿಸುತ್ತವೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್ ಕೋರ್‌ಗೆ ತಕ್ಕಂತೆ ಆಪ್‌ಗಳು ಅಭಿವೃದ್ಧಿಯಾಗಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯು ಸಹ ನಿಮಗೆ ತೃಪ್ತಿ ತರುತ್ತದೆ. ಆದರೆ, ಕೋರ್‌ ಸಂಖ್ಯೆಗಿಂತ ಇಲ್ಲಿ ಪ್ರೊಸೆಸರ್‌ ಗುಣಮಟ್ಟವು ಕೂಡ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ.

ಫುಲ್‌ ಹೆಚ್‌ಡಿ ಡಿಸ್‌ಪ್ಲೇಗಿಂತ ಕ್ವಾಡ್‌ ಹೆಚ್‌ಡಿ ಡಿಸ್‌ಪ್ಲೇ ಉತ್ತಮ

ಫುಲ್‌ ಹೆಚ್‌ಡಿ ಡಿಸ್‌ಪ್ಲೇಗಿಂತ ಕ್ವಾಡ್‌ ಹೆಚ್‌ಡಿ ಡಿಸ್‌ಪ್ಲೇ ಉತ್ತಮ

ಕ್ವಾಡ್‌ ಹೆಚ್‌ಡಿ ಡಿಸ್‌ಪ್ಲೇ (2560 x 1440 ಪಿಕ್ಸೆಲ್ಸ್) ಮತ್ತು ಫುಲ್ ಹೆಚ್‌ಡಿ ಡಿಸ್‌ಪ್ಲೇ (1920 x 1080 ಪಿಕ್ಸೆಲ್ಸ್) ಹೊಂದಿರುತ್ತದೆ. 5.5 ಇಂಚ್ ಕ್ಚಾಡ್‌ ಹೆಚ್‌ಡಿ ಡಿಸ್‌ಪ್ಲೇ 538 ppi (ಪ್ರತಿ ಇಂಚ್‌ಗೆ ಪಿಕ್ಸೆಲ್ಸ್) ಹೊಂದಿರುತ್ತೆ. 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ 400 ppi (ಪ್ರತಿ ಇಂಚ್‌ಗೆ ಪಿಕ್ಸೆಲ್ಸ್) ಹೊಂದಿರುತ್ತೆ. ಆದರೆ, ಮಾನವನ ಕಣ್ಣುಗಳು 326 ಪಿಕ್ಸೆಲ್ಸ್ ಪರ್‌ಗಿಂತ ಹೆಚ್ಚು ಪಿಪಿಐ ಸಾಂದ್ರತೆ ಹೊಂದಿದ್ದರೆ ಗುರುತಿಸುವುದಿಲ್ಲ ಎಂಬ ವಾದವಿದೆ.

ಆಪಲ್‌ ಕಂಪ್ಯೂಟರ್‌ಗೆ ವೈರಸ್‌ ಬರಲ್ಲ

ಆಪಲ್‌ ಕಂಪ್ಯೂಟರ್‌ಗೆ ವೈರಸ್‌ ಬರಲ್ಲ

ಜಗತ್ತಿನ ಯಾವುದೇ ಕಂಪ್ಯೂಟರ್ ಸಿಸ್ಟಮ್‌ ಕೂಡ ವೈರಸ್‌ನಿಂದ ಹೊರತಾಗಿಲ್ಲ ಎನ್ನುವುದಂತೂ ಸತ್ಯ. ಆದರೆ, ವಿಂಡೋಸ್ ಪಿಸಿಗೆ ಹೋಲಿಸಿದರೆ ಆಪಲ್ ಕಂಪ್ಯೂಟರ್ ಉತ್ತಮ ಟ್ರಾಕ್ ರೆಕಾರ್ಡ್‌ ಹೊಂದಿದ್ದು, ವೈರಸ್ ದಾಳಿ ಸ್ವಲ್ಪ ಕಡಿಮೆ ಎಂದು ಹೇಳಬಹುದು. ಏಕೆಂದರೆ, ಆಪಲ್ ಕಂಪೆನಿ ವಿಂಡೋಸ್‌ಗಿಂತ ಹೆಚ್ಚು ಸುರಕ್ಷತೆಯನ್ನು ನೀಡುವ ತಂತ್ರಜ್ಞಾನವನ್ನು ಹೊಂದುವುದರಲ್ಲಿ ಸಫಲವಾಗಿದೆ.

ಇಂಟರ್‌ನೆಟ್‌ ಮತ್ತು www ಎರಡು ಒಂದೇ

ಇಂಟರ್‌ನೆಟ್‌ ಮತ್ತು www ಎರಡು ಒಂದೇ

ಇಂಟರ್‌ನೆಟ್‌ ಮತ್ತು www ಎರಡು ಒಂದೇ ಎಂದು ನಂಬಿದ್ದೇವೆ. ಆದರೆ, ಎರಡು ಬೇರೆ ಬೇರೆಯಾಗಿವೆ. ಇಂಟರ್‌ನೆಟ್‌ ನೆಟ್‌ವರ್ಕ್‌ಗಳ ನೆಟ್‌ವರ್ಕ್‌ ಆಗಿದೆ. ಆದರೆ, www ಎನ್ನುವುದು world wide web ಆಗಿದ್ದು, ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ, ನೀವು ಇದನ್ನು ಒಂದೇ ಎಂದು ತಿಳಿದಿದ್ದರೆ ಅದನ್ನು ಬಿಟ್ಟುಬಿಡಿ.

ರಾತ್ರಿಯಿಡಿ ಮೊಬೈಲ್‌ ಚಾರ್ಜ್‌ ಹಾಕುವುದರಿಂದ ಫೋನ್ ಹಾಳಾಗುತ್ತದೆ​

ರಾತ್ರಿಯಿಡಿ ಮೊಬೈಲ್‌ ಚಾರ್ಜ್‌ ಹಾಕುವುದರಿಂದ ಫೋನ್ ಹಾಳಾಗುತ್ತದೆ​

ಈ ಅಂಶವನ್ನು ಎಲ್ಲರೆಂದರೆ ಎಲ್ಲರೂ ನಂಬಿದ್ದೇವೆ. ಆದರೆ, ಸ್ಮಾರ್ಟ್‌ಫೋನ್‌ಗಳೆಲ್ಲ ಸ್ಮಾರ್ಟ್‌ ಆಗಿದ್ದಾವೆ ಎನ್ನುವುದನ್ನು ಮರೆತಿದ್ದೇವೆ. ಮೊಬೈಲ್‌ಗಳೆಲ್ಲ ಇಂಜಿನಿಯರಿಂಗ ಕಾರ್ಯವಾಗಿದ್ದು, ಒಂದು ಬಾರಿ ಪೂರ್ತಿ ಚಾರ್ಜ್‌ ಆದರೆ, ಸ್ಮಾರ್ಟ್‌ಫೋನ್ ಸ್ವಯಂಚಾಲಿತವಾಗಿಯೇ ಚಾರ್ಜ್‌ ಆಗುವುದನ್ನು ನಿಲ್ಲಿಸುತ್ತದೆ. ಹಾಗಾಗಿ ರಾತ್ರಿಯಿಡಿ ಮೊಬೈಲ್‌ ಚಾರ್ಜ್‌ ಹಾಕುವುದರಿಂದ ಫೋನ್ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆ ತಪ್ಪು.

Best Mobiles in India

English summary
do more network bars mean better mobile service? Is charging your phone overnight harmful for your battery?. tech myths you need to stop believing right now. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X