ಈ ವರ್ಷ ಬಿಡುಗಡೆ ಆಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು!

|

ಪ್ರಸ್ತುತ ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇವೆ. ಇನ್ನು 2020 ರಲ್ಲಿ ಕೊರೊನಾ ಕಾರಣದಿಂದಾಗಿ ಟೆಕ್‌ ವಲಯ ಸ್ವಲ್ಪ ಹಿನ್ನಡೆ ಅನುಭವಿಸಿದರೂ ಸಹ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುವಲ್ಲಿ ಹಿಂದೆ ಬೀಳಲ್ಲಿಲ್ಲ. ಇನ್ನು 2021 ರಲ್ಲಿಯೂ ಸಹ ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಲು ಸಿದ್ದತೆ ನಡೆಸಿದ್ದು, ಕೆಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರನ್ನು ಗೆಲ್ಲಲು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ವಿನ್ಯಸ, ಡಿಸ್‌ಪ್ಲೇ ಗಾತ್ರ, ಕ್ಯಾಮೆರಾ ವಿಶೇಷ ಎಲ್ಲವೂ ಬದಲಾಗುತ್ತಿದ್ದು, ಯುವ ಜನತೆಯ ಆಶಯಕ್ಕೆ ತಕ್ಕಂತೆ ವಿಶೇಷವಾಗಿ ರೂಪಿಸಲಾಗುತ್ತಿದೆ. ಸದ್ಯ ಈ ನಿಟ್ಟಿನಲ್ಲಿ ಈ ವರ್ಷ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಹಾಗೂ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21

ಸ್ಯಾಮ್‌ಸಂಗ್ ಗ್ಯಾಲಕ್ಸಿ S21

ಸ್ಮಾರ್ಟ್‌ಫೋನ್ ಪ್ರಿಯರು ಪ್ರತಿವರ್ಷ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟಿರುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರಾಂಡ್‌ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಈ ವರ್ಷದ ಆರಂಭದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 21 ಸರಣಿಯನ್ನು ಅನಾವರಣ ಗೊಳಿಸಲಿದೆ. ಇನ್ನು ಎಸ್ ಸರಣಿಗೆ ಸ್ಟೈಲಸ್ ತರುವ ಮೂಲಕ ಸ್ಯಾಮ್‌ಸಂಗ್ ಈ ಎರಡನ್ನು ವಿಲೀನಗೊಳಿಸಲು ಯೋಜಿಸುತ್ತಿದೆ ಎಂಬ ಮಾಹಿತಿ ಕೂಡ ಇದೆ. ಇನ್ನು ಎಸ್ 21 ಸರಣಿಯಲ್ಲಿ ಭಾಗವಾಗಿ ಎಷ್ಟು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂಬುದು ಸಹ ಆಸಕ್ತಿದಾಯಕವಾಗಿದೆ.

ರಿಯಲ್‌ಮಿ ರೇಸ್

ರಿಯಲ್‌ಮಿ ರೇಸ್

ಟೆಕ್‌ ವಲಯದಲ್ಲಿ ಏರುಗತಿಯಲ್ಲಿ ಜನಪ್ರಿಯತೆ ಗಳಿಸುತ್ತಿರುವ ರಿಯಲ್‌ಮಿ ಕಂಪೆನಿ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಇನ್ನು 2021 ರಲ್ಲಿ, ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಒಳಗೊಂಡ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ಪ್ಲ್ಯಾನ್‌ ರೂಪಿಸಿದೆ. ಇದು ರಿಯಲ್‌ಮಿ ರೇಸ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಒನ್‌ಪ್ಲಸ್ 9

ಒನ್‌ಪ್ಲಸ್ 9

ಒನ್‌ಪ್ಲಸ್ 2021 ರ ಮೊದಲ ತ್ರೈಮಾಸಿಕದಲ್ಲಿ ಒನ್‌ಪ್ಲಸ್‌ 9 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಒನ್‌ಪ್ಲಸ್‌ನ ದೀರ್ಘಾವಧಿಯಲ್ಲಿ ಅತ್ಯಂತ ಮಹತ್ವದ ಸ್ಮಾರ್ಟ್‌ಫೋನ್‌ಗಳಾಗಿದ್ದು, ಭಾರತದಲ್ಲಿ ಒನ್‌ಪ್ಲಸ್‌ನ ಮಾರುಕಟ್ಟೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಅನುಕೂಲವಾಗಲಿದೆ ಎನ್ನಲಾಗಿದೆ. ಇದು 120Hz ಡಿಸ್ಪ್ಲೇ, 30W ಫಾಸ್ಟ್ ಚಾರ್ಜಿಂಗ್ ಮತ್ತು ಸ್ನಾಪ್ಡ್ರಾಗನ್ 888 SoC ಅನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಶಿಯೋಮಿ ಮಿ 11

ಶಿಯೋಮಿ ಮಿ 11

ಶಿಯೋಮಿ ಈ ವರ್ಷದ ಆರಂಭದಲ್ಲಿ ಮಿ11 ಅನ್ನಿ ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್ನು ಕಳೆದ ವರ್ಷ ಮಿ 10T ಪ್ರೊ ಗೆ ತುಂಬಾ ಆಕ್ರಮಣಕಾರಿಯಾಗಿ ಬೆಲೆಯನ್ನು ನೀಡಿತ್ತು. ಇದೀಗ ಮಿ 11 ನಲ್ಲಿಯೂ ಇದೇ ರೀತಿಯ ವಿಧಾನವನ್ನು ನಿರೀಕ್ಷಿಸಬಹುದು. ಇನ್ನು ಈ ಸ್ಮಾರ್ಟ್‌ಫೋನ್‌ ಈಗಾಗಲೇ ಚೀನಾದಲ್ಲಿ ಬಿಡುಗಡೆ ಆಗಿದ್ದು, ಕ್ಯೂಎಚ್‌ಡಿ + ರೆಸಲ್ಯೂಶನ್ ಬೆಂಬಲದೊಂದಿಗೆ 6.81 ಇಂಚಿನ ಒಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ.

Best Mobiles in India

English summary
2021 is here. All of us deserve a pat on the back for making it through 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X