ಕಳೆದ ವಾರ ಭಾರತದಲ್ಲಿ ಬಿಡುಗಡೆಯಾದ ಫೋನ್‌ಗಳಿವು! Realme GT 6, Motorola Edge 50 Ultra, OPPO Reno 12
ಮೊಬೈಲ್ ಮಾರುಕಟ್ಟೆಗೆ ಪ್ರತಿನಿತ್ಯ ಒಂದಿಲ್ಲ ಒಂದು ಸ್ಮಾರ್ಟ್‌ಫೋನ್‌ಗಳು (Smartphones) ಬರುತ್ತಲೇ ಇರುವುದನ್ನು ನೋಡಬಹುದು. ಅದರಂತೆ ಕಳೆದ ವಾರ ಕೂಡ ಭಾರತೀಯ ಮಾರುಕಟ್ಟೆಗೆ ದೊಡ್ಡ ದೊಡ್ಡ ಬ್ರಾಂಡ್‌ನ ಬಹುನಿರೀಕ್ಷಿತ ಮೊಬೈಲ್‌ಗಳು ಮಾರುಲಟ್ಟೆಗೆ ಲಗ್ಗೆ ಇಟ್ಟಿವೆ. ಪ್ರಮುಖವಾಗಿ Realme GT 6, Motorola Edge 50 Ultra, OPPO Reno 12 ಸರಣಿ ಸೇರಿದಂತೆ ಇತರೆ ಪ್ರಸಿದ್ದ ಬ್ರಾಂಡ್‌ನ ಮೊಬೈಲ್‌ಗಳು ಬಿಡುಗಡೆಯಾಗುವ ಮೂಲಕ ಗಮನ ಸೆಳೆದಿವೆ. ಕಳೆದ ವಾರ ಬಿಡುಗಡೆಯಾದ ಫೋನ್‌ಗಳ ಕುರಿತು ಮಾಹಿತಿ ಇಲ್ಲದೇ ಇದ್ದರೆ ಚಿಂತಿಸಬೇಡಿ ನಾವು ಈ ಲೇಖನದಲ್ಲಿ ಆ ಸ್ಮಾರ್ಟ್‌ಫೋನ್‌ಗಳ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ನೋಡಿ.
Motorola Edge 50 Ultra:
ಈ ಸ್ಮಾರ್ಟ್‌ಫೋನ್ ಜೂನ್ 18 ರಂದು ಭಾರತದಲ್ಲಿ ಬಿಡುಗಡೆಯಾಗಿದ್ದು ಇದು ಮೊಟೊರೊಲಾ ಸಂಸ್ಥೆಯ ಟಾಪ್-ಆಫ್-ಲೈನ್ ಮೋಡ್ ಆಗಿರಲಿದೆ. ಇದರ 12GB RAM+512GB ಸ್ಟೋರೇಜ್ ರೂಪಾಂತರವು 54,999 ರೂ. ಬೆಲೆ ಹೊಂದಿದೆ.

Motorola Edge 50 Ultra ಫೀಚರ್ಸ್:
ಇದು 144Hz ರಿಫ್ರೆಶ್ ರೇಟ್ ಮತ್ತು 2,500 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುವ 6.7 ಇಂಚಿನ pOLED ಪ್ಯಾನೆಲ್ ಡಿಸ್‌ಪ್ಲೇಯನ್ನು ಹೊಂದಿದೆ. Qualcomm Snapdragon 8s Gen 3 SoC ಅನ್ನು ಆಂಡ್ರೆನೊ 735 GPU ಜೊತೆಗೆ ಜೋಡಿಸಲಾಗಿದೆ. 12GB RAM ಮತ್ತು 512GB ಆಂತರಿಕ ಸಂಗ್ರಹಣೆ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
ಕ್ಯಾಮರಾ: OIS ಜೊತೆಗೆ 50MP ಪ್ರಾಥಮಿಕ ಕ್ಯಾಮರಾ, 64MP ಟೆಲಿಫೋಟೋ ಶೂಟರ್ ಮತ್ತು 50MP ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ ಇದು 50MP ಸ್ನ್ಯಾಪರ್ ಹೊಂದಿದೆ.
OS: ಆಂಡ್ರಾಯ್ಡ್ 14 ಆಧಾರಿತ Hello UI ಬಾಕ್ಸ್ ಮೂಲಕ ಕಾರ್ಯನಿರ್ವಹಿಸಲಿದೆ.
OPPO Reno 12 ಸರಣಿ:
ಚೀನಾದಲ್ಲಿ ಯಶಸ್ವಿ ಪ್ರವೇಶದ ಬಳಿಕ OPPO Reno 12 ಸರಣಿಯು ಜೂನ್ 19 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ವೆನಿಲ್ಲಾ ಮಾದರಿ OPPO Reno 12 ಮತ್ತು OPPO Reno 12 Pro ಎರಡು ಮಾದರಿಗಳನ್ನು ಹೊಂದಿದೆ.
OPPO Reno 12 ಸರಣಿಯ ವಿಶೇಷತೆಗಳು:
ಡಿಸ್‌ಪ್ಲೇ: 6.7 ಇಂಚಿನ ಫುಲ್ HD+ 120Hz ಡಿಸ್‌ಪ್ಲೇ ಜೊತೆಗೆ 1200nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
SoC: MediaTek ಡೈಮೆನ್ಸಿಟಿ 7300 ಎನರ್ಜಿ SoC ಅನ್ನು ARM ಮಾಲಿ G615 GPU ಜೊತೆಗೆ ಜೋಡಿಸಲಾಗಿದೆ.
RAM, ಸ್ಟೋರೇಜ್: 12GB RAM ಮತ್ತು 512GB ಸಂಗ್ರಹ ಸಾಮರ್ಥ್ಯ ಹೊಂದಿದೆ.
ಬ್ಯಾಟರಿ: 80W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದೆ.
OPPO Reno 12 ಕ್ಯಾಮೆರಾಗಳು: OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್, 2MP ಮ್ಯಾಕ್ರೋ ಶೂಟರ್ ಮತ್ತು 32MP ಸೆಲ್ಫಿ ಸ್ನ್ಯಾಪರ್ ಹೊಂದಿದೆ.
OPPO Reno 12 Pro ಕ್ಯಾಮೆರಾ: OIS ಜೊತೆಗೆ 50MP ಪ್ರಾಥಮಿಕ ಸೆನ್ಸಾರ್, 8MP ಅಲ್ಟ್ರಾವೈಡ್ ಲೆನ್ಸ್, 50MP ಟೆಲಿಫೋಟೋ ಕ್ಯಾಮೆರಾ ಮತ್ತು 50MP ಸೆಲ್ಫಿ ಶೂಟರ್ ಹೊಂದಿದೆ.
OS: ಆಂಡ್ರಾಯ್ಡ್-14 ಆಧಾರಿತ ColorOS 14.1 ಸ್ಕಿನ್ ಹೊಂದಿದೆ.
ಬೆಲೆ: OPPO Reno 12 ಇದರ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವು ರೂ. 45,000 ದಿಂದ ಪ್ರಾರಂಭವಾಗುತ್ತದೆ. ಮತ್ತೊಂದೆಡೆ OPPO Reno 12 Pro ಇದರ 12GB RAM ಮತ್ತು 512GB ಸ್ಟೋರೇಜ್ ಮಾದರಿಯು ರೂ. 53,600 ರೂ. ಬೆಲೆ ಹೊಂದಿದೆ.
Realme GT 6:
ಇದು ಸೂಪ್-ಅಪ್ ಆವೃತ್ತಿಯಾಗಿ ಜೂನ್ 20 ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಾಧನದ ಮುಖ್ಯಾಂಶವೆಂದರೆ ಅದರ 6,000nits ಗರಿಷ್ಠ ಬ್ರೈಟ್‌ನೆಸ್ ಇದು HDR ವೀಕ್ಷಿಸುವಾಗ ಅಸಾಧಾರಣವಾದ ಡಿಸ್‌ಪ್ಲೇ ಬ್ರೈಟ್‌ನೆಸ್ ನೀಡುತ್ತದೆ.
Realme GT 6 ವಿಶೇಷತೆಗಳು:
ಡಿಸ್‌ಪ್ಲೇ: 6.78 ಇಂಚಿನ 1.5K 8T LTPO ಅಮೋಲ್ಡ್ ಪ್ಯಾನೆಲ್ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 6,000 ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
SoC: Qualcomm Snapdragon 8s Gen 3 SoC ಅನ್ನು Adreno 735 GPU ಜೊತೆಗೆ ಜೋಡಿಸಲಾಗಿದೆ.
RAM, ಸಂಗ್ರಹಣೆ: 16GB RAM ಮತ್ತು 512GB ಸಂಗ್ರಹ ಸಾಮರ್ಥ್ಯ ಹೊಂದಿದೆ.
ಬ್ಯಾಟರಿ: 120W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿ ಹೊಂದಿದೆ.
ಕ್ಯಾಮರಾ: 50MP OIS ಪ್ರಾಥಮಿಕ ಕ್ಯಾಮರಾ, 50MP ಟೆಲಿಫೋಟೋ ಶೂಟರ್, ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಜೊತೆಗೆ ಸೆಲ್ಫಿಗಾಗಿ 32MP ಸ್ನ್ಯಾಪರ್ ಹೊಂದಿದೆ.
OS: Android 14 ಆಧಾರಿತ realme UI 5.0 ಹೊಂದಿದೆ.
ಬೆಲೆ: ಇದರ ಬೇಸ್ 8GB RAM ಮತ್ತು 256GB ಸ್ಟೋರೇಜ್ ಮಾಡೆಲ್‌ಗೆ ರೂ 40,999 ರಿಂದ ಪ್ರಾರಂಭವಾಗುತ್ತದೆ, 12GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ರೂ. 42,999 ಮತ್ತು 16GB RAM ಮತ್ತು 512GB ಸ್ಟೋರೇಜ್ ಆಯ್ಕೆಗೆ ರೂ 44,999. ಬೆಲೆ ಹೊಂದಿದೆ.
Vivo Y58 5G:
Vivo Y58 5G ಜೂನ್ 20ರಂದು ಬಿಡುಗಡೆಯಾಗಿದೆ. ಭಾರತದಲ್ಲಿ Vivo Y56 ನ ಮುಂದುವರೆದ ಜನರೇಷನ್ ಆಗಿ ಪ್ರಾರಂಭವಾಯಿತು.
Vivo Y58 5G ವಿಶೇಷತೆಗಳು:
ಡಿಸ್‌ಪ್ಲೇ: 120Hz ರಿಫ್ರೆಶ್ ರೇಟ್‌ನೊಂದಿಗೆ 6.72 ಇಂಚಿನ LCD ಪ್ಯಾನೆಲ್ ಮತ್ತು 1,024 nits ಗರಿಷ್ಠ ಬ್ರೈಟ್‌ನೆಸ್ ನ ಡಿಸ್‌ಪ್ಲೇ ಹೊಂದಿದೆ.
SoC: Adreno 613 GPU ಜೊತೆಗೆ ಜೋಡಿಸಲಾದ Qualcomm Snapdragon 4 Gen 2 SoC ಯಿಂದ ರನ್ ಆಗಲಿದೆ.
RAM, ಸಂಗ್ರಹಣೆ: 8GB RAM ಮತ್ತು 128GB ಆಂತರಿಕ ಸಂಗ್ರಹಣೆ, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.
ಬ್ಯಾಟರಿ: 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ ಹೊಂದಿದೆ.
ಕ್ಯಾಮೆರಾ: 50MP ಪ್ರಾಥಮಿಕ ಸಂವೇದಕ ಮತ್ತು 2MP ಡೆಪ್ತ್ ಕ್ಯಾಮೆರಾ ಜೊತೆಗೆ ಸೆಲ್ಫಿಗಾಗಿ 8MP ಶೂಟರ್ ಹೊಂದಿದೆ.
ಬೆಲೆ: 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದ್ದು ಇದು 19,499 ರೂ.ಗಳಿಗೆ ಲಭ್ಯವಿದೆ.


Click it and Unblock the Notifications








