Home
ಸುದ್ದಿಜಾಲ

ಮೊಬೈಲ್‌ ಬಿಡಿಭಾಗಗಳ ಆಮದು ಸುಂಕ ಹೆಚ್ಚಳ!..ಸ್ಮಾರ್ಟ್‌ಫೋನ್‌ ಬೆಲೆ ಹೆಚ್ಚಳ ಸಾಧ್ಯತೆ!

ಈ ದಶಕದ ಮೊದಲ ಬಜೆಟ್‌ ಕೇಂದ್ರ ಬಜೆಟ್‌ 2021-21 ಇಂದು ಮಂಡನೆ ಆಗಿದೆ. ಕೊರೊನಾ ಸಂಕಷ್ಟದ ನಂತರದ ಬಜೆಟ್‌ ಇದಾಗಿದ್ದರಿಂದ ದೇಶ ವಾಸಿಗಳಲ್ಲಿ ಬಾಳ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಇನ್ನು ನಿರೀಕ್ಷೆಯಂತೆಯೇ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸ್ವದೇಶಿ ಮಂತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಕೇಂದ್ರ ಬಜೆಟ್‌ ಈ ಬಾರಿ ಎಲ್ಲಾ ವಲಯಗಳ ಕಡೆಗೂ ಗಮನಹರಿಸಿದೆ. ಇದಲ್ಲದೆ ಎಂದಿನಂತೆ ಟೆಕ್‌ ವಲಯದ ಕಡೆಗೂ ತನ್ನ ಗಮನವನ್ನು ಹರಿಸಿದೆ. ಅದರಲ್ಲೂ ಸ್ವದೇಶಿ ವಸ್ತುಗಳಿಗೆ ಉತ್ತೇಜನ ನಿಡುವುದಕ್ಕಾಗಿ ಆಮದು ವಸ್ತುಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸಿದೆ. ಈ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಮೊಬೈಲ್‌ಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಮೊಬೈಲ್‌

ಹೌದು, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವ ಮೊಬೈಲ್‌ ಬಿಡಿ ಭಾಗಗಳ ಮೇಲೆ ಆಮದು ಸುಂಕ ಹೆಚ್ಚಿಸಲಾಗಿದೆ. ಅದರಲ್ಲೂ ಮೊಬೈಲ್ ಫೋನ್‌ಗಳ ಭಾಗಗಳು ಎನ್‌ಐಎಲ್ ಕಸ್ಟಮ್ ಡ್ಯೂಟಿಯಿಂದ ಶೇಕಡಾ 2.5 ರಷ್ಟು ಮಧ್ಯಮ ಕಸ್ಟಮ್ ಡ್ಯೂಟಿಗೆ ಬದಲಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸದ್ಯ ಈ ಆಮದು ಸುಂಕ ಹೆಚ್ಚಳದಿಂದ ಮೊಬೈಲ್‌ ಬೆಲೆ ಇನ್ನಷ್ಟು ಹೆಚ್ಚಾಗಲಿದೆ. ಹಾಗಾದ್ರೆ ಮೊಬೈಲ್‌ ಬಿಡಿಭಾಗಗಳ ಮೇಲೆ ಆಮದು ಸುಂಕ ಹೆಚ್ಚಿಸಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್‌

ಕೇಂದ್ರ ಸರ್ಕಾರ ತನ್ನ ಈ ಬಾರಿಯ ಬಜೆಟ್‌ನಲ್ಲಿ ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ಇದೇ ಕಾರಣಕ್ಕೆ ವಿದೇಶದಿಂದ ಆಮದು ಆಗುವ ಮೊಬೈಲ್‌ ಬಿಡಿಭಾಗಗಳ ಮೇಲೆ ಆಮದು ಸುಂಕ ಹೆಚ್ಚಿಸಿದೆ. ಅದರಲ್ಲು ಆಮದು ಸುಂಕವನ್ನು 2.5% ಹೆಚ್ಚಿಸಿದೆ. ಇದೇ ಕಾರಣದಿಂದಾಗಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಕೂಡ ದುಬಾರಿ ಆಗುವ ಸಾಧ್ಯತೆ ಇದೆ. ಇನ್ನು ಭಾರತದಲ್ಲಿ ಕೆಲವೇ ಕೆಲವು ದೇಶಿಯ ಸ್ಮಾರ್ಟ್‌ಫೋನ್‌ ಕಂಪೆನಿಗಳಿವೆ. ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಸ್ಮಾರ್ಟ್‌ಫೋನ್‌ ಕಂಪೆನಿಗಳು ಉತ್ತಮ ಮಾರುಕಟ್ಟೆ ಹೊಂದಿವೆ. ಆದ್ದರಿಂದ ಭಾರತದಲ್ಲಿ ದೇಶಿ ಸ್ಮಾರ್ಟ್‌ಫೋನ್‌ ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಸ್ಮಾರ್ಟ್‌ಫೋನ್‌

ಸ್ಥಳೀಯ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ವಿದೇಶದಿಂದ ಆಮದಾಗುವ ಚಾರ್ಜರ್‌ಗಳು ಮತ್ತು ಮೊಬೈಲ್ ಫೋನ್‌ಗಳ ಭಾಗಗಳ ಮೇಲಿನ ವಿನಾಯಿತಿಗಳನ್ನು ಹಿಂತೆಗೆದುಕೊಳ್ಳಲಾಗಿದೆ. ದೇಶೀಯ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೆಚ್ಚಿಸುವುದು ಇದರ ಉದ್ದೇಶ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಕಳೆದ ಕೆಲವ ವರ್ಷಗಳಲ್ಲಿ ದೇಶೀಯ ಉತ್ಪಾದನೆಯು ತೀವ್ರವಾಗಿ ಬೆಳೆದಿದೆ ಈಗ ಮೊಬೈಲ್ ಮತ್ತು ಚಾರ್ಜರ್‌ಗಳನ್ನು ಜಗತ್ತಿಗೆ ರಫ್ತು ಮಾಡುತ್ತಿದ್ದೇವೆ ಇದನ್ನು ಹೆಚ್ಚಿಸುವ ಕ್ರಮವಾಇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ.

ಉತ್ಪಾದನಾ

ಇನ್ನು ವಿಶೇಷವೆಂದರೆ, ಪಿಎಲ್‌ಐ ಯೋಜನೆಗಳನ್ನು ವೃದ್ಧಿಸಲು ಹಂತ ಹಂತದ ಉತ್ಪಾದನಾ ಕಾರ್ಯಕ್ರಮದ (ಪಿಎಮ್‌ಪಿ) ಭಾಗವಾಗಿ ಮೊಬೈಲ್ ಫೋನ್ ಚಾರ್ಜರ್‌ಗಳ ಕೆಲವು ಭಾಗ ಮತ್ತು ಮೊಬೈಲ್‌ಗಳ ಕೆಲವು ಭಾಗಗಳನ್ನು ತೆಗೆದುಹಾಕಲಾಗುವುದು ಎನ್ನಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಾಗಲಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.

Best Mobiles in India

English summary
Smartphones prices may go up due to custom duty increase in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+