ಮಾರುಕಟ್ಟೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ ಸ್ಮಾರ್ಟನ್ ಕಂಪನಿ..!
ಭಾರತೀಯ ಮಾರುಕಟ್ಟೆಯಲ್ಲಿ ಟಿ.ಫೋನ್ ಪಿ ಲಾಂಚ್ ಮಾಡಿದ ಸ್ಮಾರ್ಟನ್ ಕಂಪನಿಯೂ, ಇನ್ನು ಕೆಲವು ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ, ಈ ಮೂಲಕ ಮಾರುಕಟ್ಟೆಯಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ. ಈ ತಿಂಗಳ ಅಂತ್ಯಕ್ಕೆ ಕೆಲವು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಸ್ಮಾರ್ಟನ್ ಕಂಪನಿಯೂ ಲಾಂಚ್ ಮಾಡುವ ಉತ್ಪನ್ನಗಳ ಕುರಿತು ಮಾಹಿತಿಯೂ ಮೂಲಗಳಿಂದ ಲಭ್ಯವಾಗಿದ್ದು, ಟಿ-ಬುಕ್, ಟಿ-ಬ್ಯಾಂಡ್ , ಗೋಲ್ಡನ್ ಆವೃತ್ತಿಯ ಟಿ ಫೋನ್ ಪಿ ಮತ್ತು ಟಿ-ಬೈಕ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ ಸಾಧ್ಯತೆ ಇದೆ.
ಮೂಲಗಳು ತಿಳಿಸಿರುವ ಮಾಹಿತಿಯಂತೆ ಟಿ-ಬೈಕ್ ಗಳನ್ನು ಒಂದನ್ನು ಬಿಟ್ಟು ಉಳಿದ ಎಲ್ಲಾ ವಸ್ತುಗಳು ಫ್ಲಿಪ್ ಕಾರ್ಟ್ ಎಕ್ಸ್ ಕ್ಲೂಸಿವ್ ಆಗಿ ಮಾರಾಟವಾಗಲಿದೆ ಎನ್ನಲಾಗಿದ್ದು, ಟಿ ಬೈಕ್ ಮಾತ್ರವೇ ಬೇರೆ ಮಾಧ್ಯಮಗಳಲ್ಲಿಯೂ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಸ್ಮಾರ್ಟನ್ ಎಸ್ ಆರ್ ಟಿ ಸ್ಮಾರ್ಟ್ ಫೋನ್, ಆಂಡ್ರಾಯ್ಡ್ ಅಪ್ ಡೇಟ್ ಸ್ವೀಕರಿಸಿದ್ದು, 32 ಜಿಬಿ ಆವೃತ್ತಿಯೂ ರೂ.12,999ಕ್ಕೆ, ಇದೇ ಮಾದರಿಯಲ್ಲಿ 64 ಜಿಬಿ ಆವೃತ್ತಿಯೂ ರೂ.13999ಕ್ಕೆ ಮಾರಾಟವಾಗುತಿತ್ತು, ಆದರೆ ಈಗ ಇದೇ ಸ್ಮಾರ್ಟ್ ಫೋನ್ ಗಳು ಕ್ರಮವಾಗಿ ರೂ.7300 ಮತ್ತು 8999ಕ್ಕೆ ಸೇಲ್ ಆಗುತ್ತಿದೆ ಎನ್ನಲಾಗಿದ್ದು, ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಪೋನ್ ಗಳ ಮೂಲಕ ಗುರುತಿಸಿಕೊಂಡಿರುವ ಸ್ಮಾರ್ಟನ್ ಕಂಪನಿಯೂ ಬಳಕೆದಾರರ ನಂಬಿಕೆಯನ್ನು ಗಳಿಸಿಕೊಂಡಿದ್ದು, ಈಹಿನ್ನಲೆಯಲ್ಲಿ ಮಾರುಕಟ್ಟೆಗೆ ಬೇರೆ ಬೇರೆ ಮಾದರಿಯ ವಸ್ತುಗಳನ್ನು ಪರಿಚಯಿಸಲು ಮುಂದಾಗಿದೆ. ಇದಲ್ಲದೇ ಹೊಸ ಹೊಸ ಪ್ರಯೋಗಕ್ಕೂ ಮುಂದಾಗಿದೆ



Click it and Unblock the Notifications