ಏನಿದು 'ಬ್ರೂಸಿಂಗ್ ಪ್ರೈಸ್ ವಾರ್? ಹೀಗೆ ಆದ್ರೆ ಭಾರತದಲ್ಲಿ ಸ್ಮಾರ್ಟ್‌ವಾಚ್ ಮಾರುಕಟ್ಟೆಯ ಕಥೆಯೇನು?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ವಾಚ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಅತ್ಯಾಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಆದರೆ ಕೆಲ ದಿನಗಳಿಂದ ಸ್ಮಾರ್ಟ್‌ವಾಚ್‌ಗಳ ಬೆಲೆಯಲ್ಲಿ ಭಾರಿ ಬದಲಾವಣೆಯಾಗ್ತಿದೆ. ಇದು ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳನ್ನು ಆತಂಕಕ್ಕೆ ದೂಡಿದೆ.
ಹೌದು, ಭಾರತದಲ್ಲಿ ಸ್ಮಾರ್ಟ್‌ವಾಚ್ ಮಾರುಕಟ್ಟೆಯು ಹೊಸ ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಹಲವು ಸ್ಮಾರ್ಟ್‌ವಾಚ್ ಕಂಪನಿಗಳು 'ಬ್ರೂಸಿಂಗ್ ಪ್ರೈಸ್ ವಾರ್' ಅನ್ನು ಎದುರಿಸುತ್ತಿವೆ. ಪರಸ್ಪರ ಪೈಪೋಟಿಗಾಗಿ ಸ್ಮಾರ್ಟ್‌ವಾಚ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗ್ತಿದೆ ಎಂದು ವರದಿಯಾಗಿದೆ. ಇದರಿಂದ ಟೆಕ್ ವಲಯದಲ್ಲಿ ಆಗುವ ಪರಿಣಾಮಗಳೇನು? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನವೀನ ಮಾದರಿಯ ಟೆಕ್ನಾಲಜಿಯಿಂದ ಮೊಬೈಲ್ ಮಾರುಕಟ್ಟೆಗೆ ಸೆಡ್ಡು ಹೊಡೆದಿದ್ದ ಸ್ಮಾರ್ಟ್‌ವಾಚ್ ವಲಯ ಇದೀಗ ಹೊಸ ಆತಂಕವನ್ನು ಹೆದರಿಸುತ್ತಿದೆ. ಹೊಸ ಸ್ಮಾರ್ಟ್‌ವಾಚ್‌ಗಳಿಉ ಎಂಟ್ರಿ ಆದಂತೆ ಭಾರತದ ಸ್ಮಾರ್ಟ್‌ವಾಚ್ ವಲಯದಲ್ಲಿ ಹೊಸ ಬದಲಾವಣೆ ಕಂಡುಬರುತ್ತಿದೆ. ಆದರೆ ಈ ಸ್ಮಾರ್ಟ್‌ವಾಚ್‌ಗಳ ಬೆಲೆ 3,000ರೂ ಕ್ಕಿಂತ ಕಡಿಮೆ ಇರುವುದು ಪರಸ್ಪರ ಬೆ;ಲೆ ಪೈಪೋಟಿಗೆ ಕಾರಣವಾಗುತ್ತಿದೆ. ಇದರಿಂದ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಹಲವು ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳಿವೆ ಎನ್ನಲಾಗಿದೆ.
ಇನ್ನು ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ ಸ್ಮಾರ್ಟ್ ವಾಚ್‌ಗಳ ಸರಾಸರಿ ಮಾರಾಟ ಬೆಲೆ (ASP) ಸುಮಾರು 45% ರಷ್ಟು ಅಂದರೆ $25.6 ಕುಸಿದಿದೆ. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ $46.6 ಇತ್ತು ಎಂದು ಹೇಳಲಾಗಿದೆ. ಹೀಗೆ ಬೆಲೆ ಕುಸಿತ ಆಗುತ್ತಿರುವುದಕ್ಕೆ ವಿಶ್ಲೇಷಕರು ಎರಡು ರೀತಿಯ ಕಾರಣಗಳನ್ನು ನೀಡಿದ್ದಾರೆ. ಇದರಲ್ಲಿ ಒಂದು, ಉತ್ಪಾದನಾ ವೆಚ್ಚದಲ್ಲಿನ ಕುಸಿತ ಮತ್ತು ಎರಡನೆಯದು ಸ್ಮಾರ್ಟ್‌ವಾಚ್ ವಲಯದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕಾಗಿ ಬ್ರ್ಯಾಂಡ್‌ಗಳು ತಮ್ಮ ವಾಚ್‌ಗಳ ಬೆಲೆ ಕಡಿಮೆ ಮಾಡುತ್ತಿವೆ.
ಇದಕ್ಕೆ ಇಂಬು ಕೊಡುವಂತೆ ವರದಿಯನ್ನು ಕೌಂಟರ್‌ಪಾಯಿಂಟ್ ರಿಸರ್ಚ್ ನೀಡಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, 2,000 ರೂ. ಚಿಲ್ಲರೆ ಬೆಲೆಯ ಬ್ಯಾಂಡ್ 40% ಸ್ಮಾರ್ಟ್‌ವಾಚ್ ಮಾರುಕಟ್ಟೆಯನ್ನು ವಶಪಡಿಸಿಕೊಂಡಿದೆ. ಇದೇ ಕಾರಣಕ್ಕೆ ಈ ಹಿಂದೆ 5,000 ರೂ.ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ವಾಚ್ ನೀಡಲು ಬಯಸಿದ್ದ ಬ್ರ್ಯಾಂಡ್‌ಗಳೆಲ್ಲವೂ 3,000 ರೂ.ಗಿಂತ ಕಡಿಮೆ ಬೆಲೆಗೆ ನೀಡುತ್ತಿವೆ. ಅಷ್ಟೇ ಅಲ್ಲ ಕೆಲವು ಸನ್ನಿವೇಶಗಳಲ್ಲಿ 2,000 ರೂ.ಗಿಂತ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಇದು ಹೀಗೆ ಮುಂದುವರೆದಂತೆ ಈ ಹಿಂದೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಸ್ಥಿತಿ ಸ್ಮಾರ್ಟ್‌ವಾಚ್ ವಲಯದಲ್ಲಿಯು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕೆಲ ವರ್ಷಗಳ ಹಿಂದೆ ಚೀನಾ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಭಾರತಕ್ಕೆ ಎಂಟ್ರಿ ನೀಡ್ತಿದ್ದ ಹಾಗೇ ಹಲವು ಮೊಬೈಲ್ ಬ್ರ್ಯಾಂಡ್‌ಗಳು ಮಾಯಾವಾಗಿರುವುದು ಇತಿಹಾಸ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಎಂಟ್ರಿ ನೀಡಿದ ಚೀನಾ ಬ್ರ್ಯಾಂಡ್‌ಗಳು ಹಲವು ಮೊಬೈಲ್ ಬ್ರ್ಯಾಂಡ್‌ಗಳು ಶಾಶ್ವತವಾಗಿ ಬಾಗಿಲು ಹಾಕುವಂತೆ ಮಾಡಿದ್ದವು.
ಇದೀಗ ಇಂತಹದ್ದೇ ಸನ್ನಿವೇಶ ಸ್ಮಾರ್ಟ್‌ವಾಚ್ ವಲಯದಲ್ಲಿ ಕಂಡು ಬರುತ್ತಿದೆ. ಹೆಚ್ಚಿತ್ತಿರುವ ಸ್ಮಾರ್ಟ್‌ವಾಚ್‌ಗಳ ಬೇಡಿಕೆಯ ನಡುವೆ ಕಡಿಮೆ ಬೆಲೆಗೆ ವಾಚ್‌ಗಳನ್ನು ನೀಡುತ್ತಿರುವ ಬ್ರ್ಯಾಂಡ್‌ಗಳು ಮಾರುಕಟ್ಟೆಯ ದಿಕ್ಕನ್ನು ಬದಲಾಯಿಸುತ್ತಿವೆ. ಇದು ಸ್ಮಾರ್ಟ್‌ವಾಚ್‌ಗಳ ನಡುವೆ ನಡೆಯುತ್ತಿರುವ 'ಬ್ರೂಸಿಂಗ್ ಪ್ರೈಸ್ ವಾರ್' ಅಂತಾನೇ ಹೇಳಬಹುದಾಗಿದೆ. ಕಡಿಮೆ ಎಂದರೆ 5,000 ರೂ. ಬೆಲೆಯ ಅಡಿಯಲ್ಲಿ ಬರುತ್ತಿದ್ದ ವಾಚ್‌ಗಳು ಇಂದು 3,000 ರೂ ಅಡಿಯಲ್ಲಿ ಬರುತ್ತಿರುವುದೇ ಈ ಆತಂಕಕ್ಕೆ ಕಾರಣವಾಗಿದೆ. ಆದರೆ ಇದು ಹೀಗೆ ಮುಂದುವರೆದರೆ ಭಾರತದ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ದೇಶಿ ಕಂಪೆನಿಗಳು ಏನಾಗಲಿವೆ ಅನ್ನೊದನ್ನ ಕಾದು ನೋಡಬೇಕಿದೆ.


Click it and Unblock the Notifications








