ಇನ್ನುಮೇಲೆ 20 ಮೆಸೇಜ್ ಮಾಡಬಹುದು: ಸರ್ಕಾರ

By Varun
|
ಇನ್ನುಮೇಲೆ 20 ಮೆಸೇಜ್ ಮಾಡಬಹುದು: ಸರ್ಕಾರ

ಮೊಬೈಲ್ ಬಳಕೆದಾರರು ಹಾಗು ಮೊಬೈಲ್ ಆಪರೇಟರುಗಳ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ನೆನ್ನೆಯಿಂದಲೇ ಜಾರಿಗೆ ಬರುವಂತೆ ದಿನಂಪ್ರತಿ 20 ಮೆಸೇಜ್ ಕಳುಹಿಸಬಹುದು ಎಂದು ಒಪ್ಪಗೆ ಕೊಟ್ಟಿದೆ. ಹಾಗಾಗಿ ನೀವು ಇವತ್ತಿನಿಂದ ಸೆಪ್ಟೆಂಬರ್ 2 ರ ವರೆಗೂ ದಿನಕ್ಕೆ 20 ಮೆಸೇಜ್ ಕಳುಹಿಸಬಹುದಾಗಿದೆ.

ಆಗಸ್ಟ್ 18 ರಂದು ದೇಶದ ಟೆಲಿಕಾಂ ಆಪರೇಟರುಗಳು 5 sms ನ ನಿರ್ಬಂಧವನ್ನು ಸಡಿಲಿಸುವಂತೆ ಮನವಿ ಮಾಡಿದ್ದರಿಂದ ಹಾಗು ಗಲಭೆಯ ವಿಚಾರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯೂ ಕೂಡ ಸ್ವಲ್ಪ ಮಟ್ಟಿಗೆ ತಿಳಿಯಾಗಿರುವುದರಿಂದ ಸರ್ಕಾರ ಅನುಮತಿ ಕೊಟ್ಟಿದೆ.

ಆದರೆ ಕೇಂದ್ರ ಸರ್ಕಾರ 309 ವೆಬ್ಸೈಟ್ ಗಳ ಮೇಲೆ ಮಾತ್ರ ಗದಾಪ್ರಹಾರ ಬೀಸಿದ್ದು, ಪ್ರಚೋದಕ ಅಂಶಗಳನ್ನು ನಿರ್ಬಂಧಿಸಲು ಸೂಚಿಸಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X