Subscribe to Gizbot

ವಾಹ್ ಹೊಸ ರೀತಿಯಲ್ಲಿ ನಿಮಗೆ ಲಭ್ಯ ಸ್ನ್ಯಾಪ್ ಚಾಟ್

Written By:

ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಚಾಟ್ ಮಾಡಲು ಬೇರೆ ಬೇರೆ ಅಪ್ಲಿಕೇಶನ್‌ಗಳು ಹೇಗೆ ಇವೆಯೋ ಅಂತೆಯೇ ಸ್ನ್ಯಾಪ್ ಚಾಟ್‌ ಕೂಡ ನಿಮಗೆ ಉತ್ತಮ ರೀತಿಯ ಚಾಟಿಂಗ್ ವ್ಯವಸ್ಥೆಯನ್ನು ಒದಗಿಸುತ್ತದೆ.

ಇದೊಂದು ತ್ವರಿತ ಮೆಸೇಜಿಂಗ್ ಆಪ್ ಆಗಿದ್ದು ಬರಿಯ ಅಂತರ್ಜಾಲ ಸಂಪರ್ಕವಿದ್ದಲ್ಲಿ ಸಾಕು ನಿಮ್ಮ ಗೆಳೆಯರನ್ನು ಕೂಡಲೇ ಹೋಗಿ ತಲುಪುತ್ತದೆ. ಈಗ ಇದು ಇನ್ನೂ ಪರಿಷ್ಕರಿತ ಮಾದರಿಯಲ್ಲಿ ಬದಲಾಗಿ ನಿಮ್ಮ ಕೈ ಸೇರಲಿದೆ. ಹೌದು ಸ್ನ್ಯಾಪ್ ಚಾಟ್‌ನ ದೊಡ್ಡ ಅಭಿಮಾನಿ ನೀವಾಗಿದ್ದಲ್ಲಿ ಈ ಲೇಖವನನ್ನು ನೀವು ಓದಲೇಬೇಕು. ಅಂತಹ ಮಾರ್ಪಾಡು ಆದದ್ದಾರೂ ಏನು ಎಂಬುದನ್ನು ಗಮನಿಸಿಕೊಳ್ಳಬೇಕು.

ವಾಹ್ ಹೊಸ ರೀತಿಯಲ್ಲಿ ನಿಮಗೆ ಲಭ್ಯ ಸ್ನ್ಯಾಪ್ ಚಾಟ್

ಸ್ನ್ಯಾಪ್ ಚಾಟ್‌ನಲ್ಲಿ ವೀಡಿಯೋ ಚಾಟಿಂಗ್ ಹಾಗೂ ಸುಧಾರಿತ ತ್ವರಿತ ಮೆಸೇಜಿಂಗ್ ಸೇವೆ ಒದಗಲಿದೆ ಎಂಬುದು ಕೆಲವು ಮೂಲಗಳಿಂದ ತಿಳಿದು ಬಂದ ವಿಚಾರವಾಗಿದೆ. ಅಲ್ಲಿಯವರೆಗೆ ನಿಮಗೆ ಇದರಲ್ಲಿ ಫೋಟೋಗಳನ್ನು ಸೆಲ್ಫಿಯಾಗಿ ತೆಗೆಯಬಹುದಾಗಿದ್ದು ನಂತರ ಅದು ಹತ್ತು ಸೆಕುಂಡುಗಳಲ್ಲಿ ಅಳಿಸಿ ಹೋಗುವ ವ್ಯವಸ್ಥೆ ಇರುತ್ತದೆ. ಅಂದರೆ ನಿಮ್ಮ ಫೋಟೋವನ್ನು ನೋಡಬೇಕಾದ ವ್ಯಕ್ತಿ ಸದಾ ಕಾಲವೂ ಆನ್‌ಲೈನ್‌ನಲ್ಲೇ ಇರಬೇಕಾಗುತ್ತದೆ.

ನಮ್ಮ ಇತ್ತೀಚಿನ ಉತ್ಪನ್ನ ನವೀಕರಣದೊಂದಿಗೆ ಕಥೆ ಹೇಳುವ ಒಂದು ಸುಂದರ ಸೆಟ್ಟಿಂಗ್ ಅನ್ನು ಇಲ್ಲಿ ಅನ್ವಯಿಸುತ್ತಿದ್ದೇವೆ. ಕಥೆಯು ಪ್ರಾರಂಭ, ಮಧ್ಯಭಾಗ ಹಾಗೂ ಮುಕ್ತಾಯವನ್ನು ಹೊಂದಿದ್ದು ಒಂದು ರೀತಿ ಕ್ರಮ ಬದ್ಧ ರೀತಿಯಲ್ಲಿ ಸಾಗಲಿದೆ ಎಂದು ಅಧಿಕೃತ ಬ್ಲಾಗ್ ಒಂದು ತಿಳಿಸಿದೆ.

ಇದಲ್ಲದೆ ಹೊಸ ಐಕಾನ್ ಮತ್ತು ಹೊಸ ನೋಟದೊಂದಿಗೆ ಅಪ್ಲಿಕೇಶನ್ ಬರಲಿದ್ದು ಹೊಸ ಮಾದರಿಯ ಸ್ನ್ಯಾಪ್ ಚಾಟ್ ಅನ್ನು ಬಳಸುವ ವಿಧಾನವನ್ನು ಬಳಕೆದಾರ ಅನುಭವಿಸಬಹುದಾಗಿದೆ. ನಿಮ್ಮ ಸ್ನೇಹಿತನೊಂದಿಗೆ ಸಂವಾದವನ್ನು ಪ್ರಾರಂಭಿಸಲು, ಮುಖ್ಯ ಕ್ಯಾಮೆರಾ ಪರದೆಯಿಂದ ಸ್ವೈಪ್ ಮಾಡಬೇಕಾಗುತ್ತದೆ ನಂತರ ಇದು ನಿಮ್ಮ ಎಲ್ಲಾ ಸ್ನೇಹಿತರ ಹೆಸರುಗಳ ಪಟ್ಟಿಯನ್ನು ನೀಡುತ್ತದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot