ಉಕ್ರೇನ್‌ ಜನರಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಸ್ನ್ಯಾಪ್‌ಚಾಟ್‌!

|

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಶುರುವಾಗಿ ಹತ್ತುದಿನಗಳಾಗಿವೆ. ಹತ್ತು ದಿನಗಳಿಂದಲೂ ನಿರಂತರವಾಗಿ ಎರಡೂ ದೇಶಗಳ ನಡುವೆ ಯುದ್ಧ ನಡೆಯುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಜನರಿಗೆ ಸಂದೇಶಗಳನ್ನು ನೀಡುವಲ್ಲಿ ಪ್ರಮುಖ ಮಾಧ್ಯಮವಾಗಿವೆ. ಇದೇ ಸಂಧರ್ಭದಲ್ಲಿ ಮಿಲಿಟರಿ ಆಕ್ರಮಣವನ್ನು ಎದುರಿಸಲು, ಉಕ್ರೇನ್‌ ದೇಶದಲ್ಲಿ ಸ್ನ್ಯಾಪ್‌ಚಾಟ್ ಅಪ್ಲಿಕೇಶನ್‌ "ಹೀಟ್ ಮ್ಯಾಪ್" ಫೀಚರ್ಸ್‌ ಅನ್ನು ತಾತ್ಕಾಲಿಕವಾಗಿ ಆಫ್ ಮಾಡುವುದಾಗಿ ಘೋಷಿಸಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ರಷ್ಯಾ ಉಕ್ರೇನ್‌ ನಡುವಿನ ಯುದ್ಧದ ಸಂಧರ್ಭದಲ್ಲಿ ತನ್ನ ಹೀಟ್‌ ಮ್ಯಾಪ್‌ ಫೀಚರ್ಸ್‌ ಅನ್ನು ಆಪ್‌ ಮಾಡುವುದಾಗಿ ಹೇಳಿದೆ. ಇದರಿಂದ ಉಕ್ರೇನ್‌ನ ನಿರ್ದಿಷ್ಟ ಸ್ಥಳಗಳಲ್ಲಿ ಎಷ್ಟು ಸ್ನ್ಯಾಪ್‌ಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಕ್ರಮವು "ಸುರಕ್ಷತಾ ಮುನ್ನೆಚ್ಚರಿಕೆ" ಎಂದು ಸ್ನ್ಯಾಪ್‌ಚಾಟ್ ಹೇಳಿದೆ. ಉಕ್ರೇನಿಯನ್ನರು ಸಲ್ಲಿಸಿದ ಸ್ನ್ಯಾಪ್‌ಗಳ ಕ್ಯುರೇಟೆಡ್ ಸಾರ್ವಜನಿಕ ಫೀಡ್ ಇನ್ನೂ ಪ್ಲಾಟ್‌ಫಾರ್ಮ್‌ನಲ್ಲಿ ಇರುತ್ತದೆ ಎಂದು ವರದಿಯಾಗಿದೆ. ಹಾಗಾದ್ರೆ ಯುದ್ಧ ಸನ್ನಿವೇಶದಲ್ಲಿ ಸ್ನ್ಯಾಪ್‌ಚಾಟ್‌ ತೆಗೆದುಕೊಂಡ ನಿರ್ಧಾರದ ಪರಿಣಾಮ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಷ್ಯಾ

ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಉಕ್ರೇನ್‌ ಸಾಕಷ್ಟು ನಷ್ಟವನ್ನು ಅನ್ನುಭವಿಸುತ್ತಿದೆ. ಅದರಲ್ಲೂ ಉಕ್ರೇನ್‌ನ ಅನೇಕ ನಗರಗಳು ರಷ್ಯಾದ ಕ್ಷಿಪಣಿ ದಾಳಿಗೆ ಅಹುತಿಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸ್ನ್ಯಾಪ್‌ಚಾಟ್‌ ತನ್ನ ಹೀಟ್‌ ಮ್ಯಾಪ್‌ ಫೀಚರ್ಸ್‌ ಅನ್ನು ಆಪ್‌ ಮಾಡಲು ಮುಂದಾಗಿದೆ. ಇದರಿಂದ ಉಕ್ರೇನ್‌ ಜನರು ಎಲ್ಲಿ ಹೆಚ್ಚಿನ ಸ್ನ್ಯಾಪ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅನ್ನೊದು ಯಾರಿಗೂ ತಿಳಿಯುವುದಿಲ್ಲ. ಇದು ಜನರನ್ನು ಸುರಕ್ಷಿತವಾಗಿಡಲು ಸಾಧ್ಯವಾಗಲಿದೆ ಎನ್ನಲಾಗಿದೆ. ಏಕೆಂದರೆ ರಷ್ಯಾ ಸೈನಿಕರು ಎಲ್ಲಿ ಹೆಚ್ಚಿನ ಜನರ ನೆಟ್‌ವರ್ಕ್‌ ಆಕ್ಟಿವ್‌ ಇದೆಯೋ ಅಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದೆ ಎನ್ನಲಾಗ್ತಿದೆ.

ಸ್ನ್ಯಾಪ್

ಸಾಮಾನ್ಯವಾಗಿ, ಸ್ನ್ಯಾಪ್ ಚಾಟ್‌ ತನ್ನ ಸ್ನ್ಯಾಪ್‌ ಮ್ಯಾಪ್‌ ಮೂಲಕ ಒಂದು ಪ್ರದೇಶದಲ್ಲಿ ಎಷ್ಟು ಜನರು ಸಾರ್ವಜನಿಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಲು ಬಣ್ಣದ ಕೋಡ್ ಅನ್ನು ಪ್ರದರ್ಶಿಸುತ್ತದೆ. ಪ್ರಾಯೋಗಿಕವಾಗಿ, ಸ್ನ್ಯಾಪ್‌ಚಾಟ್ ಬಳಕೆದಾರರು ಎಲ್ಲಿ ಕೇಂದ್ರೀಕೃತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆಯಬಹುದು. ಉಕ್ರೇನಿಯನ್ನರ ಚಲನವಲನಗಳನ್ನು ರಷ್ಯಾ ಸೈನಿಕರು ಪತ್ತೆಹಚ್ಚಲು ಕಷ್ಟವಾಗುವಂತೆ ಮಾಡಲು ಈಗಾಗಲೇ ಅನೇಕ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ನಿರ್ಧಾರ ತೆಗೆದುಕೊಂಡಿವೆ. ಇದೀಗ ಸ್ನ್ಯಾಪ್‌ಚಾಟ್‌ ಕೂಡ ಇಂತಹ ನಿರ್ಧಾರ ತೆಗೆದುಕೊಂಡಿದೆ.

ಸನ್ನಿವೇಶದಲ್ಲಿ

ಸಾರ್ವಜನಿಕವಾಗಿ ಲಭ್ಯವಿರುವ ಈ ಡೇಟಾವು ಸಾಮಾನ್ಯವಾಗಿ ಅರ್ಥಪೂರ್ಣವಾಗಿಲ್ಲದಿದ್ದರೂ, ಯುದ್ಧಕಾಲದ ಸನ್ನಿವೇಶದಲ್ಲಿ ರಷ್ಯಾ ಸೈನಿಕರಿಗೆ ನಾಗರಿಕರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಅನುಕೂಲವಾಗಬಹುದು. ಇದೇ ಕಾರಣಕ್ಕೆ ಈ ವೈಶಿಷ್ಟ್ಯವನ್ನು ಆಫ್ ಮಾಡಿರುವುದು ಉತ್ತಮವಾಗಿದೆ ಎಂದು ವರದಿ ಹೇಳಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಸ್ನ್ಯಾಪ್‌ಚಾಟ್‌ ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದೆ.

Best Mobiles in India

Read more about:
English summary
Snapchat announced temporarily turning off its “heat map” feature for war-torn Ukraine.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X