ಸ್ನ್ಯಾಪ್‌ಚಾಟ್‌ ನಿರ್ಧಾರ ನಿಜಕ್ಕೂ ಅಚ್ಚರಿ! ಹೊಸ ಕ್ರಿಯೇಟರ್‌ ಹಬ್‌ ವಿಶೇಷತೆ ಏನು?

|

ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಇದರಲ್ಲಿ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಕೂಡ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ಸ್ನ್ಯಾಪ್‌ಚಾಟ್‌ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆದರೂ ಇತರ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾದ ಫೀಚರ್ಸ್‌ಗಳನ್ನು ಹೊಂದಿದೆ. ಇದೇ ಕಾರಣಕ್ಕೆ ಬಳಕೆದಾರರಿಗೆ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಸ್ನ್ಯಾಪ್‌ಚಾಟ್ ಹೊಸ "ಕ್ರಿಯೇಟರ್ ಹಬ್" ಅನ್ನು ಹೊರತಂದಿದೆ. ಇದು ಬಳಕದಾರರಿಗೆ ಸಾಕಷ್ಟು ಉಪಯುಕ್ತ ಎನಿಸಲಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಹೊಸ "ಕ್ರಿಯೇಟರ್ ಹಬ್" ಅನ್ನು ಪರಿಚಯಿಸಿದೆ. ಇದು ಸ್ನ್ಯಾಪ್ ಸ್ಟಾರ್ಸ್ ಮತ್ತು ಇತರ ಕ್ರಿಯೆಟರ್ಸ್‌ಗಳಿಂದ ಶೈಕ್ಷಣಿಕ ಮತ್ತು ಮಾಹಿತಿ ವೀಡಿಯೊ ಟ್ಯುಟೋರಿಯಲ್‌ಗಳನ್ನು ಒಳಗೊಂಡಿದೆ. ಈ ವೀಡಿಯೋಗಳಲ್ಲಿ ಬಳಕೆದಾರರಿಗೆ ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಆಪ್‌ನಲ್ಲಿನ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ. ಇನ್ನು ಸ್ನ್ಯಾಪ್‌ಚಾಟ್ ಕ್ರಿಯೇಟರ್ ಹಬ್ ಭಾರತದಲ್ಲಿ 9 ಸ್ಥಳೀಯ ಭಾಷೆಗಳನ್ನು ಒಳಗೊಂಡಿರಲಿದೆ. ಹಾಗಾದ್ರೆ ಸ್ನ್ಯಾಪ್‌ಚಾಟ್‌ನ ಹೊಸ ಕ್ರಿಯೇಟರ್‌ ಹಬ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ಕ್ರಿಯೇಟರ್‌ ಭಾರತದಲ್ಲಿ ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತೆಲುಗು, ತಮಿಳು, ಜಪಾನೀಸ್ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಾಗಲಿದೆ. ಸದ್ಯ ಸ್ನ್ಯಾಪ್‌ಚಾಟ್‌ ನೀಡಿರುವ ಮಾಹಿತಿ ಪ್ರಕಾರ ಕ್ರಿಯೇಟರ್‌ನ ಉದ್ದೇಶ ಸ್ನ್ಯಾಪ್‌ನಲ್ಲಿರುವ ಕ್ರಿಯೇಟರ್ಸ್‌ಗಳಿಗೆ ಪರಿಪೂರ್ಣವಾದ ಮಾಹಿತಿ ನೀಡುವುದಾಗಿದೆ. ವೀಡಿಯೊ ಟ್ಯುಟೋರಿಯಲ್‌ಗಳ ಜೊತೆಗೆ, ಎಲ್ಲಾ ಮಾದರಿಯ ಲಿಖಿತ ಮಾಹಿತಿಯನ್ನು ಪ್ರವೇಶಿಸಲು ಇದು ಉತ್ತಮ ಮಾರ್ಗವಾಗಿದೆ. ಒಂದು ವೇಳೆ ಹೊಸ ವಿಚಾರವಾಗಿ ಪ್ಲಾಟ್‌ಫಾರ್ಮ್‌ ಪ್ರವೇಶಿದರೆ ಅದನ್ನು ತಿಳಿಯುವುದು ಹೇಗೆ ಅನ್ನೊದನ್ನು ಇದರಿಂದ ತಿಳಿಯಬಹುದಾಗಿದೆ.

ಸ್ನ್ಯಾಪ್‌ಚಾಟ್ ಕ್ರಿಯೇಟರ್ ಹಬ್

ಸ್ನ್ಯಾಪ್‌ಚಾಟ್ ಕ್ರಿಯೇಟರ್ ಹಬ್

ಸ್ನ್ಯಾಪ್‌ಚಾಟ್ ಕ್ರಿಯೇಟರ್ ಹಬ್ ಈಗ ಕಂಪನಿಯ ಅಧಿಕೃತ ಇಂಡಿಯಾ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಸ್ನ್ಯಾಪ್ ಸ್ಟಾರ್‌ಗಳು ಮತ್ತು ಕ್ರಿಯೆಟರ್ಸ್‌ ತಮ್ಮ ಪಬ್ಲಿಕ್‌ ಸ್ಟೋರೀಸ್, ಪ್ಲೇ ಮತ್ತು ಡಿಸ್ಕವರ್‌ನಲ್ಲಿ ಸ್ನ್ಯಾಪ್ ಒರಿಜಿನಲ್ಸ್ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿದೆ. ಸದ್ಯ ಕ್ರಿಯೇಟರ್ ಹಬ್ ಬಳಕೆದಾರರಿಗೆ ವಿಷಯ ತಂತ್ರವನ್ನು ಹೇಗೆ ಕ್ರಿಯೆಟ್‌ ಮಾಡುವುದು. ಸ್ನ್ಯಾಪ್‌ಚಾಟ್‌ ನಲ್ಲಿ ಹೊಸ ವಿಷಯದ ಮೇಲೆ ಹೆಚ್ಚು ಟ್ರಾಫಿಕ್ ಪಡೆಯುವುದಕ್ಕೆ ಹಾಗೂ ಪ್ರೇಕ್ಷಕರನ್ನು ವಿಶ್ಲೇಷಣೆ ಮಾಡುವುದು ಹೇಗೆ ಅನ್ನೊದ ಅರ್ಥಮಾಡಿಕೊಳ್ಳಲು ಅವಕಾಶ ನೀಡಲಿದೆ. ಇನ್ನು ಸ್ನ್ಯಾಪ್‌ಚಾಟ್‌ ಕ್ರಿಯೇಟರ್‌ ಹಬ್‌ ಸ್ಥಳಿಯ ಭಾಷೆಗಳನ್ನು ಬೆಂಬಲಿಸುವದರಿಂದ ಶೈಕ್ಷಣಿಕ ಮಾಹಿತಿ ಪಡೆಯುವುದು ಸುಲಭವಾಗಿದೆ. ನಿಮಗೆ ವೀಡಿಯೋಗಳಲ್ಲಿ ಬಳಕೆದಾರರಿಗೆ ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಆಪ್‌ನಲ್ಲಿನ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಸ್ನ್ಯಾಪ್‌ ಕ್ರಿಯೆಟರ್‌ ಹಂಚಿಕೊಳ್ಳುವ ವಿಡಿಯೋಗಳಿಗೆ ಪ್ರೇಕ್ಷಕರ್‌ ಟ್ರಾಫಿಕ್‌ ಪಡೆಯುವುದು ಸುಲಭವಾಗಲಿದೆ. ಈ ಮೂಲಕ ವಿಡಿಯೋಗಳನ್ನುಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ಸಾದ್ಯವಾಗಲಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಇತ್ತೀಚಿಗೆ ಸ್ನ್ಯಾಪ್‌ಚಾಟ್‌ ಪ್ರೊಫೈಲ್‌ನಲ್ಲಿ ತ್ರಿಡಿ ಆವತಾರ ಫೀಚರ್ಸ್‌ ಪರಿಚಯಿಸಿದೆ. ಇದರಲ್ಲಿ ಶಾಂತಿ ಚಿಹ್ನೆಗಳು, ಪ್ರಾರ್ಥನಾ ಕೈಗಳು, ರಮಣೀಯ ಕಡಲತೀರಗಳು ಮತ್ತು ಪ್ರಾಣಿಗಳ ಮುದ್ರಣ ಹಿನ್ನೆಲೆಗಳನ್ನು ಒಳಗೊಂಡಂತೆ ಬಳಕೆದಾರರು ತಮ್ಮ 3D ಬಿಟ್‌ಮೊಜಿಯನ್ನು ಅವರ ಮನಸ್ಥಿತಿಯೊಂದಿಗೆ ಹೊಂದಿಸಲು ಸಾಧ್ಯವಾಗುತ್ತದೆ. ಪಿಕ್ಸರ್-ಗುಣಮಟ್ಟದ 3ಡಿ ಸಾಮರ್ಥ್ಯಗಳನ್ನು ಬಳಸುವುದರ ಮೂಲಕ, ಸ್ನ್ಯಾಪ್‌ಚಾಟ್ ಬಳಕೆದಾರರು ತಮ್ಮ ಕಸ್ಟಮೈಸ್ ಮಾಡಿದ ಅವತಾರದಲ್ಲಿ ಬಟ್ಟೆ ಟೆಕಶ್ಚರ್ ಮತ್ತು ತಮ್ಮ ನೆಚ್ಚಿನ ಫ್ಯಾಶನ್ ಲೇಬಲ್‌ಗಳಿಂದ ಅನನ್ಯ ಅಲಂಕರಣಗಳನ್ನು ಒಳಗೊಂಡಂತೆ ವರ್ಧಿತ ವಿವರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಸ್ನ್ಯಾಪ್‌ಚಾಟ್‌

ಇನ್ನು ಸ್ನ್ಯಾಪ್‌ಚಾಟ್‌ನ ಹೊಸ ನವೀಕರಿಸಿದ ಪ್ರೊಫೈಲ್‌ಗಳು ವಿಸ್ತರಿತ ಸ್ನ್ಯಾಪ್‌ಕೋಡ್ ಮೆನುವನ್ನು ಸಹ ಪ್ರದರ್ಶಿಸುತ್ತದೆ, ಇದು ಸುಲಭವಾದ ಪ್ರೊಫೈಲ್ ಪ್ರವೇಶವನ್ನು ಅನುಮತಿಸುತ್ತದೆ ಮತ್ತು ಸಂಪಾದನೆ ಆಯ್ಕೆಗಳು ಮತ್ತು ಪ್ರೊಫೈಲ್ ಹಂಚಿಕೆ ಆಯ್ಕೆಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ ಸ್ನ್ಯಾಪ್‌ಚಾಟ್ ಇತ್ತೀಚೆಗೆ ಬಿಟ್‌ಮೊಜಿ ಸ್ಟಿಕ್ಕರ್‌ಗಳು ಮತ್ತು ಅವತಾರಗಳಿಗಾಗಿ ಹೊಸ ಆಡ್-ಆನ್‌ಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ಈ ಸ್ಟಿಕ್ಕರ್‌ಗಳ ಮೂಲಕ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ​​ಕೋವಿಡ್ ಕಾರ್ಮಿಕರ ಬಗ್ಗೆ ಮೆಚ್ಚುಗೆ ಮತ್ತು ಗೌರವವನ್ನು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಿದೆ. ಅಷ್ಟೇ ಅಲ್ಲ ಭಾರತದ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಕೂಡ ಬೆಂಬಲಿಸುವ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ.

Best Mobiles in India

English summary
Snapchat creators will be able to reach out to a wider set of audiences via their Public Stories.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X