ಟಿಕ್‌ಟಾಕ್‌ ಪ್ರಿಯರನ್ನು ಸೆಳೆಯಲು ಹೊಸ ಲೆನ್ಸ್‌ ಪರಿಚಯಿಸಿದ ಸ್ನ್ಯಾಪ್‌ಚಾಟ್‌!

|

ಇತ್ತಿಚಿನ ದಿನಗಳಲ್ಲಿ ಶಾರ್ಟ್‌ ವೀಡಿಯೋ ಸ್ಟ್ರೀಮಿಂಗ್‌ ಆಪ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿವೆ. ಸದ್ಯ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಟಿಕ್‌ಟಾಕ್‌ ಭಾರತದಲ್ಲಿ ಬ್ಯಾನ್‌ ಆಗಿದ್ದೆ ತಡ, ಟಿಕ್‌ಟಾಕ್ ಜನಪ್ರಿಯತೆಯನ್ನ ರಿಪ್ಲೇಸ್ ಮಾಡಲು ಇತರೆ ಶಾರ್ಟ್‌ ವೀಡಿಯೋ ಪ್ಲಾಟ್‌ಫಾರ್ಮ್‌ಗಳು ಪ್ರಯತ್ನಿಸುತ್ತಿರೋದು ನಿಮಗೆಲ್ಲಾ ತಿಳಿದೆ. ಸದ್ಯ ಲಭ್ಯವಿರುವ ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ನ್ಯಾಪ್‌ಚಾಟ್‌ ಕೂಡ ಒಂದಾಗಿದ್ದು, ಇದೀಗ ಟಿಕ್‌ಟಾಕ್‌ನಲ್ಲಿ ಬಳಕೆದಾರರಿಗೆ ಲಭ್ಯವಿದ್ದ ಡ್ಯಾನ್ಸ್‌ ಚಾಲೆಂಜ್‌ ಲೆನ್ಸ್‌ ಅನ್ನು ಸ್ನ್ಯಾಪ್‌ ಚಾಟ್‌ ಕೂಡ ಪರಿಚಯಿಸಿದೆ.

ಸ್ನ್ಯಾಪ್‌ಚಾಟ್‌

ಹೌದು, ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್‌ ಆಗಿರುವ ಸ್ನ್ಯಾಪ್‌ಚಾಟ್‌ ತನ್ನ ಬಳಕೆದಾರರಿಗೆ ನಾಲ್ಕು ಹೊಸ ಲೆನ್ಸ್‌ ಅನ್ನು ಪರಿಚಯಿಸಿದೆ. ಇದು ಈಗಾಗಲೇ ಟಿಕ್‌ಟಾಕ್‌ನಲ್ಲಿ ಜನಪ್ರಿಯವಾಗಿದ್ದ ಡ್ಯಾನ್ಸ್‌ ಚಾಲೆಂಜ್‌ ನಲ್ಲಿ ಬಳಸಲು ಉಪಯುಕ್ತವಾಗಿದ್ದ ಲೆನ್ಸ್‌ಗಳಾಗಿವೆ. ಸದ್ಯ ಇದೀಗ ಸ್ನ್ಯಾಪ್‌ಚಾಟ್‌ ಪ್ರಾರಂಭಿಸಿರುವ ಈ ಹೊಸ ಲೆನ್ಸ್‌ಗಳು ಇಂದಿನಿಂದ ಲೆನ್ಸ್ ಸ್ಟುಡಿಯೋ ಮೂಲಕ ಲಭ್ಯವಾಗಲಿವೆ. ಹಾಗಾದ್ರೆ ಈ ಲೆನ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ ಪರಿಚಯಿಸಿರುವ ನಾಲ್ಕು ಹೊಸ ಲೆನ್ಸ್‌ಗಳು ಬಳಕೆದಾರರು ಡ್ಯಾನ್ಸ್‌ ಚಾಲೆಂಜ್‌ ನಂತಹ ವಿಡಿಯೋಗಳನ್ನ ಮಾಡುವುದಕ್ಕೆ ಅವಕಾಶವನ್ನ ನೀಡಲಿದೆ. ಈ ಮೂಲಕ ಶಾರ್ಟ್‌ ವಿಡಿಯೋ ಕ್ರಿಯೆಟರ್ಸ್‌ ತಮ್ಮ ಡ್ಯಾನ್ಸ್‌ ವಿಡಿಯೋಗಳನ್ನ ಸುಂದರವಾಗಿ ಸೆರೆ ಹಿಡಿಯಲು ಸಾಧ್ಯವಾಗಲಿದೆ. ಇದಲ್ಲದೆ ಈ ಲೆನ್ಸ್ ಸ್ಟುಡಿಯೋ 3.1 ಅಪ್‌ಡೇಟ್ ಅಲರ್ಟ್ ಅನ್ನು ಹೊಂದಿದ್ದು,2 ಡಿ ಫುಲ್ ಬಾಡಿ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಲೆನ್ಸ್ ಬಾಡಿ ಟ್ರ್ಯಾಕ್‌ ಮಾಡುವುದಲ್ಲದೆ ವರ್ಕ್‌ಔಟ್ಸ್‌ನಂತೆ ಮೂವಿಂಗ್‌ ಇರುವ ವಿಡಿಯೋಗಳನ್ನ ಸೆರೆ ಹಿಡಿಯಬಲ್ಲವು ಎಂದು ಸ್ನ್ಯಾಪ್‌ಚಾಟ್ ತನ್ನ ಸ್ನ್ಯಾಪ್ ಲೆನ್ಸ್ ಸ್ಟುಡಿಯೋ ಚಾನೆಲ್ ಮೂಲಕ ಹೇಳಿದೆ.

ಸ್ನ್ಯಾಪ್‌ಚಾಟ್‌

ಇದಲ್ಲದೆ ಇದೀಗ ಸ್ನ್ಯಾಪ್‌ಚಾಟ್‌ ಪ್ರಾರಂಭಿಸಿರುವ ಈ ಹೊಸ ಲೆನ್ಸ್‌ಗಳನ್ನು ಕ್ರಿಯೆಟ್‌ ಮಾಡಲು ಜನಪ್ರಿಯ ಟಿಕ್‌ಟಾಕ್ ಸ್ಟಾರ್‌ಗಳ ಜೊತೆಗೆ ಪಾಲುದಾರಿಕೆ ಹೊಂದಿದೆ. ಇನ್ನು ಹಾರ್ಮನ್‌ ಮೂಲಕ ಕ್ರಿಯೆಟ್‌ ಮಾಡಲು ಲೆನ್ಸ್‌ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯ ಸುತ್ತ ಸೈಕೆಡೆಲಿಕ್ ಬಣ್ಣಗಳನ್ನು ಕಾಣುವಂತೆ ಮಾಡಿದರೆ, ಸರತಿ ಸಾಲಿನಲ್ಲಿ ನಿಂತಂತೆ ರಚಿಸಲಾದ ಒಂದು ಲೆನ್ಸ್‌ ಬಳಕೆದಾರರ ಬಾಡಿ ವಿನ್ಯಾಸದ ಸುತ್ತಲೂ ‘ಯೂ' ಶೀರ್ಷಿಕೆಯನ್ನು ತೋರಿಸುತ್ತದೆ. ಅಂತೆಯೇ, ಗ್ರೇನೊಂದಿಗೆ ರಚಿಸಲಾದ ಲೆನ್ಸ್‌ ಜ್ಯಾಮಿತೀಯ ಆಕಾರಗಳನ್ನು ತೋರಿಸುತ್ತದೆ ಮತ್ತು ಡಿ'ಅಮೆಲಿಯೊದೊಂದಿಗೆ ರಚಿಸಲಾದ ಲೆನ್ಸ್‌ ಕಾರ್ಟೂನ್ ಮಿಂಚಿನ ಬೋಲ್ಟ್ ಮತ್ತು ಪಟಾಕಿಗಳನ್ನು ತೋರಿಸುತ್ತದೆ.

ಮ್ಯೂಸಿಕ್‌

ಇನ್ನು ಈ ಸಮಯದಲ್ಲಿ, ಕೇವಲ ಎರಡು ಲೆನ್ಸ್‌ಗಳು ಮಾತ್ರ ವೀಡಿಯೊಗಳೊಂದಿಗೆ ಬರುತ್ತವೆ. ಇನ್ನೂ ಮ್ಯೂಸಿಕ್‌ಅನ್ನು ಹೊಂದಿರದ ಲೆನ್ಸ್‌ಗಳನ್ನು ಬಳಸುವಾಗ ಬಳಕೆದಾರರು ಬೇರೆ ಅಪ್ಲಿಕೇಶನ್‌ನಿಂದ ಮ್ಯೂಸಿಕ್‌ ಅನ್ನು ಪ್ಲೇ ಮಾಡಬೇಕು. ಅಲ್ಲದೆ ಸ್ನ್ಯಾಪ್‌ಚಾಟ್ ಬಳಸಿ ವೀಡಿಯೊವನ್ನು ರೆಕಾರ್ಡ್ ಮಾಡಬೇಕಾಗುತ್ತದೆ. ಅಲ್ಲದೆ ಇಂಗ್ಲಿಷ್ ಮಾತನಾಡುವ ಬಳಕೆದಾರರಿಗೆ ಈ ಲೆನ್ಸ್‌ಗಳನ್ನು ಬಳಸಿಕೊಂಡು ವೀಡಿಯೊಗಳನ್ನು ರೆಕಾರ್ಡ್ ಮಾಡಲು ಸ್ನ್ಯಾಪ್‌ಚಾಟ್ ಅನುಮತಿಯನ್ನು ನೀಡಿದೆ.

Best Mobiles in India

Read more about:
English summary
The good news is that Snapchat is planning to allow English-speaking users to record videos using these lenses with music starting this fall.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X