ಭಾರತದಲ್ಲಿ ಸ್ನೋಕರ್ ಐರಾಕರ್‌ಗಾಡ್ಸ್ ಇಯರ್‌ಫೋನ್ ಬಿಡುಗಡೆ!
ಟೆಕ್ ವಲಯದಲ್ಲಿ ಸಾಕಷ್ಟು ವೈವಿಧ್ಯಮಯ ಮಾದರಿಯ ಇಯರ್‌ಫೋನ್‌ಗಳು ಲಭ್ಯವಿವೆ. ಈಗಾಗಲೇ ಹಲವು ಸಂಸ್ಥೆಗಳು ತಮ್ಮ ವಿವಿಧ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿವೆ. ಇದರಲ್ಲಿ ಇನಿಫಿನಿಕ್ಸ್‌ನ ಬ್ರಾಂಡ್ ಸ್ನೋಕರ್ ಇಯರ್‌ಫೋನ್‌ಗಳು ಕೂಡ ಸೇರಿವೆ. ಸದ್ಯ ಇದೀಗ ಇನ್ಫಿನಿಕ್ಸ್‌ನ ಸ್ನೋಕರ್ ತನ್ನ ಐರಾಕರ್ ಸರಣಿಯಲ್ಲಿ ಹೊಸ ಜೋಡಿ ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ಗಳು ಹೊಸ ಮಾದರಿಯ ಕಾಂಡದ ವಿನ್ಯಾಸವನ್ನು ಹೊಂದಿದೆ.

ಹೌದು, ಸ್ನೋಕರ್ ಸಂಸ್ಥೆ ತನ್ನ ಹೊಸ ಐರಾಕರ್ ಗಾಡ್ಸ್ ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಇಯರ್‌ಫೋನ್ ಆಪಲ್ ಏರ್‌ಪಾಡ್‌ಗಳಿಂದ ಸ್ಫೂರ್ತಿ ಪಡೆದ ಚಾರ್ಜಿಂಗ್ ಕೇಸ್ ಅನ್ನು ಹೊಂದಿದೆ. ಇನ್ನು ಈ ಐರಾಕರ್ ಸರಣಿಯ ಎರಡನೇ ಟ್ರೂಲಿ ವಾಯರ್‌ಲೆಸ್ ಜೋಡಿ ಇದಾಗಿದೆ. ಈ ಹಿಂದೆ ಸ್ನೋಕರ್ ಸಂಸ್ಥೆ ಐರಾಕರ್ ಸ್ಟಿಕ್ಸ್ ಅನ್ನು ಪರಿಚಯಿಸಿತ್ತು. ಇನ್ನು ಈ ಇಯರ್‌ಫೋನ್ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಇಯರ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನೋಕರ್ ಸಂಸ್ಥೆ ಪರಿಚಯಿಸಿರುವ ಐರಾಕರ್ ಗಾಡ್ಸ್ ಇಯರ್ ಫೋನ್ ಬಾಸ್ ವರ್ಧಕದೊಂದಿಗೆ 13mm ಡೈನಾಮಿಕ್ ಆಡಿಯೋ ಡ್ರೈವರ್‌ಗಳೊಂದಿಗೆ ಬರುತ್ತವೆ. ಇನ್ನು ಈ ಇಯರ್‌ಬಡ್ಸ್‌ತಲಾ 4.2 ಗ್ರಾಂ ತೂಕವನ್ನು ಹೊಂದಿದ್ದು,ಇವುಗಳನ್ನು ಪ್ರತ್ಯೇಕವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಇನ್ನು ಈ ಜೋಡಿ ಇಯರ್‌ಫೋನ್ ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕೇಸ್ ಅನ್ನು ಮುಕ್ತವಾಗಿ ತಿರುಗಿಸುವ ಮೂಲಕ ಹೊಂದಾಣಿಕೆಯ ಡಿವೈಸ್‌ನೊಂದಿಗೆ ಸಂಪರ್ಕಿಸಬಹುದಾಗಿದೆ.

ಇನ್ನು ಈ ಇಯರ್‌ಫೋನ್ ಇಂದಿನ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದು ಕಾಂಡದ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರ ಕಿವಿಗೆ ತಕ್ಕಂತೆ ಹೊಂದಿಕೊಳ್ಳಲಿದೆ. ಇದಲ್ಲದೆ ಈ ಇಯರ್‌ಫೋನ್ IPX 5 ರೇಟಿಂಗ್ ಅನ್ನು ಹೊಂದಿದ್ದು, ಬೆವರು ಮತ್ತ ವಾಟರ್ ಸ್ಪ್ಲಶ್ ಪ್ರೂಪ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಈ ಇಯರ್‌ಫೋನ್‌ನಲ್ಲಿ ಗೇಮಿಂಗ್‌ಗಾಗಿ ಮೀಸಲಾದ ಕಡಿಮೆ-ಲೇಟೆನ್ಸಿ ಮೋಡ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ಇದು ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿ ಧ್ವನಿ ಆಜ್ಞೆಗಳನ್ನು ಬೆಂಬಲಿಸಲಿದೆ.

ಐರಾಕರ್ ಗಾಡ್ಸ್ ಇಯರ್‌ಫೋನ್ ಪ್ರತಿ ಸ್ಪರ್ಶ-ನಿಯಂತ್ರಿತ ಇಯರ್‌ಬಡ್ 35mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಅದು ನಾಲ್ಕು ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಇದರ ಚಾರ್ಜಿಂಗ್ ಕೇಸ್ 500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಅಷ್ಟೇ ಅಲ್ಲ 18 ಗಂಟೆಗಳ ಸಮಯವನ್ನು ಸೇರಿಸಬಹುದು. ಎರಡು ಗಂಟೆಗಳಲ್ಲಿ ಸ್ನೋಕರ್ ಐರಾಕರ್ ಗಾಡ್ಸ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಇನ್ಫಿನಿಕ್ಸ್ ಹೇಳಿಕೊಂಡಿದೆ.

ಇನ್ನು ಈ ಇಯರ್‌ಫೋನ್ ಭಾರತದಲ್ಲಿ 1,999 ರೂ.ಗಳ ಬೆಲೆಯನ್ನು ಹೊಂದಿದೆ. ಇದು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ 1,499.ರೂ.ಗೆ ಲಭ್ಯವಾಗಲಿದೆ. ಅಲ್ಲದೆ ಈ ಐರಾಕರ್ ಗಾಡ್ಸ್ ಫ್ಲಿಪ್ಕಾರ್ಟ್‌ನಲ್ಲಿ ಅಕ್ಟೋಬರ್ 15 ರಿಂದ ಲಭ್ಯವಾಗಲಿದೆ.


Click it and Unblock the Notifications




