Home
ಸುದ್ದಿಜಾಲ

ಜನ ಮರುಳೋ..ಜಾತ್ರೆ ಮರುಳೋ..ಇಲ್ಲವೇ ಫೇಸ್‌ಬುಕ್ ಮರುಳೋ?!

ಕುಳಿತರೂ ನಿಂತರೂ ಫೇಸ್‌ಬುಕ್ ಎಂಬ ಮಾಯಾಜಾಲ ನಮ್ಮನ್ನು ಆವರಿಸಿಕೊಂಡಿದೆ. ಜಾಲತಾಣಗಳಲ್ಲಿನ ಗುಂಗಿನಲ್ಲಿರುವ ಜನ ಸಮೂಹ ಇಡೀ ಜಗತ್ತಿನಾದ್ಯಂತ ಹೆಚ್ಚಾಗುತ್ತಿದೆ. ಸುಖವಾಗಿ ನಿದ್ದೆ ಮಾಡುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ಈ ಸಾಮಾಜಿಕ ಜಾಲತಾಣಗಳ ಸಹವಾಸದಲ್ಲಿ ಕಳೆಯುತ್ತೇವೆ. ಅರಿಯದೇ ಅವುಗಳ ಪ್ರಭಾವಕ್ಕೆ ನಾವೆಲ್ಲರೂ ಸಿಲುಕಿಬಿಟ್ಟಿದ್ದೇವೆ.

ಹೌದು, ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಸುಮಾರು 35 ಪ್ರತಿಶತಕ್ಕಿಂತಲೂ ಹೆಚ್ಚು ಜನರು ನಿತ್ಯ 4 ಗಂಟೆಗಳಿಗಳಿಗಿಂತಲೂ ಹೆಚ್ಚಿನ ಸಮಯವನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ವ್ಯಯಿಸುವ ಬಗ್ಗೆ ತಿಳಿಸಿದೆ. ದೇಹ ಮತ್ತು ಮನಸಿನ ಮೇಲೆ ಅನೇಕ ಬಗೆಯ ಅಡ್ಡ ಪರಿಣಾಮಗಳಾದರೂ ನಾವು ಅವುಗಳೊಂದಿಗೆ ರಾಜಿ ಮಾಡಿಕೊಂಡಂತೆ ಬದುಕು ನಡೆಸಿದ್ದೇವೆ ಎನ್ನುತ್ತಿದೆ.

ಜನ ಮರುಳೋ..ಜಾತ್ರೆ ಮರುಳೋ..ಇಲ್ಲವೇ ಫೇಸ್‌ಬುಕ್ ಮರುಳೋ?!

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಯೂಟ್ಯುಬ್, ವಾಟ್ಸ್ ಆಪ್‌ಗಳನ್ನು ಬಳಸಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ಸ್ಪೇನ್‌ 88 ಪ್ರತಿಶತ, ಇಟಲಿ 82 ಪ್ರತಿಶತ ಮತ್ತು ಅಮೆರಿಕ 80 ಪ್ರತಿಶತ ಈ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ ಇದರ ಬೆಳವಣಿಗೆ ಪ್ರಮಾಣ ರಾಕೆಟ್ ಸ್ಪೀಡ್‌ನಲ್ಲಿದೆ.

ಮೊಬೈಲ್‌ ಮತ್ತು ಕಂಪ್ಯೂಟರ್‌ ಹೊರತುಪಡಿಸಿದ ಬದುಕನ್ನು ಊಹಿಸಿಕೊಳ್ಳಲು ಕೂಡಾ ಕಷ್ಟವಾಗುತ್ತಿರುವ ಈ ದಿನಗಳಲ್ಲಿ, ಈ ಸಾಮಾಜಿಕ ಜಾಲತಾಣಗಳಿಗೆ ಮನುಷ್ಯ ತನ್ನ ಖಾಸಗಿ ಬದುಕನ್ನೂ ಸಹ ಗುತ್ತಿಗೆ ಕೊಟ್ಟಿರುವಂತಿದೆ. ಏಕೆಂದರೆ, ಭಾರತದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಹತ್ತು ಜನರಲ್ಲಿ ಏಳು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೂಡಲೇ ತೊಡಗುತ್ತಾರಂತೆ.

ಜನ ಮರುಳೋ..ಜಾತ್ರೆ ಮರುಳೋ..ಇಲ್ಲವೇ ಫೇಸ್‌ಬುಕ್ ಮರುಳೋ?!

ಮನುಷ್ಯನ ಜೀವನವನ್ನು ಈಗ ಸಾಮಾಜಿಕ ಜಾಲತಾಣಗಳು ಪ್ರಭಾವಿಸುತ್ತಿವೆ. ಇಡೀ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ಸರಾಸರಿ 135 ನಿಮಿಷ ಅಂತರ್ಜಾಲದ ಬಳಕೆಯಲ್ಲಿ ಕಳೆಯುವುದಿದೆ ಎಂದು ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ತಿಳಿಯದೇ ಇವುಗಳಿಗೆ ಜನರು ಸಿಲುಕುತ್ತಾರೆ. ಹಾಗಾಗಿ, ಇಲ್ಲಿ ಜನ ಮರುಳೋ, ಜಾತ್ರೆ ಮರುಳೋ.!

Best Mobiles in India

English summary
Everyone knows that politicians use social media to test the waters of public opinion on certain topic and causes. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+