ಫೇಸ್‌ಬುಕ್‌ಗೆ 773 ಕೋಟಿ ದಂಡ..!: ಯಾಕೆ..?
ವಾಟ್ಸ್‌ಆಪ್ ಕುರಿತಂತೆ ಸರಿಯಾದ ಮಾಹಿತಿ ನೀಡದೆ ಇರುವ ಕಾರಣಕ್ಕೆ ಮತ್ತು ಹಾದಿತಪ್ಪಿಸುವಂತ ಮಾಹಿತಿಯನ್ನು ನೀಡಿರುವುದಕ್ಕೆ ಈ ಭಾರಿ ಮೊತ್ತವನ್ನು ಪಾವತಿ ಮಾಡಬೇಕಾಗಿದೆ.
ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ಗೆ ಯುರೋಪಿಯನ್ ಕಮಿಷನ್ ಭಾರೀ ಮೊತ್ತದ ದಂಡವನ್ನು ವಿಧಿಸಿದ್ದು, 110 ಮಿಲಿಯನ್ ಯೂರೋ ಎಂದರೆ ರೂ. 773 ಕೋಟಿ ಮೊತ್ತದ ದಂಡವನ್ನು ಹೇರಿದೆ. ವಾಟ್ಸ್‌ಆಪ್ ಕುರಿತಂತೆ ಸರಿಯಾದ ಮಾಹಿತಿ ನೀಡದೆ ಇರುವ ಕಾರಣಕ್ಕೆ ಮತ್ತು ಹಾದಿತಪ್ಪಿಸುವಂತ ಮಾಹಿತಿಯನ್ನು ನೀಡಿರುವುದಕ್ಕೆ ಈ ಭಾರಿ ಮೊತ್ತವನ್ನು ಪಾವತಿ ಮಾಡಬೇಕಾಗಿದೆ.

ವಾಟ್ಸ್ಆಪ್ ಡೇಟಾವನ್ನು ಫೇಸ್‌ಬುಕ್ ನೊಂದಿಗೆ ವಾಟ್ಸ್‌ಆಪ್ ಬಳಕೆದಾರರು ಹಂಚಿಕೊಳ್ಳಬೇಕು ಎಂಬ ನಿಮಯಕ್ಕೆ ಯುರೋಪಿಯನ್ ಕಮಿಷನ್ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕಾಗಿ ಫೇಸ್‌ಬುಕ್ಕಿಗೆ ದಂಡವನ್ನು ಪಾವತಿಸುವಂತೆ ತಿಳಿಸಿದೆ.
2014ರಲ್ಲಿ ಫೇಸ್‌ಬುಕ್ ವಾಟ್ಸ್ಆಪ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಕಾಲನುಕ್ರಮದಲ್ಲಿ ವಾಟ್ಸ್ಆಪ್ ಬಳಕೆದಾರನ್ನು ಆಟೋ ಮೆಟಿಕ್ ಆಗಿ ಸಾಮಾಜಿಕ ಜಾಲತಾಣದ ವೇದಿಕೆಗೆ ಲೀಂಕ್ ಮಾಡಲು ಫೇಸ್‌ಬುಕ್ ಮುಂದಾಗಿದ್ದು, ಫೇಸ್‌ಬುಕ್ ಯುಸರ್ ಮತ್ತು ವಾಟ್ಸ್ಆಪ್ ಯುಸರ್ ಅನ್ನು ಒಟ್ಟಾಗಿಸಲು ಮುಂದಾಗಿತ್ತು.

ಆದರೆ ಇದನ್ನು ಹಲವರು ವಿರೋಧಿಸಿದ್ದರು. ಇದು ತಪ್ಪು ಎಂದು ವಾದಿಸಿದ್ದು, ಇದರಲ್ಲಿ ಹಲವರಾರು ಎರರ್‌ಗಳು ಪತ್ತೆಯಾಗಿದ್ದು, ಅದನ್ನು ಸರಿಪಡಿಸಲು ಫೇಸ್‌ಬುಕ್ ಮುಂದಾಗಿರಲಿಲ್ಲ. ಅಲ್ಲದೇ ವಾಟ್ಸ್ಆಪ್ ಖರೀದಿಯ ಸಂದರ್ಭದಲ್ಲಿ ಹಲವು ತಪ್ಪುಗಳನ್ನು ಮಾಡಿತ್ತು. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಗೆ ಯುರೋಪಿಯನ್ ಕಮಿಷನ್ ಭಾರಿ ಮೊತ್ತದ ದಂಡವನ್ನು ವಿಧಿಸಿದೆ.


Click it and Unblock the Notifications








