Home
ಸುದ್ದಿಜಾಲ

ಮನಸ್ಸಿನ ಕನ್ನಡಿಯಂತೆ ಕಂಗೊಳಿಸುತ್ತಿರುವ ಸುಂದರ ಪೋಟೋಗಳು

By Shwetha

ಫೋಟೋಗಳು ನಮ್ಮ ಮನಸ್ಸನ್ನು ರಂಜಿಸುವಂತಹ ಕೆಲಸವನ್ನು ಮಾಡುತ್ತದೆ. ಆದರೆ ಫೋಟೋಗಳ ಬಣ್ಣ ಕೂಡ ಅದರಲ್ಲಿರುವ ವಸ್ತುವಿನಂತೆ ಮನಸೆಳೆಯುವಂತಿರಬೇಕು. ಹೌದು ಫೋಟೋ ತೆಗೆಯುವಾಗ ಅಗತ್ಯವಾಗಿರುವ ಕಲೆಗಾರಿಕೆ ಅದನ್ನು ಪ್ರದರ್ಶಿಸುವಲ್ಲಿ ಇರುವುದೂ ಅತ್ಯವಶ್ಯಕ.

ಇಲ್ಲಿ ನಾವು ನೀಡಿರುವ ಕೆಲವೊಂದು ಬಣ್ಣ ವಿನ್ಯಾಸವಿರುವ ಅದ್ಭುತ ಫೋಟೋಗಳಾಗಿದ್ದು ಇವುಗಳು ನಿಮ್ಮ ಮನಸ್ಸಿಗೆ ಖಂಡಿತ ಮುದ ನೀಡುತ್ತದೆ. ನಮ್ಮ ಮೂಡ್ ಅನ್ನು ಚೇತೋಹಾರಿಗೊಳಿಸುವ ಸಾಮರ್ಥ್ಯ ಫೋಟೋಗಳ ಬಣ್ಣಗಳಿಗಿದ್ದು ಅದರ ಬಳಕೆ ಫೋಟೋಗೆ ಪೂರಕವಾಗಿರುವುದು ಅತ್ಯವಶ್ಯಕ.

ಪೇಸ್ಟಲ್ ಥೀಮ್ ಅನ್ನು ಬಳಸಿಕೊಂಡು ಫೋಟೋಗಳ ಬಣ್ಣಗಳ ಪೂರೈಕೆಯನ್ನು ಇಲ್ಲಿ ಮಾಡಲಾಗಿದೆ. ಈ ಥೀಮ್ ಫೋಟೋಗಳಿಗೆ ವಿಶಿಷ್ಟ ಆಯಾಮವನ್ನು ನೀಡಿದ್ದು ಸರಳ ಚಿತ್ರವನ್ನೂ ಕೂಡ ಸುಂದರಗೊಳಿಸಿದೆ. ಬನ್ನಿ ಹಾಗಿದ್ದರೆ ಪೇಸ್ಟಲ್ ಥೀಮ್ ಬಳಸಿಕೊಂಡು ಚಿತ್ರಿಸಿದ ಅದ್ಭುತ ಕಲಾ ವೈವಿಧ್ಯವನ್ನು ನೋಡಿ.

#1

#1

ಹೌದು ಈ ಚಿತ್ರ ದೂರದಿಂದಲೇ ಅದ್ಭುತ ನೋಟವನ್ನು ನಮಗೆ ನೀಡುತ್ತಿದೆ ಅಲ್ಲವೇ.. ಎರಡು ಬಣ್ಣಗಳ ಸುಂದರ ಸಮ್ಮಿಶ್ರಣವನ್ನು ಈ ಚಿತ್ರದಲ್ಲಿ ನಮಗೆ ವೀಕ್ಷಿಸಬಹುದಾಗಿದೆ.

#2

#2

ಈ ಶಾಟ್‌ನಲ್ಲಿ ಬಳಸಿರುವ ಬಣ್ಣ ನಿಜಕ್ಕೂ ಅದ್ಭುತವಾಗಿದೆ. ನಿಜಕ್ಕೂ ಬಣ್ಣಗಳಲ್ಲಿ ಆಡುವುದು ಎಂದರೆ ಇದೇ ಆಗಿರಬೇಕಲ್ಲವೇ?

#3

#3

ಈ ಚಿತ್ರ ಎಲ್ಲರಿಗೂ ಶುಭೋಧಯವನ್ನು ಹೇಳುತ್ತಿರುವಂತೆ ಭಾಸವಾಗುತ್ತಿದೆ ಅಲ್ಲವೇ? ಪ್ರಕೃತಿಯ ಈ ಮೌನದಲ್ಲಿ ಜಗದ ವಿಸ್ಮಯ ಅಡಗಿದೆ ಎಂದೂ ಹೇಳಬಹುದು.

#4

#4

ಆಕಾಶದ ಇತರ ಚಿತ್ರಗಳಿಗಿಂತ ಕೊಂಚ ಭಿನ್ನತೆಯನ್ನು ಇದು ನೀಡಿದೆ. ಆಕಾಶದ ಬಣ್ಣ ನಿಜಕ್ಕೂ ಮನವನ್ನು ಕಲಕುವಂತಿದೆ.

#5

#5

ಈ ಬೆಳಗ್ಗಿನ ಸುಂದರ ನೋಟವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ ಅಲ್ಲವೇ? ಸೂರ್ಯನ ಪ್ರತಿಬಿಂಬ ನೀರಿನಲ್ಲಿ ಬಿದ್ದಿರುವುದು, ಬೆಳಗ್ಗಿನ ನೋಟಕ್ಕೆ ನೈಜತೆಯನ್ನು ತಂದಿದೆ.

#6

#6

ಇಲ್ಲಿ ತೆಗೆದಿರುವ ಪ್ರತಿಯೊಂದು ಫೊಟೋಗೂ ವಿವಿಧ ಬಣ್ಣಗಳಿದ್ದು ನಿಜಕ್ಕೂ ಒಂದು ಅಭೂತಪೂರ್ವ ಅನುಭೂತಿಯನ್ನು ಇವುಗಳು ಉಂಟುಮಾಡುತ್ತಿವೆ.

#7

#7

ಹೌದು ನಿಜಾಗಿಯೂ ಆಕರ್ಷಕ ಚಿತ್ರವಾಗಿ ಇದು ಪರಿಗಣಿತವಾಗಿದೆ ಅಲ್ಲವೇ? ಕೆಂಪು ಬಲೂನ್ ನೀರಿನಿಂದ ಈಗ ಮೇಲೆ ಬರುವುದೋ ಎಂಬಂತಹ ನೋಟವನ್ನು ಈ ಚಿತ್ರ ಇಲ್ಲಿ ನೀಡುತ್ತಿದೆ.

#8

#8

ಹಿನ್ನಲೆಯನ್ನು ಬ್ಲರ್ ಆಗಿಸಿ ನಿರ್ದಿಷ್ಟ ಫೋಟೋವನ್ನು ಮಾತ್ರ ಇಲ್ಲಿ ಕೇಂದ್ರೀಕರಿಸಲಾಗಿದೆ. ನಿಜಕ್ಕೂ ಮನಮೋಹಕವಾಗಿದೆ ಈ ಚಿತ್ರ.

#9

#9

ಆಕಾಶದ ಬಣ್ಣಕ್ಕೂ ಹಾಯಿ ದೋಣಿಯ ಬಣ್ಣಕ್ಕೂ ಸಂಘರ್ಷ ಉಂಟಾಗುತ್ತಿದೆಯೋ ಎಂಬಂತೆ ಇಲ್ಲಿ ಭಾಸವಾಗುತ್ತಿದೆ.

#10

#10

ಈ ಫೋಟೋ ಸರಳವಾಗಿದ್ದರೂ ಮೋಜನ್ನು ಉಂಟುಮಾಡುತ್ತಿರುವಂತಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+