Home
ಸುದ್ದಿಜಾಲ

ಅಮೇಜಾನ್ ನಿಂದ ಕೆಟ್ಟ ಶಾಪಿಂಗ್ ಅನುಭವ ಪಡೆದ ಬಾಲಿವುಡ್ ನಟಿ

ಆನ್ ಲೈನ್ ಶಾಪಿಂಗ್ ನಲ್ಲಿ ಮೋಸಗಳಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂಬ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಒಬ್ಬ ಪ್ರಸಿದ್ಧ ನಟಿಗೂ ಕೂಡ ಹೀಗೆ ಆಗಿದೆ ಎಂದರೆ ಆಶ್ಚರ್ಯವಲ್ಲವೇ? ಹೌದು ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಆನ್ ಲೈನ್ ಶಾಪಿಂಗ್ ನಲ್ಲಿ ಕೆಟ್ಟ ಅನುಭವವನ್ನು ಪಡೆದಿದ್ದಾರೆ.

ಘಟನೆ ಏನು?

ಘಟನೆ ಏನು?

ಸೋನಾಕ್ಷಿ ಇತ್ತೀಚೆಗೆ ಹೆಡ್ ಫೋನ್ ನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದಾರೆ. ಆದರೆ ಹೆಡ್ ಫೋನ್ ಬದಲಾಗಿ ಆಕೆಯ ಕೊರಿಯರ್ ನಲ್ಲಿ ತುಕ್ಕು ಹಿಡಿದ ಕಬ್ಬಿಣದ ತುಂಡುಗಳು ಪ್ಯಾಕ್ ಆಗಿ ಬಂದಿದೆ. ಇದನ್ನು ನೋಡಿದ ಸೋನಾಕ್ಷಿ ಗಾಬರಿಯಾಗಿದ್ದಾಳೆ.

ಆನ್ ಲೈನ್ ನಲ್ಲಿ ಯಾವುದೋ ವಸ್ತು ಖರೀದಿಸುವಿಕೆಯಲ್ಲಿ ಮೋಸಗಳಾಗುವುದು ಸಹಜವೇ. ಆನ್ ಲೈನ್ ಶಾಪಿಂಗ್ ಮಾಡುವುದು ಜನರಿಗೆ ಸುಲಭದ ಮಾರ್ಗವಾಗಿರಬಹುದು ಆದರೆ ಡೆಲಿವರಿ ವಿಚಾರ ಬಂದಾಗ ಅದು ನಿಮ್ಮ ಅನುಭವವನ್ನು ಋಣಾತ್ಮಕವಾಗಿ ಬದಲಿಸಬಹುದು. ಅಂದರೆ ಉತ್ತಮ ವಸ್ತು ಎಂದು ನೀವು ಖರೀದಿ ಮಾಡಿದ್ದು ಕೆಟ್ಟದ್ದಾಗಿರಬಹುದು ಅಥವಾ ಇನ್ಯಾವುದೋ ರೀತಿಯ ಮೋಸ ನಿಮಗೆ ಆನ್ ಲೈನ್ ಖರೀದಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಇಂತಹ ಕೆಟ್ಟ ಅನುಭವ ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ನಟಿ ಸೋನಾಕ್ಷಿ ಸಿನ್ಹಾ ಗೆ ಆಗಿದೆ.

ಟ್ವೀಟರ್ ನಲ್ಲಿ ಹಂಚಿಕೊಂಡ ನಟಿ:

ಟ್ವೀಟರ್ ನಲ್ಲಿ ಹಂಚಿಕೊಂಡ ನಟಿ:

ತನಗಾದ ಕೆಟ್ಟ ಅನುಭವವನ್ನು ಸೋನಾಕ್ಷಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಾವು ಅಮೇಜಾನ್ ನಲ್ಲಿ ಹೆಡ್ ಫೋನ್ ಬುಕ್ ಮಾಡಿದ್ದು ನಂತರ ಅವರಿಗೆ ತುಕ್ಕು ಹಿಡಿದ ಕಬ್ಬಿಣದ ತುಂಡುಗಳ ಕೊರಿಯರ್ ನಲ್ಲಿ ಬಂದ ಬಗ್ಗೆ ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಕೆ ಹೀಗೆ ಬರೆದಿದ್ದಾರೆ "ಹೇ @ಅಮೇಜಾನ್! ನೋಡಿ ಇಲ್ಲಿ ನಾನು ಆರ್ಡರ್ ಮಾಡಿದ ಬೋಸ್ ಹೆಡ್ ಫೋನ್ ಸಿಗುವ ಬದಲಿಗೆ ಏನು ಬಂದಿದೆ ಎಂದು! ಸರಿಯಾಗಿ ಪ್ಯಾಕ್ ಮಾಡಲಾಗಿದೆ ಮತ್ತು ತೆರೆಯದ ಬಾಕ್ಸ್ ಕೂಡ ಇದೆ. ಹೊರಗಿನಿಂದ ನೋಡಲು ಮಾತ್ರ ಸುಂದರವಾಗಿದೆ. ಓಹ್ ನಿಮ್ಮ ಗ್ರಾಹಕ ಸೇವಾ ಕೇಂದ್ರದವರು ಕೂಡ ಸರಿಯಾಗಿ ಸಹಾಯ ಮಾಡುವುದಿಲ್ಲ, ಅದು ನನಗೆ ಮತ್ತೂ ಕೆಟ್ಟ ಅನುಭವಕ್ಕೆ ಕಾರಣವಾಗಿದೆ"

ಸೋನಾಕ್ಷಿ ಟ್ವೀಟ್ ಗೆ ಭರ್ಜರಿ ಪ್ರತಿಕ್ರಿಯೆ:

ಸೋನಾಕ್ಷಿ ಟ್ವೀಟ್ ಗೆ ಭರ್ಜರಿ ಪ್ರತಿಕ್ರಿಯೆ:

ಯಾವಾಗ ಸೋನಾಕ್ಷಿ ಟ್ವೀಟರ್ ನಲ್ಲಿ ಫೋಟೋ ಸಹಿತ ಈ ವಿಚಾರ ಹಂಚಿಕೊಂಡರೋ ಟ್ವೀಟಿಗರು ಭರ್ಜರಿ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದಾರೆ. ಹೆಚ್ಚಿನವರು ಅಮೇಜಾನ್ ನ ಕೆಟ್ಟ ಗ್ರಾಹಕ ಸೇವೆಯ ಬಗ್ಗೆ ತಕರಾರು ಮಾಡಿದ್ದಾರೆ ಮತ್ತು ವೆಬ್ ಸೈಟ್ ನ್ನು ಹಾಸ್ಯ ಮಾಡಿದ್ದಾರೆ. ಸರಿಯಾಗಿ ಪ್ರತ್ಯುತ್ತರ ಕೊಡುವಂತೆ ವೆಬ್ ಸೈಟ್ ನ್ನು ಕೆಲವರು ಆಗ್ರಹಿಸಿದ್ದಾರೆ.

ಕ್ಷಮೆ ಕೇಳಿದ ಅಮೇಜಾನ್ :

ಕ್ಷಮೆ ಕೇಳಿದ ಅಮೇಜಾನ್ :

ಟ್ವೀಟರ್ ನಿಂದ ಹಿಗ್ಗಾಮುಗ್ಗಾ ಅಮೇಜಾನ್ ನ್ನು ಜನ ಉಗಿಯಲು ಶುರುಮಾಡಿದ ಮೇಲೆ ಅಮೇಜಾನ್ ಕೂಡ ನಟಿಯ ಬಳಿ ಟ್ವೀಟರ್ ನಲ್ಲಿ ಕ್ಷಮೆ ಕೇಳಿದೆ.

ಅಮೇಜಾನ್ ಟ್ವೀಟ್ ಹೀಗಿದೆ

ಅಮೇಜಾನ್ ಟ್ವೀಟ್ ಹೀಗಿದೆ

"ಖಂಡಿತ ಇದು ಸ್ವೀಕಾರಾರ್ಹವಾಗಿಲ್ಲ! ಇತ್ತೀಚೆಗಿನ ನಿಮ್ಮ ಆರ್ಡರ್ ನ ಕೆಟ್ಟ ಅನುಭವಕ್ಕಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಮ್ಮ ಬೆಂಬಲದ ತಂಡದೊಂದಿಗೆ ಮುಂದಿನ ವ್ಯವಹಾರ ನಡೆಯಲಿದೆ".

Best Mobiles in India

English summary
Sonakshi Sinha orders headphones. Amazon sends her rusted iron. Internet hails company for being fair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+