ಭಾರತಕ್ಕೆ ಎಂಟ್ರಿ ಕೊಟ್ಟ ಸೋನಿಕ್ ಲ್ಯಾಂಬ್ ಹೆಡ್‌ಫೋನ್!..ಇದರ ಬೆಲೆ ಎಷ್ಟು ಗೊತ್ತಾ?
ಹೆಡ್‌ಫೋನ್ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಹೆಡ್‌ಫೋನ್‌ಗಳು ರಾರಾಜಿಸುತ್ತಿವೆ. ಗೇಮರ್‌ಗಳಿಂದ ಹಿಡಿದು ಮ್ಯೂಸಿಕ್ ಪ್ರಿಯರಿಗೂ ಹಿತವೆನಿಸುವ ಅನೇಕ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಇದೀಗ ರ್ಯಾಪ್ಚರ್ ಇನ್ನೋವೇಶನ್ ಲ್ಯಾಬ್ಸ್ ಹೊಸ ಸೋನಿಕ್ ಲ್ಯಾಂಡ್ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಹೌದು, ರ್ಯಾಪ್ಚರ್ ಇನ್ನೋವೇಶನ್ ಲ್ಯಾಬ್ಸ್ ಹೊಸ ಸೋನಿಕ್ ಲ್ಯಾಂಬ್ ಹೆಡ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಹೆಡ್‌ಫೋನ್‌ಗಳು ಆಡಿಯೊ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ವಿಶ್ವದ ಮೊದಲ ಪೇಟೆಂಟ್ ಪಡೆದ ಹೈಬ್ರಿಡ್ ಡ್ರೈವರ್ ಟೆಕ್ನಾಲಜಿಯನ್ನು ಒಳಗೊಂಡಿವೆ. ಹಾಗಾದ್ರೆ ಈ ಓವರ್-ದಿ-ಇಯರ್ ಹೆಡ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿಕ್ ಲ್ಯಾಂಬ್ ಹೆಡ್‌ಫೋನ್ ಫೀಚರ್ಸ್ ಹೇಗಿದೆ?
ಸೋನಿಕ್ ಲ್ಯಾಂಬ್ ಹೆಡ್‌ಫೋನ್ ನಾಲ್ಕು ಇನ್‌ಬಿಲ್ಟ್ ಮ್ಯೂಸಿಕ್ ಮೋಡ್‌ಗಳೊಂದಿಗೆ ಬರಲಿದೆ. ಇವುಗಳನ್ನು ಹಿಯರ್ ಮೋಡ್, ಫೀಲ್ ಮೋಡ್, ಇಮ್ಮರ್ಸ್ ಮೋಡ್ ಮತ್ತು ಬೀಸ್ಟ್ ಮೋಡ್ ಎಂದು ಹೆಸರಿಸಲಾಗಿದೆ. ಇವುಗಳನ್ನು ಬಳಕೆದಾರರು ಟಾಗಲ್ ಮಾಡಬಹುದಾಗಿದೆ. ಜೊತೆಗೆ ಆದ್ಯತೆಯ ಆಧಾರದ ಮೇಲೆ ತಮ್ಮ ಸ್ವೀಟ್ ಸ್ಪಾಟ್ ಅನ್ನು ಕಂಡುಹಿಡಿಯಬಹುದಾಗಿದೆ. ಇನ್ನು ಈ ಹೆಡ್‌ಫೋನ್‌ಗಳು ಎರಡು ಆಂತರಿಕ ಮೈಕ್ರೊಫೋನ್‌ಗಳು ಮತ್ತು 1 ಬಾಹ್ಯ ಡಿಟ್ಯಾಚೇಬಲ್ ಬೂಮ್ ಮೈಕ್ರೊಫೋನ್ ಅನ್ನು ಹೊಂದಿವೆ.
ಸೋನಿಕ್ ಲ್ಯಾಂಬ್ ಹೆಡ್‌ಫೋನ್ 8ನೇ ತಲೆಮಾರಿನ ಸ್ಪಷ್ಟ ಧ್ವನಿ ಕ್ಯಾಪ್ಚರ್ ಟೆಕ್ನಾಲಜಿಯನ್ನು ಹೊಂದಿದ್ದು, ಬದಲಾಯಿಸಬಹುದಾದ ಕುಶನ್‌ಗಳೊಂದಿಗೆ ಕ್ಯಾನ್ಸಲೇಶನ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.1 ಅನ್ನು ಬೆಂಬಲಿಸಲಿದೆ. ಇನ್ನು ಈ ಹೆಡ್‌ಫೋನ್‌ಗಳು ತೆರೆದ ಗಾಳಿಯಲ್ಲಿ ಮತ್ತು ದೃಷ್ಟಿಗೋಚರವಾಗಿರುವಾಗ ವಾಯರ್‌ಲೆಸ್ ವ್ಯಾಪ್ತಿಯು 15 ಮೀಟರ್‌ಗಳವರೆಗೆ ಇರುತ್ತದೆ. ಇದಲ್ಲದೆ ಈ ವಾಯರ್‌ಲೆಸ್ ಹೆಡ್‌ಫೋನ್‌ಗಳು 1400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 2 ಗಂಟೆಗಳ ಚಾರ್ಜಿಂಗ್ ಟೈಂ ಅನ್ನು ನೀಡಲಿದೆ.
ಬೆಲೆ ಮತ್ತು ಲಭ್ಯತೆ
ಸೋನಿಕ್ ಲ್ಯಾಂಬ್ ಹೆಡ್‌ಫೋನ್‌ಗಳು ಭಾರತದಲ್ಲಿ 19,999ರೂ. ಬೆಲೆಯನ್ನು ಹೊಂದಿದೆ. ಆದರೆ ಕಂಪನಿಯು ಸೀಮಿತ ಅವಧಿಗೆ 15,999ರೂ. ಬೆಲೆಯಲ್ಲಿ ನೀಡಲಿದೆ. ಇನ್ನು ಈ ಹೆಡ್‌ಫೋನ್‌ಗಳು ಮೂನ್‌ಸ್ಟೋನ್ ವೈಟ್, ಅಬ್ಸಿಡಿಯನ್ ಕಪ್ಪು ಮತ್ತು ಎಂಬರ್ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಇನ್ನು ಹೆಡ್‌ಫೋನ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸೋನಿ WH-CH520 ಹೆಡ್‌ಫೋನ್ ಸಾಕಷ್ಟು ಸದ್ದು ಮಾಡುತ್ತಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 50 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಜೊತೆಗೆ ಕೇವಲ ಮೂರು ನಿಮಿಷಗಳ ಚಾರ್ಜ್‌ನಲ್ಲಿ 1.5 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಟೈಂ ನೀಡಲಿದೆ. ಈ ಹೆಡ್‌ಫೋನ್ ಮಲ್ಟಿಪಾಯಿಂಟ್ ಕನೆಕಟಿವಿಟಿಯನ್ನು ಬೆಂಬಲಿಸಲಿದೆ. ಇದರಿಂದ ನೀವು ವಾಲ್ಯೂಮ್ ಲೆವೆಲ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್‌ನಂತಹ ವಾಯ್ಸ್ ಅಸಿಸ್ಟೆಂಟ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ.
ಸೋನಿ WH-CH520 ಹೆಡ್‌ಫೋನ್ ಫಾಸ್ಟ್ಪೇರ್ ಮತ್ತು ಸ್ವಿಫ್ಟ್ ಪೇರ್ ಅನ್ನು ಬೆಂಬಲಿಸಲಿದೆ. ಇದು ಬಳಕೆದಾರರಿಗೆ ವಿಂಡೋಸ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಿಗೆ ಕನೆಕ್ಟಿವಿಟಿ ಮಾಡುವುದು ಸುಲಭವಾಗಲಿದೆ. ಇನ್ನು ಈ ಹೆಡ್‌ಫೋನ್ ಪ್ಯಾಡಿಂಗ್, ಸಾಫ್ಟ್ ಇಯರ್‌ಪ್ಯಾಡ್‌ಗಳನ್ನು ಹೊಂದಿದ್ದು, ಸೋನಿಯ ನಿಖರವಾದ ವಾಯ್ಸ್ ಪಿಕಪ್ ಟೆಕ್ನಾಲಜಿಯೊಂದಿಗೆ ಹೊಂದಾಣಿಕೆ ಮಾಡಬಹುದಾದ ಹೆಡ್‌ಬ್ಯಾಂಡ್‌ನೊಂದಿಗೆ ಬರಲಿದೆ.
ಇದರೊಂದಿಗೆ ಸೋನಿ ಹೆಡ್‌ಫೋನ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳನ್ನು ಪಡೆದಿದೆ. ಇದರಿಂದ ವಿವಿಧ ರೀತಿಯ ಪರಿಸರದಲ್ಲಿ ಬಳಕೆದಾರರ ಧ್ವನಿಯನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸದ್ಯ ಭಾರತದಲ್ಲಿ ಸೋನಿ WH-CH520 ಹೆಡ್‌ಫೋನ್ 4,490ರೂ. ಬೆಲೆಗೆ ಲಭ್ಯವಾಗಲಿದೆ. ಇದನ್ನು ನೀವು ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್‌ಕ್ಲೂಸಿವ್ ಸ್ಟೋರ್, ShopatSC ವೆಬ್‌ಸೈಟ್, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಎಲ್ಲಾ ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








