ಭಾರತದಲ್ಲಿ ಸೋನಿ 32W830 ಸ್ಮಾರ್ಟ್‌ಟಿವಿ ಬಿಡುಗಡೆ! ಬೆಲೆ ಎಷ್ಟು?
ಸೋನಿ ಕಂಪೆನಿ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಪ್ರಾಡಕ್ಟ್‌ಗಳನ್ನು ಪರಿಚಯಿಸಿ ಗ್ರಾಹಕರ ಮನ ಗೆದ್ದಿದೆ. ಇನ್ನು ಸ್ಮಾರ್ಟ್‌ಟಿವಿ ವಲಯದಲ್ಲೂ ತನ್ನ ವಿಶಿಷ್ಟ ಫೀಚರ್ಸ್ ಟಿವಿಗಳಿಂದ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಇದೀಗ ಸೋನಿ ತನ್ನ ಹೊಸ ಸೋನಿ 32W830 ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್ ಎಲ್ಇಡಿ ಸ್ಮಾರ್ಟ್‌ಟಿವಿ ಆಗಿದ್ದು, ಗೂಗಲ್ ಅಸಿಸ್ಟೆಂಟ್ ಮತ್ತು ಹೆಚ್‌ಡಿಆರ್ 10 ಅನ್ನು ಬೆಂಬಲಿಸಲಿದೆ.

ಹೌದು, ಸೋನಿ ಸಂಸ್ಥೆ ಸೋನಿ 32W830 ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ ಟಿವಿ ಸಾಫ್ಟ್‌ವೇರ್ ಮತ್ತು ಎಚ್‌ಎಲ್‌ಜಿ ಫಾರ್ಮ್ಯಾಟ್‌ಗಳಿಗೆ ಹೆಚ್‌ಡಿಆರ್ ಬೆಂಬಲವನ್ನು ಹೊಂದಿದೆ. ಇನ್ನು ಈ ಸೋನಿಯ 32 ಇಂಚಿನ ಟಿವಿ ದೇಶದಲ್ಲಿ ಅದರ ಗಾತ್ರಕ್ಕೆ ಅತ್ಯಂತ ದುಬಾರಿಯಾಗಿದೆ. ಈ ಸ್ಮಾರ್ಟ್‌ಟಿವಿ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮತ್ತು ಸೋನಿ ಸೆಂಟರ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಏಪ್ರಿಲ್ 15 ರಿಂದ ಖರೀದಿಸಲು ಲಭ್ಯವಿರುತ್ತದೆ. ಹಾಗಾದ್ರೆ ಸೋನಿ 32W830 ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ 32W830 ಸ್ಮಾರ್ಟ್ ಎಲ್ಇಡಿ ಟಿವಿ 1366x768 ಪಿಕ್ಸೆಲ್‌ಗಳ ಪ್ರದರ್ಶನ ರೆಸಲ್ಯೂಶನ್ ಸಾಮರ್ಥ್ಯದ 32 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಆಂಡ್ರಾಯ್ಡ್ ಟಿವಿಯ ಅನಿರ್ದಿಷ್ಟ ಆವೃತ್ತಿಯಲ್ಲಿ ರನ್ ಆಗಲಿದೆ. ಸ್ಮಾರ್ಟ್‌ಟಿವಿ ವಾಯ್ಸ್ ರಿಮೋಟ್ ಮತ್ತು ಹ್ಯಾಂಡ್ಸ್-ಫ್ರೀ ನಿಯಂತ್ರಣಗಳಿಗಾಗಿ ಯಾವುದೇ ಲಿಂಕ್ಡ್ ಸ್ಮಾರ್ಟ್ ಸ್ಪೀಕರ್‌ಗಳ ಮೂಲಕ ಗೂಗಲ್ ಅಸಿಸ್ಟೆಂಟ್ ಬೆಂಬಲಿಸಲಿದೆ. ಜೊತೆಗೆ ಸ್ಮಾರ್ಟ್‌ಟಿವಿ ಜೊತೆಗೆ ಕನೆಕ್ಟ್ ಮಾಡಲಾದ ಡಿವೈಸ್‌ಗಳ ವಿಷಯವನ್ನು ಪ್ಲೇ ಮಾಡುವುದಕ್ಕಾಗಿ ಇದರಲ್ಲಿ ಇಂಟರ್‌ಬಿಲ್ಟ್ ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಅಳವಡಿಸಲಾಗಿದೆ.

ಇದಲ್ಲದೆ ಈ ಸ್ಮಾರ್ಟ್‌ಟಿವಿ ತನ್ನ ಸ್ಟಿರಿಯೊ ಸ್ಪೀಕರ್ ಸಿಸ್ಟಮ್‌ನಿಂದ 20W ರ ರೇಟೆಡ್ ಆಡಿಯೊ ಔಟ್‌ಪುಟ್ ಹೊಂದಿದೆ. ಇನ್ನು ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್ ಡೇಟಾಗಾಗಿ 16GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಸೋನಿಯ ಎಕ್ಸ್-ರಿಯಾಲಿಟಿ ಪ್ರೊ ಪಿಕ್ಚರ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಟಿವಿ ಸಾಫ್ಟ್‌ವೇರ್, ಗೂಗಲ್ ಅಸಿಸ್ಟೆಂಟ್‌ಗೆ ಬೆಂಬಲ, ಮತ್ತು ಎಚ್‌ಡಿಆರ್ 10 ಮತ್ತು ಎಚ್‌ಎಲ್‌ಜಿ ಫಾರ್ಮ್ಯಾಟ್‌ಗಳಿಗೆ ಎಚ್‌ಡಿಆರ್ ಬೆಂಬಲವನ್ನು ಒಳಗೊಂಡಿದೆ.

ಇದು 32 ಇಂಚಿನ ಹೆಚ್‌ಡಿ-ರೆಡಿ ಸ್ಮಾರ್ಟ್‌ಟಿವಿ ಆಗಿದ್ದರೂ ಸಹ ಸೋನಿ 32W830ಗೆ ಹೆಚ್‌ಡಿಆರ್ ಬೆಂಬಲವನ್ನು ನೀಡಲಿದೆ. ಹೆಚ್‌ಡಿಆರ್ 10 ಮತ್ತು ಹೆಚ್‌ಎಲ್‌ಜಿ ಸ್ವರೂಪಗಳನ್ನು ಸಂಸ್ಕರಣೆ ಮತ್ತು ಹೊಂದಾಣಿಕೆಯ ಮಟ್ಟದಲ್ಲಿ ಬೆಂಬಲಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವಾಯರ್ ಲೆಸ್ ಆಡಿಯೊ ಸಂಪರ್ಕಕ್ಕಾಗಿ ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, 3.5 ಎಂಎಂ ಆಡಿಯೊ ಔಟ್‌ಪುಟ್ ಮತ್ತು ಬ್ಲೂಟೂತ್ 4.2 ಗಳನ್ನು ಬೆಂಬಲಿಸಲಿದೆ.

ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ವಿಭಾಗದಲ್ಲಿ ಹೆಚ್ಚು ಫೀಚರ್ಸ್ ಒಳಗೊಂಡ ಸ್ಮಾರ್ಟ್‌ಟಿವಿ ಆಗಿದೆ. ಆದರೆ ಇದು ಅಗ್ಗದ ಬೆಲೆಯನ್ನು ಹೊಂದಿಲ್ಲ. ಸೋನಿಯ 32 ಇಂಚಿನ ಟಿವಿ ದೇಶದಲ್ಲಿ ಅದರ ಗಾತ್ರಕ್ಕೆ ಅತ್ಯಂತ ದುಬಾರಿಯಾಗಿದೆ, ಇದರ ಬೆಲೆ 31,900 ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಮತ್ತು ಸೋನಿ ಸೆಂಟರ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಸೇರಿದಂತೆ ಸೋನಿಯ ವಿತರಣಾ ಚಾನೆಲ್‌ಗಳಲ್ಲಿ ಏಪ್ರಿಲ್ 15 ರಿಂದ ಖರೀದಿಸಲು ಲಭ್ಯವಾಗಲಿದೆ.


Click it and Unblock the Notifications