Home
ಸುದ್ದಿಜಾಲ

ಸೋನಿ ಆಲ್ಫಾ 7S III ಫುಲ್‌ ಫ್ರೇಮ್‌ ಮಿರರ್‌ಲೆಸ್ ಕ್ಯಾಮೆರಾ ಭಾರತದಲ್ಲಿ ಬಿಡುಗಡೆ!

ಜಾಗತಿಕ ಮಾರುಕಟ್ಟೆಯಲ್ಲಿ ಸೋನಿ ಸಂಸ್ಥೆ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಸಹ ಪರಿಚಯಿಸುವ ಮೂಲಕ ಸೋನಿ ಸಂಸ್ಥೆ ಸೈ ಎನಿಸಿಕೊಂಡಿದೆ. ಇದಲ್ಲದೆ 'ಸೋನಿ' ಕಂಪನಿ ತನ್ನ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳಿಂದ ಫೋಟೋಗ್ರಫಿ ಪ್ರಿಯರ ಫೇವರೆಟ್ ಸಂಸ್ಥೆಯಾಗಿದೆ. ಈಗಾಗಲೇ ತನ್ನ ವೈವಿಧ್ಯಮಯ ಕ್ಯಾಮೆರಾಗಳನ್ನ ಪರಿಚಯಿಸಿರುವ ಸೋನಿ ಸೋನಿ ಆಲ್ಫಾ 7 S III ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸೋನಿ

ಹೌದು, ಸೋನಿ ಕಂಪೆನಿ ತನ್ನ ಆಲ್ಫಾ 7 S III ಕ್ಯಾಮೆರಾ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಮತ್ತು ಅತ್ಯಂತ ಜನಪ್ರಿಯ ಸೋನಿ A7S II ರ ಉತ್ತರಾಧಿಕಾರಿ ಆಗಿದೆ. ಅಲ್ಲದೆ ಇದು ಫ್ಲಿಪ್- ಟಚ್‌ಸ್ಕ್ರೀನ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಕ್ಯಾಮೆರಾ ಹೊಸ ಇಮೇಜ್ ಪ್ರೊಸೆಸರ್, 4k 120 ಎಫ್‌ಪಿಎಸ್ ವಿಡಿಯೋ ರೆಕಾರ್ಡಿಂಗ್, ಇತರ ವೃತ್ತಿಪರ ಶೂಟಿಂಗ್ ಮೋಡ್‌ಗಳೊಂದಿಗೆ ನವೀಕರಿಸಿದ ವಿನ್ಯಾಸವನ್ನು ಹೊಂದಿದೆ. ಇನ್ನುಳಿದಂತೆ ಈ ಕ್ಯಾಮೆರಾ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಆಲ್ಫಾ 7S III ಕ್ಯಾಮೆರಾ

ಸೋನಿ ಆಲ್ಫಾ 7S III ಕ್ಯಾಮೆರಾ ಹೊಸ ಬಯೋನ್ಜ್ ಎಕ್ಸ್‌ಆರ್ ಇಮೇಜ್ ಪ್ರೊಸೆಸರ್ ಮತ್ತು 12.1 ಮೆಗಾಪಿಕ್ಸೆಲ್ ಬ್ಯಾಕ್-ಲೈಮಿನೇಟೆಡ್ ಫುಲ್-ಫ್ರೇಮ್ ಎಕ್ಸೋರ್ ಆರ್ ಸಿಎಮ್ಒಎಸ್ ಇಮೇಜ್ ಸೆನ್ಸಾರ್ ಅನ್ನು ಒಳಗೊಂಡಿದೆ. ಅಲ್ಲದೆ ಇದರಲ್ಲಿ ಐಎಸ್ಒ ಶ್ರೇಣಿಯನ್ನು ಸ್ವಲ್ಪ ಸುಧಾರಿಸಲಾಗಿದೆ. ಈ ಹೊಸ ಕ್ಯಾಮೆರಾ ಈಗ 10 ಕೆ 4: 2: 2 ಬಣ್ಣದ ಡೆಪ್ತ್‌ನೊಂದಿಗೆ 120 fps‌ನಲ್ಲಿ 4k ವಿಡಿಯೋವನ್ನು ರೆಕಾರ್ಡ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಇದು 4k 60p 16-ಬಿಟ್ ರಾ ವಿಡಿಯೋ ಎಚ್‌ಡಿಎಂಐ ಔಟ್‌‌ಪುಟ್ ಸಾಮರ್ಥ್ಯವನ್ನು ಸಹ ಹೊಂದಿದೆ. ಜೊತೆಗೆ ಈ ಫುಲ್‌ ಫ್ರೇಮ್ ಕ್ಯಾಮೆರಾ 10fps ವರೆಗೆ ಸ್ಟಿಲ್ ಚಿತ್ರಗಳನ್ನು ಮತ್ತು ಸತತ 1,000 ಕ್ಕೂ ಹೆಚ್ಚು ಸಂಕ್ಷೇಪಿಸದ RAW ಇಮೇಜ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ.

ಸೋನಿ ಆಲ್ಫಾ 7S III

ಇನ್ನು ಸೋನಿ ಆಲ್ಫಾ 7S III ಫಾಸ್ಟ್ ಹೈಬ್ರಿಡ್ ಆಟೋ-ಫೋಕಸ್ ಫೀಚರ್ಸ್‌ ಅನ್ನು ಹೊಂದಿದ್ದು, ಇದು ಹಂತ-ಪತ್ತೆ ಮತ್ತು ಕಾಂಟ್ರಾಸ್ಟ್-ಡಿಟೆಕ್ಷನ್ ಅನ್ನು ಸಂಯೋಜಿಸುತ್ತದೆ. ಅಲ್ಲದೆ ಇದು 759 ಪಾಯಿಂಟ್ ಹಂತ-ಪತ್ತೆ ಎಎಫ್ ಸೆನ್ಸಾರ್‌ಗಳನ್ನು ಹೊಂದಿದ್ದು ಅದು 92% ಪ್ರತಿಶತದಷ್ಟು ಇಮೇಜ್ ಸೆನ್ಸಾರ್ ಅನ್ನು ಒಳಗೊಂಡಿದೆ. ಆಲ್ಫಾ 7 ಎಸ್ III ಹೆಚ್ಚು ಸುಧಾರಿತ ಹ್ಯಾಂಡ್ಹೆಲ್ಡ್ ಮೂವಿ ಶೂಟಿಂಗ್‌ಗಾಗಿ ಹೆಚ್ಚುವರಿ ಆಕ್ಟಿವ್ ಮೋಡ್‌ನೊಂದಿಗೆ 5-ಆಕ್ಸಿಸ್ ಆಪ್ಟಿಕಲ್ ಇನ್-ಬಾಡಿ ಇಮೇಜ್ ಸ್ಥಿರೀಕರಣವನ್ನು ಹೊಂದಿದೆ.

ಕ್ಯಾಮೆರಾ

ಇದಲ್ಲದೆ ಈ ಕ್ಯಾಮೆರಾದ 9.44 ಮಿಲಿಯನ್-ಡಾಟ್ ಒಎಲ್ಇಡಿ ಎಲೆಕ್ಟ್ರಾನಿಕ್ ವ್ಯೂಫೈಂಡರ್ ವಿಶ್ವದ ಅತ್ಯಂತ ಪ್ರಕಾಶಮಾನವಾದ ಮತ್ತು ದೊಡ್ಡದಾಗಿದೆ ಎಂದು ಸೋನಿ ಹೇಳಿದೆ. ಫುಲ್‌-ಫ್ರೇಮ್ ಕ್ಯಾಮೆರಾದ ಮೆನು ಸಿಸ್ಟಮ್ ಅನ್ನು ಟಚ್‌ಸ್ಕ್ರೀನ್‌ನೊಂದಿಗೆ ಕೆಲಸ ಮಾಡಲು ಮರುವಿನ್ಯಾಸಗೊಳಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೆಥರಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟರ್ ಸೂಪರ್‌ಸ್ಪೀಡ್ ಯುಎಸ್‌ಬಿ 5 ಜಿಬಿಪಿಎಸ್ ಡೇಟಾ ವರ್ಗಾವಣೆಯನ್ನು ಈ ಕ್ಯಾಮೆರಾ ಬೆಂಬಲಿಸಲಿದೆ. ಜೊತೆಗೆ ಈ ಕ್ಯಾಮೆರಾ ಎರಡು ಮೆಮೊರಿ ಕಾರ್ಡ್ ಸ್ಲಾಟ್‌ಗಳನ್ನು ಸಹ ಹೊಂದಿದೆ, ಇದು ಎಸ್‌ಡಿ ಮತ್ತು ಸಿಎಫ್‌ಎಕ್ಸ್‌ಪ್ರೆಸ್ ಟೈಪ್ ಎ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ.

ಸೋನಿ

ಇನ್ನು ಸೋನಿ ಆಲ್ಫಾ 7S III ಕ್ಯಾಮೆರಾದ ಕ್ಯಾಮೆರಾ ಬಾಡಿ ಬೆಲೆ 3,34,990 ರೂ. ಆಗಿದೆ. ಇನ್ನು ಸೋನಿಯ ಸಿಎಫ್‌ಎಕ್ಸ್‌ಪ್ರೆಸ್ ಟೈಪ್ ಎ ಮೆಮೊರಿ ಕಾರ್ಡ್‌ಗಳು 21,100ರೂ ಆಗಿದೆ. ಅಲ್ಲದೆ 80GB ಮತ್ತು 160GB ಸಾಮರ್ಥ್ಯಕ್ಕೆ ಕ್ರಮವಾಗಿ 40,990 ರೂ. ಹಾಗೂ ಸೋನಿಯ MRW-G 2 ಕಾರ್ಡ್ ರೀಡರ್ ಬೆಲೆ 13,700.ರೂ. ಆಗಿದೆ.

Best Mobiles in India

English summary
Sony Alpha 7S III or A7S III has just been launched in India. It's a full-frame mirrorless camera and the successor to the very popular Sony A7S II.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+