ದೇಶಿ ಮಾರುಕಟ್ಟೆಯಲ್ಲಿ ಸೋನಿ A8H ಸ್ಮಾರ್ಟ್‌ಟಿವಿ ಬಿಡುಗಡೆ!
ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿರುವ ಸೋನಿ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳ ಮೂಲಕವೂ ಸೈ ಎನಿಸಿಕೊಂಡಿದೆ. ಈಗಾಲೇ ಹಲವು ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿರುವ ಸೋನಿ ಕಂಪೆನಿ ಇದೀಗ ತನ್ನ ಹೊಸ ಸೋನಿ A8H ಅಲ್ಟ್ರಾ-ಹೆಚ್‌ಡಿ HDR ಒಎಲ್ಇಡಿ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಒಎಲ್ಇಡಿ ಟಿವಿ ಸೋನಿಯ ಪ್ರೀಮಿಯಂ ಟೆಲಿವಿಷನ್ ಶ್ರೇಣಿಯಲ್ಲಿ ಬಿಡುಗಡೆ ಆಗಿದೆ. ಇದು ಅಲ್ಟ್ರಾ-ಹೆಚ್‌ಡಿ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 65 ಇಂಚಿನ ಗಾತ್ರದಲ್ಲಿ ಬಿಡುಗಡೆ ಆಗಿದೆ. ಜೊತೆಗೆ ಸದ್ಯದಲ್ಲೇ 55 ಇಂಚಿನ ಸ್ಮಾರ್ಟ್‌ಟಿವಿ ಕೂಡ ಬಿಡುಗಡೆ ಆಗಲಿದೆ ಎಂದು ಸೋನಿ ಸಂಸ್ಥೆ ಹೇಳಿದೆ.

ಹೌದು, ಸೋನಿ ಕಂಪೆನಿ ತನ್ನ ಹೊಸ ಸೋನಿ A8H ಸ್ಮಾರ್ಟ್‌ಟಿವಿಯನ್ನು ಭಾರತದಲ್ಲಿ ಪರಿಚಯಿಸಿದೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ಎಚ್‌ಡಿಆರ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಟಿವಿ 65 ಇಂಚಿನ ಆವೃತ್ತಿಗೆ 2,79,990 ರೂ. ಬೆಲೆಯನ್ನು ಹೊಂದಿದ್ದು, ಸೋನಿ ಆಫ್‌ಲೈನ್ ಚಿಲ್ಲರೆ ಅಂಗಡಿಗಳು, ಪ್ರಮುಖ ಎಲೆಕ್ಟ್ರಾನಿಕ್ಸ್ ಮಳಿಗೆಗಳು, ಸೋನಿಯ ಆನ್‌ಲೈನ್ ಪೋರ್ಟಲ್ shopatsc.com ಮತ್ತು ಅಮೆಜಾನ್ ಮೂಲಕ ಲಭ್ಯವಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ A8H ಸ್ಮಾರ್ಟ್‌ಟಿವಿ 3840x2160-ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 65 ಇಂಚಿನ ಅಲ್ಟ್ರಾ-ಹೆಚ್‌ಡಿ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಹೆಚ್‌ಡಿಆರ್ ಡಾಲ್ಬಿ ವಿಷನ್ ಫಾರ್ಮ್ಯಾಟ್ ಅನ್ನು ಬೆಂಬಲಿಸುತ್ತದೆ. ಈ ಟಿವಿ ಸೋನಿಯ ಅಕೌಸ್ಟಿಕ್ ಸರ್ಫೇಸ್ ಆಡಿಯೊ ತಂತ್ರಜ್ಞಾನವನ್ನು ಬಳಸಿಕೊಂಡು ಧ್ವನಿ ಉತ್ಪಾದನೆಯೊಂದಿಗೆ ಟಿವಿ ಡಾಲ್ಬಿ ಅಟ್ಮೋಸ್ ವರೆಗೆ ವಿವಿಧ ಆಡಿಯೊ ಸ್ವರೂಪಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಸ್ಕ್ರೀನ್ ಸ್ವತಃ ಸ್ಪೀಕರ್ ಆಗಿದ್ದು, ಒಟ್ಟು 30W ಸೌಂಡ್ ಪ್ರೊಡಕ್ಷನ್ ಡ್ರೈವರ್ಸ್ ಅನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ಟಿವಿ ಕಂಪನಿಯ ಟ್ರಿಲುಮಿನೋಸ್ ಪಿಕ್ಚರ್ ವರ್ಧನೆ ತಂತ್ರಜ್ಞಾನದ ಜೊತೆಗೆ ಟಿವಿ ಸೋನಿಯ X1 ಅಲ್ಟಿಮೇಟ್ ಪಿಕ್ಚರ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಜೊತೆಗೆ ಆಂಡ್ರಾಯ್ಡ್ ಟಿವಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್ ಡೇಟಾಗಾಗಿ 16GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ. ಅಪ್ಲಿಕೇಶನ್‌ಗಳಿಗಾಗಿ ಇಂಟರ್‌ಬಿಲ್ಟ್ Chromecast, Google Assistant ಮತ್ತು Google Play Store ಅನ್ನು ಹೊರತುಪಡಿಸಿ, ಆಪಲ್ ಏರ್‌ಪ್ಲೇ 2 ಸೋನಿ A8H ನಲ್ಲಿ ಸಹ ಬೆಂಬಲಿತವಾಗಿದೆ. ಟಿವಿಯು ಪೂರ್ಣ-ಎಚ್‌ಡಿ ರೆಸಲ್ಯೂಶನ್‌ನಲ್ಲಿ ಗರಿಷ್ಠ 120Hz ಮತ್ತು 4K ನಲ್ಲಿ 60Hz ಅನ್ನು ಹೊಂದಿದೆ.

ಸದ್ಯ ಸೋನಿ A8H ಒಎಲ್ಇಡಿ ಸ್ಮಾರ್ಟ್‌ಟಿವಿಯ ಬೆಲೆ 65 ಇಂಚಿನ ಆವೃತ್ತಿಗೆ 2,79,990 ರೂ,ಆಗಿದ್ದು, ಭಾರತದಲ್ಲಿ ಪ್ರೀಮಿಯಂ ವಿಭಾಗದಲ್ಲಿ ಲಭ್ಯವಾಗಲಿದೆ. ಇನ್ನು ಈ ಸೋನಿ ಟಿವಿ ಸ್ಯಾಮ್‌ಸಂಗ್ ಮತ್ತು ಎಲ್‌ಜಿಯಂತಹ ಬ್ರಾಂಡ್‌ಗಳಿಂದ ಪ್ರೀಮಿಯಂ ವಿರುದ್ದ ಪೈಪೋಟಿಯನ್ನು ನೀಡಲಿದೆ.


Click it and Unblock the Notifications





