ಭಾರತದಲ್ಲಿ ಸೋನಿ ಅಲ್ಫಾ 1 ಫುಲ್‌ ಫ್ರೇಮ್‌ ಮಿರರ್‌ಲೆಸ್‌ ಕ್ಯಾಮೆರಾ ಅನಾವರಣ!

|

ಇತ್ತಿಚಿನ ದಿನಗಳಲ್ಲಿ ಕ್ಯಾಮೆರಾ ವಲಯ ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಆಪ್ಡೇಟ್‌ ಆದಂತೆ ಕ್ಯಾಮೆರಾ ವಲಯವೂ ಕೂಡ ಬದಲಾಗಿದೆ. ಇನ್ನು ಕ್ಯಾಮೆರಾ ಮಾರಕಟ್ಟೆಯಲ್ಲಿ ಸೋನಿ ಕಂಪೆನಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಸೋನಿ ಕಂಪೆನಿ ತನ್ನ ಹೊಸ ಸೋನಿ ಆಲ್ಫಾ 1 ಫುಲ್-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಕಂಪನಿಯು ತನ್ನ ಅತ್ಯಾಧುನಿಕ ಮತ್ತು ನವೀನ ಕ್ಯಾಮೆರಾ ಎಂದು ಹೆಸರಿಸಿದೆ.

ಸೋನಿ

ಹೌದು, ಸೋನಿ ಕಂಪೆನಿ ತನ್ನ ಹೊಸ ಸೋನಿ ಅಲ್ಫಾ 1 ಫುಲ್‌ ಫ್ರೇಮ್‌ ಮಿರರ್‌ಲೆಸ್‌ ಕ್ಯಾಮೆರಾವನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದು 50.1-ಮೆಗಾಪಿಕ್ಸೆಲ್ ಪೂರ್ಣ-ಫ್ರೇಮ್ ಸ್ಟ್ಯಾಕ್ಡ್ ಎಕ್ಸೋರ್ ಆರ್ಎಸ್ ಇಮೇಜ್ ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೆ ಇದು 8K 30FTS ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಸೋನಿ ಆಲ್ಫಾ 1OLED ಕ್ವಾಡ್-XGA ಎಲೆಕ್ಟ್ರಾನಿಕ್ ವ್ಯೂಫೈಂಡರ್‌ನೊಂದಿಗೆ ಬರುತ್ತದೆ. ಇದಲ್ಲದೆ ಕಂಪನಿಯು ತನ್ನ ಸುಧಾರಿತ ರಿಯಲ್-ಟೈಮ್ ಐ ಎಎಫ್ 30% ನಿರ್ವಹಿಸುತ್ತದೆ ಎಂದು ಹೇಳಿದೆ. ಇನ್ನುಳಿದಂತೆ ಈ ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ ಆಲ್ಫಾ 1

ಸೋನಿ ಆಲ್ಫಾ 1 3: 2 ಆಕಾರ ಅನುಪಾತದಲ್ಲಿ 49.7-ಮೆಗಾಪಿಕ್ಸೆಲ್‌ನಲ್ಲಿ 8,640x5,760 ಪಿಕ್ಸೆಲ್‌ಗಳನ್ನು ಸೆರೆಹಿಡಿಯಬಹುದು. ಸೋನಿ ಅಲ್ಫಾ 1 ಫುಲ್‌ ಫ್ರೇಮ್‌ ಮಿರರ್‌ಲೆಸ್‌ ಕ್ಯಾಮೆರಾ ಫೋಕಸ್ ಅನ್ನು ಸ್ವಯಂಚಾಲಿತವಾಗಿ ನಿರ್ವಹಿಸಲು ಆಲ್ಫಾ 1 AI- ಆಧಾರಿತ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಬಳಸುತ್ತದೆ. ಇನ್ನು ಈ ಕ್ಯಾಮೆರಾ 50.1-ಮೆಗಾಪಿಕ್ಸೆಲ್ 35mm ಫುಲ್‌-ಫ್ರೇಮ್ ಸ್ಟ್ಯಾಕ್ ಮಾಡಿದ CMOS ಸೆನ್ಸಾರ್‌ ಅನ್ನು ಹೊಂದಿದೆ. ಅಲ್ಲದೆ ಇಮೇಜ್ ರೆಸ್ಪಾನ್ಸ್‌ಗೆ ಕಂಪನಿಯ ಬಯೋನ್ Z ಎಕ್ಸ್ಆರ್ ಎಂಜಿನ್ ಅನ್ನು ಬಳಸಲಾಗಿದೆ. ಇದು AF/AE ಟ್ರ್ಯಾಕಿಂಗ್‌ನೊಂದಿಗೆ 30 fps ನಿರಂತರ ಶೂಟಿಂಗ್ ಮಾಡಬಹುದು ಮತ್ತು ವೇಗದ ಹೈಬ್ರಿಡ್ ಆಟೋ-ಫೋಕಸ್ ಹೊಂದಿದೆ.

ಕ್ಯಾಮೆರಾ

ಇನ್ನು ಈ ಫುಲ್‌-ಫ್ರೇಮ್ ಕ್ಯಾಮೆರಾ 8K 30fps ಮತ್ತು 4K 120fpsನಲ್ಲಿ ISO ವ್ಯಾಪ್ತಿಯ 100 ರಿಂದ 32,000 ವರೆಗೆ ರೆಕಾರ್ಡ್ ಮಾಡಬಹುದು. ಇದಲ್ಲದೆ ಸೋನಿ ಆಲ್ಫಾ 1 1.6cm ಎಲೆಕ್ಟ್ರಾನಿಕ್ ವ್ಯೂಫೈಂಡರ್ ಮತ್ತು 2.95-ಇಂಚಿನ ಟಚ್ TFT ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಸ್ಥಿರೀಕರಣಕ್ಕಾಗಿ, ಕ್ಯಾಮೆರಾ 5-ಅಕ್ಷದ ಪರಿಹಾರದೊಂದಿಗೆ ಇಮೇಜ್ ಸೆನ್ಸಾರ್-ಶಿಫ್ಟ್ ಕಾರ್ಯವಿಧಾನದೊಂದಿಗೆ ಬರುತ್ತದೆ. ಇದರಲ್ಲಿ ದೀರ್ಘ ಮಾನ್ಯತೆ ಶಬ್ದ ಕಡಿತವೂ ಇದೆ. ಫುಲ್‌-ಫ್ರೇಮ್ ಕ್ಯಾಮೆರಾದಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-ಯುಎಸ್ಬಿ ಪೋರ್ಟ್, ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ ವೈ-ಫೈ, 3.5 ಎಂಎಂ ಮೈಕ್ ಟರ್ಮಿನಲ್ ಮತ್ತು ಲ್ಯಾನ್ ಟರ್ಮಿನಲ್ ಸೇರಿವೆ. ಇದು ಅಂತರ್ಗತ ಮೈಕ್ರೊಫೋನ್ ಮತ್ತು ಮೊನೌರಲ್ ಸ್ಪೀಕರ್‌ನೊಂದಿಗೆ ಬರುತ್ತದೆ.

ಸೋನಿ

ಆಲ್ಫಾ 1 ನಲ್ಲಿನ ಬ್ಯಾಟರಿಯನ್ನು ವ್ಯೂಫೈಂಡರ್‌ನೊಂದಿಗೆ ಸುಮಾರು 430 ಶಾಟ್‌ಗಳಿಗೆ ಮತ್ತು ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಸುಮಾರು 530 ಶಾಟ್‌ಗಳಿಗೆ ರೇಟ್ ಮಾಡಲಾಗಿದೆ ಎಂದು ಸೋನಿ ಹೇಳಿದೆ. ಇದು ವ್ಯೂಫೈಂಡರ್ ಬಳಸಿ ಸುಮಾರು 145 ನಿಮಿಷಗಳವರೆಗೆ ಮತ್ತು ಎಲ್‌ಸಿಡಿ ಪರದೆಯೊಂದಿಗೆ ಸುಮಾರು 150 ನಿಮಿಷಗಳವರೆಗೆ ನಿರಂತರವಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಇನ್ನು ಸೋನಿ ಆಲ್ಫಾ 1 ಅನ್ನು ಭಾರತೀಯ ವೆಬ್‌ಸೈಟ್‌ನಲ್ಲಿ "ಶೀಘ್ರದಲ್ಲೇ ಲಭ್ಯವಿದೆ" ಎಂದು ಪಟ್ಟಿ ಮಾಡಲಾಗಿದೆ ಮತ್ತು ಬೆಲೆಗಳ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
Sony Alpha 1 full-frame mirrorless camera launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X