ಸೋನಿ ಸಂಸ್ಥೆಯಿಂದ ಮತ್ತೊಂದು ಮನಮೋಹಕ ಕ್ಯಾಮೆರಾ ಬಿಡುಗಡೆ!

|

ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾದ ಸೋನಿ ಕಂಪೆನಿ ತನ್ನ ವೈವಿಧ್ಯಮಯ ಪ್ರಾಡಕ್ಟ್‌ಗಳ ಮೂಲಕ ಗುರುತಿಸಿಕೊಂಡಿದೆ. ಟೆಕ್‌ ವಲಯಲ್ಲಿ ತನ್ನದೇ ಆದ ಪ್ರಾಡಕ್ಟ್‌ಗಲನ್ನ ಪರಿಚಯಿಸಿರುವ ಸೋನಿ ಕ್ಯಾಮೆರಾ ಪ್ರಪಂಚದಲ್ಲಿಯೂ ಉತ್ತಮ ಕ್ಯಾಮೆರಾಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇಗಾಗಲೇ ಹಲವು ಕ್ಯಾಮೆರಾಗಳನ್ನ ಪರಿಚಯಿಸಿರುವ ಸೋನಿ ಇದೀಗ ಆಲ್ಫಾ 7S III ಫುಲ್‌ಫ್ರೇಮ್‌ ಮಿರರ್‌ಲೆಸ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.

ಸೋನಿ

ಹೌದು, ಸೋನಿ ಕಂಪೆನಿ ತನ್ನ ಹೊಸ ಆಲ್ಫಾ 7S III ಫುಲ್‌ಫ್ರೇಮ್‌ ಮಿರರ್‌ಲೆಸ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಇದು ಹೊಸ ಇಮೇಜ್ ಪ್ರೊಸೆಸಿಂಗ್ ಸೇರಿದಂತೆ, ಹೊಸ ಮತ್ತು ಆಡ್ವಾನ್ಸ್‌ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಕ್ಯಾಮೆರಾದಲ್ಲಿ ಎಂಜಿನ್, ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಮತ್ತು ಗುಂಡಿಗಳ ನಿಯೋಜನೆಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ. ಇದಲ್ಲದೆ ಸೋನಿ ಆಲ್ಫಾ 7S III ನಲ್ಲಿ ಹೊಸ ಮತ್ತು ಸುಧಾರಿತ ಇಮೇಜ್ ಸೆನ್ಸಾರ್‌ನೊಂದಿಗೆ 4K ವಿಡಿಯೋವನ್ನು ಇನ್ನು ಹೆಚ್ಚಿನ fpsನಲ್ಲಿ ರೆಕಾರ್ಡ್ ಮಾಡಬಹುದಾಗಿದೆ. ಇನ್ನು ಈ ಕ್ಯಾಮೆರಾ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಆಲ್ಫಾ 7S III ಕ್ಯಾಮೆರಾ

ಸೋನಿ ಆಲ್ಫಾ 7S III ಕ್ಯಾಮೆರಾ

ಸೋನಿ ಆಲ್ಫಾ 7s III ಹೊಸ ಬಯೋನ್ಜ್ ಎಕ್ಸ್‌ಆರ್ ಇಮೇಜ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಇದು 12.1 ಮೆಗಾಪಿಕ್ಸೆಲ್ ಬ್ಯಾಕ್-ಲೈಮಿನೇಟೆಡ್ ಫುಲ್-ಫ್ರೇಮ್ ಎಕ್ಸೋರ್ ಆರ್ ಸಿಎಮ್ಒಎಸ್ ಇಮೇಜ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಖಲೆದ ಬಾರಿ ಬಿಡುಗಡೆ ಆಗಿದ್ದ ಆಲ್ಫಾ 7 ಎಸ್ II ನಲ್ಲಿ ಇದ್ದಂತಹ ಐಎಸ್ಒ ಶ್ರೇಣಿಯನ್ನು ಸುಧಾರಿಸಲಾಗಿದೆ. ಇದಲ್ಲದೆ ಮಾರ್ಕ್ III ಈಗ 10k 4: 2: 2 ಬಣ್ಣದ ಡೆಪ್ತ್‌ನೊಂದಿಗೆ 120ಪಿ ಯಲ್ಲಿ 4k ವಿಡಿಯೋವನ್ನು ರೆಕಾರ್ಡ್ ಮಾಡಬಹುದಾಗಿದೆ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾದಲ್ಲಿ 4K 60P 16-ಬಿಟ್ ರಾ ವಿಡಿಯೋ ಎಚ್‌ಡಿಎಂಐ output ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಅಲ್ಲದೆ ಇದು ಆಲ್ಫಾ ಸರಣಿಯಲ್ಲಿ ಮೊದಲ ಬಾರಿಗೆ ಲಬ್ಯವಾಗಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಫುಲ್‌ ಫ್ರೇಮ್‌ ಕ್ಯಾಮೆರಾ ಸತತ 1,000 ಕ್ಕೂ ಹೆಚ್ಚು uncompressed RAW ಚಿತ್ರಗಳನ್ನು 10fps ವರೆಗೆ ಸ್ಟಿಲ್ ಚಿತ್ರಗಳನ್ನು ತೆಗೆದುಕೊಳ್ಳಬಹುದಾಗಿದೆ. ಇನ್ನು ಸೋನಿ A7s ಮಾರ್ಕ್ III ಹೊಸದಾಗಿ ಪ್ರಾರಂಭಿಸಲಾದ ಸಿಎಫ್‌ಎಕ್ಸ್‌ಪ್ರೆಸ್ ಟೈಪ್ ಎ ಮೆಮೊರಿ ಕಾರ್ಡ್‌ಗಳನ್ನು ಬಳಸುತ್ತದೆ.

ಕ್ಯಾಮೆರಾ

ಇದಲ್ಲದೆ ಈ ಸಿಎಫ್‌ಎಕ್ಸ್‌ಪ್ರೆಸ್ ಟೈಪ್ ಕಾರ್ಡ್‌ಗಳಲ್ಲಿನ ಡೇಟಾ ವರ್ಗಾವಣೆ ವೇಗವು ಎಸ್‌ಡಿ ಕಾರ್ಡ್‌ಗಳಿಗಿಂತ 1.7 ಪಟ್ಟು ವೇಗವಾಗಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ 700MBps ಬರಹ ಮತ್ತು 800MBps ವೇಗವನ್ನು ಕಾಣಬಹುದಾಗಿದೆ. ಅಲ್ಲದೆ ಇದು 80GB ಮತ್ತು 160GB ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಇದಲ್ಲದೆ ಈ ಕ್ಯಾಮೆರಾ ಫಾಸ್ಟ್ ಹೈಬ್ರಿಡ್ ಆಟೋ-ಫೋಕಸ್ (ಎಎಫ್) ಫೀಚರ್ಸ್‌ ಅನ್ನು ಹೊಂದಿದೆ. ಇದು ಹಂತ-ಪತ್ತೆ ಮತ್ತು ಕಾಂಟ್ರಾಸ್ಟ್-ಡಿಟೆಕ್ಷನ್ ಅನ್ನು ಸಂಯೋಜಿಸುತ್ತದೆ, ಕ್ಯಾಮೆರಾವು ವಿಶಾಲ ಪ್ರದೇಶದಲ್ಲಿ ವಿಷಯಗಳನ್ನು ವೇಗವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

ಸೆನ್ಸಾರ್‌

ಅಲ್ಲದೆ ಇದು 759 ಪಾಯಿಂಟ್ ಹಂತ-ಪತ್ತೆ ಎಎಫ್ ಸೆನ್ಸಾರ್‌ ಅನ್ನು ಹೊಂದಿದ್ದು, ಇದು 92% ಇಮೇಜ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಇದನ್ನು ಹೆಚ್ಚು ಸುಧಾರಿತ ಹ್ಯಾಂಡ್ಹೆಲ್ಡ್ ಮೂವಿ ಶೂಟಿಂಗ್ಗಾಗಿ ಹೆಚ್ಚುವರಿ ಆಕ್ಟಿವ್ ಮೋಡ್ನೊಂದಿಗೆ 5-ಆಕ್ಸಿಸ್ ಆಪ್ಟಿಕಲ್ ಇನ್-ಬಾಡಿ ಇಮೇಜ್ ಸ್ಥಿರೀಕರಣವನ್ನು ಹೊಂದಿದೆ. ಈ ಕ್ಯಾಮೆರಾದ 9.44 ಮಿಲಿಯನ್-ಡಾಟ್ ಒಎಲ್ಇಡಿ ಎಲೆಕ್ಟ್ರಾನಿಕ್ ವ್ಯೂಫೈಂಡರ್ ವಿಶ್ವದ ಅತ್ಯಂತ ಪ್ರಕಾಶಮಾನವಾದ ಮತ್ತು ದೊಡ್ಡದಾಗಿದೆ ಎಂದು ಸೋನಿ ಹೇಳಿದೆ. ಇದರಲ್ಲಿ ಮೆನು ಸಿಸ್ಟಮ್ ಅನ್ನು ಟಚ್‌ಸ್ಕ್ರೀನ್‌ ನೊಂದಿಗೆ ಕೆಲಸ ಮಾಡಲು ಮರುವಿನ್ಯಾಸಗೊಳಿಸಲಾಗಿದೆ.

ಸೋನಿ

ಸೋನಿ ಎ 7 ಎಸ್ ಮಾರ್ಕ್ III ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೆಥರಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟರ್ ಸೂಪರ್‌ಸ್ಪೀಡ್ ಯುಎಸ್‌ಬಿ 5 ಜಿಬಿಪಿಎಸ್ ಡೇಟಾ ವರ್ಗಾವಣೆಯನ್ನು ಬೆಂಬಲಿಸುತ್ತದೆ.

Most Read Articles
Best Mobiles in India

English summary
Sony Alpha 7S III aka Sony a7S Mark III full-frame mirrorless camera has been announced by the company as a long awaited follow-up to the Alpha 7S II from 2015.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X