Home
ಸುದ್ದಿಜಾಲ

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಅನಾವರಣ! ಫೀಚರ್ಸ್‌ ಹೇಗಿದೆ ಗೊತ್ತಾ?

ಜಾಗತಿಕ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿ ತನ್ನ ಗುಣಮಟ್ಟದ ಡಿವೈಸ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಒಂದು ಕಾಲದಲ್ಲಿ ಟೆಕ್‌ ವಲಯವನ್ನೇ ನಡುಗಿಸಿದ್ದ ಸೋನಿ ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಟಿವಿ ವಲಯದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಸೃಷ್ಟಿಸಿದೆ. ಅದರ ಮುಂದುವರೆದ ಭಾಗವಾಗಿ ಸೋನಿ ಕಂಪೆನಿ ಹೊಸ 2023 Bravia XR ಶ್ರೇಣಿಯನ್ನು ಪರಿಚಯಿಸಿದೆ.

ಹೌದು, ಸೋನಿ ಕಂಪೆನಿ ಹೊಸದಾಗಿ 2023 Bravia XR ಶ್ರೇಣಿಯನ್ನು ಅನಾವರಣಗೊಳಿಸಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು ತನ್ನ ಇಮೇಜ್ ಪ್ರೊಸೆಸಿಂಗ್‌ನಿಂದಾಗಿ ಗಮನಸೆಳೆದಿವೆ. ಅಲ್ಲದೆ ಈ ಸ್ಮಾರ್ಟ್‌ಟಿವಿಗಳು ಸೋನಿ ಕಾಗ್ನಿಟಿವ್ ಪ್ರೊಸೆಸರ್ ಎಕ್ಸ್‌ಆರ್ ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಅನಾವರಣ! ಫೀಚರ್ಸ್‌ ಹೇಗಿದೆ ಗೊತ್ತಾ?

ಸೋನಿ ಕಂಪೆನಿ 2023 Bravia XR ಶ್ರೇಣಿಯಲ್ಲಿ ನಾಲ್ಕು ಹೊಸ ಮಾದರಿಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು ಸೋನಿ X95L ಮಿನಿ LED, ಸೋನಿ X90L Full Array LED, ಸೋನಿ A95L QD-OLED ಮತ್ತು ಸೋನಿ A80L OLED ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳಲ್ಲಿ ಸಿನಿಮಾ ವಿಕ್ಷಣೆಗೆ, ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ಎಂಜಾಯ್‌ ಮಾಡುವುದಕ್ಕೆ, ಗೇಮಿಂಗ್ ಅನ್ನು ಅತ್ಯುತ್ತಮ ರೀತಿಯನ್ನು ಆನಂದಿಸುವುದಕ್ಕೆ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಅಳವಡಿಸಿದೆ.

ಇನ್ನು ಸೋನಿ 2023 BRAVIA XR ಶ್ರೇಣಿಯ ಸ್ಮಾರ್ಟ್‌ಟಿವಿಗಳು ಹೊಸ XR ಕ್ಲಿಯರ್ ಇಮೇಜ್ ಟೆಕ್ನಾಲಜಿಯನ್ನು ಒಳಗೊಂಡಿವೆ. ಇದಕ್ಕಾಗಿ ಕಾಗ್ನಿಟಿವ್ ಪ್ರೊಸೆಸರ್ XRTM ವೇಗವನ್ನು ಪಡೆದುಕೊಂಡಿದೆ. ಈ ಪ್ರೊಸೆಸರ್‌ ಶಬದ್ ಕಡಿತ ಮತ್ತು ಕ್ಲಾರಿಟಿ ವಿಥ್‌ ಮೋಶನ್‌ ಅನ್ನು ಸುಧಾರಿಸಲಿದೆ. ಅಲ್ಲದೆ ಬ್ಲರ್‌ ಅನ್ನು ಕಡಿಮೆ ಮಾಡಲಿದ್ದು, ಕ್ರಿಯೆಟಿಂಗ್‌ ಸೀನ್ಸ್‌ ಬರ್ಸ್ಟಿಂಗ್‌ ವಿಥ್‌ ಆಕ್ಷನ್‌ಗಳನ್ನು ಹೊಂದಿದೆ. ಜೊತೆಗೆ ಅಕೌಸ್ಟಿಕ್ ಸೆಂಟರ್ ಸಿಂಕ್ ಅನ್ನು ಕೂಡ ಈ ಸ್ಮಾರ್ಟ್‌ಟಿವಿಗಳನ್ನು ಕಾಣಬಹುದಾಗಿದೆ.

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಅನಾವರಣ! ಫೀಚರ್ಸ್‌ ಹೇಗಿದೆ ಗೊತ್ತಾ?

ಸೋನಿ ಕಂಪೆನಿ 2023 Bravia XR ಶ್ರೇಣಿಯ ಎಲ್ಲಾ ಟಿವಿಗಳು 120Hz ನಲ್ಲಿ 4K ಗೇಮಿಂಗ್ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ ಈ ಸ್ಮಾರ್ಟ್‌ಟಿವಿಗಳು ಕೇವಲ ಎರಡು HDMI 2.1 ಪೋರ್ಟ್‌ಗಳನ್ನು ಒಳಗೊಂಡಿವೆ. ಆದರೆ ಹೊಸ ಗೇಮಿಂಗ್ ಸಾಫ್ಟ್‌ವೇರ್ ಫೀಚರ್ಸ್‌ಗಳು Xbox ವರೆಗೆ ವಿಸ್ತರಿಸಲಾಗಿದೆ. ಇದರಲ್ಲಿ ಸೋನಿ X90L ಸ್ಮಾರ್ಟ್‌ಟಿವಿ ಫುಲ್‌ ರೇಂಜ್‌ ಲೋಕಲ್‌ ಡಿಮ್ಮಿಂಗ್‌ LED ಟಿವಿ ಎನಿಸಿಕೊಂಡಿದೆ. ಇದರಲ್ಲಿ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಕ್ರಮವಾಗಿ 60% ಮತ್ತು 30% ವರೆಗೆ ಹೆಚ್ಚಿಸಲಾಗಿದೆ.

ಇನ್ನು ಸೋನಿ A80L OLED ಸ್ಮಾರ್ಟ್‌ಟಿವಿ 83 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 10% ಬ್ರೈಟ್‌ನೆಸ್‌ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. ಆದರೆ ಈ ಸರಣಿಯ QD-OLED A95L ಸ್ಮಾರ್ಟ್‌ಟಿವಿ ಅತ್ಯಂತ ಪ್ರಭಾವಶಾಲಿ ಟಿವಿಯಾಗಿದ್ದು, 200% ಉತ್ತಮ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಈ ಸ್ಮಾರ್ಟ್‌ಟಿವಿಗಳು ಹೆಚ್ಚುವರಿಯಾಗಿ, ಗೇಮಿಂಗ್‌ಗೆ ಅನುಗುಣವಾಗಿ ಸೆಟ್ಟಿಂಗ್ಸ್‌ ಮೆನುವನ್ನು ಹೊಂದಿವೆ. ಅಲ್ಲದೆ ಕಾಂಟ್ರಾಸ್ಟ್ ಹೊಂದಾಣಿಕೆಗಳು ಮತ್ತು ಆನ್-ಸ್ಕ್ರೀನ್ ಕ್ರಾಸ್‌ಹೇರ್ ಅನ್ನು ಸುಲಭವಾಗಿ ಟಾಗಲ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಅನಾವರಣ! ಫೀಚರ್ಸ್‌ ಹೇಗಿದೆ ಗೊತ್ತಾ?

ಒಟ್ಟಾರೆ ಸೋನಿ 2023 ಬ್ರಾವಿಯಾ ಎಕ್ಸ್‌ಆರ್ ಟಿವಿಗಳು ತಮ್ಮ ಹಿಂದಿನ ಸರಣಿಯ ಸ್ಮಾರ್ಟ್‌ಟಿವಿಗಳಿಗಿಂತ ಸಾಧಾರಣವಾದ ಅಪ್ಡೇಟ್‌ಗಳನ್ನು ಮಾತ್ರವೇ ಪಡೆದುಕೊಂಡಿವೆ. ಈ ಸ್ಮಾರ್ಟ್‌ಟಿವಿಗಳು ಇಕೋ ಡ್ಯಾಶ್‌ಬೋರ್ಡ್ ಮತ್ತು ಗೇಮಿಂಗ್ ಸೆಟ್ಟಿಂಗ್ಸ್‌ ಮೆನುವಿನ ಪರಿಚಯದೊಂದಿಗೆ ಇಮೇಜ್ ಪ್ರೊಸೆಸಿಂಗ್ ಮತ್ತು ಗೇಮಿಂಗ್ ಸಾಮರ್ಥ್ಯಗಳ ಮೇಲೆ ಹೆಚ್ಚಿನ ಒತ್ತನ್ನು ನೀಡಿದೆ. ಆದರಿಂದ ಈ ಸ್ಮಾರ್ಟ್‌ಟಿವಿಗಳಲ್ಲಿ ಗ್ರಾಹಕರು ವರ್ಧಿತ ವೀಕ್ಷಣೆಯ ಅನುಭವವನ್ನು ನೀಡಲಿವೆ.

Best Mobiles in India

English summary
Sony’s Cognitive Processor XR is said to be what sets its TVs apart from the competition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+