ಸೋನಿಯಿಂದ ಹೊಸ 4k ಅಲ್ಟ್ರಾ HD LED ಟಿವಿ ಬಿಡುಗಡೆ! ಬೆಲೆ ಎಷ್ಟು?
ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿಯ ಟಿವಿಗಳಿಗೆ ಭಾರಿ ಬೇಡಿಕೆಯಿದೆ. ಅದರಂತೆ ಸೋನಿ ಕಂಪೆನಿ ಕೂಡ ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ತನ್ನ ಹೊಸ ಸೋನಿ ಬ್ರಾವಿಯಾ X70L TV ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು 43-ಇಂಚಿನ ಮತ್ತು 50-ಇಂಚಿನ ಸ್ಮಾರ್ಟ್‌ಟಿವಿಗಳನ್ನು ಒಳಗೊಂಡಿದೆ.
ಹೌದು, ಸೋನಿ ಬ್ರಾವಿಯಾ X70L TV ಸರಣಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. 4k ಅಲ್ಟ್ರಾ HD LED ಡಿಸ್‌ಪ್ಲೇಯೊಂದಿರುವ ಈ ಸರಣಿಯು ನವೀನ ಮಾದರಿಯ ವಿನ್ಯಾಸದೊಂದಿಗೆ ಗಮನಸೆಳೆದಿದೆ. ಇನ್ನು ಸ್ಮಾರ್ಟ್‌ಟಿವಿಗಳು ಗೂಗಲ್ ಟಿವಿ, ಆಪಲ್ ಏರ್‌ಪ್ಲೇ, ಆಪಲ್ ಹೋಮ್‌ಕಿಟ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳು ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ X70L TV ವಿಶೇಷತೆ ಏನು?
ಸೋನಿ ಬ್ರಾವಿಯಾ X70L TV ಟಿವಿಗಳು ಬಳಕೆದಾರರಿಗೆ ಹೆಚ್ಚು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವ ನೀಡಲಿವೆ. ಇದಕ್ಕಾಗಿ ಕಿರಿದಾದ ಬೆಜೆಲ್ ಅನ್ನು ಒಳಗೊಂಡಿವೆ. ಇನ್ನು ಈ ಸ್ಮಾರ್ಟ್‌ಟಿವಿಗಳು 43-ಇಂಚಿನ ಮತ್ತು 50-ಇಂಚಿನ ಆಯ್ಕೆಯಲ್ಲಿ ಬರಲಿವೆ. ಸ್ಮಾರ್ಟ್‌ಟಿವಿಗಳು X1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳಲ್ಲಿ ವಿವರಗಳನ್ನು ಹೆಚ್ಚಿಸಲು ಸುಧಾರಿತ ಅಲ್ಗಾರಿದಮ್‌ಗಳನ್ನು ಬಳಸಲಾಗಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.
ಸೋನಿ ಸಂಸ್ಥೆಯ ಈ ಹೊಸ TV ಯು ರಿಯಾಲಿಟಿ ಪ್ರೊ ಫೀಚರ್ಸ್ ಹೊಂದಿದೆ. ಇದರಿಂದ 2K ಮತ್ತು ಫುಲ್ HD ಯಿಂದ 4K ರೆಸಲ್ಯೂಶನ್‌ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಮೊಷನ್‌ಫ್ಲೋ XR ಟೆಕ್ನಾಲಜಿಯು ಸುಗಮವಾದ ಪ್ಲೇಬ್ಯಾಕ್ ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ರಿಮೋಟ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಆನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಸೋನಿಲೈವ್, ಯೂಟ್ಯೂಬ್‌ಗಾಗಿ ಬಟನ್‌ಗಳನ್ನು ಸಹ ನೀಡಲಾಗಿದೆ.

ಇದಲ್ಲದೆ ಸೋನಿ ಬ್ರಾವಿಯಾ X70L ಸರಣಿಯು ಡಾಲ್ಬಿ ಆಡಿಯೋ ಬೆಂಬಲವನ್ನು ಪಡೆದಿದ್ದು, 20-ವ್ಯಾಟ್ ಅವಳಿ "ಓಪನ್-ಬ್ಯಾಫಲ್" ಸ್ಪೀಕರ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಟಿವಿಯ ಕ್ಲಿಯರ್ ಫೇಸ್ ಟೆಕ್ನಾಲಜಿಯು ಸ್ಪೀಕರ್ ಪ್ರತಿಕ್ರಿಯೆಯಲ್ಲಿನ ತಪ್ಪುಗಳನ್ನು ವಿಶ್ಲೇಷಿಸಲು ಮತ್ತು ಸರಿದೂಗಿಸಲು ಕಂಪ್ಯೂಟರ್ ಮಾದರಿಯನ್ನು ಬಳಸುತ್ತದೆ. ಜೊತೆಗೆ ಸ್ಪೀಕರ್ ಫ್ರಿಕ್ವೆನ್ಸಿಯನ್ನು ಸ್ಯಾಂಪಲ್ ಮಾಡುವ ಬಳಕೆದಾರರ ಅನುಭವ ಇನ್ನಷ್ಟು ಉತ್ತಮವಾಗಿರುವಂತೆ ಮಾಡಲಿದೆ.
ಇನ್ನು ಭಾರತದಲ್ಲಿ ಸೋನಿ ಬ್ರಾವಿಯಾ X70L ಸರಣಿಯ 43 ಇಂಚಿನ ಸ್ಮಾರ್ಟ್‌ಟಿವಿಯು 59,900ರೂ. ಬೆಲೆ ಹೊಂದಿದೆ. ಹಾಗೆಯೇ 50 ಇಂಚಿನ Sony KD-50X70L ಬೆಲೆ 74,900 ರೂ. ಹೊಂದಿದೆ. ಈ ಸ್ಮಾರ್ಟ್‌ಟಿವಿಗಳು ಭಾರತದಲ್ಲಿನ ಎಲ್ಲಾ ಸೋನಿ ಸೆಂಟರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.
ಇತ್ತೀಚಿಗೆ ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿಗಳನ್ನು ಕೂಡ ಪರಿಚಯಿಸಿದೆ. ಈ ಸ್ಮರ್ಟ್‌ಟಿವಿಗಳು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಬರಲಿವೆ. ಗಾತ್ರದ ಆಯ್ಕೆಗೆ ತಕ್ಕಂತೆ ಇವುಗಳನ್ನು ಸೋನಿ KD-43X75L, KD-50X75L, KD-55X75L, ಮತ್ತು KD-65X75L ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಟಿವಿಗಳು ಮಾದರಿಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 4K ಪ್ರೊಸೆಸರ್ X1, 4K X-ರಿಯಾಲಿಟಿ ಪ್ರೊ ಮತ್ತು 20W ಸ್ಪೀಕರ್‌ಗಳನ್ನು ಹೊಂದಿವೆ.
ಇನ್ನು ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿಗಳು ಎಕ್ಸ್-ಪ್ರೊಟೆಕ್ಷನ್ PRO ನೊಂದಿಗೆ ನಿರ್ಮಿಸಲಾಗಿದೆ. ಇದು ಧೂಳು, ತೇವಾಂಶ, ವಿದ್ಯುತ್ ಉಲ್ಬಣಗಳು ಮತ್ತು ಮಿಂಚಿನ ಹೊಡೆತಗಳ ವಿರುದ್ಧ ರಕ್ಷಣೆ ನೀಡಲಿದೆ. ಅಂದರೆ ಮಳೆ ಗುಡುಗು ಬರುವ ಸಮಯದಲ್ಲಿಯೂ ಕೂಡ ಸ್ಮಾರ್ಟ್‌ಟಿವಿಗಳನ್ನು ಆಫ್ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ ಎಂದು ಸೋನಿ ಕಂಪೆನಿ ಹೇಳಿದೆ. ಇದಲ್ಲದೆ ಡೈರೆಕ್ಟ್ LED ಬ್ಯಾಕ್‌ಲೈಟಿಂಗ್‌ನೊಂದಿಗೆ LCD ಸ್ಕ್ರೀನ್ ಹೊಂದಿದೆ.


Click it and Unblock the Notifications








