ಭಾರತದಲ್ಲಿ ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ! ವಿಶೇಷತೆ ಏನ್‌ ಗೊತ್ತಾ?

|

ಗುಣಮಟ್ಟದ ಸ್ಮಾರ್ಟ್‌ಟಿವಿಗಳಿಗೆ ಸೋನಿ ಕಂಪೆನಿ ಪ್ರಸಿದ್ಧಿ ಪಡೆದುಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಸೋನಿ ಬ್ರಾವಿಯಾ X75K ಸ್ಮಾರ್ಟ್ ಟಿವಿ ಸರಣಿಯನ್ನು ಭಾರತದಲ್ಲಿ ಪರಿಚಯಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ನಾಲ್ಕು ವಿಭಿನ್ನ ಮಾದರಿಯ ಡಿಸ್‌ಪ್ಲೇ ಗಾತ್ರಗಳಲ್ಲಿ ಲಭ್ಯವಿದೆ. ಈ ಡಿಸ್‌ಪ್ಲೇ 3,840 x 2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿವೆ. ಇನ್ನು ಸೋನಿ ಬ್ರಾವಿಯ X75K ಸ್ಮಾರ್ಟ್ ಟಿವಿ ಸರಣಿಯು ಸೋನಿ X1 ಪ್ರೊಸೆಸರ್‌ ಬಲದಿಂದ ಕಾರ್ಯನಿರ್ವಹಿಸಲಿದೆ. ಇದು ಡಾಲ್ಬಿ ಆಡಿಯೊದೊಂದಿಗೆ ಎರಡು 10W ಸ್ಪೀಕರ್‌ಗಳನ್ನು ಹೊಂದಿದೆ.

ಸೋನಿ ಬ್ರಾವಿಯಾ X75K

ಹೌದು, ಸೋನಿ ಕಂಪನಿ ಭಾರತದಲ್ಲಿ ಸೋನಿ ಬ್ರಾವಿಯಾ X75K ಸ್ಮಾರ್ಟ್ ಟಿವಿ ಸರಣಿ ಪರಿಚಯಿಸಿದೆ. ಈ ಸ್ಮಾರ್ಟ್‌ಟಿವಿ ಫುಲ್‌ HD ಮತ್ತು 2K ರೆಸಲ್ಯೂಶನ್‌ನಲ್ಲಿ ಚಿತ್ರೀಕರಿಸಲಾದ ವೀಡಿಯೊಗಳ ಉನ್ನತೀಕರಣವನ್ನು ನೀಡುತ್ತದೆ. ಇದು ಗೂಗಲ್‌ ಟಿವಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಗೂಗಲ್‌ ಅಸಿಸ್ಟೆಂಟ್‌ ಬೆಂಬಲದೊಂದಿಗೆ ಬರಲಿದೆ. ಜೊತೆಗೆ ಕ್ರೋಮಾಕಾಸ್ಟ್‌, ಏರ್‌ಪ್ಲೇ ಮತ್ತು ಹೋಮ್‌ಕಿಟ್‌ ಇಂಟಿಗ್ರೇಶನ್ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ ಬ್ರಾವಿಯ X75K ಸ್ಮಾರ್ಟ್ ಟಿವಿ

ಸೋನಿ ಬ್ರಾವಿಯ X75K ಸ್ಮಾರ್ಟ್ ಟಿವಿ ಸರಣಿಯು 43-ಇಂಚಿನ, 50-ಇಂಚಿನ, 55-ಇಂಚಿನ ಮತ್ತು 65-ಇಂಚಿನ ಡಿಸ್‌ಪ್ಲೇ ಆಯ್ಕೆಗಳಲ್ಲಿ ಬರಲಿದೆ. ಈ ಡಿಸ್‌ಪ್ಲೇ 3,840 x 2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ HDR10 ಮತ್ತು HLG ಫಾರ್ಮ್ಯಾಟ್‌ಗಳಿಗೆ ಬೆಂಬಲದೊಂದಿಗೆ ಲಭ್ಯವಿದೆ. ಇನ್ನು ಸೋನಿ ಕಂಪೆನಿ ಹೇಳಿರುವಂತೆ ಸೋನಿ ಬ್ರಾವಿಯ X75K ಮಾದರಿಗಳು ಫುಲ್‌ HD ಮತ್ತು 2K ರೆಸಲ್ಯೂಶನ್ ವೀಡಿಯೊಗಳನ್ನು 4K ರೆಸಲ್ಯೂಶನ್‌ಗೆ 4K ಡೇಟಾಬೇಸ್ ಅನ್ನು 4K X-ರಿಯಾಲಿಟಿ ಪ್ರೊ ತಂತ್ರಜ್ಞಾನವನ್ನು ಹೆಚ್ಚಿಸಲು ಸಮರ್ಥವಾಗಿವೆ.ಈ ಸ್ಮಾರ್ಟ್ ಟಿವಿ ಮಾದರಿಗಳು ಹೋಮ್‌ಕಿಟ್ ಮತ್ತು ಏರ್‌ಪ್ಲೇ ಬೆಂಬಲಕ್ಕೆ ಬೆಂಬಲದೊಂದಿಗೆ ಬರುತ್ತವೆ, ಇದನ್ನು ಐಫೋನ್ ಅಥವಾ ಐಪ್ಯಾಡ್ ಬಳಸಿ ವಿಷಯವನ್ನು ಸ್ಟ್ರೀಮ್ ಮಾಡಲು ಬಳಸಬಹುದು.

ಸ್ಮಾರ್ಟ್ ಟಿವಿ

ಇನ್ನು ಈ ಸ್ಮಾರ್ಟ್ ಟಿವಿ ಮಾದರಿಗಳು ಸೋನಿ X1 ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಗೂಗಲ್‌ ಟಿವಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಅಟ್ಮೋಸ್‌ ಬೆಂಬಲಿಸುವ ಎರಡು 10W ಫುಲ್‌ ರೇಂಜ್‌ ಓಪನ್‌ ಬ್ಯಾಫಲ್ ಸ್ಪೀಕರ್‌ಗಳೊಂದಿಗೆ ಬರುತ್ತವೆ. ಸ್ಮಾರ್ಟ್‌ಟಿವಿಯ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್, ಆಪಲ್ ಏರ್‌ಪ್ಲೇ, ಮೂರು ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳು ಸೇರಿವೆ. ಅಲ್ಲದೆ ವೈಫೈ 802.11ac, ಬ್ಲೂಟೂತ್ v5, ಎರಡು USB ಪೋರ್ಟ್‌ಗಳು, RF ಇನ್‌ಪುಟ್, ಸಂಯೋಜಿತ ವೀಡಿಯೊ ಇನ್‌ಪುಟ್, ಮೂರು HDMI ಪೋರ್ಟ್‌ಗಳು, ಡಿಜಿಟಲ್ ಆಡಿಯೊ ಔಟ್‌ಪುಟ್ ಮತ್ತು ಹೆಡ್‌ಫೋನ್ ಜ್ಯಾಕ್ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಸೋನಿ ಬ್ರಾವಿಯ X75K ಸ್ಮಾರ್ಟ್‌ಟಿವಿ 43 ಇಂಚಿನ ಮಾದರಿಗೆ (KD-43X75K) 55,990ರೂ,ಬೆಲೆ ಹೊಂದಿದೆ. ಆದರೆ 50-ಇಂಚಿನ ಮಾದರಿಯ (KD-50X75K) ಬೆಲೆ 66,990ರೂ.ಆಗಿದೆ. ಇನ್ನು ಕಂಪನಿಯು 55 ಇಂಚಿನ (KD-55X75K) ಮತ್ತು 65 ಇಂಚಿನ (KD-65X75K) ಮಾದರಿಗಳ ಬೆಲೆ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಎಲ್ಲಾ ನಾಲ್ಕು ಮಾದರಿಯ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಎಲ್ಲಾ ಸೋನಿ ಕೇಂದ್ರಗಳು, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Sony Bravia X75K Smart TV Series With 4K HDR, Dolby Audio Support Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X