Home
ಸುದ್ದಿಜಾಲ

ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿ ಲಾಂಚ್‌! ಭಾರತದಲ್ಲಿ ಬೆಲೆ ಎಷ್ಟು?

ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಅವುಗಳ ಗುಣಮಟ್ಟ ಹಾಗೂ ನವೀನ ಮಾದರಿಯ ಟೆಕ್ನಾಲಜಿ ಗ್ರಾಹಕರನ್ನು ಸೆಳೆಯುತ್ತಾ ಬಂದಿದೆ. ಅದಕ್ಕೆ ಅನುಗುಣವಾಗಿ ಸೋನಿ ಕಂಪೆನಿ ಇದೀಗ ಹೊಸ ಸೋನಿ ಬ್ರಾವಿಯಾ X75L ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 43-ಇಂಚಿನ, 50-ಇಂಚಿನ, 55-ಇಂಚಿನ ಮತ್ತು 65 ಇಂಚಿನ ಟಿವಿಗಳು ಸೇರಿವೆ.

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ ಬ್ರಾವಿಯಾ X75L ಸ್ಮಾರ್ಟ್‌ಟಿವಿ ಸರಣಿಯನ್ನು ಪರಿಚಯಿಸಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು PS5 ಬೆಂಬಲದೊಂದಿಗೆ ಗೇಮರ್ ಮೋಡ್ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್‌ಟಿವಿ ಸರಣಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿ ಲಾಂಚ್‌! ಭಾರತದಲ್ಲಿ ಬೆಲೆ ಎಷ್ಟು?

ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿಗಳು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಬರಲಿವೆ. ಗಾತ್ರದ ಆಯ್ಕೆಗೆ ತಕ್ಕಂತೆ ಇವುಗಳನ್ನು ಸೋನಿ KD-43X75L, KD-50X75L, KD-55X75L, ಮತ್ತು KD-65X75L ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಟಿವಿಗಳು ಮಾದರಿಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 4K ಪ್ರೊಸೆಸರ್ X1, 4K X-ರಿಯಾಲಿಟಿ ಪ್ರೊ ಮತ್ತು 20W ಸ್ಪೀಕರ್‌ಗಳನ್ನು ಹೊಂದಿವೆ.

ಇನ್ನು ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿಗಳು ಎಕ್ಸ್-ಪ್ರೊಟೆಕ್ಷನ್ PRO ನೊಂದಿಗೆ ನಿರ್ಮಿಸಲಾಗಿದೆ. ಇದು ಧೂಳು, ತೇವಾಂಶ, ವಿದ್ಯುತ್ ಉಲ್ಬಣಗಳು ಮತ್ತು ಮಿಂಚಿನ ಹೊಡೆತಗಳ ವಿರುದ್ಧ ರಕ್ಷಣೆ ನೀಡಲಿದೆ. ಅಂದರೆ ಮಳೆ ಗುಡುಗು ಬರುವ ಸಮಯದಲ್ಲಿಯೂ ಕೂಡ ಸ್ಮಾರ್ಟ್‌ಟಿವಿಗಳನ್ನು ಆಫ್‌ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ ಎಂದು ಸೋನಿ ಕಂಪೆನಿ ಹೇಳಿದೆ. ಇದಲ್ಲದೆ ಡೈರೆಕ್ಟ್‌ LED ಬ್ಯಾಕ್‌ಲೈಟಿಂಗ್‌ನೊಂದಿಗೆ LCD ಸ್ಕ್ರೀನ್‌ ಹೊಂದಿದೆ.

ಸ್ಮಾರ್ಟ್‌ಟಿವಿ 4K ಡಿಸ್‌ಪ್ಲೇ ಪ್ಯಾನೆಲ್ HDR10 ರಿಫ್ರೆಶ್‌ ರೇಟ್‌, HLG, 4K ಪ್ರೊಸೆಸರ್ X1 ಹೊಂದಿದೆ. ಇದರಿಂದಾಗಿ ಸ್ಮಾರ್ಟ್‌ಟಿವಿಯಲ್ಲಿ ಚಿತ್ರದ ಗುಣಮಟ್ಟ ಮತ್ತು ಚಿತ್ರದ ಬ್ರೈಟ್‌ನೆಸ್‌ ಹೆಚ್ಚಿಸಬಹುದಾಗಿದೆ. ಇದಲ್ಲದೆ ಸ್ಮಾರ್ಟ್‌ಟಿವಿ 4K X ರಿಯಾಲಿಟಿ PRO ಹೊಂದಿದ್ದು, 2K ಮತ್ತು HD ಚಿತ್ರದ ಗುಣಮಟ್ಟವನ್ನು ನೀಡಲಿದೆ. ಇನ್ನು ಸ್ಮಾರ್ಟ್‌ಟಿವಿ ಮೋಷನ್‌ಫ್ಲೋ XR ಅನ್ನು ಸಹ ಬೆಂಬಲಿಸಲಿದ್ದು, ಸುಗಮ ಮತ್ತು ತೀಕ್ಷ್ಣವಾದ ವೀಡಿಯೊ ನಿರೂಪಣೆಗೆ ಅವಕಾಶ ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿದೆ.

ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿ ಲಾಂಚ್‌! ಭಾರತದಲ್ಲಿ ಬೆಲೆ ಎಷ್ಟು?

ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿಗಳು ತಲಾ 10W ಎರಡು ಸ್ಪೀಕರ್‌ಗಳನ್ನು ಹೊಂದಿವೆ. ಜೊತೆಗೆ ಆಡಿಯೋ ಔಟ್‌ಪುಟ್ ಅನ್ನು ಕ್ಲಿಯರ್ ಫೇಸ್ ಟೆಕ್ನಾಲಜಿಯಿಂದ ಟ್ಯೂನ್ ಮಾಡಲಾಗಿದೆ. ಇದು ಸ್ಪೀಕರ್‌ಗಳ ಫ್ರಿಕ್ವೆನ್ಸಿ ರೇಂಜ್‌ ಅನ್ನು ವಿಶ್ಲೇಷಿಸಲಿದೆ. ಹಾಗೆಯೇ ತೆರೆದ ಬ್ಯಾಫಲ್ ಡೌನ್ ಫೈರಿಂಗ್ ಟ್ವಿನ್ ಸ್ಪೀಕರ್‌ಗಳು ಸಹ ಪಂಚ್ ಬಾಸ್‌ಗಾಗಿ ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತವೆ. ಸೋನಿ ಬ್ರಾವಿಯಾ X75L ಸರಣಿಯ ಟಿವಿಗಳು ಆಂಡ್ರಾಯ್ಡ್‌ ಟಿವಿಗಳಾಗಿದ್ದು, 10,000 ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಸಾಮರ್ಥ್ಯವನ್ನು ಪಡೆದಿವೆ.

ಸೋನಿ ಬ್ರಾವಿಯಾ X75L ಸರಣಿ ಸ್ಮಾರ್ಟ್‌ಟಿವಿಯ ವಿಶೇಷತೆ ಎಂದರೆ ಆಟೋ HDR ಟೋನ್ ಮ್ಯಾಪಿಂಗ್ ಹೊಂದಿರುವುದು. ಇದರಲ್ಲಿ ಆಟೋ ಜೆನರ್ ಪಿಕ್ಚರ್ ಮೋಡ್ ಸೇರಿದೆ. ಇದರಿಂದ ನಿಮ್ಮ ಗೇಮಿಂಗ್‌ ಅನುಭವ ಅತ್ಯುತ್ತಮ ಗುಣಮಟ್ಟದಲ್ಲಿರಲಿದೆ. ನೀವು ಆಟೋ ಜೆನರ್ ಪಿಕ್ಚರ್ ಮೋಡ್ PS5 ಅನ್ನು ಕನೆಕ್ಟ್‌ ಮಾಡಿದರೆ ಚಲನಚಿತ್ರಗಳನ್ನು ವೀಕ್ಷಿಸುವಾಗ ಗೇಮ್‌ ಮತ್ತು ಪ್ರಮಾಣಿತ ವಿಧಾನಗಳ ನಡುವೆ ಬದಲಾಯಿಸಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0, ಎತರ್ನೆಟ್, RF, ಸಂಯೋಜಿತ ವೀಡಿಯೊ ಇನ್‌ಪುಟ್ ಅನ್ನು ನೀಡಲಾಗಿದೆ.

ಸೋನಿ ಬ್ರಾವಿಯಾ X75L ಸರಣಿಯ ಬೆಲೆ ಮತ್ತು ಲಭ್ಯತೆ

ಸೋನಿ ಬ್ರಾವಿಯಾ X75L ಸರಣಿಯಲ್ಲಿ 43-ಇಂಚಿನ ಸ್ಮಾರ್ಟ್‌ಟಿವಿ 69,900ರೂ. ಬೆಲೆಯನ್ನು ಹೊಂದಿದೆ. ಇನ್ನು 50 ಇಂಚಿನ ಆಯ್ಕೆಯು 85,900ರೂ.ಬೆಲೆಯನ್ನು ಹೊಂದಿದೆ. ಇದರ 65 ಇಂಚಿನ ಆಯ್ಕೆಯು 1,39,900ರೂ. ಬೆಲೆಯನ್ನು ಪಡೆದುಕೊಂಡಿದೆ. ಈ ಎಲ್ಲಾ ಮೂರು ಮಾದರಿಗಳು ಭಾರತದಲ್ಲಿ ಏಪ್ರಿಲ್ 24 ರಿಂದ ಮಾರಾಟವಾಗಲಿದೆ. ಇದು ಭಾರತದಲ್ಲಿ ಸೋನಿ ಸೆಂಟರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿವೆ.

Best Mobiles in India

English summary
Sony has launched 43-inch, 50-inch, 55-inch, and 65-inch models in the X75L series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+