ಭಾರತದ ಮಾರುಕಟ್ಟೆಯಲ್ಲಿ ಸೋನಿ ಬ್ರಾವಿಯಾ X80J ಸ್ಮಾರ್ಟ್‌ಟಿವಿ ಸರಣಿ ಅನಾವರಣ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಟಿವಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಇದರಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಸೋನಿ ಬ್ರಾವಿಯಾ X80J ಸರಣಿಯ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಸರಣಿ 43 ಇಂಚಿನಿಂದ 75 ಇಂಚಿನವರೆಗಿನ ಸ್ಮಾರ್ಟ್ ಟಿವಿಗಳನ್ನು ಒಳಗೊಂಡಿದೆ.

ಸೋನಿ ಬ್ರಾವಿಯಾ X80J

ಹೌದು, ಸೋನಿ ಬ್ರಾವಿಯಾ X80J ಸರಣಿಯ ಟಿವಿಗಳನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಈ ಸರಣಿಯನ್ನು ಭಾರತದಲ್ಲಿ 65 ಇಂಚಿನ ಮಾದರಿಯನ್ನು ಮಾತ್ರ ಲಭ್ಯವಾಗಿಸಿದೆ. ಅಲ್ಲದೆ ಉಳಿದ ಮಾದರಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎನ್ನಲಾಗಿದೆ. ಇನ್ನು ಸೋನಿ ಬ್ರಾವಿಯಾ X80J ಸರಣಿಯು 4ಕೆ ಎಚ್‌ಡಿಆರ್ ಡಿಸ್‌ಪ್ಲೇಗಳು, ಆಪಲ್ ಹೋಮ್‌ಕಿಟ್ ಬೆಂಬಲ ಮತ್ತು ಡಾಲ್ಬಿ ವಿಷನ್ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಗಳು ಸೋನಿಯ ಸುಧಾರಿತ ಎಕ್ಸ್-ಪ್ರೊಟೆಕ್ಷನ್ ಪ್ರೊ ತಂತ್ರಜ್ಞಾನವನ್ನು ಸಹ ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ

ಸೋನಿಯ ಬ್ರಾವಿಯಾ X80J ಸರಣಿಯಲ್ಲಿ 75 ಇಂಚು, 65 ಇಂಚು, 55 ಇಂಚು, 50 ಇಂಚು ಮತ್ತು 43 ಇಂಚಿನ ಮಾದರಿಗಳನ್ನು ಪರಿಚಯಿಸಲಾಗಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು X1 4K ಎಚ್‌ಡಿಆರ್ ಪ್ರೊಸೆಸರ್ ಹೊಂದಿದ್ದು, ನಿಖರವಾದ ಬಣ್ಣಗಳನ್ನು ನೀಡುವ ಟ್ರಿಲುಮಿನೋಸ್ ಪ್ರೊ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಗಳು ಗೂಗಲ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿವೆ. ನಿಮ್ಮ ವಾಯ್ಸ್‌ ಆಜ್ಞೆಗಳನ್ನು ಕೇಳಲು ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ಗಳನ್ನು ಹೊಂದಿವೆ. ಅಲ್ಲದೆ ಆಪಲ್ ಹೋಮ್ ಕಿಟ್ ಮತ್ತು ಏರ್‌ಪ್ಲೇ ಬೆಂಬಲವನ್ನು ಬಳಸಿಕೊಂಡು ಆಪಲ್ ಡಿವೈಸ್‌ಗಳನ್ನು ಸಹ ಸಂಯೋಜಿಸಬಹುದು. ಸೋನಿ ಬ್ರಾವಿಯಾ X80J ಸರಣಿಯು ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ ಮತ್ತು ಎಕ್ಸ್-ಬ್ಯಾಲೆನ್ಸ್ಡ್ ಸ್ಪೀಕರ್ ಫೀಚರ್ಸ್‌ಗಳ ಜೊತೆಗೆ ನಿಮ್ಮನ್ನು ತಲ್ಲೀನಗೊಳಿಸುವ ಸೌಂಡ್‌ ಸಿಸ್ಟಂ ಅನ್ನು ಹೊಂದಿವೆ.

ಎಚ್‌ಡಿಆರ್

ಸದ್ಯ ಭಾರತದಲ್ಲಿ ಲಭ್ಯವಾಗಲಿರುವ 65 ಇಂಚಿನ ಮಾದರಿ - KD-65 X80J ನಿರ್ದಿಷ್ಟವಾಗಿ, 4ಕೆ ಡಿಸ್‌ಪ್ಲೇಯೊಂದಿಗೆ ನೇರ ಎಲ್ಇಡಿ ಬ್ಯಾಕ್ಲೈಟಿಂಗ್ ಮತ್ತು ಫ್ರೇಮ್ ಡಿಮ್ಮಿಂಗ್ ಹೊಂದಿದೆ. ಇದು ಮೋಷನ್ ಫ್ಲೋ ಎಕ್ಸ್‌ಆರ್ 200 ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೆ ಎಚ್‌ಡಿಆರ್ 10, ಎಚ್‌ಎಲ್‌ಜಿ, ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ಡಿಜಿಟಲ್ ಸರೌಂಡ್‌ಗೆ ಬೆಂಬಲ ನೀಡುತ್ತದೆ. ಇದರಲ್ಲಿ ಆಡಿಯೊಗಾಗಿ, ಎರಡು 10W ಸ್ಪೀಕರ್‌ಗಳನ್ನು ನೀಡಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ ನೀವು ನಾಲ್ಕು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು, ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 4.2 ಮತ್ತು ವೈ-ಫೈ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ 65 ಇಂಚಿನ ಮಾದರಿಯು ಕ್ರೋಮ್‌ಕಾಸ್ಟ್‌ನೊಂದಿಗೆ ನಿರ್ಮಿಸಲ್ಪಟ್ಟಿದೆ, 60Hz ವರೆಗೆ ರಿಫ್ರೆಶ್ ರೇಟ್‌ ಮತ್ತು ಹೆಚ್ಚಿನದನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಸಂಸ್ಥೆ ಇನ್ನೂ ಎಲ್ಲಾ ರೂಪಾಂತರಗಳಿಗೆ ಬೆಲೆ ಹಂಚಿಕೊಂಡಿಲ್ಲ. ಆದರೆ 65 ಇಂಚಿನ ಮಾದರಿಯ ಸೋನಿ ಬ್ರಾವಿಯಾ ಕೆಡಿ -KD-65 X80J ಸುಮಾರು ರೂ. 1.3 ಲಕ್ಷ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಂಪನಿಯ ಪ್ರಕಾರ, ಇದು ಇಂದಿನಿಂದಲೇ ಭಾರತದ ಎಲ್ಲಾ ಸೋನಿ ಸೆಂಟರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ.

Best Mobiles in India

English summary
Sony Bravia X80J series has support for Google Assistant, Dolby Vision, and Dolby Atmos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X