Home
ಸುದ್ದಿಜಾಲ

ಭಾರತದಲ್ಲಿ ಸದ್ದು ಮಾಡ್ತಿವೆ ಸೋನಿ ಬ್ರಾವಿಯಾ X80L ಸರಣಿ ಸ್ಮಾರ್ಟ್‌ಟಿವಿಗಳು! ಕಾರಣ ಏನು?

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವ ಮೂಲಕ ಸ್ಮಾರ್ಟ್‌ಟಿವಿ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಸೋನಿ ಸಂಸ್ಥೆಯ ಸೋನಿ ಬ್ರಾವಿಯಾ X80L ಸ್ಮಾರ್ಟ್‌ಟಿವಿ ಸರಣಿ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿವೆ.

ಹೌದು, ಸೋನಿ ಬ್ರಾವಿಯಾ X80L ಸ್ಮಾರ್ಟ್‌ಟಿವಿ ಸರಣಿ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಸರಣಿಯು 43 ಇಂಚಿನ ಮತ್ತು 53 ಇಂಚಿನ ಲಭ್ಯವಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಸಂಚಲನ ಸೃಷ್ಟಿಸಿರೋದು ಹೇಗೆ? ಇವುಗಳ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಸದ್ದು ಮಾಡ್ತಿವೆ ಸೋನಿ ಬ್ರಾವಿಯಾ X80L ಸರಣಿ ಸ್ಮಾರ್ಟ್‌ಟಿವಿ! ಕಾರಣ?

ಸೋನಿ ಬ್ರಾವಿಯಾ X80L ಸರಣಿಯ ವಿಶೇಷತೆ ಏನು?

ಸೋನಿ ಬ್ರಾವಿಯಾ X80L ಸರಣಿ 43 ಇಂಚು ಮತ್ತು 53 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಡಿಸ್‌ಪ್ಲೇಗಳು 3840 x 2160 ಪಿಕ್ಸೆಲ್ ಸ್ಕ್ರಿನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ 50Hz ನ ರಿಫ್ರೆಶ್ ರೇಟ್‌ ಬೆಂಬಲಿಸಲಿವೆ. ಇನ್ನು ಸ್ಮಾರ್ಟ್‌ಟಿವಿ HDR10, ಡಾಲ್ಬಿ ವಿಷನ್, ಟ್ರಿಲುಮಿನೋಸ್ ಪ್ರೊ ಮತ್ತು ಬಣ್ಣ ವರ್ಧನೆಗಾಗಿ ಲೈವ್ ಕಲರ್‌ ಟೆಕ್ನಾಲಜಿಯನ್ನು ಒಳಗೊಂಡಿದೆ. ಜೊತೆಗೆ ಆಬ್ಜೆಕ್ಟ್-ಆಧಾರಿತ HDR ರೀಮಾಸ್ಟರ್ ಮತ್ತು ಕಾಂಟ್ರಾಸ್ಟ್ ವರ್ಧನೆಗಾಗಿ ಡೈನಾಮಿಕ್ ಕಾಂಟ್ರಾಸ್ಟ್ ವರ್ಧಕವನ್ನು ಹೊಂದಿದೆ.

ಇನ್ನು ಸೋನಿ ಬ್ರಾವಿಯಾ X80L ಸರಣಿ ಸ್ಮಾರ್ಟ್‌ಟಿವಿಗಳು ಎರಡು ಫುಲ್‌ ರೇಂಜ್‌ 10W ಬಾಸ್ ರಿಫ್ಲೆಕ್ಸ್ ಸ್ಪೀಕರ್‌ಗಳನ್ನು ಒಳಗೊಂಡಿವೆ. ಇವುಗಳು ಡಾಲ್ಬಿ ಅಟ್ಮೋಸ್‌ ಮತ್ತು ಡಾಲ್ಬಿ ಆಡಿಯೋವನ್ನು ಬೆಂಬಲಿಸಲಿವೆ. ಇಇದಲ್ಲದೆ ಸೋನಿ ಬ್ರಾವಿಯಾ X80L ಸರಣಿಯು ಆಂಡ್ರಾಯ್ಡ್‌ ಟಿವಿ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಗೂಗಲ್‌ ಟಿವಿ ಯಿಂದ ಸ್ಮಾರ್ಟ್‌ಟಿವಿ ಬೆಂಬಲವನ್ನು ಪಡೆದಿದೆ. ಇದು 32GB ಆನ್‌ಬೋರ್ಡ್ ಸ್ಟೋರೇಜ್‌ ಹೊಂದಿದ್ದು, ಇನ್‌ಬಿಲ್ಟ್‌ ಮೈಕ್‌ನೊಂದಿಗೆ ಬರಲಿದೆ.

ಈ ಸ್ಮಾರ್ಟ್‌ಟಿವಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕೂಡ ಬೆಂಬಲಿಸಲಿದೆ. ಅಲ್ಲದೆ HDMI 2.1 ನಲ್ಲಿ ಆಟೋ ಲೋ ಲೇಟೆನ್ಸಿ ಮೋಡ್‌ನೊಂದಿಗೆ ಬರಲಿದ್ದು, ಕನ್ಸೋಲ್ ಅನ್ನು ಕನೆಕ್ಟ್‌ ಮಾಡಿದಾಗ ಮತ್ತು ಪವರ್ ಮಾಡಿದಾಗ ಗುರುತಿಸುತ್ತದೆ. ಇದಲ್ಲದೆ ಸ್ಮಾರ್ಟ್‌ಟಿವಿ BRAVIA CAM ಗೆ ಬೆಂಬಲವನ್ನು ಹೊಂದಿದೆ, ಇದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಅಂದರೆ ನೀವು ಕ್ಯಾಮ್‌ ಅನ್ನು ಕನೆಕ್ಟ್‌ ಮಾಡಿದರೆ ಕೊಠಡಿಯಲ್ಲಿರುವ ವೀಕ್ಷಕರನ್ನು ಗುರುತಿಸುತ್ತದೆ. ಇದು ವೀಕ್ಷಕರ ದೂರ ಹಾಗೂ ಕೊಠಡಿಯಲ್ಲಿರುವ ವೀಕ್ಷಕರ ಅನುಕೂಲಕ್ಕೆ ತಕ್ಕಂತೆ ಸೆಟ್ಟಿಂಗ್ಸ್‌ ಅನ್ನು ಹೊಂದಿಸಿಕೊಳ್ಳಲಿದೆ.

ಭಾರತದಲ್ಲಿ ಸದ್ದು ಮಾಡ್ತಿವೆ ಸೋನಿ ಬ್ರಾವಿಯಾ X80L ಸರಣಿ ಸ್ಮಾರ್ಟ್‌ಟಿವಿ! ಕಾರಣ?

ಇನ್ನು ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸೋನಿ ಬ್ರಾವಿಯಾ X80L ಸರಣಿಯು ವೈಫೈ 5 ಮತ್ತು 2.4GHz ಮತ್ತು 5GHz ವೈ-ಫೈ ಫ್ರೀಕ್ವೆನ್ಸಿ ಬ್ಯಾಂಡ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಒಂದು ಎತರ್‌ನೆಟ್‌ ಇನ್‌ಪುಟ್‌ ಮತ್ತು ಬ್ಲೂಟೂತ್‌ ಆವೃತ್ತಿ 4.2 ಅನ್ನು ಕೂಡ ಒಳಗೊಂಡಿದೆ. ಅಲ್ಲದೆ ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌, ಆಪಲ್‌ ಏರ್‌ಪ್ಲೇ ಮತ್ತು Homekit ಅನ್ನು ಹೊಂದಿದೆ. ಸ್ಮಾರ್ಟ್‌ಟಿವಿಗಳು ನಾಲ್ಕು HDMI ಇನ್‌ಪುಟ್‌ಗಳು, ಒಂದು ಡಿಜಿಟಲ್ ಆಡಿಯೊ ಔಟ್‌ಪುಟ್ ಮತ್ತು ಒಂದು ಹೆಡ್‌ಫೋನ್ ಔಟ್‌ಪುಟ್ ಅನ್ನು ಕೂಡ ನೀಡಲಿವೆ.

ಭಾರತದಲ್ಲಿ ಸೋನಿ ಬ್ರಾವಿಯಾ X80L ಸರಣಿಯ ಬೆಲೆ ಮತ್ತು ಲಭ್ಯತೆ

ಸೋನಿ ಬ್ರಾವಿಯಾ X80L ಸರಣಿಯ 43 ಇಂಚಿನ ಮಾದರಿ (KD-43X80L) ಬೆಲೆ 99,900ರೂ. ಆಗಿದೆ. ಇನ್ನು 50 ಇಂಚಿನ ಮಾದರಿಯ ಆಯ್ಕೆಗೆ 1,14,900ರೂ. ಬೆಲೆ ಹೊಂದಿದೆ.

Best Mobiles in India

English summary
Sony Bravia X80L series is available in 43-inch and 50-inch sizes in india: Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+