Home
ಸುದ್ದಿಜಾಲ

ಸೋನಿ ಬ್ರಾವಿಯ X80L TV ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಸೋನಿ ಕಂಪೆನಿ ತನ್ನ ಗುಣಮಟ್ಟದ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾಗಿದೆ. ನವೀನ ಮಾದರಿಯ ಟೆಕ್ನಾಲಜಿ ಹಾಗೂ ಹೆಚ್ಚಿನ ಗಾತ್ರದ ಸ್ಮಾರ್ಟ್‌ಟಿವಿಗಳಿಂದ ಸೋನಿ ಕಂಪೆನಿ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ಹೊಸ ಸೋನಿ ಬ್ರಾವಿಯ X80L TV ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಟಿವಿಗಳು ಮೂರು ವಿಭಿನ್ನ ಗಾತ್ರದಲ್ಲಿ ಬರಲಿವೆ.

ಹೌದು, ಸೋನಿ ಬ್ರಾವಿಯ X80L TV ಸರಣಿ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸರಣಿಯು 85 ಇಂಚಿನ, 50 ಇಂಚಿನ ಮತ್ತು 43 ಇಂಚಿನ ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿಗಳು ಆಬ್ಜೆಕ್ಟ್-ಆಧಾರಿತ HDR ರೀಮಾಸ್ಟರ್ ಅನ್ನು ತಲುಪಿಸಲು X1 4K HDR ಪಿಕ್ಚರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಲಿವೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ ಬ್ರಾವಿಯ X80L TV ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಸೋನಿ ಬ್ರಾವಿಯಾ X80L TV ಸರಣಿಯು 85 ಇಂಚಿನ, 50 ಇಂಚಿನ ಮತ್ತು 43 ಇಂಚಿನ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಟಿವಿಗಳ ಸ್ಕ್ರೀನ್‌ ಮೇಲಿನ ಪ್ರತ್ಯೇಕ ವಸ್ತುಗಳಲ್ಲಿನ ಬಣ್ಣವನ್ನು ವಿಶ್ಲೇಷಿಸುವುದಕ್ಕೆ ಅವಕಾಶವಿದೆ. ಇದರಿಂದ ಹೆಚ್ಚಿನ ಡೆಪ್ತ್‌, ಟೆಕಶ್ಚರ್ಗಳು ಮತ್ತು ಹೆಚ್ಚು ನೈಜ ಚಿತ್ರಗಳಿಗಾಗಿ ಕಾಂಟ್ರಾಸ್ಟ್ ಅನ್ನು ಸರಿಹೊಂದಿಸಲಿದೆ. ಇದಲ್ಲದೆ ಸೋನಿ ಬ್ರಾವಿಯಾ X80L ಟಿವಿ ಸರಣಿಯು ಯೂನಿಕ್‌ TRILUMINOS PRO ಅಲ್ಗಾರಿದಮ್ ಅನ್ನು ಹೊಂದಿದೆ.

ಸೋನಿ ಬ್ರಾವಿಯಾ X80L ಸರಣಿಯ ಟಿವಿಗಳಲ್ಲಿ ಸಿನೀಮಿಯ ಅನುಭವ ನೀಡುವುದಕ್ಕಾಗಿ ಡಾಲ್ಬಿ ವಿಷನ್‌ ಅನ್ನು ಅಳವಡಿಸಲಾಗಿದೆ. ಇದರಲ್ಲಿರುವ ಹೊಸ ಟೆಕ್ನಾಲಜಿಯು ಗಾಢವಾದ ಗಾಢತೆ ಮತ್ತು ರೋಮಾಂಚಕ ಬಣ್ಣಗಳನ್ನು ರಿ ಪ್ರೊಡಕ್ಷನ್‌ ಮಾಡಲಿದೆ. ಇನ್ನು ಡಾಲ್ಬಿ ಅಟ್ಮೋಸ್‌ ಜೊತೆಗೆ, ಹೊಸ ಬ್ರಾವಿಯಾ X80L 4K ಸ್ಮಾರ್ಟ್‌ಟಿವಿಗಳ ಸೌಂಡ್‌ ಬಹು ಆಯಾಮದ ಅನುಭವವನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ಸ್ಪಷ್ಟವಾದ ಧ್ವನಿಗಾಗಿ X- ಸಮತೋಲನದ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಸೋನಿ ಬ್ರಾವಿಯ X80L TV ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಈ ಸ್ಮಾರ್ಟ್‌ಟಿವಿಗಳಲ್ಲಿ ಗ್ರಾಹಕರು 700,000+ ಚಲನಚಿತ್ರಗಳು ಮತ್ತು ಟಿವಿ ಸರಣಿಗಳೊಂದಿಗೆ 10,000+ ಅಪ್ಲಿಕೇಶನ್‌ಗಳನ್ನು ಪಡೆಯಲಿದ್ದಾರೆ. ಅಲ್ಲದೆ ಗೇಮಿಂಗ್‌ಗಾಗಿ ಗೂಗಲ್‌ ಟಿವಿ ಏಕೀಕರಣವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಆಪಲ್‌ ಏರ್‌ಪ್ಲೇ 2 ಮತ್ತು HomeKit ನೊಂದಿಗೆ ಸಹ ಕಾರ್ಯನಿರ್ವಹಿಸಲಿದೆ ಎಂದು ಸೋನಿ ಕಂಪೆನಿ ಹೇಳಿದೆ. ಇನ್ನು ಸ್ಮಾರ್ಟ್‌ಟಿವಿಯಲ್ಲಿ ನೀವು ಚಲನಚಿತ್ರಗಳನ್ನು ಸರ್ಚ್‌ ಮಾಡಲು ನಿಮ್ಮ ವಾಯ್ಸ್‌ ಅನ್ನು ಕೂಡ ಬಳಸಬಹುದಾಗಿದೆ.

ಸೋನಿ X80L TV ಸರಣಿಯು ಬ್ರಾವಿಯಾ ಕೋರ್‌ ಸೇವೆಯೊಂದಿಗೆ ಬರಲಿದೆ. ಇದು ಬಳಕೆದಾರರಿಗೆ IMAX ವರ್ಧಿತ ಚಲನಚಿತ್ರಗಳನ್ನು ಪ್ಯೂರ್ ಸ್ಟ್ರೀಮ್‌ನೊಂದಿಗೆ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಬ್ರಾವಿಯಾ ಕೋರ್‌ ಪ್ರಿ ಲೋಡ್‌ ಮಾಡಲಾದ ಸಿನಿಮಾಗಳನ್ನು ಹೊಂದಿರುವ ಅಪ್ಲಿಕೇಶನ್‌ ಆಗಿದೆ. ಇದು 5 ಪ್ರಸ್ತುತ ಬಿಡುಗಡೆ ಮತ್ತು ಅತ್ಯುತ್ತಮ ಚಲನಚಿತ್ರಗಳ ಅನಿಯಮಿತ ಸ್ಟ್ರೀಮಿಂಗ್‌ ಅನ್ನು ನೀಡಲಿದೆ. ಜೊತೆಗೆ ಕ್ಲಾಸಿಕ್ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ಪಡೆದುಕೊಳ್ಳಲು ಅನುಮತಿಸಲಿದೆ.

ಸೋನಿ ಬ್ರಾವಿಯ X80L TV ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಇದಲ್ಲದೆ ಸೋನಿ X80L ಸ್ಮಾರ್ಟ್‌ ಟಿವಿಗಳು ಆಟೋ HDR ಟೋನ್ ಮ್ಯಾಪಿಂಗ್ ಅನ್ನು ಪಡೆದುಕೊಂಡಿವೆ. ಹಾಗೆಯೇ ಆಟೋ ಜೆನರ್ ಪಿಕ್ಚರ್ ಮೋಡ್‌ನೊಂದಿಗೆ ಗೇಮಿಂಗ್ ಅನುಭವವನ್ನು ಕನ್ವರ್ಟ್‌ ಮಾಡುವ PS5 ಫೀಚರ್ಸ್‌ ಅನ್ನು ಹೊಂದಿವೆ. ಅಲ್ಲದೆ HDMI 2.1 ಹೊಂದಾಣಿಕೆಯು ಆಟೋ ಕಡಿಮೆ ಲೇಟೆನ್ಸಿ ಮೋಡ್ (ALLM) ನೊಂದಿಗೆ ಗೇಮಿಂಗ್ ಅನ್ನು ಸಹ ಬೆಂಬಲಿಸಲಿದೆ.

ಸೋನಿ ಬ್ರಾವಿಯಾ X80L ಸರಣಿಯಲ್ಲಿ 43 ಇಂಚಿನ ಸ್ಮಾರ್ಟ್‌ಟಿವಿ 99,900ರೂ. ಬೆಲೆಯನ್ನು ಹೊಂದಿದೆ. ಇದರ 50 ಇಂಚಿನ ಆಯ್ಕೆಯು 1,14,900ರೂ. ಬೆಲೆಯನ್ನು ಪಡೆದುಕೊಂಡಿದೆ. ಆದರೆ 85 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆ ವಿವರಗಳನ್ನು ಇನ್ನು ಕೂಡ ಬಹಿರಂಗಪಡಿಸಲಾಗಿಲ್ಲ.

Best Mobiles in India

English summary
Sony BRAVIA X80L TV series launched in India: Price and specifications details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+