Home
ಸುದ್ದಿಜಾಲ

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಲಾಂಚ್‌! ಏನೆಲ್ಲಾ ಬೆಂಬಲಿಸಲಿದೆ ಗೊತ್ತಾ?

ಸ್ಮಾರ್ಟ್‌ಟಿವಿಗಳ ಮಾರುಕಟ್ಟೆಯಲ್ಲಿ ಸೋನಿ ಸಂಸ್ಥಯ ಆರ್ಭಟ ಇಂದಿಗೂ ಮುಂದುವರೆದಿದೆ. ತನ್ನ ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಸೋನಿ ಕಂಪೆನಿ ಗಮನಸೆಳೆದಿದೆ. ಇದೀಗ ಭಾರತದಲ್ಲಿ ಹೊಸದಾಗಿ ಸೋನಿ ಬ್ರಾವಿಯಾ X82L TV ಸರಣಿಯನ್ನು ಬಿಡುಗಡೆ ಮಾಡಿದೆ. Sony Bravia X82L ಸರಣಿಯಲ್ಲಿ 55, 65 ಮತ್ತು 75-ಇಂಚಿನ ಟಿವಿಗಳು ಬರಲಿವೆ.

ಹೌದು, ಸೋನಿ ಬ್ರಾವಿಯಾ X82L TV ಸರಣಿ ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಇದು 4K ರೆಸಲ್ಯೂಶನ್ ಮತ್ತು HDR ಫಾರ್ಮ್ಯಾಟ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಇನ್ನು ಈ ಸರಣಿಯ ಟಿವಿಗಳು 4K HDR ಪಿಕ್ಚರ್ ಎಂಜಿನ್ ಮತ್ತು ಟ್ರಿಲುಮಿನಸ್ ಪ್ರೊ ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಲಾಂಚ್‌! ಏನೆಲ್ಲಾ ಬೆಂಬಲಿಸಲಿದೆ ಗೊತ್ತಾ?

ಸೋನಿ ಬ್ರಾವಿಯಾ X82L ಸರಣಿ ಫೀಚರ್ಸ್‌ ವಿವರ: ಸೋನಿ ಬ್ರಾವಿಯಾ X82L ಸರಣಿಯ ಸ್ಮಾರ್ಟ್‌ಟಿವಿಗಳು 55, 65 ಮತ್ತು 75 ಇಂಚಿನ ಸ್ಕ್ರೀನ್‌ ಗಾತ್ರದ ಆಯ್ಕೆಗಳಲ್ಲಿ ಬರುತ್ತವೆ. ಇದು 4K ರೆಸಲ್ಯೂಶನ್ ಮತ್ತು HDR ಫಾರ್ಮ್ಯಾಟ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಸ್ಮಾರ್ಟ್‌ಟಿವಿ 4K HDR ಪಿಕ್ಚರ್ ಎಂಜಿನ್ ಮತ್ತು ಟ್ರಿಲುಮಿನಸ್ ಪ್ರೊ ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ಟಿವಿಗಳು IMAX ವರ್ಧಿತ ಪ್ರಮಾಣೀಕೃತವಾಗಿದ್ದು ಬೆರಗುಗೊಳಿಸುವ ದೃಶ್ಯಗಳು ಮತ್ತು ತಲ್ಲೀನಗೊಳಿಸುವ ಸೌಂಡ್‌ ಅನುಭವವನ್ನು ನೀಡಲಿದೆ.

ಇದಲ್ಲದೆ ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮಾಸ್ ಮತ್ತು ಪ್ರಾದೇಶಿಕ ಧ್ವನಿಯೊಂದಿಗೆ ಎಕ್ಸ್-ಸಮತೋಲಿತ ಸ್ಪೀಕರ್ ಅನ್ನು ಹೊಂದಿದೆ. ಇದನ್ನು ಸ್ಮಾರ್ಟ್‌ಟಿವಿಯ ಮುಂಭಾಗದಲ್ಲಿ ಅಳವಡಿಸಲಾಗಿದೆ. ಜೊತೆಗೆ ಸ್ಮಾರ್ಟ್‌ಟಿವಿಗಳು X-ಪ್ರೊಟೆಕ್ಷನ್ PRO ಟೆಕ್ನಾಲಜಿಯನ್ನು ಒಳಗೊಂಡಿದ್ದು, ಧೂಳು ಮತ್ತು ತೇವಾಂಶ ನಿರೋಧಕವಾಗಿದೆ. ಜೊತೆಗೆ ಮಳೆಗಾಲದಲ್ಲಿ ಸಿಡಿಲು, ಗುಡುಗು, ವಿದ್ಯುತ್‌ ಅವಘಡಗಳಿಂದ ರಕ್ಷಣೆಯನ್ನು ನೀಡಲಿದೆ.

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಲಾಂಚ್‌! ಏನೆಲ್ಲಾ ಬೆಂಬಲಿಸಲಿದೆ ಗೊತ್ತಾ?

ಸೋನಿ ಬ್ರಾವಿಯ X82L ಸ್ಮಾರ್ಟ್‌ಟಿವಿ ಬ್ರಾವಿಯಾ ಕೋರ್ ಅಪ್ಲಿಕೇಶನ್ ಅನ್ನು ಹೊಂದಿದೆ. ಇದರಿಂದ ಸೋನಿ ಪಿಕ್ಚರ್‌ನ ಚಲನಚಿತ್ರಗಳ ದೊಡ್ಡ ಲೈಬ್ರರಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಶುದ್ಧ ಸ್ಟ್ರೀಮ್‌ನೊಂದಿಗೆ 4K ಬ್ಲೂ-ರೇ ತಂತ್ರಜ್ಞಾನದ ಬಳಿ ಸ್ಟ್ರೀಮ್ ಮಾಡಲು ಲಭ್ಯವಿದೆ. ಇದರೊಂದಿಗೆ ಟಿವಿಗಳು ವೇರಿಯಬಲ್ ರಿಫ್ರೆಶ್ ರೇಟ್, ಆಟೋ-ಲೋ ಲೇಟೆನ್ಸಿ ಮೋಡ್ (ALLM), ಆಟೋ HDR ಟೋನ್ ಮ್ಯಾಪಿಂಗ್ ಅನ್ನು ನೀಡಲಿದೆ. ಅಲ್ಲದೆ ಗೆಸ್ಚರ್ ಕಂಟ್ರೋಲ್‌, ಸಾಮೀಪ್ಯ ಎಚ್ಚರಿಕೆಗಳನ್ನು ನೀಡುವ ಬ್ರಾವಿಯಾ ಕ್ಯಾಮ್ ಹೊಂದಿದೆ.

ಇನ್ನು ಸೋನಿ ಬ್ರಾವಿಯಾ X82L ಗೂಗಲ್‌ TV OS ನಲ್ಲಿ ಹ್ಯಾಂಡ್ಸ್-ಫ್ರೀ ವಾಯ್ಸ್‌ ಸರ್ಚ್‌ ಮೂಲಕ ಕಾರ್ಯನಿರ್ವಹಿಸಲಿದೆ. ಅಲ್ಲದೆ ಕ್ರೋಮ್‌ಕಾಸ್ಟ್‌, ಆಪಲ್‌ ಏರ್‌ಪ್ಲೇ ಮತ್ತು ಹೋಮ್‌ಕಿಟ್‌ ಅನ್ನು ಸಹ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ನಾಲ್ಕು HDMI 2.1 ಪೋರ್ಟ್‌ಗಳು, ಈಥರ್ನೆಟ್ ಪೋರ್ಟ್, ಎರಡು USB ಪೋರ್ಟ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿವೆ.

ಸೋನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಲಾಂಚ್‌! ಏನೆಲ್ಲಾ ಬೆಂಬಲಿಸಲಿದೆ ಗೊತ್ತಾ?

ಬೆಲೆ ಮತ್ತು ಲಭ್ಯತೆ: ಸೋನಿ ಬ್ರಾವಿಯಾ X82L ಸರಣಿಯಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿ ಬೆಲೆ 91,990ರೂ.ಆಗಿದೆ. ಇದರ 65 ಇಂಚಿನ ರೂಪಾಂತರದ ಬೆಲೆ 1,24,990.ರೂ ಆಗಿದೆ. ಇನ್ನು 75 ಇಂಚಿನ ಮಾದರಿಯ ಬೆಲೆಯ ವಿವರ ಇನ್ನೂ ಘೋಷಿಸಲಾಗಿಲ್ಲ. ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಸೋನಿ ಸೆಂಟರ್, ಪ್ರಮುಖ ಎಲೆಕ್ಟ್ರಾನಿಕ್ಸ್ ಅಂಗಡಿ ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಿಂದ ಖರೀದಿಸಲು ಲಭ್ಯವಿದೆ.

ಇನ್ನು ಇತ್ತೀಚಿಗೆ ಸೋನಿ ಕಂಪೆನಿ ಭಾರತದಲ್ಲಿ ತನ್ನ ಸೋನಿ ಬ್ರಾವಿಯಾ X80L ಸರಣಿ ಪರಿಚಯಿಸಿತ್ತು. ಈ ಸರಣಿಯು 43 ಇಂಚು ಮತ್ತು 53 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಡಿಸ್‌ಪ್ಲೇಗಳು 3840 x 2160 ಪಿಕ್ಸೆಲ್ ಸ್ಕ್ರಿನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ 50Hz ನ ರಿಫ್ರೆಶ್ ರೇಟ್‌ ಬೆಂಬಲಿಸಲಿವೆ. ಇನ್ನು ಸ್ಮಾರ್ಟ್‌ಟಿವಿ HDR10, ಡಾಲ್ಬಿ ವಿಷನ್, ಟ್ರಿಲುಮಿನೋಸ್ ಪ್ರೊ ಮತ್ತು ಬಣ್ಣ ವರ್ಧನೆಗಾಗಿ ಲೈವ್ ಕಲರ್‌ ಟೆಕ್ನಾಲಜಿಯನ್ನು ಒಳಗೊಂಡಿದೆ. ಜೊತೆಗೆ ಆಬ್ಜೆಕ್ಟ್-ಆಧಾರಿತ HDR ರೀಮಾಸ್ಟರ್ ಮತ್ತು ಕಾಂಟ್ರಾಸ್ಟ್ ವರ್ಧನೆಗಾಗಿ ಡೈನಾಮಿಕ್ ಕಾಂಟ್ರಾಸ್ಟ್ ವರ್ಧಕವನ್ನು ಹೊಂದಿದೆ.

Best Mobiles in India

English summary
Sony Bravia X82L Televisions With Google TV Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+