ಭಾರತದಲ್ಲಿ ಸೋನಿ α6700 ಮಿರರ್‌ಲೆಸ್ ಕ್ಯಾಮೆರಾ ಲಾಂಚ್! ಇದರ ಗುಣಮಟ್ಟಕ್ಕೆ ಸರಿಸಾಟಿಯಿಲ್ಲ!
ಕ್ಯಾಮೆರಾ ವಲಯದಲ್ಲಿ ಸೋನಿ ಸಂಸ್ಥೆಯ ಕ್ಯಾಮೆರಾಗಳಿಗೆ ಬಹುದೊಡ್ಡ ಬೇಡಿಕೆಯಿದೆ. ತನ್ನ ವಿಶಿಷ್ಟ ವಿನ್ಯಾಸ ಹಾಗೂ ಆಕರ್ಷಕ ಶೈಲಿಯ ಕ್ಯಾಮೆರಾಗಳಿಂದ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ತನ್ನ ಮತ್ತೊಂದು ಹೊಸ ಮಿರರ್‌ಲೆಸ್ ಕ್ಯಾಮೆರಾವನ್ನು ಲಾಂಚ್ ಮಾಡಿದದೆ. ಇದನ್ನು ಸೋನಿ α6700 ಕ್ಯಾಮೆರಾ ಎಂದು ಹೆಸರಿಸಲಾಗಿದೆ.
ಹೌದು, ಸೋನಿ α6700 ಮಿರರ್‌ಲೆಸ್ ಕ್ಯಾಮೆರಾ ಭಾರತದಲ್ಲಿ ಅನಾವರಣಗೊಮಡಿದೆ. ಈ ಕ್ಯಾಮೆರಾ APS-C ಶ್ರೇಣಿಯಲ್ಲಿ ಪರಿಚಯಿಸಲಾಗಿರುವ ಹೊಸ ಕ್ಯಾಮೆರಾ ಆಗಿದೆ. ಇದು ಫುಲ್-ಫ್ರೇಮ್ ಆಲ್ಫಾ ಮತ್ತು ಸಿನಿಮಾ ಲೈನ್ ಸರಣಿಯಿಂದ ಎರವಲು ಪಡೆದ ವಿವಿಧ ಪ್ರೀಮಿಯಂ ಇಮೇಜಿಂಗ್ ಮತ್ತು ವೀಡಿಯೊ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಕ್ಯಾಮೆರಾ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ α6700 ಕ್ಯಾಮೆರಾ ಫೀಚರ್ಸ್ ಹೇಗಿದೆ?
ಸೋನಿ α6700 ಕ್ಯಾಮೆರಾ ಉತ್ತಮ ಪೋರ್ಟಬಿಲಿಟಿ ನೀಡುವ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಇದು ಟಚ್ ಬೆಂಬಲದೊಂದಿಗೆ ವೇರಿ-ಆಂಗಲ್ 3-ಇಂಚಿನ LCD ಮಾನಿಟರ್, ಕಸ್ಟಮೈಸ್‌ಗೊಳಿಸಬಹುದಾದ ಡಯಲ್ ಮತ್ತು ಎಲೆಕ್ಟ್ರಾನಿಕ್ ವ್ಯೂಫೈಂಡರ್ ಅನ್ನು ಒಳಗೊಂಡಿದೆ. ಇನ್ನು ಈ ಕ್ಯಾಮೆರಾ 26MP Exmor R CMOS ಸೆನ್ಸಾರ್ ಅನ್ನು ಹೊಂದಿದ್ದು, BIONZ XR ಪ್ರೊಸೆಸಿಂಗ್ ಎಂಜಿನ್ ಅನ್ನು ಹೊಂದಿದೆ. ಜೊತೆಗೆ ಕ್ಯಾಮರಾ ISO ಮಟ್ಟವನ್ನು 32000 ವರೆಗೆ ಬೆಂಬಲಿಸುತ್ತದೆ.
ಇನ್ನು ಸೋನಿ α6700 ಕ್ಯಾಮೆರಾ 14+ ಸ್ಟಾಪ್‌ಗಳ ಡೈನಾಮಿಕ್ ರೇಂಜ್ ಅನ್ನು ನೀಡಲಿದೆ. ಅಲ್ಲದೆ AI ದೃಶ್ಯ ಗುರುತಿಸುವಿಕೆ ಮತ್ತು S-Cinetone ಪಿಕ್ಚರ್ ಪ್ರೊಫೈಲ್ ಕಲರ್ ರೇಂಜ್ ಅನ್ನು ತೆಗೆದುಹಾಕಲಿದೆ. ಜೊತೆಗೆ ಸೋನಿ α6700 ಸ್ಥಿರವಾದ ಚಿತ್ರೀಕರಣಕ್ಕಾಗಿ 5-ಆಕ್ಸಿಸ್ ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿದೆ. ಈ ಕ್ಯಾಮರಾ 120fps ನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, S-ಲಾಗ್ ಜೊತೆಗೆ ಗ್ರೇಡೇಶನ್ ಅನ್ನು ಸಹ ಹೊಂದಿದೆ.

ಇದಲ್ಲದೆ ಸೋನಿ α6700 ಕ್ಯಾಮೆರಾದಲ್ಲಿ ಇನ್‌ಬಿಲ್ಟ್ ಸ್ಟಿರಿಯೊ ಮೈಕ್ ಮತ್ತು ಮೊನೊರಲ್ ಸ್ಪೀಕರ್ ಅನ್ನು ನೀಡಲಾಗಿದೆ. ಇದು ಇ-ಮೌಂಟ್ ಲೆನ್ಸ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್, ಬ್ಲೂಟೂತ್ 4.2, ಡ್ಯುಯಲ್-ಬ್ಯಾಂಡ್ ವೈಫೈ, HDMI ಮೈಕ್ರೋ ಕನೆಕ್ಟರ್ ಮತ್ತು ರಿಮೋಟ್ ಕಂಟ್ರೋಲ್ ಅನ್ನು ಹೊಂದಿದೆ.
ಸೋನಿ α6700 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸೋನಿ α6700 ಕ್ಯಾಮೆರಾದ ಬಾಡಿಯ ಬೆಲೆ ಕೇವಲ 1,36,990 ರೂ.ಗಳಿಂದ ಪ್ರಾರಂಭವಾಗುತ್ತದೆ. ಇನ್ನು 16-50mm ಲೆನ್ಸ್ ಜೊತೆಗೆ ಕ್ಯಾಮೆರಾ ಬೆಲೆ 1,47,490ರೂ ಆಗಿದೆ. ಆದರೆ 18-135mm ಜೂಮ್ ಲೆನ್ಸ್ ಬೆಲೆ 1,72,990 ರೂ. ಆಗಿದ್ದು, ಇದೇ ನವೆಂಬರ್ 20 ರಿಂದ ದೇಶದಾದ್ಯಂತದ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಇನ್ನು ಸೋನಿ ಕಂಪೆನಿ ಇತ್ತೀಚಿಗೆ ಸೋನಿ ಬ್ರಾವಿಯಾ 4K HDR ಸ್ಮಾರ್ಟ್‌ಟಿವಿಯನ್ನು ಭಾರತದಲ್ಲಿ ಅನಾವರಣಗೊಳಿಸಿತ್ತು. ಸೋನಿ ಬ್ರಾವಿಯಾ BZ40L, BZ35L ಮತ್ತು BZ30L ಸರಣಿಯಲ್ಲಿ ಈ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಾಗಿದೆ. ಇವುಗಳು ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ವಿವಿಧ ಆವೃತ್ತಿಗಳಲ್ಲಿ ಎಂಟ್ರಿ ನೀಡಿವೆ. ಹೈ ಲೆವೆಲ್ ಮಾತ್ರವಲ್ಲದೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಸ್ಮಾರ್ಟ್‌ಟಿವಿಗಳನ್ನು ಈ ಸರಣಿಯಲ್ಲಿ ಕಾಣಬಹುದಾಗಿದೆ. ಇದರಲ್ಲಿ ಸೋನಿ ಬ್ರಾವಿಯಾ BZ40L ಸರಣಿಯು ಹೈ ಲೆವೆಲ್ ಸ್ಮಾರ್ಟ್‌ಟಿವಿಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಏಕೆಂದರೆ ಈ ಸರಣಿ ಟಿವಿಗಳ ವಿನ್ಯಾಸವು ಸಾಕಷ್ಟು ವಿಭಿನ್ನವಾಗಿದೆ.


Click it and Unblock the Notifications








