ಬಹು ನಿರೀಕ್ಷಿತ ಸೋನಿ PS VR2 ಬಿಡುಗಡೆ! ಫೀಚರ್ಸ್ ಹೇಗಿದೆ? ವಿಶೇಷತೆ ಏನು?
ಇಂದಿನ ದಿನಗಳಲ್ಲಿ ಗೇಮಿಂಗ್ ಕನ್ಸೋಲ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದಕ್ಕೆ ಅನುಗುಣವಾಗಿ ಹಲವು ಬ್ರಾಂಡ್‌ಗಳು ತಮ್ಮದೇ ಆದ ಗೇಮಿಂಗ್ ಕನ್ಸೋಲ್‌ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಸೋನಿ ಕಂಪೆನಿ ತನ್ನ ಹೊಸ ಪ್ಲೇ ಸ್ಟೇಷನ್ VR2 ಕನ್ಸೋಲ್ ಅನ್ನು ಬಿಡುಗಡೆ ಮಾಡಿದೆ.
ಹೌದು, ಟೆಕ್ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಸೋನಿ ಪ್ಲೇಸ್ಟೇಷನ್ VR2 ಕನ್ಸೋಲ್ ಬಿಡುಗಡೆಯಾಗಿದೆ. ಇದು ಗೇಮಿಂಗ್‌ಗೆ ಸೂಕ್ತವಾದ ಡಿಸೈನ್ ಹಾಗೂ ವಿನ್ಯಾಸವನ್ನು ಹೊಂದಿದೆ. ಹಾಗಾದ್ರೆ ಸೋನಿ ಕಂಪೆನಿ ಬಿಡುಗಡೆ ಮಾಡಿರುವ ಸೋನಿ ಪ್ಲೇಸ್ಟೇಷನ್ VR2 ಕನ್ಸೋಲ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೇಗಿದೆ ಗೊತ್ತಾ ಸೋನಿ PS VR2?
ಸೋನಿ ಪ್ಲೇಸ್ಟೇಷನ್ VR2 ಗೇಮಿಂಗ್ ಕನ್ಸೂಲ್ ಇಂದಿನ ಯುವಜನತೆಗೆ ಸೂಕ್ತವಾದ ಮಾದರಿಯನ್ನು ಹೊಂದಿದೆ. ಈ ಹೆಡ್‌ಸೆಟ್ ಪ್ರತಿ ಕಣ್ಣಿಗೆ 2000 x 2040 ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡುವ ಒಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 90Hz ಮತ್ತು 120Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ನೀಡಲಿದೆ. ಅಲ್ಲದೆ ಡಿಸ್‌ಪ್ಲೇ 110-ಡಿಗ್ರಿ ವ್ಯೂ ಫೀಲ್ಡ್ ಅನ್ನು ಹೊಂದಿದ್ದು, ಹೆಡ್‌ಸೆಟ್‌ನಲ್ಲಿ ನಾಲ್ಕು ಎಂಬೆಡೆಡ್ ಕ್ಯಾಮೆರಾಗಳು ಮತ್ತು ಕಂಟ್ರೋಲರ್ ಟ್ರ್ಯಾಕಿಂಗ್ ಮತ್ತು ಪ್ರತಿ ಕಣ್ಣಿಗೆ ಐ ಟ್ರ್ಯಾಕಿಂಗ್‌ಗಾಗಿ ಐಆರ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇನ್ನು PS VR2 ಗೇಮಿಂಗ್ ಕನ್ಸೋಲ್ ಒಟ್ಟು ಆರು-ಆಕ್ಸಿಸ್ ಮೋಷನ್ ಸೆನ್ಸಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರಲ್ಲಿ ಮೂರು-ಆಕ್ಸಿಸ್ ಗೈರೊಸ್ಕೋಪ್ ಸೆನ್ಸಾರ್ ಮತ್ತು ಮೂರು-ಆಕ್ಸಿಸ್ ಅಕ್ಸಿಲೆರೊಮೀಟರ್, ಐಆರ್ ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ನೀಡಲಾಗಿದೆ. ಅಲ್ಲದೆ ಇದು ಬಿಲ್ಟ್-ಇನ್ ಮೈಕ್ರೊಫೋನ್ ಮತ್ತು ಸ್ಟೆರೊಪ್ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದ್ದು, USB ಟೈಪ್-ಸಿ ಜ್ಯಾಕ್ ಮೂಲಕ ಚಾರ್ಜಿಂಗ್ ಮಾಡಬಹುದಾಗಿದೆ.

ಸೋನಿ PS VR2 ಗೇಮಿಂಗ್ ಕನ್ಸೂಲ್ ಪ್ರಮುಖ ಆಕರ್ಷಣೆ ಎಂದರೆ ಇದರ ವ್ಯೂ ಮೋಡ್ ಅಂತಾನೇ ಹೇಳಬಹುದು. ಈ ಹೆಡ್‌ಸೆಟ್ ಮೂಲಕ ನೀವು ಎರಡು ವೀಕ್ಷಣಾ ವಿಧಾನಗಳಲ್ಲಿ ಸಂವಹನ ನಡೆಸಬಹುದು. ಇದರ VR ಮೋಡ್ ಮೂಲಕ ಬಳಕೆದಾರರು VR ಗೇಮಿಂಗ್ ಕಂಟೆಂಟ್ ಅನ್ನು 360 ಡಿಗ್ರಿ ವ್ಯೂನಲ್ಲಿ ವರ್ಚುವಲ್ ವರ್ಲ್ಡ್‌ನಲ್ಲಿ ವೀಕ್ಷಿಸುವುದಕ್ಕೆ ಅವಕಾಶ ದೊರೆಯಲಿದೆ. ಅಲ್ಲದೆ 4000 x 2040 HDR ವೀಡಿಯೊ ಸ್ವರೂಪದಲ್ಲಿ ವೀಡಿಯೋ ಸ್ಟ್ರಿಮಿಂಗ್ ಮಾಡಲಿದೆ.
ಸೋನಿ ಸೋನಿ PS VR2 ಗೇಮಿಂಗ್ ಕನ್ಸೂಲ್ ಸಿನೆಮ್ಯಾಟಿಕ್ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು PS5 ಸಿಸ್ಟಮ್ ಮತ್ತು UI ಮತ್ತು ಎಲ್ಲಾ VR ಅಲ್ಲದ ಆಟ ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಂತಹ ಮೀಡಿಯಾ ಕಂಟೆಂಟ್ ಅನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಜೊತೆಗೆ 1920×1080 HDR ವೀಡಿಯೊ ಸ್ವರೂಪದಲ್ಲಿ ಕಂಟೆಂಟ್ ಅನ್ನು ಪ್ಲೇ ಮಾಡಲಿದೆ. ಇದರ ಫ್ರೇಮ್ ರೇಟ್ 24/60Hz ಮತ್ತು 120Hz ನಡುವೆ ಇರಲಿದೆ.

ಸೋನಿ PS VR2 ಬೆಲೆ ಮತ್ತು ಲಭ್ಯತೆ
ಸೋನಿ PS VR2 ಗೇಮಿಂಗ್ ಕನ್ಸೂಲ್ ಎರಡು ಬಂಡಲ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಸೋನಿ ಪ್ಲೇಸ್ಟೇಷನ್ VR2, ಇದು PS VR2 ಹೆಡ್‌ಸೆಟ್, PS VR2 ಸೆನ್ಸ್ ಕಂಟ್ರೋಲ್ ಹೊಂದಿದ್ದು, ಇದರ ಬೆಲೆ $549.99 (ಅಂದಾಜು 45,520ರೂ) ಆಗಿದೆ. ಹಾಗೆಯೇ ಮೌಂಟೇನ್ ಬಂಡಲ್‌ನ ಪ್ಲೇಸ್ಟೇಷನ್ VR2 ಹರೈಸನ್ ಕಾಲ್ ಬೆಲೆ $599.499 Rs 60 ರೂ.ಆಗಿದೆ.


Click it and Unblock the Notifications








