Home
ಸುದ್ದಿಜಾಲ

ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಲಾಂಚ್‌! ಫೀಚರ್ಸ್‌ ಹೇಗಿದೆ ಗೊತ್ತಾ?

ಟೆಕ್‌ ಜಗತ್ತಿನಲ್ಲಿ ಸೋನಿ ಬ್ರ್ಯಾಂಡ್‌ಗೆ ಅದರದ್ದೇ ಆದ ಸ್ಥಾನವಿದೆ. ತನ್ನ ಗುಣಮಟ್ಟದ ಡಿವೈಸ್‌ಗಳಿಂದಾಗಿ ಸೋನಿ ಕಂಪೆನಿ ಇಂದಿಗೂ ಕೂಡ ತನ್ನ ಪ್ರಸಿದ್ಧಿಯನ್ನು ಉಳಿಸಿಕೊಂಡಿದೆ. ಸೋನಿ ಕಂಪೆನಿ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್ಸ್‌ಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ಸ್ಮಾರ್ಟ್‌ಟಿವಿ ವಲಯದಲ್ಲಿ ಸೋನಿ ಕಂಪೆನಿ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ. ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳು ತಮ್ಮ ವಿನ್ಯಾಸ, ಗಾತ್ರ ಹಾಗೂ ಟೆಕ್ನಾಲಜಿಯ ಕಾರಣದಿಂದಾಗಿ ಎಲ್ಲರ ಗಮನ ಸೆಳೆಯುತ್ತಿವೆ. ಸದ್ಯ ಇದೀಗ ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ ಬ್ರಾವಿಯಾ XR ಮಾಸ್ಟರ್‌ ಸರಣಿ A95K OLED ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದೆ.

ಸೋನಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಬ್ರಾವಿಯಾ XR ಮಾಸ್ಟರ್‌ ಸರಣಿ A95K OLED ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಕಾಗ್ನಿಟಿವ್‌ ಪ್ರೊಸೆಸರ್‌ XRನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮನುಷ್ಯನ ಮೆದುಳಿನ ರೀತಿಯಲ್ಲಿ ಯೋಚಿಸುವ ಅನುಭವವನ್ನು ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ. ಇನ್ನು ಬ್ರಾವಿಯಾ XR ಮಾಸ್ಟರ್‌ ಸರಣಿ ಸಿನಿಮಾ ಅನುಭವವನ್ನು ನೀಡುವುದಕ್ಕಾಗಿ ಸೋನಿ ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್, ಐಮ್ಯಾಕ್ಸ್ ವರ್ಧಿತ ಮತ್ತು ನೆಟ್‌ಫ್ಲಿಕ್ಸ್ ಅಡಾಪ್ಟಿವ್ ಕ್ಯಾಲಿಬ್ರೇಟೆಡ್ ಮೋಡ್ ಅನ್ನು ಒಳಗೊಂಡಿದೆ.

ಬ್ರಾವಿಯಾ

ಇನ್ನು ಬ್ರಾವಿಯಾ XR ಮಾಸ್ಟರ್‌ ಸರಣಿ A95K OLED ಸ್ಮಾರ್ಟ್‌ಟಿವಿ ಗೂಗಲ್ ಟಿವಿ ಯೂಸರ್ ಇಂಟರ್‌ಫೇಸ್‌ನೊಂದಿಗೆ ಬರುತ್ತದೆ. UI ಆಪಲ್‌ ಏರ್‌ಪ್ಲೇ 2 ಮತ್ತು ಹೋಮ್‌ಕಿಟ್‌ ಜೊತೆಗೆ ಹ್ಯಾಂಡ್ಸ್‌ಫ್ರೀ ಸೌಂಡ್‌ ಸರ್ಚ್‌ ಅನ್ನು ನೀಡಲಿದೆ. ಈ ಸ್ಮಾರ್ಟ್‌ಟಿವಿಯ ಆರಂಭಿಕ ಬೆಲೆ 3,69,990ರೂ. ಆಗಿದೆ. ಇದು ಭಾರತದ ಎಲ್ಲಾ ಸೋನಿ ಸೆಂಟರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಿಂದ ಟಿವಿಯನ್ನು ಖರೀದಿಸಬಹುದು. ಹಾಗಾದ್ರೆ ಸೋನಿ ಬ್ರಾವಿಯಾ XR ಮಾಸ್ಟರ್‌ ಸರಣಿ A95K OLED ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೋನಿ

ಸೋನಿ ಬ್ರಾವಿಯಾ XR ಮಾಸ್ಟರ್‌ ಸಿರೀಸ್‌ A95K OLED ಸ್ಮಾರ್ಟ್ ಟಿವಿ ಕಾಂಟ್ರಾಸ್ಟ್ ಪ್ರೊ ಎಕ್ಸ್‌ಆರ್ ಟ್ರಿಲುಮಿನಸ್ ಮ್ಯಾಕ್ಸ್ ಅನ್ನು ಹೊಂದಿದೆ. ಇದು ಉತ್ತಮ ಬಣ್ಣವನ್ನು ರಿಪ್ರೊಡಕ್ಷನ್‌ ಮಾಡಲಿದೆ ಎಂದು ಸೋನಿ ಕಂಪನಿ ಹೇಳಿಕೊಂಡಿದೆ. ಇನ್ನು XR ಟ್ರೈಲುಮಿನಸ್ ಮ್ಯಾಕ್ಸ್ 3D ಕಲರ್‌ ಡೆಪ್ತ್‌ ಅನ್ನು ರಿಪ್ರೊಡಕ್ಷನ್‌ ಮಾಡಲಿದೆ. ಈ ಸ್ಮಾರ್ಟ್‌ಟಿವಿ 4K ಅಪ್‌ಸ್ಕೇಲಿಂಗ್ ಮತ್ತು XR OLED ಮೋಷನ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಗೇಮಿಂಗ್‌ಗಾಗಿ, 4K 120fps, ವೇರಿಯೇಬಲ್ ರಿಫ್ರೆಶ್ ರೇಟ್ (VRR), ಆಟೋ ಕಡಿಮೆ ಲೇಟೆನ್ಸಿ ಮೋಡ್ (ALLM), ಆಟೋ HDR ಟೋನ್ ಮತ್ತು ಆಟೋ ಗೇಮ್ ಮೋಡ್ ಸೇರಿದಂತೆ HDMI 2.1 ಹೊಂದಾಣಿಕೆಯೊಂದಿಗೆ ಮೀಸಲಾದ ಗೇಮ್ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ ಸಿನಿಮಾ ಮಾದರಿಯ ಅನುಭವಕ್ಕಾಗಿ, ಸೋನಿ ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್, ಐಮ್ಯಾಕ್ಸ್ ವರ್ಧಿತ ಮತ್ತು ನೆಟ್‌ಫ್ಲಿಕ್ಸ್ ಅಡಾಪ್ಟಿವ್ ಕ್ಯಾಲಿಬ್ರೇಟೆಡ್ ಮೋಡ್ ಅನ್ನು ಪಡೆದುಕೊಂಡಿದೆ.

ಸೋನಿ

ಸೋನಿ ಕಂಪೆನಿಯ ಈ ಸ್ಮಾರ್ಟ್‌ಟಿವಿ ಅಕೌಸ್ಟಿಕ್ ಸರ್ಫೇಸ್ ಆಡಿಯೋ+ ಮತ್ತು XR ಸರೌಂಡ್ ಜೊತೆಗೆ 3D ಸರೌಂಡ್ ಅಪ್‌ಸ್ಕೇಲಿಂಗ್‌ನೊಂದಿಗೆ ಸ್ಪೀಕರ್ ಹೊಂದಿದೆ. ಇದು ಆಂಬಿಯೆಂಟ್ ಆಪ್ಟಿಮೈಸೇಶನ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಮತ್ತು ಅಕೌಸ್ಟಿಕ್ ಆಟೋ ಕ್ಯಾಲಿಬ್ರೆಷನ್ ಟೆಕ್ನಾಲಜಿಯನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೂಗಲ್ ಟಿವಿ ಯೂಸರ್ ಇಂಟರ್‌ಫೇಸ್‌ನೊಂದಿಗೆ ಬರಲಿದೆ. ಇದು UI ಆಪಲ್‌ ಏರ್‌ಪ್ಲೇ 2 ಮತ್ತು ಹೋಮ್‌ಕಿಟ್‌ ಜೊತೆಗೆ ಹ್ಯಾಂಡ್ಸ್‌ಫ್ರೀ ವಾಯ್ಸ್‌ ಸರ್ಚ್‌ ಅನ್ನು ಕೂಡ ಹೊಂದಿದೆ.

ಸೋನಿ

ಇನ್ನು ಸೋನಿ ಬ್ರಾವಿಯಾ ಕ್ಯಾಮ್‌ನೊಂದಿಗೆ ಬಳಕೆದಾರರು ಟಿವಿಯನ್ನು ನಿಯಂತ್ರಿಸಲು ಗೆಸ್ಚರ್‌ಗಳನ್ನು ಕೂಡ ಬಳಸಬಹುದಾಗಿದೆ. ಇದಲ್ಲದೆ ಪ್ರಾಕ್ಸಿಮಿಟಿ ಆಲರ್ಟ್‌ ಮತ್ತು ಆಂಬಿಯೆಂಟ್ ಆಪ್ಟಿಮೈಸೇಶನ್ ಪ್ರೊ ಅನ್ನು ಸಹ ಒಳಗೊಂಡಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಟಿವಿಯು ಗೂಗಲ್‌ ಟಿವಿಯಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ. ಬ್ರಾವಿಯಾ ಕೋರ್‌ ಸೇವೆಗಳ ಮೂಲಕ ತನ್ನದೇ ಆದ ಕಂಟೆಂಟ್‌ ಕ್ಯಾಟಲಾಗ್ ಅನ್ನು ನೀಡಲಿದೆ. ಇದಲ್ಲದೆ ನೀವು iOS ಡಿವೈಸ್‌ಗಳಿಗಾಗಿ ಏರ್‌ಪ್ಲೇ 2 ಅನ್ನು ಸಹ ಬಳಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಬ್ರಾವಿಯಾ XR ಮಾಸ್ಟರ್‌ ಸಿರೀಸ್‌ A95K OLED ಟಿವಿ XR-65A95K ಮಾದರಿಗೆ 3,69,990ರೂ. ಬೆಲೆ ಹೊಂದಿದೆ. ಇದು ಭಾರತದಲ್ಲಿರುವ ಎಲ್ಲಾ ಸೋನಿ ಸೆಂಟರ್‌ಗಳು, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಸೋನಿ

ಇನ್ನು ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ದುಬಾರಿ ಬೆಲೆಯ ಸೋನಿ ಬ್ರಾವಿಯಾ XR OLED A80K ಸ್ಮಾರ್ಟ್‌ಟಿವಿ ಪರಿಚಯಿಸಿತ್ತು. ಈ ಸ್ಮಾರ್ಟ್‌ಟಿವಿ ಗೂಗಲ್‌ ಟಿವಿ ಯೂಸರ್‌ ಇಂಟರ್‌ಫೇಸ್‌ ಹೊಂದಿದ್ದು, ಆಂಡ್ರಾಯ್ಡ್‌ ಟಿವಿ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ IMAX ವರ್ಧಿತ ಮತ್ತು ನೆಟ್‌ಫ್ಲಿಕ್ಸ್ ಅಡಾಪ್ಟಿವ್ ಕ್ಯಾಲಿಬ್ರೇಟೆಡ್ ಮೋಡ್‌ ಫೀಚರ್ಸ್‌ಗಳನ್ನು ಕೂಡ ನೀಡಲಾಗಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು 55 ಇಂಚು, 65 ಇಂಚು, 77 ಇಂಚಿನ ಆಯ್ಕೆಯ ಡಿಸ್‌ಪ್ಲೇ ಗಾತ್ರದ ಆಯ್ಕೆಯಲ್ಲಿ ದೊರೆಯಲಿವೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್, HDR10 ಮತ್ತು HLG ಫಾರ್ಮ್ಯಾಟ್‌ಗಳೊಂದಿಗೆ ಹೆಚ್ಚಿನ ಡೈನಾಮಿಕ್ ಶ್ರೇಣಿಯ ವಿಷಯಕ್ಕೆ ಬೆಂಬಲವನ್ನು ನೀಡಲಿದೆ. ಈ ಹೊಸ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ನೊಂದಿಗೆ HDMI 2.1 ಬೆಂಬಲಿತವಾಗಿದೆ. ಸೋನಿ ಬ್ರಾವಿಯಾ XR OLED A80K ಸರಣಿಯು ಕಾಗ್ನಿಟಿವ್ ಪ್ರೊಸೆಸರ್ XR ನಿಂದ ರನ್‌ ಆಗಲಿದೆ. ಇದು ಆಂಡ್ರಾಯ್ಡ್‌ ಟಿವಿ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ಸ್ಮಾರ್ಟ್‌ಟಿವಿ ವಿಷಯ ಮತ್ತು ವೀಕ್ಷಣಾ ಪರಿಸ್ಥಿತಿಗಳ ಆಧಾರದ ಮೇಲೆ ಉತ್ತಮ ಮತ್ತು ಹೆಚ್ಚು ಹೊಂದಾಣಿಕೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಪ್ರೊಸೆಸರ್ ಪಿಕ್ಚರ್ ಕ್ವಾಲಿಟಿ ನೈಜತೆಯಿಂದ ಕೂಡಿದ ಗುಣಮಟ್ಟವನ್ನು ನೀಡುತ್ತದೆ.

Best Mobiles in India

English summary
Sony has launched the new Bravia XR Master Series A95K OLED smart TV in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+