Home
ಸುದ್ದಿಜಾಲ

ಸೋನಿ HT-G 700 3.1 ಡಾಲ್ಬಿ ಅಟ್ಮೋಸ್‌ ಸೌಂಡ್‌ಬಾರ್ ಬಿಡುಗಡೆ!

ಜಾಗತಿಕ ಮಾರುಕಟ್ಟೆಯಲ್ಲಿ ಎವರ್‌ಗ್ರೀನ್‌ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿರುವ ಸೋನಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ಸೋನಿ ತನ್ನ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳ ಮೂಲಕ ಟೆಕ್‌ ವಲಯದಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಇಯರ್‌ಫೋನ್‌, ಇಯರ್‌ ಬಡ್ಸ್‌ಗಳಲ್ಲದೆ ಉತ್ತಮವಾದ ಸೌಂಡ್‌ ಸಿಸ್ಟಂಗಳನ್ನು ಸಹ ಪರಿಚಯಿಸಿರುವ ಸೋನಿ ಇದೀಗ ತನ್ನ ಮತ್ತೊಂದು ಹೊಸ ಸೌಂಡ್‌ಬಾರ್‌ ಅನ್ನು ಬಿಡುಗಡೆ ಮಾಡಿದೆ.

ಟೆಕ್‌

ಹೌದು, ಟೆಕ್‌ ಮಾರುಕಟ್ಟೆಯಲ್ಲಿ ಈಗಾಗಲೇ ಸೋನಿ ಕಂಪೆನಿಯ ಹಲವು ಯೋಗ್ಯವಾದ ಸೌಂಡ್‌ಬಾರ್‌ಗಳು ಲಭ್ಯವಿವೆ. ಅಲ್ಲದೆ ಸೋನಿ ಕಂಪೆನಿ ಈಗಾಗಲೇ ಬಜೆಟ್‌ನಿಂದ ಹಿಡಿದು ಉನ್ನತ ಮಟ್ಟದವರೆಗೆ ಸೌಂಡ್‌ಬಾರ್‌ಗಳನ್ನ ಹೊಮದಿದೆ. ಇದೀಗ ತನ್ನ ಹೊಸ ಮಧ್ಯ ಶ್ರೇಣಿಯ ಮಾದರಿಯ ಸೌಂಡ್‌ಬಾರ್‌ ಅನ್ನು ಪರಿಚಯಿಸಿದೆ. ಸದ್ಯ ಸೋನಿ ಎಚ್‌ಟಿ-ಜಿ 700 ಸೌಮಡ್‌ ಬಾರ್‌ ಅನ್ನು ಬಿಡುಗಡೆ ಮಾಡಿದ್ದು, ಇದು ಡಾಲ್ಬಿ ಅಟ್ಮೋಸ್‌ ಅನ್ನು ಹೊಂದಿದ್ದು ವಾಯರ್‌ಲೆಸ್‌ ಸಬ್‌ ವೂಪರ್‌ ಕೂಡ ಸೇರಿಕೊಂಡಿದೆ. ಇನ್ನು ಈ ಸೌಂಡ್‌ಬಾರ್‌ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸೋನಿ

ಸೋನಿ HT-G 700 3.1-ಚಾನೆಲ್ ಸೌಂಡ್‌ಬಾರ್ ಡಾಲ್ಬಿ ಅಟ್ಮೋಸ್‌ ಅನ್ನು ಹೊಂದಿದ್ದು, ಇದರ ಜೊತೆಗೆ ವಾಯರ್‌ಲೆಸ್‌ ಸಬ್‌ವೂಫರ್‌ ಕೂಡ ಬರಲಿದೆ. ಅಲ್ಲದೆ ಡಾಲ್ಬಿ ಅಟ್ಮೋಸ್ ಮತ್ತು ಸ್ಟೀರಿಯೋ ಆಡಿಯೊವನ್ನು 7.1.2 ಚಾನೆಲ್ ಸರೌಂಡ್ ಸೌಂಡ್‌ಗೆ ಏರಿಸುವ ಸಾಮರ್ಥ್ಯವನ್ನು ಇದರಲ್ಲಿ ನೀಡಲಾಗಿದೆ. ಇನ್ನು ಈ ಸೌಂಡ್‌ಬಾರ್‌ನಲ್ಲಿ ಎರಡೂ ಪೂರ್ಣ-ಶ್ರೇಣಿಯ ಡ್ರೈವರ್‌ಗಳು ಮತ್ತು ಮೂವಿ ಡೈಲಾಗ್ಸ್‌ಗಳಿಗೆ ಉತ್ತಮ ಧ್ವನಿ ನೀಡುವುದಕ್ಕಾಗಿ ಸೆಂಟರ್ ಸ್ಪೀಕರ್ ನೀಡಲಾಗಿದೆ. ಇದಲ್ಲದೆ ಸಬ್ ವೂಫರ್ ಜೊತೆಗೆ, HT-G 700 ಒಟ್ಟು 400W ವಿದ್ಯುತ್ ಉತ್ಪಾದನೆಯನ್ನು ಹೊಂದಿದೆ ಎಂದು ಸೋನಿ ಹೇಳಿದೆ.

ಸೋನಿಯಾ

ಇನ್ನು ಸೋನಿಯಾ ಈ ಸೌಂಡ್‌ಬಾರ್‌ ಸಿಸ್ಟಮ್ ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ಎಕ್ಸ್ ಸೇರಿದಂತೆ ಹೆಚ್ಚಿನ ಡಿಜಿಟಲ್ ಸರೌಂಡ್ ಸ್ವರೂಪಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಸೌಂಡ್‌ಬಾರ್ ಒಂದೇ ಎಚ್‌ಡಿಎಂಐ ಇನ್ಪುಟ್ ಮತ್ತು ಔಟ್‌ಪುಟ್ ಅನ್ನು ಕ್ರಮವಾಗಿ EARC ಮತ್ತು ARC ಬೆಂಬಲದೊಂದಿಗೆ ಹೊಂದಿದೆ ಮತ್ತು ಆಪ್ಟಿಕಲ್ ಆಡಿಯೊ-ಇನ್ ಹೊಂದಿದೆ. ಇದಲ್ಲದೆ ಇದರಲ್ಲಿ ಫುಲ್‌ ಡಾಲ್ಬಿ ಅಟ್ಮೋಸ್ ಸೆಟಪ್‌ನಿಂದ ಸರೌಂಡ್ ಸೌಂಡ್ ಅನುಭವವನ್ನು ಅನುಕರಿಸಲು ಇದರಲ್ಲಿ ಸೋನಿಯ ಲಂಬ ಸರೌಂಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಥಿಯೇಟರ್, ಮ್ಯೂಸಿಕ್, ವಾಯ್ಸ್ ಮತ್ತು ನೈಟ್‌ನಂತಹ ವಿಭಿನ್ನ ಸೌಂಡ್‌ ಸಿಸ್ಟಂಗಳನ್ನ ಸಹ ನೀಡಲಾಗಿದೆ.

ಸೋನಿ

ಸೋನಿ ಈ ಸೌಂಡ್‌ಬಾರ್‌ನಲ್ಲಿ ಹೊಸ ಮಾದರಿಯ ಟೆಕ್ನಾಲಜಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಸದ್ಯ ಈ ಸೌಂಡ್‌ಬಾರ್‌ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದ್ದು,ಇದ್ದರಿಂದ ನೀವು ನಿಮ್ಮ ಫೋನ್‌ನಿಂದ ಮ್ಯೂಸಿಕ್‌ ಅನ್ನು ಸೌಂಡ್‌ಬಾರ್ ಮೂಲಕ ಸ್ಟ್ರೀಮ್ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಈ ಸೌಂಡ್‌ಬಾರ್‌ ಪಾರ್ಟಿ ಹಾಗೂ ಹೋಂ ಥೀಯೆಟರ್‌ನಲ್ಲಿ ಉತ್ತಮ ಅನುಭವ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸದ್ಯ ಸೋನಿ HT-G 700 ಯುಎಸ್‌ನಲ್ಲಿ ಈಗ ಲಭ್ಯವಿದ್ದು, ಇದರ ಬೆಲೆ $ 600 (ಸರಿಸುಮಾರು ರೂ. 45,300) ಆಗಿದೆ.

Best Mobiles in India

English summary
Sony has a decent selection of soundbars, right from budget to high-end and now, it's added a new mid-range model to its lineup.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+