ಸೋನಿ ಸಂಸ್ಥೆಯಿಂದ ನಾಲ್ಕು ದಿನಗಳ ಸ್ಪೇಷಲ್‌ ಪ್ರೈಸ್‌ ಆಫರ್‌ ಪ್ರಕಟ!

|

ಸೋನಿ ಕಂಪೆನಿ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು, ಹೆಡ್‌ಫೋನ್‌ಗಳು, ಬ್ಲೂಟೂತ್‌ ಸ್ಪೀಕರ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ ಸೋನಿ ಕಂಪೆನಿ ಹೆಡ್‌ಫೋನ್‌ಗಳು, ಟ್ರೂಲಿ ವಾಯರ್‌ಲೆಸ್‌ ಸರಣಿಗಳು, ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳು ಮತ್ತು ಸೌಂಡ್‌ಬಾರ್‌ ಸೇರಿದಂತೆ ಅನೇಕ ಆಯ್ದ ಆಡಿಯೊ ಪ್ರಾಡಕ್ಟ್‌ಗಳ ಮೇಲೆ ವಿಶೇಷ ಆಫರ್‌ ಅನ್ನು ಘೋಷಿಸಿದೆ.

ಸೋನಿ

ಹೌದು, ಸೋನಿ ಕಂಪೆನಿ ವರ್ಲ್ಡ್‌ ಮ್ಯೂಸಿಕ್‌ ದಿನಾಚರಣೆಯ ಪ್ರಯುಕ್ತ 4 ದಿನಗಳ ವಿಶೇಷ ಸೇಲ್‌ ಅನ್ನು ಪ್ರಕಟಿಸಿದೆ. ಮ್ಯೂಸಿಕ್‌ ಪ್ರಿಯರು ಮತ್ತು ಆಡಿಯೊ ಫೈಲ್‌ಗಳನ್ನು ಪ್ರೀಮಿಯಂ ಆಡಿಯೊ ಪ್ರಾಡಕ್ಟ್‌ಗಳನ್ನು ಖರೀದಿಸಲು ಉತ್ತಮ ಅವಕಾಶ ನೀಡಿದೆ. ಇನ್ನು ಈ ವಿಶೇಷ ಬೆಲೆ ಪ್ರಸ್ತಾಪವು ಜೂನ್ 18, 2021 ರಿಂದ ಜೂನ್ 21, 2021 ರವರೆಗೆ ಮಾನ್ಯವಾಗಿರಲಿದೆ. ಇದು ಸೋನಿ ರಿಟೇಲ್‌ ಸ್ಟೋರ್‌, www.ShopatSC.com ಪೋರ್ಟಲ್, ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಇದನ್ನು ಪಡೆಯಬಹುದು. ಹಾಗಾದ್ರೆ ಸೋನಿ ಕಂಪೆನಿ ಬಳಕೆದಾರರಿಗೆ ಯಾವೆಲ್ಲಾ ಪ್ರಾಡಕ್ಟ್‌ಗಲ ಮೇಲೆ ವಿಶೇಷ ಪ್ರೈಸ್‌ ಆಫರ್‌ ನೀಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5000 ರೂ.ಗಿಂತ ಕಡಿಮೆ ಬೆಲೆಯ ಇಯರ್‌ಫೋನ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳು

5000 ರೂ.ಗಿಂತ ಕಡಿಮೆ ಬೆಲೆಯ ಇಯರ್‌ಫೋನ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳು

ಸೋನಿ ಕಂಪೆನಿ ತನ್ನ ಗುಣಮಟ್ಟದ ಇಯರ್‌ಫೋನ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳನ್ನು ಮಾರಾಟಕ್ಕೆ ಇಟ್ಟಿದೆ. ಇವು ವಿದ್ಯಾರ್ಥಿ ಸ್ನೇಹಿಯಾಗಿದ್ದು, 5000 ರೂ.ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿವೆ. ಇನ್ನು ಸೋನಿ ಇಯರ್‌ಫೋನ್‌ಗಳಾದ WI-SP510 ಅನ್ನು 3990 ರೂ.ಗೆ ದೊರೆಯಲಿದೆ. ಇದರ ಮೂಲ ಬೆಲೆ 6990ರೂ,ಆಗಿದೆ. ಇನ್ನು WI-C310 ಇಯರ್‌ಫೋನ್‌ 3290 ರೂ ಮೂಲ ಬೆಲೆ ಹೊಂದಿದ್ದು, ಸದ್ಯ 2190 ರೂ ಬೆಲೆಗೆ ಲಭ್ಯವಾಗಲಿದೆ. ಜೊತೆಗೆ 2990 ರೂ.ಮೂಲ ಬೆಲೆಯ W-C200 ಹೆಡ್‌ಫೋನ್‌ 1699 ರೂ.ಬೆಲೆಗೆ ದೊರೆಯಲಿದೆ.

10,000 ರೂ ಒಳಗಿನ ಹೆಡ್‌ಫೋನ್ ಮತ್ತು ಟಿಡಬ್ಲ್ಯೂಎಸ್ ಇಯರ್‌ಬಡ್ಸ್‌

10,000 ರೂ ಒಳಗಿನ ಹೆಡ್‌ಫೋನ್ ಮತ್ತು ಟಿಡಬ್ಲ್ಯೂಎಸ್ ಇಯರ್‌ಬಡ್ಸ್‌

ವೃತ್ತಿಪರರು ಮತ್ತು ಮನೆಯಿಂದ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಉಪುಯೋಗವಾಗುವ ನಾಯ್ಸ್‌ ಕ್ಯಾನ್ಸಲೇಶನ್‌ ಹೆಡ್‌ಫೋನ್‌ಗಳು ಮತ್ತು ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳಿಗೆ ವಿಶೇಷ ಪ್ರೈಸ್‌ ಆಫರ್‌ ನೀಡಿದೆ. ಇದರಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಹೆಡ್‌ಫೋನ್ WH-CH710N ಮೂಲತಃ 14,990 ರೂ. ಬೆಲೆ ಹೊಂದಿದ್ದು, 7990 ರೂ.ಬೆಲೆಗೆ ದೊರೆಯಲಿದೆ. ಇನ್ನು WF-H800 ಹೆಡ್‌ಫೋನ್‌ 8,990 ರೂ, ಬೆಲೆಗೆ ಮತ್ತು WF-XB700 ಹೆಡ್‌ಫೋನ್‌ 6,990 ರೂ,ಗಳಿಗೆ ದೊರೆಯಲಿದೆ.

ಸೋನಿ

ಇದಲ್ಲದೆ ಸೋನಿ ಹೋಮ್ ಆಡಿಯೊ ಉತ್ಪನ್ನಗಳಾದ ಸೌಂಡ್‌ಬಾರ್‌ಗಳು ಮತ್ತು ಹೋಮ್ ಥಿಯೇಟರ್‌ಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಚಲನಚಿತ್ರ ಮತ್ತು ಸಂಗೀತ ಪ್ರಿಯರಿಗೆ ಹೊಂದಾಣಿಕೆಯ ಧ್ವನಿ ಗುಣಮಟ್ಟದೊಂದಿಗೆ ಟಿವಿ ನೋಡುವ ಅನುಭವವನ್ನು ಹೆಚ್ಚಿಸಲು ಸೋನಿ ಹೋಮ್ ಥಿಯೇಟರ್‌ಗಳು ಮತ್ತು ಸೌಂಡ್‌ಬಾರ್‌ಗಳಲ್ಲಿ ಶೇಕಡಾ 22 ರವರೆಗೆ ಮತ್ತು ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಶೇಕಡಾ 31 ರವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಕಡಿಮೆ ಬೆಲೆಯ ಬ್ಲೂಟೂತ್ ಸ್ಪೀಕರ್ ಬೆಲೆ 7990 ರೂ ಮತ್ತು 14,990 ರೂ.ಗಳವರೆಗೆ ದೊರೆಯಲಿದೆ. ಇನ್ನು ಸೌಂಡ್‌ಬಾರ್‌ಗಳು 16,990 ರೂ.ಗಳಿಂದ ಮತ್ತು 24,990 ರೂ. ತನಕ ಲಬ್ಯವಾಗಲಿದೆ.

Most Read Articles
Best Mobiles in India

English summary
Sony India on Thursday announced a 4-day sale for World Music Day with special offers on select audio products.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X