Sony: ಸೋನಿಯಿಂದ ಹೊಸ ಇಯರ್‌ಬಡ್ಸ್ ಲಾಂಚ್! ಭಾರತದಲ್ಲಿ ಬೆಲೆ ಎಷ್ಟು ಗೊತ್ತಾ?
ಸೋನಿ ಕಂಪೆನಿಯ ಇಯರ್‌ಡ್ಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಬಾರತದಂತಹ ಮಾರುಕಟ್ಟೆಯಲ್ಲಿ ಸೋನಿ ತನ್ನ ಗುಣಮಟ್ಟದ ಇಯರ್‌ಬಡ್ಸ್‌ಗಳಿಂದಾಗಿಯೇ ಸಾಕಷ್ಟು ಗಮನಸೆಳೆದಿದೆ. ಅದರ ಮುಂದುವರೆದ ಭಾಗವೆಂಬಂತೆ ಇದೀಗ ಹೊಸದಾಗಿ Sony INZONE ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಬಡ್ಸ್ ಇನ್ ಇಯರ್ ವಿನ್ಯಾಸವನ್ನು ಹೊಂದಿದೆ.
ಹೌದು, Sony INZONE ಬಡ್ಸ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಇಯರ್‌ಬಡ್ಸ್ ಗೇಮಿಂಗ್ ಸಮಯದಲ್ಲಿ ಅನಗತ್ಯ ಶಬ್ದವನ್ನು ಫಿಲ್ಟರ್ ಮಾಡಲು ಅಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್‌ದೊಂದಿಗೆ ಬರಲಿದೆ. ಈ ಗೇಮಿಂಗ್ ಇಯರ್‌ಬಡ್ಸ್ 12 ಗಂಟೆಗಳ ಬ್ಯಾಟರಿ ಅವಧಿಯನ್ನು ಸಹ ಹೇಳಿಕೊಂಡಿದೆ. ಹಾಗಾದ್ರೆ ಈ ಹೊಸ ಇಯರ್‌ಬಡ್ಸ್ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Sony INZONE ಬಡ್ಸ್ ಫೀಚರ್ಸ್ ಹೇಗಿದೆ?
Sony INZONE ಗೇಮಿಂಗ್ ಇಯರ್‌ಬಡ್ಸ್ ರಬ್ಬರ್ ಇಯರ್ ಟಿಪ್ಸ್‌ನೊಂದಿಗೆ ಇನ್-ಇಯರ್ ವಿನ್ಯಾಸವನ್ನು ಹೊಂದಿವೆ. ಇದು ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಇನ್ನು ಇಯರ್‌ಬಡ್ಸ್ 8.4mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ANC ಅನ್ನು ಬೆಂಬಲಿಸಲಿದೆ. ಇದಲ್ಲದೆ ಗೇಮಿಂಗ್ ಸಮಯದಲ್ಲಿ ಯಾವುದೇ ಧ್ವನಿ ವಿಳಂಬವನ್ನು ತಪ್ಪಿಸಲು ಇಯರ್‌ಬಡ್‌ಗಳು 30ms ಗಿಂತ ಕಡಿಮೆ ಸುಪ್ತತೆಯನ್ನು ಹೊಂದಿವೆ.
ಇನ್ನು ಇಯರ್‌ಬಡ್ಸ್ LC3 ಕೊಡೆಕ್‌ಗೆ ಬೆಂಬಲವನ್ನು ಹೊಂದಿದ್ದು, INZONE ಇಯರ್‌ಬಡ್ಸ್ ಆಡಿಯೊ ಟ್ರಾನ್ಸ್‌ಮಿಷನ್‌ಗಾಗಿ ಬ್ಲೂಟೂತ್ ಲೋ ಎನರ್ಜಿಯನ್ನು ಬಳಸಲಿದೆ. ಇದಲ್ಲದೆ ಇಯರ್‌ಬಡ್ಸ್ ಪ್ರಾದೇಶಿಕ ಆಡಿಯೊಗೆ ಬೆಂಬಲವನ್ನು ಸಹ ನೀಡಲಿದೆ. ಬಳಕೆದಾರರು ತಮ್ಮ ಕಿವಿಯ ಚಿತ್ರವನ್ನು ತೆಗೆದುಕೊಳ್ಳಬಹುದಾಗಿದ್ದು, Sony ಕಂಪ್ಯಾನಿಯನ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.

ಇದಲ್ಲದೆ Sony ತನ್ನ ಗೇಮಿಂಗ್ ಇಯರ್‌ಬಡ್ಸ್‌ನಲ್ಲಿ ಸೌಂಡ್ ಔಟ್‌ಪುಟ್ ಮತ್ತು ವೈಶಿಷ್ಟ್ಯಗಳನ್ನು ಟ್ಯೂನ್ ಮಾಡಲು ಎಸ್‌ಪೋರ್ಟ್ಸ್ ಸಂಸ್ಥೆ ಫೆನಾಟಿಕ್‌ನ ವೃತ್ತಿಪರ ಗೇಮರ್‌ಗಳೊಂದಿಗೆ ಸಹ ಸಹಯೋಗ ಹೊಂದಿದೆ. ಇಯರ್‌ಬಡ್‌ಗಳಲ್ಲಿರುವ ಮೈಕ್ರೊಫೋನ್ ಶಬ್ದ ಶೋಧನೆಗಾಗಿ AI ಅನ್ನು ಬಳಸಲಿದ್ದು, 500 ಮಿಲಿಯನ್ ಧ್ವನಿ ಮಾದರಿಗಳನ್ನು ತರಬೇತುಗೊಳಿಸಿದೆ. ಅಲ್ಲದೆ ಧ್ವನಿ ಸಂವಹನದಲ್ಲಿ ಬ್ಯಾಕ್‌ಗ್ರೌಂಡ್ ನಿಂದ ಮೈಕ್ರೊಫೋನ್ ಅನಗತ್ಯ ಶಬ್ದಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ಇನ್ನು Sony INZONE ಇಯರ್‌ಬಡ್ಸ್ ಟಚ್ ಕಂಟ್ರೋಲ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದರಿಂದ ವಾಲ್ಯೂಮ್ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಸರಿಹೊಂದಿಸಲು ಅಥವಾ ಕಸ್ಟಮೈಸ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಈ ಇಯರ್‌ಬಡ್ಸ್‌ಗಳು 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಆದರೆ ಚಾರ್ಜಿಂಗ್ ಕೇಸ್‌ನೊಂದಿಗೆ ಜೋಡಿಸಿದಾಗ, ಇಯರ್‌ಬಡ್ಸ್ 24 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಚಾರ್ಜಿಂಗ್‌ಗಾಗಿ USB-C ಪೋರ್ಟ್ ಅನ್ನು ಬೆಂಬಲಿಸಲಿದೆ.

Sony INZONE ಬಡ್ಸ್: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸೋನಿ INZONE ಬಡ್ಸ್ 17,990 ರೂ. ಬೆಲೆ ಹೊಂದಿದೆ. ಇದನ್ನು ಸೋನಿಯ ರಿಟೇಲ್ ಸ್ಟೋರ್‌ಗಳು, ಶೋಪಾಟ್‌ಎಸ್‌ಸಿ ಪೋರ್ಟಲ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಇ-ಕಾಮರ್ಸ್ ಪೋರ್ಟಲ್ ಮೂಲಕ ಖರೀದಿಗೆ ಲಭ್ಯವಾಗಲಿದೆ. ಇನ್ನು ಇಯರ್‌ಬಡ್ಸ್ ಬಿಳಿ ಮತ್ತು ಕಪ್ಪು ಬಣ್ಣದ ಅಯ್ಕೆಗಳಲ್ಲಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರಿಪಬ್ಲಿಕ್ ಡೇ ಸೆಲ್ ಪ್ರಯುಕ್ತ ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 500ರೂ ವರೆಗೆ ಕೆಲವು ಬ್ಯಾಂಕ್ ರಿಯಾಯಿತಿಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಸೋನಿ ಕಂಪೆನಿ BZ40L, BZ35L ಮತ್ತು BZ30L ಸರಣಿಯ 13 ಹೊಸ Bravia 4K HDR ಟಿವಿಗಳನ್ನು ಅನಾವರಣಗೊಳಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಬ್ಯುಸಿನೆಸ್ ಮತ್ತು ಉತ್ತಮ ಚಿತ್ರ ಗುಣಮಟ್ಟ, ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಈ ಸರಣಿಯಲ್ಲಿ 43 ಇಂಚುಗಳಿಂದ 85 ಇಂಚಿನ ಗಾತ್ರದ ಸ್ಮಾರ್ಟ್‌ಟಿವಿಗಳು ಇದರಲ್ಲಿ ಸೇರಿವೆ.


Click it and Unblock the Notifications








