ಸೋನಿ ಆಲ್ಫಾ 1 ಫುಲ್‌ ಫ್ರೇಮ್‌ ಮಿರರ್‌ ಲೆಸ್‌ ಕ್ಯಾಮೆರಾ ಲಾಂಚ್‌! ಬೆಲೆ ಎಷ್ಟು?

|

ಪ್ರಸ್ತುತ ದಿನಗಳಲ್ಲಿ ಕ್ಯಾಮೆರಾ ಪ್ರಪಂಚ ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಆಪ್ಡೇಟ್‌ ಆದಂತೆ ಕ್ಯಾಮೆರಾಗಳ ವಿನ್ಯಾಸವೂ ಕೂಡ ಬದಲಾಗುತ್ತಿದೆ. ಇನ್ನು ಕ್ಯಾಮೆರಾ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಕ್ಯಾಮೆರಾಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇದರಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದೆ. ಕ್ಯಾಮೆರಾ ವಲಯದಲ್ಲಿ ಮುಂಚೂಣಿ ಬ್ರಾಂಡ್‌ ಎನಿಸಿಕೊಂಡಿರುವ ಸೋನಿ ಸಂಸ್ಥೆ ಇದೀಗ ತನ್ನ ಹೊಸ ಆಲ್ಫಾ 1 ಪ್ಲ್ಯಾಗ್‌ಶಿಪ್‌ ಫುಲ್‌-ಫ್ರೇಮ್‌ ಮಿರರ್‌ಲೆಸ್‌ ಕ್ಯಾಮೆರಾವನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಸೋನಿ

ಹೌದು, ಸೋನಿ ಕಂಪೆನಿ ಹೊಸ ಆಲ್ಫಾ 1 ಫ್ಲ್ಯಾಗ್‌ಶಿಪ್ ಫುಲ್-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸೋನಿಯ ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಗ್ರಾಹಕ-ಮಟ್ಟದ ಕ್ಯಾಮೆರಾ ಆಗಿದೆ. ಅಲ್ಲದೆ ಇದು ಸೋನಿ A7 ಎಸ್ III ಮತ್ತು A7 R IV ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಆಲ್ಫಾ 1 ಆಲ್ಫಾ ಸರಣಿಯ ಮೊದಲ ಸೋನಿ ಕ್ಯಾಮೆರಾವಾಗಿದ್ದು, 8K ವಿಡಿಯೋವನ್ನು ಶೂಟ್ ಮಾಡಬಹುದಾಗಿದೆ. ಇನ್ನುಳಿದಂತೆ ಈ ಕ್ಯಾಮೆರಾ ಒಳಗೊಂಡಿರುವ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಆಲ್ಫಾ 1

ಸೋನಿ ಆಲ್ಫಾ 1 ಕ್ಯಾಮೆರಾ ಆಲ್ಫಾ ಸರಣಿಯ ಮೊದಲ ಸೋನಿ ಕ್ಯಾಮೆರಾ ಆಗಿದೆ. ಇದು ಬರ್ಡ್ ಐ ಎಎಫ್ ಹೊಂದಿದೆ ಮತ್ತು ವಿಡಿಯೋಕ್ಕಾಗಿ ಎಸ್-ಸಿನೆಟೋನ್ ಕಲರ್ ಪ್ರೊಫೈಲ್‌ನೊಂದಿಗೆ ಬರುತ್ತದೆ. ಇನ್ನು ಈ ಕ್ಯಾಮೆರಾ ವೃತ್ತಿಪರ ಫೋಟೋಗ್ರಾಫರ್‌ಗಳಿಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ವಿಡಿಯೋಗ್ರಾಫರ್‌ಗಳಿಗೆ ಹೆಚ್ಚಿನ ರೆಸಲ್ಯೂಶನ್ ಸೆನ್ಸಾರ್‌, ವೇಗದ ಬರ್ಸ್ಟ್ ಶೂಟಿಂಗ್ ಮತ್ತು ಚಿತ್ರೀಕರಣಕ್ಕಾಗಿ ನೆಕ್ಸ್ಟ್‌ ಜನ್ ರೆಸಲ್ಯೂಶನ್ ಅಗತ್ಯವಿರುತ್ತದೆ. ಆದರಿಂದ ಇದರಲ್ಲಿ ಹೊಸ 50.1-ಮೆಗಾಪಿಕ್ಸೆಲ್ ಸ್ಟ್ಯಾಕ್ಡ್ ಸೆನ್ಸಾರ್ ಅನ್ನು ನೀಡಲಾಗಿದ್ದು, ಇದು ಬಯೋನ್ಜ್ XR ಇಮೇಜ್ ಪ್ರೊಸೆಸರ್‌ ಅನ್ನು ಹೊಂದಿದೆ.

ಸೋನಿ ಆಲ್ಫಾ 1

ಇನ್ನು ಸೋನಿ ಆಲ್ಫಾ 1 ಎಲೆಕ್ಟ್ರಾನಿಕ್ ವ್ಯೂಫೈಂಡರ್ ಅನ್ನು ಹೊಂದಿದ್ದು, ಇದು UXGA ರೆಸಲ್ಯೂಶನ್‌ನಲ್ಲಿ ಗರಿಷ್ಠ 240fps ರೇಟ್‌ ಅನ್ನು ಹೊಂದಿದೆ. ಇದಲ್ಲದೆ 30fps 155 ಫುಲ್‌-ಫ್ರೇಮ್ ಸಂಕುಚಿತ ರಾ ಚಿತ್ರಗಳ AF /AE ಟ್ರ್ಯಾಕಿಂಗ್ ಮತ್ತು ಯಾವುದೇ ಬ್ಲ್ಯಾಕೌಟ್‌ಗಳಿಲ್ಲದ ಶೂಟಿಂಗ್ ಅನ್ನು ಹೊಂದಿದೆ. ಇನ್ನು ಸೋನಿ ಆಲ್ಫಾ 1 ನಲ್ಲಿ 8K 30f, 10-ಬಿಟ್ 4: 2: 0 XAVC HS ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 4K 120fps ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಮಾಡಬಹುದು.

ಕ್ಯಾಮೆರಾ

ಇದಲ್ಲದೆ ಈ ಕ್ಯಾಮೆರಾ ದಲ್ಲಿ 5-ಆಕ್ಸಿಸ್ ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್, ಮಾನವರು ಮತ್ತು ಪ್ರಾಣಿಗಳಿಗೆ ಸುಧಾರಿತ ನೈಜ-ಸಮಯದ ಐ ಎಎಫ್, ಪಕ್ಷಿಗಳಿಗೆ ಐ ಎಎಫ್ (ಸ್ಟಿಲ್‌ಗಳಿಗೆ ಮಾತ್ರ), ವಿಷಯಗಳ ಮೇಲೆ ಉತ್ತಮ ಆಟೋಫೋಕಸ್ ಲಾಕ್‌ಗಾಗಿ ಎಐ ಆಧಾರಿತ ಟ್ರ್ಯಾಕಿಂಗ್ ಮತ್ತು S ನಂತಹ ಸುಧಾರಿತ ಶೂಟಿಂಗ್ ಪ್ರೊಫೈಲ್‌ಗಳು ಸಹ ಇವೆ. ಇನ್ನು ಸೋನಿ ಆಲ್ಫಾ 1 ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-ಯುಎಸ್‌ಬಿ ಪೋರ್ಟ್, ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ ವೈ-ಫೈ, 3.5mm ಮೈಕ್ ಟರ್ಮಿನಲ್ ಮತ್ತು ಲ್ಯಾನ್ ಟರ್ಮಿನಲ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಕಂಪನಿಯ ಪ್ರಕಾರ, ಆಲ್ಫಾ 1 ರಲ್ಲಿನ ಬ್ಯಾಟರಿಯನ್ನು ವ್ಯೂಫೈಂಡರ್‌ನೊಂದಿಗೆ ಸುಮಾರು 430 ಶಾಟ್‌ಗಳಿಗೆ ಮತ್ತು ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಸುಮಾರು 530 ಶಾಟ್‌ಗಳಿಗೆ ರೇಟ್ ಮಾಡಲಾಗಿದೆ.

ಸೋನಿ ಆಲ್ಫಾ 1

ಇನ್ನು ಸೋನಿ ಆಲ್ಫಾ 1 ಬೆಲೆ 5,59,990 ರೂ(ಕೇವಲ ಬಾಡಿಗೆ ಮಾತ್ರ) ಆಗಿದೆ. ಇದು ಮಾರ್ಚ್ 12 ರಿಂದ ಎಲ್ಲಾ ಪ್ರಮುಖ ಆನ್‌ಲೈನ್ ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಈ ಕ್ಯಾಮೆರಾ ಸೋನಿಯ ಇತರ ಫುಲ್‌-ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾಗಳಂತೆಯೇ ಇ-ಮೌಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ ಆದ್ದರಿಂದ ನೀವು ಈಗಾಗಲೇ ಹೊಂದಿರುವ ಮಸೂರಗಳನ್ನು ಬಳಸಬಹುದು.

Best Mobiles in India

English summary
Sony launched its Alpha 1, or A1 flagship full-frame mirrorless camera in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X