ಭಾರತದಲ್ಲಿ ಸೋನಿ ಕಂಪೆನಿಯಿಂದ ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕ ಕಂಪೆನಿಗಳಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದನ್ನು ಸೋನಿ ಬ್ರಾವಿಯಾ 32W830K ಗೂಗಲ್‌ ಟಿವಿ ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಯಲ್ಲಿ ಬರುತ್ತದೆ.

ಸೋನಿ ಬ್ರಾವಿಯಾ 32W830K ಗೂಗಲ್‌ ಟಿವಿ

ಹೌದು, ಸೋನಿ ಕಂಪೆನಿ ಭಾರತದಲ್ಲಿ ಹೊಸ ಸೋನಿ ಬ್ರಾವಿಯಾ 32W830K ಗೂಗಲ್‌ ಟಿವಿಯನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಎಲ್ಲಾ ರೀತಿಯ OTT ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗಿದೆ. ಇದು ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಟಿವಿ ಹೋಮ್‌ ಕಿಟ್‌ ಮತ್ತು ಏರ್‌ಪ್ಲೇ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ

ಸೋನಿ ಬ್ರಾವಿಯಾ 321830K ಸ್ಮಾರ್ಟ್‌ಟಿವಿ 32 ಇಂಚಿನ HD ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಟಿವಿ ಬಳಕೆದಾರರಿಗೆ ವಿವಿಧ ಅಪ್ಲಿಕೇಶನ್‌ಗಳಿಂದ ವಿಷಯವನ್ನು ಬ್ರೌಸ್ ಮಾಡಲು ಅನುಮತಿಸುತ್ತದೆ. ಇದು ಆಪಲ್ ಹೋಮ್ ಕಿಟ್ ಮತ್ತು ಏರ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಜೊತೆಗೆ ಆಪಲ್ ಡಿವೈಸ್‌ಗಳಾದ ಐಪ್ಯಾಡ್‌ಗಳು ಮತ್ತು ಐಫೋನ್‌ಗಳನ್ನು ಟಿವಿಯೊಂದಿಗೆ ಕನೆಕ್ಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇನ್ನು ಈ ಟಿವಿಯು ಇನ್-ಬಿಲ್ಟ್ ಹ್ಯಾಂಡ್ಸ್-ಫ್ರೀ ವಾಯ್ಸ್‌ ಅನ್ನು ಹೊಂದಿದ್ದು, ಸ್ಮಾರ್ಟ್‌ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಲಿದೆ.

ಸ್ಮಾರ್ಟ್

ಇನ್ನು ಈ ಇನ್‌ ಬಿಲ್ಟ್‌ ಹ್ಯಾಂಡ್ಸ್‌ ಫ್ರೀ ವಾಯ್ಸ್‌ ಕಂಟ್ರೋಲ್‌ನಿಂದ ರಿಮೋಟ್‌ ಇಲ್ಲದೆ ಹೋದರೂ ಚಾನಲ್‌ ಬದಲಾಯಿಸುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಪ್ರತಿ ಬಾರಿ ರಿಮೋಟ್ ಬಳಸುವುದನ್ನು ತಪ್ಪಿಸಲಿದೆ. ಇದರಲ್ಲಿ ನೀವು ಧ್ವನಿ ಆಜ್ಞೆಯನ್ನು ನೀಡಲು "OK Google" ಎಂದು ಹೇಳುವ ಮೂಲಕ ನೀವು ಚಲನಚಿತ್ರ ಅಥವಾ ಹಾಡನ್ನು ಸರಳವಾಗಿ ಪ್ಲೇ ಮಾಡಬಹುದು. ಇದರೊಂದಿಗೆ ಈ ಸ್ಮಾರ್ಟ್ ಟಿವಿ ಸಾಂಪ್ರದಾಯಿಕವಲ್ಲದ ಕಾಂಟ್ರಾಸ್ಟ್ ರಚಿಸಲು HDR10 ಮತ್ತು ಹೈಬ್ರಿಡ್ ಲಾಗ್-ಗಾಮಾ ಸೇರಿದಂತೆ ವಿವಿಧ HDR ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ.

ಸೋನಿ ಬ್ರಾವಿಯಾ

ಸೋನಿ ಬ್ರಾವಿಯಾ 32W830K ಗೂಗಲ್‌ ಟಿವಿ 20W ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಡಾಲ್ಬಿ ಆಡಿಯೋ ಮತ್ತು ಕ್ಲಿಯರ್ ಫೇಸ್ ಫೀಚರ್ಸ್‌ ಬೆಂಬಲವನ್ನು ಹೊಂದಿದೆ. ಇದಲ್ಲದೆ ಕ್ಲಿಯರ್‌ ಪೇಸ್‌ ಟೆಕ್ನಾಲಜಿ ಹೊಂದಿದ್ದು, ಚಿತ್ರದ ಗುಣಮಟ್ಟವನ್ನು ಮೆಚ್ಚಿಸಲು ಸ್ಪಷ್ಟವಾದ ಮತ್ತು ಹೆಚ್ಚು ನೈಸರ್ಗಿಕ ಧ್ವನಿಯನ್ನು ಖಾತ್ರಿಗೊಳಿಸುತ್ತದೆ. ಇನ್ನು ಸೋನಿ ಟಿವಿಯು X-ಪ್ರೊಟೆಕ್ಷನ್ PRO ತಂತ್ರಜ್ಞಾನವನ್ನು ಕೂಡ ಪಡೆದಿದೆ. ಇದು ಡಿವೈಸ್‌ ಅನ್ನು ಧೂಳು ಮತ್ತು ತೇವಾಂಶದಿಂದ ರಕ್ಷಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ ಬ್ರಾವಿಯಾ 32W830K ಗೂಗಲ್‌ ಟಿವಿ ಭಾರತದಲ್ಲಿ 28,999ರೂ.ಬೆಲೆಯನ್ನು ಹೊಂದಿದೆ. ಇದು ಭಾರತದಲ್ಲಿ ಇಂದಿನಿಂದ (ಮೇ 11 ರಿಂದ) ಎಲ್ಲಾ ಸೋನಿ ಸೆಂಟರ್‌ಗಳು , ಪ್ರಮುಖ ಎಲೆಕ್ಟ್ರಾನಿಕ್ ಅಂಗಡಿಗಳು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಲಭ್ಯವಿರುತ್ತದೆ.

Best Mobiles in India

English summary
Sony launches Affordable HD Ready Smart TV In India For Rs. 28,990

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X