ಸೋನಿ ಕಂಪೆನಿಯಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟಿವಿ ಬಿಡುಗಡೆ

ಸೋನಿ ಕಂಪೆನಿಯು ಬ್ರಾವಿಯಾ A1 ಸಿರೀಸ್‌ಗಳ ಟಿವಿಯನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಈ ಟಿವಿಗಳು ವಿಶೇಷ ಸವಲತ್ತುಗಳನ್ನು ಒಳಗೊಂಡು ಮಾರುಕಟ್ಟೆಗೆ ಅಡಿಇಡಲಿವೆ.

By Shwetha Ps
|

ಸೋನಿ ಕಂಪೆನಿಯು ತನ್ನ ಫ್ಲ್ಯಾಗ್‌ಶಿಪ್ ಆದ ಬ್ರಾವಿಯಾ ಓಲೆಡ್ a1 ಟೆಲಿವಿಶನ್ ಸಿರೀಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಇದರ ಆರಂಭ ಬೆಲೆ ರೂ 3,64,900 ಆಗಿದೆ. ಇದು 4 ಕೆ ಡಿಸ್‌ಪ್ಲೇಯನ್ನು ಹೊಂದಿದ್ದು, ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್) ಬೆಂಬಲವನ್ನು ಪಡೆದುಕೊಂಡಿದ್ದು ಬ್ರಾಂಡ್ ನ್ಯೂ ಇಮೇಜ್ ಪ್ರೊಸೆಸರ್ ಅನ್ನು ಒಳಗೊಂಡಿದೆ.

ಸೋನಿ ಕಂಪೆನಿಯಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟಿವಿ ಬಿಡುಗಡೆ

ಇದು ಅಕಾಸ್ಟಿಕ್ ವೂಪರ್ ಅನ್ನು ಹೊಂದಿದ್ದು, ಈ ವೈಶಿಷ್ಟ್ಯತೆಗಳು ಟಿವಿಯನ್ನು ವಿಶ್ವದ ದೊಡ್ಡ ಪರದೆಯುಳ್ಳ ಹೆಚ್ಚು ಗುಣಮಟ್ಟದ ಸಾಧನವನ್ನಾಗಿ ಮಾಡಲಿದೆ. A1 ಓಲೆಡ್ ಸಿರೀಸ್‌ನ ಎರಡು ಆವೃತ್ತಿಗಳನ್ನು ಸೋನಿ ಬಿಡುಗಡೆ ಮಾಡಿದೆ. 65 ಇಂಚಿನ ಕೆಡಿ-65A1 ಮತ್ತು 55A1 ಆಗಿದ್ದು ಇದು 55 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಕೆಡಿ-65A1 ಬೆಲೆ ರೂ 4,64,900 ಆಗಿದ್ದು 55 ಇಂಚಿನ ಟಿವಿ ಬೆಲೆ ರೂ 3,64,900 ಆಗಿದೆ.

ಸೋನಿ ಹೇಳುವಂತೆ ಈ ಹೊಸ ಟಿವಿಯು 8 ಮಿಲಿಯನ್ ಸೆಲ್ಫ್ ಇಲ್ಯುಮಿನೇಟಿಂಗ್ ಅಂಶವನ್ನು ಹೊಂದಿದ್ದು, ಸ್ವಯಂ ನಿಯಂತ್ರಿಸುವ ಓಲೆಡ್ ಪಿಕ್ಸೆಲ್‌ಗಳನ್ನು ಪಡೆದಿದೆ ಎಂದಾಗಿದೆ. ಇದು ಹೆಚ್ಚಿನ ಗುಣಮಟ್ಟದ ದೃಶ್ಯ ಸಾಮರ್ಥ್ಯವನ್ನು ವೀಕ್ಷಕರಿಗೆ ನೀಡಲಿದ್ದು ಉತ್ತಮ ಕಾಂಟ್ರಾಸ್ಟ್, ಡೆಪ್ತ್, ಪಠ್ಯ ವಿವರಗಳನ್ನು ಕಾಣಬಹುದಾಗಿದೆ.

4K HDR ಓಲೆಡ್ ಪ್ಯಾನೆಲ್ 3840×2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ ಮತ್ತು ಟಿವಿಗಳ ವೈಶಿಷ್ಟ್ಯವು 4K HDR ಪ್ರೊಸೆಸರ್ X1 ಎಕ್ಸ್‌ಟ್ರೀಮ್ ಆಗಿದೆ. ಇಷ್ಟಲ್ಲದೆ ಅಕೊಸ್ಟಿಕ್ ಸರ್ಫೇಸ್ ತಂತ್ರಜ್ಞಾನವು A1 ಸಿರೀಸ್‌ಗಳ ವಿಶೇಷತೆಯಾಗಿದ್ದು ಟಿವಿಯು ಇಂಟಿಗ್ರೇಟ್ ಮಾಡಲಾದ ಸಬ್ ವೂಪರ್ ಅನ್ನು ಟಿವಿಯ ಹಿಂದೆ ಪಡೆದುಕೊಂಡಿದೆ.

ಇಷ್ಟಲ್ಲದೆ ಓಲೆಡ್ ಟಿವಿಯು ಸ್ಪೇಟ್ ಕಾನ್ಸೆಪ್ಟ್ ಅನ್ನು ಹೊಂದಿದ್ದು ಸೋನಿಯಿಂದ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಟಿವಿ ಪರದೆಯ ಒಳಗಡೆಯೇ ಬೇರೆ ಬೇರೆ ವೈಶಿಷ್ಟ್ಯಗಳನ್ನು ಒಗ್ಗೂಡಿಸಲಿದೆ. ಇದರಿಂದಾಗಿ ಹೆಚ್ಚುವರಿ ಸ್ಪೀಕರ್ ಬೇಕಾಗಿಲ್ಲ.

65-ಇಂಚಿನ ಸೋನಿ ಬ್ರಾವಿಯಾ A1 ಅಳತೆಯು 1451mm x 834mmx 86mm ಆಗಿದ್ದು, ಸ್ಟ್ಯಾಂಡ್ ಅಳತೆಯು 1451mmx834 mmx339 mm ಆಗಿದೆ.

55-ಇಂಚಿನ ಸೋನಿ A1 ಅಳತೆಯು ಸ್ಟ್ಯಾಂಡ್ ಇಲ್ಲದೆಯೇ 1228 mm x711 mm x 86 mm ಮತ್ತು ಸ್ಟ್ಯಾಂಡ್ ಜೊತೆಗೆ ಇದರ ಅಳತೆಯು 1228 mm x 711 mm x 339 mm ಆಗಿದೆ. ಟಿವಿಯೊಂದಿಗೆ, ಧ್ವನಿ ನಿಯಂತ್ರಣ ರಿಮೋಟ್ ಅನ್ನು ನೀವು ಪಡೆದುಕೊಳ್ಳಲಿದ್ದು, IR Blaster ಇದು DTH ಅನ್ನು ಬ್ರಾವಿಯಾ ರಿಮೋಟ್‌ನಿಂದ ನಿಯಂತ್ರಿಸಲಿದೆ.

ಸೋನಿಯ ಹೊಸ ಟಿವಿಯು ಎಚ್‌ಡಿಆರ್ ವಿಷಯಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತದೆ. ಇದು 4 ಕೆ ಎಚ್‌ಡಿಆರ್ ಪ್ರೊಸೆಸರ್ ಅನ್ನು ಹೊಂದಿದೆ ಎಂಬುದಾಗಿ ಸ್ವತಃ ಕಂಪೆನಿಯೇ ಹೇಳಿಕೊಂಡಿದ್ದು, ಇದು 40 ಪಟ್ಟು ಅಧಿಕ ಇಮೇಜ್ ಪ್ರೊಸೆಸಿಂಗ್ ಅನ್ನು ಒಳಗೊಂಡಿದ್ದು 4 ಕೆ ಪ್ರೊಸೆಸರ್ ಎಕ್ಸ್ 1 ಗಿಂತ ಮೇಲ್ಮಟ್ಟದಲ್ಲಿದೆ.

ಸೋನಿ A1 4K ಎಚ್‌ಡಿಆರ್ ಓಲೆಡ್ ಟಿವಿಗಳು ಇತ್ತೀಚಿನ ಆಂಡ್ರಾಯ್ಡ್ ಟಿವಿಯಲ್ಲಿ ಚಾಲನೆಯಾಗುತ್ತಿದ್ದು ಟಿವಿಯ ಆವೃತ್ತಿಯು 7.0 ನಾಗಟ್ ಜೊತೆಗೆ ಸೋನಿ UI ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ಟಿವಿಯು ಇನ್‌ಬಿಲ್ಟ್ ಕ್ರೋಮ್‌ಕಾಸ್ಟ್ ಬಿಲ್ಟ್ ಇನ್ ಹೊಂದಿದ್ದು, ಇದರಿಂದ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸ್ಟ್ರೀಮ್ ಮಾಡಬಹುದು. ಇಷ್ಟಲ್ಲದೆ ಟಿವಿಯು 42 ವಿವಿಧ ಭಾಷೆಗಳನ್ನು ಬೆಂಬಲಿಸುತ್ತಿದ್ದು ಭಾರತೀಯ ರೀತಿಯಲ್ಲಿರುವ ಇಂಗ್ಲೀಷ್ ಇದರಲ್ಲಿದೆ.

ಸೋನಿ ಟಿವಿಯ ಮುಂಗಡ ಬುಕ್ಕಿಂಗ್ ಆಗಸ್ಟ್ 1 ರಿಂದ 15 ರವರೆಗೆ ನಡೆಯಲಿದೆ ಇದನ್ನು ನೀವು ಆಯ್ಕೆಯ ಡೀಲರ್‌ಗಳೊಂದಿಗೆ ಮಾತ್ರ ಮಾತನಾಡಬಹುದಾಗಿದೆ. A1 ಸಿರೀಸ್ ಆಗಸ್ಟ್ 4 ರಿಂದ ಮಾರಾಟಕ್ಕೆ ಲಭ್ಯವಿದೆ. ಟೆಲಿವಿಶನ್ ಸೆಟ್‌ನೊಂದಿಗೆ ಸೋನಿಯು ಪ್ಲೇಸ್ಟೇಶನ್ 4 ಅನ್ನು ಗ್ರಾಹಕರಿಗೆ ನೀಡಲಿದೆ.

Best Mobiles in India

Read more about:
English summary
The TVs from the Sony Bravia A1 arrive with 4K display, High Dynamic Range (HDR) support and a brand new image processor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X