ಸೋನಿಯ ಹೊಸ ಟಿವಿ ಮಾರುಕಟ್ಟೆಗೆ ಬಂದಿದೆ. ಬೆಲೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ ನೋಡಿ.

By GizBot Bureau
|

ಸೋನಿಯು ತನ್ನ ಬ್ರಾವಿಯ ರೇಂಜಿನ ಟಿವಿ ಪ್ರೊಡಕ್ಟ್ ಗಳನ್ನು ಇನ್ನಷ್ಟು ವಿಸ್ತರಿಸಿದ್ದು ಬ್ರಾವಿಯಾ OLED A8F series ನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ. ಹೊಸ ಸಿರೀಸ್ ನಲ್ಲಿ ಇದು ಲಾಂಚ್ ಆಗುತ್ತಿದ್ದು 55-inch KD-55A8F ಮತ್ತು 65-inch KD-65A8F ಇದ್ದು ಇದರ ಬೆಲೆ ಕ್ರಮವಾಗಿ Rs 3,29,900 ಮತ್ತು Rs 4,49,900 ಆಗಿದೆ.

ಸೋನಿಯ ಹೊಸ ಟಿವಿ ಮಾರುಕಟ್ಟೆಗೆ ಬಂದಿದೆ. ಬೆಲೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ


ಸೋನಿಯು 2017 ರಲ್ಲಿ ಬ್ರಾವಿಯಾ ರೇಂಜಿನಲ್ಲಿ 4K HDR OLED TVಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು., ಈಗ ಹೊಸ A8F ಸಿರೀಸ್ 4K HDR ಪಿಕ್ಚರ್ ಪ್ರೊಸೆಸರ್-X1 Extreme ನಲ್ಲಿ ಬರುತ್ತಿದ್ದು, ಅಕೌಸ್ಟಿಕ್ ಸರ್ಫೇಸ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಬಳಕೆದಾರನಿಗೆ ಉತ್ತಮ ಸೌಂಡ್ ಎಫೆಕ್ಟ್ ನ್ನು ನೀಡಲಿದೆ.

TV ಬ್ರಾಡ್ ಕಾಸ್ಟಿಂಗ್, ಡಿವಿಡಿ, ಬ್ಲೂ-ರೇ ಡಿಸ್ಕ್, ಇಂಟರ್ ನೆಟ್ ವೀಡಿಯೋ ಮತ್ತು ಡಿಜಿಟಲ್ ಫೋಟೋಸ್ ಗೆ ಇದು ಹೇಳಿ ಮಾಡಿಸಿದ ಟಿವಿಯಾಗಿದೆ.

ಈ ಹೊಸ ಸಿರೀಸ್ ಗಳು 8 ಮಿಲಿಯನ್ ಸೆಲ್ಪ್ – ಇಲ್ಯೂಮಿನೇಟಿಂಗ್, ವಯಕ್ತಿಕವಾಗಿ ಕಂಟ್ರೋಲ್ ಮಾಡುವ OLED ಪಿಕ್ಸಲ್ಸ್ ಇದ್ದು ಇದು ಉತ್ತಮ ವಿಷುವಲ್ ಅನುಭವ ನೀಡಲಿದೆ. ಬ್ಲರ್ ಇಲ್ಲದ ಇಮೇಜ್ ಗಳು, ಅಗಲವಾಗ ವೀಕ್ಷಣಾ ಕೋನ, ಸರಿಯಾದ ಬಣ್ಣವನ್ನು ತೋರ್ಪಡಿಸುತ್ತೆ.

ಈ ಟಿವಿಯು Dolby Vision 3 ಯನ್ನು ಸಪೋರ್ಟ್ ಮಾಡಲಿದ್ದು ತುಂಬಾ ಸಿನಿಮ್ಯಾಟಿಕ್ ಅನುಭವ ನೀಡುವ ನಿಟ್ಟಿನಲ್ಲಿ ಇದು ನೆರವಾಗಲಿದೆ.ಈ ಸ್ಮಾರ್ಟ್ ಟಿವಿಯು HDR10, Hybrid Log-Gamma ಮತ್ತು Dolby Vision ನ್ನು ಸಪೋರ್ಟ್ ಮಾಡಲಿದೆ

ಹೊಸ A8F Android TV version 7.0 ಜೊತೆಗೆ ಎಕ್ಸ್ ಕ್ಲೂಸೀವ್ ಯೂಸರ್ ಇಂಟರ್ ಫೇಸ್ ಮೂಲಕ ರನ್ ಆಗುತ್ತೆ. ಇದರಲ್ಲಿರುವ Chromecast built-in ಯಾವುದೇ ಕಂಟೆಂಟ್ ನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಮೂಲಕ ಟಿವಿಗೆ ಕಳುಹಿಸಲು ಸುಲಭವಾಗಿದೆ.

ಕೇವಲ 13 ಸಾವಿರಕ್ಕೆ ನೋಚ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ರಿಲೀಸ್!..ಖರೀದಿಸಲು ಕ್ಯೂ ನಿಲ್ಲೋದು ಗ್ಯಾರಂಟಿ!!ಕೇವಲ 13 ಸಾವಿರಕ್ಕೆ ನೋಚ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ರಿಲೀಸ್!..ಖರೀದಿಸಲು ಕ್ಯೂ ನಿಲ್ಲೋದು ಗ್ಯಾರಂಟಿ!!

ಈ ಟೆಲಿವಿಷನ್ ಗೂಗಲ್ ಪ್ಲೇ ಗೆ ಆಕ್ಸಿಸ್ ಹೊಂದಿದ್ದು, ಚಲನಚಿತ್ರ, ಟಿವಿ ಶೋಗಳು, ಗೇಮ್ ಗಳನ್ನು ಟಿವಿಯಲ್ಲಿ ನೋಡಲು ಅನುವು ಮಾಡಿಕೊಡಲಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ, ಇತರೆ ಡಿವೈಸ್ ಗಳೊಂದಿಗೆ ಕನೆಕ್ಟ್ ಆಗಲು ಇಲ್ಲವೇ ಕಮ್ಯುನಿಕೇಟ್ ಮಾಡಲು ಈ ಹೊಸ ಟಿವಿ ಪರ್ಸನಲ್ ಅಸಿಸ್ಟಂಟ್ ಅನ್ನು ಸರ್ವ್ ಮಾಡಿದೆ.

ನೆಟ್ ಫಿಕ್ಸ್ ಮತ್ತು ಗೂಗಲ್ ಪ್ಲೇ ಸ್ಟೋರ್ ಗೆ ನೇರವಾದ ಆಕ್ಸಿಸ್ ನ್ನು ಬಳಕೆದಾರರಿಗೆ ನೀಡಲಾಗಿತ್ತು ಆ ಮೂಲಕ ವೀಡಿಯೋ ಮತ್ತು ಆಪ್ ಗಳನ್ನು ಸುಲಭವಾಗಿ ನೋಡಬಹುದು.

ಇದರಲ್ಲಿರುವ ಇತರೆ ಟೆಕ್ನಾಲಜಿಗಳೆಂದರೆ object-based HDR remaster, ಸೂಪರ್ ಬಿಟ್ ಮ್ಯಾಪಿಂಗ್ 4K HDR, ಡುಯಲ್ ಡಾಟಾಬೇಸ್ ಪ್ರೊಸೆಸಿಂಗ್. ರೆಡ್ ಬ್ಲೂ, ಗ್ರೀನ್ ಕಲರ್ ಗಳು ಆಕ್ಯುರೇಟ್ ಆಗಿ ಈ ಡಿಸ್ಪ್ಲೇಯಲ್ಲಿ ಶೋಕೇಸ್ ಆಗುತ್ತೆ.

ಹೊಸದಾಗಿ ಬಿಡುಗಡೆಗೊಂಡಿರುವ ಮಾಡೆಲ್ ಗಳು ಸೋನಿ ಸೆಂಟರ್ ಮತ್ತು ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಇವತ್ತಿನಿಂದ ಭಾರತದಾದ್ಯಂತ ಲಭ್ಯವಿದೆ.

Best Mobiles in India

Read more about:
English summary
Sony launches Bravia OLED a8f series price and specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X