ಸ್ಪೀಕರ್ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ

ಸೋನಿ ಇಂಡಿಯಾ ಹೋಮ್ ಆಡಿಯೋ ಸಿಸ್ಟಮ್ ವತಿಯಿಂದ ಎಮ್ ಎಚ್ ಸಿ- ವಿ 50 ಡಿ ಎನ್ ಎಫ್ ಸಿ ಅನೇಕ ವಿಶೇಷತೆಯನ್ನು ಹೊಂದಿರುವ ಸ್ಪೀಕರ್ ಗ್ರಾಹಕರಿಗೆ ತಲುಪಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ.

By Akshatha J
|

ಸ್ಪೀಕರ್ ಪ್ರಿಯರಿಗೆ ಸೋನಿ ಇಂಡಿಯಾ ಹೋಮ್ ಆಡಿಯೋ ಸಿಸ್ಟಮ್ ತನ್ನ ಹೊಸ ಆವೃತಿಯನ್ನು ಇದೆ ಜುಲೈ 13 ರಂದು ಬಿಡುಗಡೆ ಮಾಡುತ್ತಿದೆ. ಇನ್ನು ಈ ಸ್ಪೀಕರ್ ಸಿಸ್ಟಮ್ ಸರಿ ಸುಮಾರು 33,990 ರೂ. ಎಂದು ಅಂದಾಜಿಸಲಾಗಿದೆ.

ಸ್ಪೀಕರ್ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ


ಸ್ಪೀಕೇರ್ನ ವಿಶೇಷತೆ..!

ಎಮ್ ಎಚ್ ಸಿ- ವಿ 50 ಡಿ ಎನ್ ಎಫ್ ಸಿ ಅನೇಕ ವಿಶೇಷತೆಗಳನ್ನು ಹೊಂದಿದೆ. ಬ್ಲೂಟೂತ್ ಮತ್ತು ಯುಎಸ್ಬಿ ಸಪೋರ್ಟ್ ಗ್ರಾಹಕರಿಗೆ ಅನೇಕ ಆಯ್ಕೆಗಳನ್ನು ನೀಡುತ್ತಿದೆ. ಇನ್ನು ಸ್ಮಾರ್ಟ್ ಫೋನ್ ಹಾಗು ಮೊಬೈಲ್ ಅನ್ನು ನೇರವಾಗಿ ಸ್ಪೀಕರ್ಗೆ ಕನೆಕ್ಟ್ ಮಾಡಬಹುದು.

ಎಮ್ ಎಚ್ ಸಿ- ವಿ 50 ಡಿ ಎನ್ ಎಫ್ ಸಿ ಎಲ್ಲಾ ಸ್ಮಾರ್ಟ್ಫೋನ್ನಲ್ಲಿ ಫಿಯೆಸ್ಟೆಬಲ್ ಎಂಬ ಅಪ್ಲಿಕೇಶನ್ ಅನ್ನು ಅಳವಡಿಸಲು ಸಹಾಯ ಮಾಡುವುದಲ್ಲದೆ ಮತ್ತು ಅಪ್ಲಿಕೇಶನ್ನಲ್ಲಿ ಲಭ್ಯವಿರುವ ವಿಶೇಷತೆಗಳೊಂದಿಗೆ ವಿ 50 ಡಿ ಸ್ಪೀಕರ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇನ್ನು ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ನಲ್ಲಿ ಲಭ್ಯವಿದೆ. ಸಂಗೀತ ರಸದೋವ್ಥನವನ್ನು ನೀಡಲು ಕರವೊಕೆ ಮೋಡ್ ಅನ್ನು ಹೊಂದಿದೆ. ಇನ್ನು ಈ ಸ್ಪೀಕರ್ನ ಮತ್ತೊಂದು ಲಕ್ಷಣವೆಂದರೆ ಫಿಯೆಸ್ಟೆಬಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಗಿಜ್ಮೋದ ಸಹಾಯದಿಂದ ಕಲರ್ ಹಾಗು ಲೈಟ್ ನ ನಿಯಂತ್ರಣ ಮಾಡಬಹುದು. ಇದಲ್ಲದೆ ಸ್ಪೀಕೇರ್ನಲ್ಲಿ ಎಲ್ ಇ ಡಿ ಟಚ್ ನ ಅನುಕೂಲತೆ ಇದೆ.

ಎಮ್ ಎಚ್ ಸಿ- ವಿ 50 ಡಿ ಎನ್ ಎಫ್ ಸಿ ಪಾರ್ಟಿ ಚೈನ್ ಎಫೆಕ್ಟ್ ವೈಶಿಷ್ಟ್ಯದೊಂದಿಗೆ ಸ್ಮಾರ್ಟ್ ಹೈ ಪವರ್ ತಂತ್ರಜ್ಞಾನದೊಂದಿಗೆ ಬರುತ್ತಿದ್ದು, ಇನ್ನು ಸಾಕಷ್ಟು ವಿಶೇಷತೆಗಳನ್ನು ಗ್ರಾಹಕರಿಗಾಗಿ ಹೊತ್ತು ತರುತ್ತಿದೆ.

Best Mobiles in India

Read more about:
English summary
Sony launched its latest home speakers MHC-VD50 in India on July 10, 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X