ಸೋನಿಯಿಂದ ಮಾರುಕಟ್ಟೆಗೆ ನಾಲ್ಕು ಹೊಸ ಮಾದರಿಯ ಹೆಡ್ ಸೆಟ್ ಬಿಡುಗಡೆ

By Lekhaka
|

ಸೋನಿ ಹೊಸ ಮಾದರಿಯ ನಾಯ್ಸ್ ಕ್ಯಾನ್ಸಪೇಷನ್ ತಂತ್ರಜ್ಞಾನವನ್ನು ಹೊಂದಿರುವ ಹೆಡ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಒಟ್ಟು ನಾಲ್ಕು ಹೊಸ ಮಾದರಿಯ ವೈರ್ ಲೈಸ್ ಹೆಡ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಬೆಲೆ ರೂ.14,990 ಗಳಾಗಿದೆ.

ಸೋನಿಯಿಂದ ಮಾರುಕಟ್ಟೆಗೆ ನಾಲ್ಕು ಹೊಸ ಮಾದರಿಯ ಹೆಡ್ ಸೆಟ್ ಬಿಡುಗಡೆ

ನಾಯ್ಸ್ ಕ್ಯಾನ್ಸಪೇಷನ್ ತಂತ್ರಜ್ಞಾನವನ್ನು ಹೊಂದಿರುವ ನಾಲ್ಕು ಸೋನಿ ಹೆಡ್ ಸೆಟ್ ಗಳು WH-1000XM2, WH-H900N, WH-1000X ಮತ್ತು WI-1000Xಗಳಾಗಿದ್ದು, ಇವುಗಳ ಬೆಲೆ ಕ್ರಮವಾಗಿ ರೂ.29,990, ರೂ. 18,990, ರೂ. 14,990 ಮತ್ತು ರೂ.21,990 ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

WH-1000X ಮತ್ತು WI-1000X ಹೆಡ್ ಫೋನ್ ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಉಳಿದ ಎರಡು ಮಾದರಿಯ ಹೆಡ್ ಸೆಟ್ ಗಳು ಡಿಸೆಂಬರ್ 14ರ ನಂತರದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಸೋನಿ ತಿಳಿಸಿದೆ. ಈ ಎಲ್ಲಾ ಹೆಡ್ ಸೆಟ್ ಗಳು ಬ್ಲಾಕ್ ಬಣ್ಣದಲ್ಲಿ ಮಾತ್ರವೇ ದೊರೆಯಲಿದ್ದು, WH-1000XM2 ಮಾತ್ರ ಬ್ಲಾಕ್ ಮತ್ತು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ.

ರೆಡ್‌ಮಿ 5 ಸ್ಮಾರ್ಟ್‌ಫೋನ್: ಫೋನ್ ಮಾತ್ರ ಟಾಪ್ಎಂಡ್ - ಬೆಲೆ ಮಾತ್ರ ಬಜೆಟ್‌ನಲ್ಲಿ..!ರೆಡ್‌ಮಿ 5 ಸ್ಮಾರ್ಟ್‌ಫೋನ್: ಫೋನ್ ಮಾತ್ರ ಟಾಪ್ಎಂಡ್ - ಬೆಲೆ ಮಾತ್ರ ಬಜೆಟ್‌ನಲ್ಲಿ..!

ಈ ಹೆಡ್ ಸೆಟ್ ಗಳಲ್ಲಿ ಉತ್ತಮ ಗುಣಮಟ್ಟದ ಬ್ಯಾಟರಿಯನ್ನು ಸೋನಿ ಅಳವಡಿಸಿದ್ದು, WH-1000XM2 ಅನ್ನು ವೈರ್ ಮೂಲಕ ಬಳಸಿದರೆ 40 ಗಂಟೆಗಳ ಬ್ಯಾಟರಿಯ ಬ್ಯಾಕಪ್ ಅನ್ನು ನೀಡಲಿದೆ ವೈರ್ ಲೈಸ್ ಆದರೆ 30 ಗಂಟೆಗಳ ಬ್ಯಾಕಪ್ ಎನ್ನಲಾಗಿದೆ. ಕೇವಲ 10 ನಿಮಿಷದಲ್ಲಿ 70 ನಿಮಿಷ ಬಾಳಿಕೆ ಬರುವಷ್ಟು ಬ್ಯಾಟರಿ ಚಾರ್ಜ್ ಆಗಲಿದೆ.

ಇದಲ್ಲದೇ ಈ ಹೆಡ್ ಸೆಟ್ ಗಳ ಗುಣಮಟ್ಟವು ಉತ್ತಮವಾಗಿದ್ದು, ಉತ್ತಮ ಸೌಂಡ್ ಕ್ವಾಲಿಟಿಯನ್ನು ನೀಡಲಿದೆ. ಅಲ್ಲದೇ ಹಾಡು –ಮ್ಯೂಸಿಕ್ ಬಿಟ್ಟರೆ ಹೊರ ಜಗತ್ತಿನ ಯಾವುದೇ ಸೌಂಡ್ ಗಳು ಇದರ ಮಧ್ಯ ನುಸುಳಿ ಬರಲು ಸಾಧ್ಯವಿರದ ಹಾಗೆ ಡಿಸೈನ್ ಮಾಡಲಾಗಿದೆ.

Best Mobiles in India

Read more about:
English summary
Sony has announced the launch of four new noise cancellation headphones in India starting from Rs. 14,990.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X