ಸೋನಿ ಬ್ರಾವಿಯಾದಿಂದ ಎರಡು ಹೊಸ ಸ್ಮಾರ್ಟ್ ಟಿವಿ ಲಾಂಚ್‌!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆ ಕೂಡ ಸಾಕಷ್ಟು ಪ್ರಾಬಲ್ಯವನ್ನ ಸಾಧಿಸಿದೆ. ಈಗಾಗಲೇ ಸ್ಮಾರ್ಟ್‌ಫೋನ್‌ ವಲಯದಲ್ಲಿ ಹಲವಾರ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಹಲವು ಕಂಪೆನಿಗಳು ಸ್ಮಾರ್ಟ್‌ಟಿವಿ ವಲಯದಲ್ಲೂ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ಸೋನಿ ಕಂಪೆನಿ ಕೂಡ ಒಂದಾಗಿದ್ದು, ತನ್ನ ಗುಣಮಟ್ಟದ ಕಾರಣದಿಂದಾಗಿ ಸೋನಿ ಉತ್ತಮ ಬೇಡಿಕೆಯನ್ನ ಹೊಂದಿದೆ. ಸದ್ಯ ಸೋನಿ ಕಂಪೆನಿ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ.

ಸೋನಿ ಕಂಪೆನಿ

ಹೌದು, ಸೋನಿ ಕಂಪೆನಿ ತನ್ನ ಹೊಸ ಸೋನಿ ಬ್ರಾವಿಯಾ KD -55X 70000G ಮತ್ತು KDL -43W 6603 ಸ್ಮಾರ್ಟ್ ಟಿವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಎರಡು ಬ್ರಾವಿಯಾ ಟಿವಿ ಮಾದರಿಗಳು ಅತ್ಯುತ್ತಮವಾದ ಸಾಕಷ್ಟು ಪರಿಣಾಮಕಾರಿಯಾದ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇದರಲ್ಲಿ KD -55X 70000G 55 ಇಂಚಿನ 4K ಸ್ಮಾರ್ಟ್ ಟಿವಿಯಾಗಿದ್ದು, ಇದು ಉತ್ತಮ ಬಣ್ಣ ನಿಖರತೆಯೊಂದಿಗೆ ಜಪಾನ್‌ ಕಂಪನಿಯ ಟ್ರೈಲುಮಿನಸ್ ಸ್ಕ್ರೀನ್‌ ಅನ್ನು ಹೊಂದಿದೆ. ಮತ್ತೊಂದೆಡೆ, KDL-43W 6603 43 ಇಂಚಿನ ಫುಲ್‌ಹೆಚ್‌ಡಿ ಸ್ಮಾರ್ಟ್‌ಟಿವಿಯಾಗಿದ್ದು, ಎರಡೂ ಮಾದರಿಗಳು ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್) ಬೆಂಬಲ, ಮೋಷನ್‌ಪ್ಲೋ XR ಟೆಕ್ನಾಲಜಿಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ KD-55X 7002G

ಸೋನಿ ಬ್ರಾವಿಯಾ KD-55X 7002G

ಸೋನಿ ಬ್ರಾವಿಯಾ KD-55X 70000G 4K ಸ್ಮಾರ್ಟ್‌ಟಿವಿ 3,840x2,160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ ಅಲ್ಟ್ರಾ-ಹೆಚ್‌ಡಿ ಟಿವಿ ಆಗಿದ್ದು, ಎಚ್‌ಡಿಆರ್ ಮತ್ತು ಎಕ್ಸ್-ರಿಯಾಲಿಟಿ ಪ್ರೊ ಬೆಂಬಲವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಟ್ರೈಲುಮಿನೋಸ್ ಡಿಸ್‌ಪ್ಲೇಯನ್ನ ಹೊಂದಿದ್ದು, ವಿಶೇಷವಾಗಿ ಅಭಿವೃದ್ಧಿಪಡಿಸಿದ ಬ್ಯಾಕ್‌ಲೈಟ್ ನ್ಯಾಚುರಲ್‌ ಕಲರ್‌ ಅನ್ನು ಒದಗಿಸುತ್ತದೆ. ಇದಲ್ಲದೆ ಮೋಷನ್‌ಪ್ಲೋ ಎಕ್ಸ್‌ಆರ್ ಪರದೆಯ ಮೇಲೆ ವೇಗವಾಗಿ ಚಲಿಸುವ ವಸ್ತುಗಳಲ್ಲಿ ವಿವರವನ್ನು ಉಳಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 1GB RAM ಹೊಂದಿದೆ. ಇದಲ್ಲದೆ 55 ಇಂಚಿನ ಪರದೆಯ ಗಾತ್ರದಲ್ಲಿ 50Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಟಿವಿ 20W ಬಾಸ್ ರಿಫ್ಲೆಕ್ಸ್ ಸ್ಪೀಕರ್ ಮತ್ತು ಕ್ಲಿಯರ್ ಆಡಿಯೊ + ಟೆಕ್ನಾಲಜಿಯನ್ನ ಹೊಂದಿದ್ದು ಸ್ಪಷ್ಟ ಮತ್ತು ತಲ್ಲೀನಗೊಳಿಸುವ ಸೌಂಡ್‌ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಒಂದು ಸಮಯದಲ್ಲಿ ಅನೇಕ ಸಾಧನಗಳನ್ನು ಸಂಪರ್ಕಿಸಲು ವೈ-ಫೈ, ಮೂರು ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ಮೂರು ಯುಎಸ್‌ಬಿ ಪೋರ್ಟ್‌ಗಳನ್ನು ನೀಡಲಾಗಿದೆ.

ಸೋನಿ ಬ್ರಾವಿಯಾ KDL-43W 6603

ಸೋನಿ ಬ್ರಾವಿಯಾ KDL-43W 6603

ಸೋನಿ ಬ್ರಾವಿಯಾ KDL -43 W 6603 ಸ್ಮಾರ್ಟ್‌ಟಿವಿ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ 1GB RAM ಹೊಂದಿದೆ. ಇದು ಕ್ಲಿಯರ್ ಆಡಿಯೋ + ತಂತ್ರಜ್ಞಾನ, ಡಾಲ್ಬಿ ಆಡಿಯೊ ಮತ್ತು ಡಿಟಿಎಸ್ ಡಿಜಿಟಲ್ ಸರೌಂಡ್ ಹೊಂದಿರುವ ಎರಡು 10W ಓಪನ್ ಬ್ಯಾಫಲ್ ಸ್ಪೀಕರ್‌ಗಳನ್ನ ಸಹ ಒಳಗೊಂಡಿದೆ. ಅಲ್ಲದೆ ಇದು ಟಿವಿ ಮ್ಯೂಸಿಕ್‌ಬಾಕ್ಸ್ ಅನ್ನು ಸಹ ಬೆಂಬಲಿಸುತ್ತದೆ, ಇದು ನಿಮ್ಮ ಫೋನ್‌ನಲ್ಲಿ ಆಡಿಯೊ ಪ್ಲೇ ಮಾಡಲು ಸ್ಪೀಕರ್ ಆಗಿ ಬಳಸಲು ಸಹ ಅನುಮತಿಸುತ್ತದೆ. ಇನ್ನು ಈ ಸ್ಮಾರ್ಟ್‌ ಟಿವಿಯಲ್ಲಿ ಎಕ್ಸ್-ರಿಯಾಲಿಟಿ ಪ್ರೊ, ಮೋಷನ್ ಫ್ಲೋ ಎಕ್ಸ್ಆರ್ ಮತ್ತು ಎಚ್ಡಿಆರ್ ಬೆಂಬಲವನ್ನು ಸಹ ನೀಡಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಎರಡು ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳಿವೆ ಮತ್ತು ರಿಮೋಟ್‌ನಲ್ಲಿ ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ಗಾಗಿ ಮೀಸಲಾದ ಬಟನ್‌ಗಳನ್ನ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಸೋನಿ ಕಂಪೆನಿ ಬಿಡುಗಡೆ ಮಾಡಿರುವ ಸೋನಿ ಬ್ರಾವಿಯಾ KD-55X 70000G ಸ್ಮಾರ್ಟ್‌ಟಿವಿಯ ಬೆಲೆ ರೂ. 63,990 ರೂ ಆಗಿದೆ. ಇನ್ನು ಸೋನಿ ಬ್ರಾವಿಯಾ KDL-43W 6603 43ಇಂಚಿನ ಸ್ಮಾರ್ಟ್‌ಟಿವಿ ಬೆಲೆ ರೂ. 37,990 ರೂ.ಆಗಿದ್ದು, ಈ ಎರಡೂ ಟಿವಿ ಮಾದರಿಗಳು ಪ್ರಸ್ತುತ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದ್ದು, ಇದು ಬ್ಲ್ಯಾಕ್‌ ಬಣ್ಣದಲ್ಲಿ ಲಬ್ಯವಾಗಲಿದೆ.

Best Mobiles in India

English summary
Sony Bravia KD-55X7002G and KDL-43W6603 smart TV models have been launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X