Home
ಸುದ್ದಿಜಾಲ

Sony Walkman:ಸೋನಿಯಿಂದ A105 ವಾಕ್‌ಮ್ಯಾನ್‌ ಲಾಂಚ್‌!

ಟೆಕ್‌ ದೈತ್ಯ ಅಂತಾನೇ ಮಾರುಕಟ್ಟೆಯಲ್ಲಿ ಗುರ್ತಿಸಿಕೊಂಡಿರೋ ಸೋನಿ ಕಂಪೆನಿ ಮತ್ತೆ ತನ್ನ ವಾಕ್‌ಮ್ಯಾನ್‌ ಬ್ರಾಂಡ್‌ ಅನ್ನ ಮಾರುಕಟ್ಟೆಗೆ ಪರಿಚಯಿಸಿದೆ. ತನ್ನ ಹಳೆಯ ಪ್ರಾಡಕ್ಟ್‌ ಅನ್ನ ಹೊಸ ಆಪ್‌ಡೇಟ್‌ನೊಂದಿಗೆ ಹೊಸ ಮಾದರಿಯ ಕ್ಲಾಸಿಕ್‌ ವಾಕ್‌ಮ್ಯಾನ್‌ ಅನ್ನ ಲಾಂಚ್‌ ಮಾಡಿದೆ. ಸದ್ಯ ಸೋನಿ ಕಂಪೆನಿ ಆಂಡ್ರಾಯ್ಡ್ ಪೈ ಬೆಂಬಲಿತ ವಾಕ್‌ಮ್ಯಾನ್ ಎನ್‌ಡಬ್ಲ್ಯೂ-ಎ 105 ಅನ್ನು ಬಿಡುಗಡೆ ಮಾಡಿದ್ದು, ಈ ವಾಕ್‌ಮ್ಯಾನ್‌ನಲ್ಲಿ ಮೆಮೊರಿ ಲೇನ್ ಡೌನ್ ಟ್ರಿಪ್ ಅನ್ನು ಅಳವಡಿಸಬಹುದು ಎಂಬ ಭರವಸೆಯನ್ನ ಸೋನಿ ಕಂಪೆನಿ ನೀಡಿದೆ

ಸೋನಿ

ಹೌದು ಸೋನಿ ಕಂಪೆನಿ 40ವರ್ಷಗಳಷ್ಟು ಹಳೆಯದಾದ ತನ್ನ ಹಳೆಯ ಪ್ರಾಡಕ್ಟ್‌ ಆಗಿದ್ದ ವಾಕ್‌ಮ್ಯಾನ್‌ ಅನ್ನ ಮತ್ತೆ ಹೊಸ ಮಾದರಿಯಲ್ಲಿ ಲಾಂಚ್‌ ಮಾಡಿದೆ. ಈ ಹಿಂದೆ ಅಂದರೆ 1979 ರಲ್ಲಿ ಪೋರ್ಟಬಲ್ ಮೀಡಿಯಾ ಪ್ಲೇಯರ್‌ಗಳ ವಾಕ್‌ಮ್ಯಾನ್ ಬ್ರಾಂಡ್ ಸೋನಿ ಕಂಪೆನಿ ಪ್ರಾರಂಭಿಸಿತ್ತು, ಪ್ರಾರಂಭದಲ್ಲಿ ಕ್ಯಾಸೆಟ್‌ಗಳಿಂದ ಮ್ಯೂಸಿಕ್ ಕೇಳುತ್ತಿದ್ದ, ದುಬಾರಿ ಮ್ಯೂಸಿಕ್ ಪ್ಲೇಯರ್‌ಗಳಿಗೆ ಇದು ಟಕ್ಕರ್‌ ನೀಡಿತ್ತು. ನಂತರದ ದಿನಗಳಲ್ಲಿ ಸಿಡಿಗಳಿಗೆ ಅನುಗುಣವಾಗಿ ಡಿಜಿಟಲ್ ಸ್ವರೂಪದಲ್ಲಿ ಎಂಟ್ರಿಕೊಟ್ಟಿತ್ತು.

ಇದೀಗ

ಸದ್ಯ ಇದೀಗ ಹೊಸ ವಾಕ್‌ಮ್ಯಾನ್ NW-A 105 ಬಿಡುಗಡೆ ಮಾಡಿದ್ದು, ಇದು 3.6 ಇಂಚಿನ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಮ್ಯೂಸಿಕ್ ಪ್ಲೇಯರ್ ಹೆಚ್ಚಿನ ರೆಸಲ್ಯೂಶನ್ ಆಡಿಯೊವನ್ನು ಬೆಂಬಲಿಸಲಿದ್ದು, ಇದು ಸಿಡಿ-ಗುಣಮಟ್ಟದ ಸಂಗೀತಕ್ಕಿಂತ ಉತ್ತಮವಾದ ಸಂಗೀತದ ಅನುಭವವನ್ನ ನೀಡಲಿದೆ ಎಂದು ಸೋನಿ ಕಂಪೆನಿ ಹೇಳಿಕೊಂಡಿದೆ.

ವಾಕ್‌ಮ್ಯಾನ್‌

ಹೊಸ ವಾಕ್‌ಮ್ಯಾನ್‌ ಉತ್ತಮ ಗುಣಮಟ್ಟದ ಪಿಸಿಎಂ ಪರಿವರ್ತನೆ ಪ್ರಾಡಕ್ಟ್‌ ಅನ್ನ ಹೊಂದಿದ್ದ, ಡಿಎಸ್‌ಡಿ ಮತ್ತು ಎಫ್‌ಎಎಲ್‍ಸಿ ಪ್ಲೇಬ್ಯಾಕ್ ಅನ್ನು 11.2Mhz ವರೆಗೂ ಬೆಂಬಲಿಸುತ್ತದೆ. ಅಲ್ಲದೆ ಎಚ್‌ಎಕ್ಸ್ ಡಿಜಿಟಲ್ ಆಂಪ್ಲಿಫೈಯರ್ ಅನ್ನು ಸಹ ಒಳಗೊಂಡಿದೆ. ಇನ್ನು ಈ ವಾಕ್‌ಮ್ಯಾನ್‌ Wi-Fi ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಯಾವಾಗಲೂ ಹೊಸ ಸಂಗೀತವನ್ನ ಆಲಿಸಲು ಸ್ಟ್ರೀಮಿಂಗ್ ಸೇವೆಗಳನ್ನ ನೀಡುತ್ತದೆ. ವೈ-ಫೈ ಸಂಪರ್ಕವಿಲ್ಲದಿದ್ದಾಗ, ಟ್ರ್ಯಾಕ್‌ಗಳನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

ಬ್ಲೂಟೂತ್

ಇನ್ನು ಈ ವಾಕ್‌ಮ್ಯಾನ್ ಬ್ಲೂಟೂತ್ ಮತ್ತು ಎನ್‌ಎಫ್‌ಸಿ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ಬ್ಲೂಟೂತ್ ಸ್ಪೀಕರ್‌ಗಳನ್ನು ಬಳಸಲು ಸಹ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಈ ವಾಕ್‌ಮ್ಯಾನ್‌ 4GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ, ಒಂದೇ ಚಾರ್ಜ್‌ನಲ್ಲಿ ವಾಕ್‌ಮ್ಯಾನ್‌ನಲ್ಲಿ 26 ಗಂಟೆಗಳ ಬ್ಯಾಟರಿ ಬಾಳಿಕೆ ಅವಧಿಯನ್ನು ಹೊಂದಿದ್ದು, ಇದನ್ನ ಯುಎಸ್ಬಿ ಟೈಪ್-ಸಿ ಸ್ಲಾಟ್‌ನೊಂದಿಗೆ ಚಾರ್ಜ್ ಮಾಡಬಹುದಾಗಿದೆ. ಸದ್ಯ ಈ ವಾಕ್‌ಮ್ಯಾನ್‌ನ ಬೆಲೆ 23,990 ರೂ. ಆಗಿದ್ದು, ಸೋನಿ ಸ್ಟೋರ್‌ನಲ್ಲಿ ಬ್ಲ್ಯಾಕ್‌ ಕಲರ್‌ನಲ್ಲಿ ಮಾತ್ರ ಲಭ್ಯವಿದೆ.

Best Mobiles in India

English summary
The new Sony Walkman will provide both nostalgic value and modern capabilities.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+