ಭಾರತದಲ್ಲಿ ಸೋನಿ WH-1000XM4 ವಾಯರ್‌ಲೆಸ್‌ ಹೆಡ್‌ಫೋನ್‌ ಬಿಡುಗಡೆ!

|

ಸೋನಿ ಕಂಪೆನಿ ಗುಣಮಟ್ಟದ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಹೊಸ ವಿನ್ಯಾಸದ ಇಯರ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಸೋನಿ ಕಂಪೆನಿ ತನ್ನ ಹೊಸ WH-1000XM4 ವಾಯರ್‌ಲೆಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಹೆಡ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಭಾರತದಲ್ಲಿ ರೂ. 29,990 ರೂ.ಬೆಲೆಯನ್ನು ಹೊಂದಿದ್ದು, ಅಮೆಜಾನ್, ಸೋನಿ ಚಿಲ್ಲರೆ ಅಂಗಡಿಗಳು, ಪ್ರಮುಖ ಮಲ್ಟಿ-ಬ್ರಾಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಗಳು ಮತ್ತು ಸೋನಿಯ ಆನ್‌ಲೈನ್ ಶಾಪಿಂಗ್ ಪೋರ್ಟಲ್ shopatsc.com ನಲ್ಲಿ ಖರೀದಿಸಲು ಲಭ್ಯವಿದೆ.

ಸೋನಿ

ಹೌದು, ಸೋನಿ ಕಂಪೆನಿ ತನ್ನ ಹೊಸ WH-1000XM4 ಹೆಡ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೆಡ್‌ಫೋನ್‌ WH-1000XM3 ನ ಮುಂದುವರೆದ ಆವೃತ್ತಿಯಾಗಿದ್ದು, ಬೋಸ್, ಶ್ಯೂರ್ ಮತ್ತು ಸೆನ್ಹೈಸರ್ ಹೆಡ್‌ಫೋನ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಹೆಡ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ WH-1000XM4 ಹೆಡ್‌ಫೋನ್

ಸೋನಿ WH-1000XM4 ಹೆಡ್‌ಫೋನ್‌ ತನ್ನ ಹಿಂದಿನ ಹೆಡ್‌ಫೋನ್‌ಗಳ ವಿನ್ಯಾಸವನ್ನು ಉಳಿಸಿಕೊಂಡಿದೆ. ಇನ್ನು ಈ ಹೆಡ್‌ಫೋನ್‌ QN1 ನಾಯ್ಸ್‌ ಕ್ಯಾನ್ಸಲೇಶನ್‌ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನು ಈ ಹೆಡ್‌ಫೋನ್‌ಗಳಲ್ಲಿ ಅಡಾಪ್ಟಿವ್ ಸೌಂಡ್ ಕಂಟ್ರೋಲ್ಸ್,Find the dress, ಮತ್ತು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಇದಲ್ಲದೆ ಪ್ರತಿ ಚಾರ್ಜ್‌ಗೆ 30 ಗಂಟೆಗಳಿಗಿಂತ ಹೆಚ್ಚು ಕಾಲ ಬ್ಯಾಟರಿ ಬಾಳಿಕೆ ಬರಲಿದೆ. ಅಲ್ಲದೆ ಈ ಹೆಡ್‌ಫೋನ್‌ಗಳ ಹೊರ ಭಾಗದಲ್ಲಿ ಗೆಸ್ಚರ್ ಕಂಟ್ರೋಲ್‌ ಅನ್ನು ನೀಡಲಾಗಿದೆ.

ಹೆಡ್‌ಫೋನ್ಸ್

ಇನ್ನು ಆಂಡ್ರಾಯ್ಡ್ ಮತ್ತು IOSಗೆ ಲಭ್ಯವಿರುವ ಸೋನಿ ಹೆಡ್‌ಫೋನ್ಸ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಸೋನಿ WH-1000XM4 ಅನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ಕಸ್ಟಮೈಸ್ ಮಾಡಬಹುದಾಗಿದೆ. ನಾಯ್ಸ್‌ ಕ್ಯಾನ್ಸಕೇಶನ್‌ ಅನ್ನು ಕಸ್ಟಮೈಸ್ ಮಾಡಲು, ಹೊಂದಾಣಿಕೆಯ ವಾಯ್ಸ್‌ ಕಂಟ್ರೋಲ್‌ ಅನ್ನು ಸೆಟ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಈಕ್ವಲೈಜರ್ ಮತ್ತು ಸೌಂಡ್ ಮೋಡ್‌ಗಳಂತಹ ಇತರ ಸೆಟ್ಟಿಂಗ್‌ಗಳನ್ನು ಸೆಟ್‌ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಇದು ಅವಕಾಶವನ್ನು ನೀಡಲಿದೆ.

ಸೋನಿ

ಇದಲ್ಲದೆ ಸೋನಿ WH-1000XM4 ನಲ್ಲಿ ಮಲ್ಟಿ-ಪಾಯಿಂಟ್ ಕನೆಕ್ಟಿವಿಟಿ ಸಹ ಇದೆ, ಇದು ಬಳಕೆದಾರರು ಹೆಡ್‌ಫೋನ್‌ಗಳನ್ನು ಎರಡು ಡಿವೈಸ್‌ಗಳಿಗೆ ಏಕಕಾಲದಲ್ಲಿ ಕನೆಕ್ಟ್‌ ಮಾಡಲು ಅವಕಾಶ ನೀಡುತ್ತದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾಗಳಿಗೆ ಇದು ಬೆಂಬಲಿಸಲಿದೆ. ಇನ್ನು ಲೋಕಲ್‌ ವಾಯ್ಸ್‌ಗಾಗಿ ಈ ಹೆಡ್‌ಫೋನ್‌ಗಳು ಸೋನಿಯ ಸ್ವಂತ 360 ರಿಯಾಲಿಟಿ ಆಡಿಯೊ ಸ್ವರೂಪವನ್ನು ಸಹ ಬೆಂಬಲಿಸುತ್ತದೆ. ಸದ್ಯ ಸೋನಿ WH-1000XM4 ಬೆಲೆ ರೂ. 29,990, ಆಗಿದೆ. ಇದು ಇತರ ಪ್ರೀಮಿಯಂ ಹೆಡ್‌ಸೆಟ್‌ಗಳಾದ WF-1000XM3 ಮತ್ತು WH-H910N ಅನ್ನು ಸಹ ಒಳಗೊಂಡಿದೆ. ಸದ್ಯ ಪರಿಚಯಾತ್ಮಕ ಕೊಡುಗೆಯಾಗಿ ಸೋನಿ ರೂ. 1,500, ರೂ ರಿಯಾಯಿತಿ ನೀಡಿದೆ.

Most Read Articles
Best Mobiles in India

English summary
Sony WH-1000XM4 wireless active noise cancelling headphones have been launched in India priced at Rs. 29,990.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X